"RCB ಕಪ್ ಗೆಲ್ಲದಿದ್ರೂ ಫ್ಯಾನ್ಸ್ ಕಮ್ಮಿಯಾಗಿಲ್ಲ.. ವಿನಯ್‌ಗೆ ಕಪ್ ಸಿಗದಿದ್ರೂ ಜನರ ಮನಸ್ಸು ಗೆದ್ರಲ್ಲ"; ಆನೆಗೆ ನೆಟ್ಟಿಗರ ಬಲ

ಕನ್ನಡದ ರಿಯಾಲಿಟಿ ಶೋ ಬಿಗ್‌ಬಾಸ್ ಈ ಬಾರಿ ಸಕ್ಸಸ್ ಕಂಡಿದೆ. ಕಳೆದ ಸೀಸನ್‌ಗಳಿಗಿಂತ 10ನೇ ಸೀಸನ್ ವೀಕ್ಷಕರ ಮನಸ್ಸು ಗೆದ್ದಿದ್ದು ಅಷ್ಟೇ ಸತ್ಯ. ಕಿಚ್ಚನ ನಿರೂಪಣೆಯಿಂದ ಹಿಡಿದು ಸ್ಪರ್ಧಿಗಳು ಆಡಿದ ಆಟದವರೆಗೂ ಎರಡು ಮಾತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ವೀಕ್ಷಕರು ಬಿಗ್‌ಬಾಸ್‌ಗೆ ನೋಡಿದ ಬಳಿಕ ಮಾಡುತ್ತಿದ್ದ ಚರ್ಚೆ ರಿಯಾಲಿಟಿ ಶೋಗೆ ಮತ್ತಷ್ಟು ಬೂಸ್ಟ್ ಕೊಟ್ಟಿತ್ತು.

ಬಿಗ್‌ಬಾಸ್ ಕನ್ನಡ ಸೀಸನ್ 10 ಗೆಲ್ಲುವುದಕ್ಕೆ ಸ್ಪರ್ಧಿಗಳ ಆಯ್ಕೆ ಪ್ರಮುಖ ಪಾತ್ರವಹಿಸಿತ್ತು. ಈ ಬಾರಿ ಬಿಗ್‌ಬಾಸ್ ಮನೆಯೊಳಗೆ ಎಂಟ್ರಿಕೊಟ್ಟ ಪ್ರತಿಯೊಬ್ಬ ಸ್ಪರ್ಧಿಯೂ ಕೂಡ ಜೋಷ್‌ನಲ್ಲಿ ಆಟ ಆಡಿದ್ದನ್ನು ವೀಕ್ಷಕರೇ ಮೆಚ್ಚಿಕೊಂಡಿದ್ದಾರೆ. ಆದರೆ, ಎಂದಿನಂತೆ ಕೊನೆಯಲ್ಲಿ ಬಿಗ್‌ಬಾಸ್ ಕಿರೀಟವನ್ನು ಯಾರಿಗೆ ಕೊಡಬೇಕು ಅನ್ನೋ ವಿಚಾರದಲ್ಲಿ ಚರ್ಚೆಯಾಗುತ್ತಿದೆ.

Vinay Gowda won people heart after Bigg Boss Netizens commenting on social media

ಹ್ಯಾಪಿ ಬಿಗ್‌ಬಾಸ್ ಅನ್ನೋ ಟ್ಯಾಗ್‌ ಲೈನ್‌ನಲ್ಲಿಯೇ ಬಿಗ್‌ಬಾಸ್ ಸೀಸನ್ 10 ಆರಂಭ ಆಗಿದ್ದರೂ, ಮೊದಲನೇ ವಾರದಲ್ಲಿಯೇ ಟಾಸ್ಕ್, ಜಗಳ, ಆಟ, ಕಿತ್ತಾಟ ಎಲ್ಲವೂ ಎದ್ದು ಕಾಣುತ್ತಿತ್ತು. ಸ್ಪರ್ಧಿಗಳು ಜೋಷ್‌ನಲ್ಲಿ ಆಡಿದ ಆಟಕ್ಕೆ ವೀಕ್ಷಕರು ಭೇಷ್ ಅಂದಿದ್ದಾರೆ. ಆದರೆ, ಬಿಗ್‌ಬಾಸ್ ಕೀರಿಟ ಕೊಡುವ ವಿಚಾರದಲ್ಲಿ ಮಾತ್ರ ಯಾಕೋ ಡಿವೈಡ್ ಆಗಿದ್ದಾರೆ. ಬಿಗ್‌ಬಾಸ್ ಸೀಸನ್ ಮುಗಿದ ಮೇಲೆ ವಿನಯ್ ಗೌಡ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗೋಕೆ ಶುರುವಾಗಿದೆ.

