ಹುಟ್ಟುಹಬ್ಬದಂದೇ ವಿನಯ್ ರಾಜ್‌ಕುಮಾರ್‌ಗೆ ಬಂಪರ್ ಗಿಫ್ಟ್: 'ಅಂದೊಂದಿತ್ತು ಕಾಲ' ಭರ್ಜರಿ ಮೊತ್ತಕ್ಕೆ ಸೇಲ್!
ವಿನಯ್ ರಾಜ್‌ಕುಮಾರ್ ವಿಭಿನ್ನ ಸಿನಿಮಾಗಳ ಮೂಲಕ ನಿಧಾನವಾಗಿ ಜನರ ಮನಗೆಲ್ಲುತ್ತಿದ್ದಾರೆ. ಮಾಸ್ ಸಿನಿಮಾಗಳ ಹಿಂದೆ ಬೀಳದೆ ಕಂಟೆಂಟ್‌ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ದೊಡ್ಮನೆಯಲ್ಲಿ ತನ್ನದೇ ದಾರಿಯಲ್ಲಿ ಸಾಗುತ್ತಿರುವ ವಿನಯ್ ರಾಜ್‌ಕುಮಾರ್ ಇಂದು (ಮೇ 7) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ವಿನಯ್ ರಾಜ್‌ಕುಮಾರ್ ಇಂದು (ಮೇ 7) 34ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ದೊಡ್ಮನೆ ಅಭಿಮಾನಿಗಳು ವಿನಯ್ ರಾಜ್‌ಕುಮಾರ್ ಮನೆಗೆ ಬಂದು ಕೇಕ್ ಕತ್ತರಿಸಿ, ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದಲ್ಲಿರೋ ವಿನಯ್ ರಾಜ್‌ಕುಮಾರ್‌ಗೆ 'ಅಂದೊಂದಿತ್ತು ಕಾಲ' ಸಿನಿಮಾ ತಂಡ ಭರ್ಜರಿ ಗಿಫ್ಟ್ ಕೊಟ್ಟಿದೆ. ವಿನಯ್ ರಾಜ್‌ಕುಮಾರ್ ಹಾಗೂ ಅದಿತಿ ಪ್ರಭುದೇವ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
'ಅಂದೊಂದಿತ್ತು ಕಾಲ' ಭರ್ಜರಿ ಬ್ಯುಸಿನೆಸ್
ವಿನಯ್ ರಾಜ್‌ಕುಮಾರ್ ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳು ರೆಗ್ಯೂಲರ್ ಮಾಸ್ ಸಬ್ಜೆಕ್ಟ್ ಅಲ್ಲ. ವಿಭಿನ್ನ ಸಿನಿಮಾಗಳ ಹಿಂದೆ ಓಡುತ್ತಿರುವ ವಿನಯ್ ಲಿಸ್ಟ್‌ನಲ್ಲಿ 'ಅಂದೊಂದಿತ್ತು ಕಾಲ' ರಿಲೀಸ್ ಹಂತದಲ್ಲಿದೆ. ವಿನಯ್ ಜೊತೆ ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಮೊದಲ ಕಾಂಬಿನೇಷನ್ ನೋಡುವುದಕ್ಕೆ ಇಬ್ಬರ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ.

ಈ ಮಧ್ಯೆ ವಿನಯ್ ರಾಜ್‌ಕುಮಾರ್ ಹುಟ್ಟುಹಬ್ಬದಂದೇ 'ಅಂದೊಂದಿತ್ತು ಕಾಲ' ಸಿನಿಮಾ ಭರ್ಜರಿ ಬ್ಯುಸಿನೆಸ್ ಮಾಡಿದೆ. 'ಅಂದೊಂದಿತ್ತು ಕಾಲ' ಪಕ್ಕಾ ಕೌಟುಂಬಿಕ ಸಿನಿಮಾ. ಇಂತಹ ಸಿನಿಮಾ ಬಂದು ಹಲವು ವರ್ಷಗಳೇ ಆಗಿವೆ. ಹೀಗಾಗಿ ಈ ಸಿನಿಮಾ ಒಳ್ಳೆಯ ಮೊತ್ತಕ್ಕೆ ಸೇಲ್ ಆಗಿದೆ ಎಂದು ಗಾಂಧಿನಗರದಲ್ಲಿ ಚರ್ಚೆಯಾಗುತ್ತಿದೆ.