ಬಿಗ್‌ಬಾಸ್ ಕನ್ನಡ ಸೀಸನ್ ಮುಗಿದ ಮೇಲೂ ಸಿಕ್ಕಾಪಟ್ಟೆ ಚರ್ಚೆಯಲ್ಲಿರೋ ವ್ಯಕ್ತಿ ವಿನಯ್ ಗೌಡ. ಮನೆಯೊಳಗೆ ಆನೆ ಅಂತ ಕರೆಸಿಕೊಂಡಿದ್ದ ಸ್ಪರ್ಧಿ. ಅಷ್ಟೇ ಅಲ್ಲ, ಮನೆಯೊಳಗೆ ಹೀಗೆ ಹೆಸರಿಟ್ಟು ಕರೆಯುತ್ತಿದ್ದದ್ದೂ ಇವರನ್ನೇ.. ಆ ಮಟ್ಟಿಗೆ ಇಡೀ ಮನೆಯನ್ನು ತನ್ನ ಗತ್ತಿನಿಂದಲೇ ಹಿಡಿದಿಟ್ಟುಕೊಂಡಿದ್ದು ವಿನಯ್ ಗೌಡ. ಆದರೆ, ಕೊನೆಯ ಹಂತದಲ್ಲಿ ಬಿಗ್‌ಬಾಸ್ ಕಿರೀಟ ಕೈ ತಪ್ಪಿತ್ತು. ಇದು ಅವರಿಗೆ ಬೇಸರ ತರಿಸಿದ್ದು, ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಎದ್ದು ಕಾಣುತ್ತಿದೆ.

Vinay Gowda won people heart after Bigg Boss Netizens commenting on social media

ಕಳೆದೊಂದು ವಾರದಿಂದ ವಿನಯ್ ಗೌಡ ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಇದನ್ನೆಲ್ಲ ಗಮನಿಸಿದ ನೆಟ್ಟಿಗರು ವಿನಯ್ ಗೌಡ ಬಗ್ಗೆ ಈಗ ಓಪನ್ ಆಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಶೋ ಮುಗಿದ ಮೇಲೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ. ವಿನಯ್ ಗೌಡ ರಫ್ ಅಂಡ್ ಟಫ್ ಅನಿಸಿದ್ದರೂ, ಅವರೊಳಿಗಿರುವ ಸಹಾಯ ಮನೋಭಾವದ ಬಗ್ಗೆ ಮಾತಾಡುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವಿನಯ್ ಗೌಡ ಬಗ್ಗೆ ಕೆಲವು ವಿಡಿಯೋಗಳು ಹರಿದಾಡುತ್ತಿವೆ. ಮನೆಯೊಳಗೆ ಡ್ರೋನ್ ಪ್ರತಾಪ್ ಬಟ್ಟೆ ನೀರಿನಲ್ಲಿ ಹಾಕಿದಾಗ, ತಮ್ಮ ಬಟ್ಟೆಯನ್ನು ಬಳಸುವಂತೆ ವಿನಯ್ ಹೇಳುತ್ತಾರೆ. ಇಂತಹದ್ದೇ ಕೆಲವು ವಿಡಿಯೋಗಳನ್ನು ಶೇರ್ ಮಾಡಿ, ಬಿಗ್‌ಬಾಸ್ ಮನೆಯೊಳಗೆ ವಿನಯ್ ನಡೆದುಕೊಂಡು ರೀತಿಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದರ ಜೊತೆ ಮನೆಯಲ್ಲಿ ಕಣ್ಣೀರು ಹಾಕದೆ, ಸಿಂಪತಿ ಕಾರ್ಡ್ ಬಳಸದೆ ಇರೋ ಸ್ಪರ್ಧಿ ಅಂತನೂ ಕಮೆಂಟ್ ಮಾಡುತ್ತಿದ್ದಾರೆ.

ವಿನಯ್ ಬಿಗ್‌ಬಾಸ್ ಮನೆಯಿಂದ ಹೊರಬಂದ್ಮೇಲೆ ನೀಡಿದ ಸಂದರ್ಶನದಲ್ಲಿ ವಿನಯ್ ತಮ್ಮ ಪೋಷಕರು ಬಗ್ಗೆ, ತಾವು ಪಟ್ಟ ಕಷ್ಟಗಳ ಬಗ್ಗೆ ಹೇಳಿಕೊಂಡಿದ್ದರು. ಆದರೆ, ಬಿಗ್‌ಬಾಸ್ ಮನೆಯೊಳಗೆ ತಮ್ಮ ಕಷ್ಟಗಳನ್ನು ಹೇಳಿಕೊಂಡಿರಲಿಲ್ಲ. ಪೋಷಕರ ಬಗ್ಗೆ ಹೇಳಿಕೊಂಡು ಸಿಂಪತಿ ಕಾರ್ಡ್ ಪ್ಲೇ ಮಾಡಿರಲಿಲ್ಲ. ಅದನ್ನು ಗಮನಿಸಿ ನೆಟ್ಟಿಗರು ಆ ಬಗ್ಗೆನೂ ಕಮೆಂಟ್ ಮಾಡುತ್ತಿದ್ದಾರೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಶೋ ಮುಗಿದ ಬಳಿಕ ವಿನಯ್ ಗೆದ್ದಿದ್ದಾರೆ ಅಂತ ಹೇಳುತ್ತಿದ್ದಾರೆ.

More from Filmibeat

English summary
Netizens comment on Vinay Gowda for winning peoples heart;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X