ಒಂದೇ ಸಂಸ್ಥೆಗೆ ಥಿಯೇಟರ್,ಟಿವಿ, ಓಟಿಟಿ ಹಕ್ಕು ಸೇಲ್
ವಿನಯ್ ರಾಜ್‌ಕುಮಾರ್ ಹುಟ್ಟುಹಬ್ಬದಂದೇ 'ಅಂದೊಂದಿತ್ತು ಕಾಲ' ಸಿನಿಮಾ ಭರ್ಜರಿ ಮೊತ್ತಕ್ಕೆ ಸೇಲಾದ ಸುದ್ದಿ ಹೊರಬಿದ್ದಿದೆ. ಈ ಸಿನಿಮಾ ಥಿಯೇಟರ್ ಹಕ್ಕು, ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕುಗಳನ್ನು ಒಂದೇ ಸಂಸ್ಥೆ ಕೊಂಡುಕೊಂಡಿದೆ ಎನ್ನಲಾಗಿದೆ. ಹೀಗಾಗಿ ಶೀಘ್ರದಲ್ಲಿಯೇ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಆಲೋಚನೆ ಮಾಡಿದೆ.
ಇದೇ ಜೂನ್ ಕೊನೆಯ ವಾರದಲ್ಲಿ 'ಅಂದೊಂದಿತ್ತು ಕಾಲ' ಸಿನಿಮಾ ಮಾಡೋಕೆ ಚಿತ್ರತಂಡ ಸ್ಕೆಚ್ ಹಾಕಿದೆ. ಆದರೆ, ಯಾವ ರಿಲೀಸ್ ಆಗುತ್ತೆ ಅನ್ನೋದನ್ನು ಚಿತ್ರತಂಡ ಇನ್ನೂ ಸ್ಪಷ್ಟಪಡಿಸಿಲ್ಲ.
ಅಪ್ಪು ಇಷ್ಟಪಟ್ಟಿದ್ದ ಟೈಟಲ್
'ಅಂದೊಂದಿತ್ತು ಕಾಲ' ಸಿನಿಮಾದ ಮೊದಲ ದೃಶ್ಯವನ್ನು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕ್ಲ್ಯಾಪ್ ಮಾಡಿದ್ದರು. ಆ ವೇಳೆ ಸಿನಿಮಾದ ಟೈಟಲ್ ಕೇಳಿ ಅಪ್ಪು ಖುಷಿಯಾಗಿದ್ದನ್ನು ನಿರ್ದೇಶಕ ಕೀರ್ತಿ ಫಿಲ್ಮಿಬೀಟ್ ಜೊತೆ ಈ ಹಿಂದೆ ಹಂಚಿಕೊಂಡಿದ್ದರು.
"ಈ ಸಿನಿಮಾ ಲಾಂಚ್ ಮಾಡಿದ್ದೇ ಪುನೀತ್ ಸಾರ್. ಆ ದಿನ ನಾನು ಅವರ ಕ್ಯಾರವ್ಯಾನ್‌ಗೆ ಹೋಗಿದ್ದೆ. ಅವತ್ತು ಏನಮ್ಮಾ ಟೈಟಲ್ ಅಂದರು. 'ಅಂದೊಂದಿತ್ತು ಕಾಲ' ಅಂದೆ. ಅದಕ್ಕೆ ಏನಮ್ಮಾ ನಮ್ಮ ಸಿನಿಮಾದ (ನಮ್ಮ ಬಸವ) ಹಾಡನ್ನೇ ಟೈಟಲ್ ಆಗಿ ಇಟ್ಟುಕೊಂಡಿದ್ದೀಯಾ ಅಂತ ಹಾಡನ್ನೇ ಹಾಡಿಬಿಟ್ಟರು. ಒಳ್ಳೆಯದಾಗುತ್ತೆ ಮಾಡು ಅಂತ ಹೇಳಿದ್ರು." ಎಂದು ಆ ದಿನವನ್ನು ನಿರ್ದೇಶಕ ಕೀರ್ತಿ ನೆನಪಿಸಿಕೊಂಡಿದ್ದರು.


Click it and Unblock the Notifications











