100 ಫೈಟರ್‌ಗಳ ಜೊತೆ ವಿನಯ್ ರಾಜ್‌ಕುಮಾರ್ ಆಕ್ಷನ್: 'ಪೆಪೆ' ಕೊನೆಗೂ ಮುಕ್ತಾಯ!
ವಿನಯ್ ರಾಜ್‌ಕುಮಾರ್ ಸಿನಿಮಾ ಆಯ್ಕೆ ಮಾಡಿಕೊಳ್ಳುವ ಸ್ಟೈಲ್ ಬದಲಾಗಿದೆ. ಒಂದೇ ತರಹದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ರಿಲೀಸ್‌ಗೆ ರೆಡಿಯಾಗಿರೋ ಸಿನಿಮಾಗಳು ಒಂದಕ್ಕಿಂತ ಒಂದು ಡಿಫ್ರೆಂಟ್ ಎನಿಸುತ್ತಿವೆ. ಅದರಲ್ಲೊಂದು ಸಿನಿಮಾ 'ಪೆಪೆ'.
'ಪೆಪೆ' ಟೈಟಲ್ ವಿಭಿನ್ನ ಅಂತ ಅನಿಸಿದ್ದು, ಇಲ್ಲಿಂದಲೇ ಕುತೂಹಲ ಹುಟ್ಟಿಕೊಂಡಿದೆ. ಈಗಾಗಲೇ ರಿಲೀಸ್ ಮಾಡಿರೋ ಸಿನಿಮಾ ಟೀಸರ್ ನೋಡಿ ಸಿನಿಪ್ರಿಯರು ಥ್ರಿಲ್ ಆಗಿದ್ದರು. ಯಾಕಂದ್ರೆ, ಇದೂವರೆಗೂ ವಿನಯ್ ರಾಜ್‌ಕುಮಾರ್ ಅನ್ನು ಇಷ್ಟೊಂದು ರಗಡ್ ಲುಕ್‌ನಲ್ಲಿ ಯಾರೂ ನೋಡಿರಲೇ ಇಲ್ಲ.

ಸಿನಿಮಾದ ಟೀಸರ್ ರಿಲೀಸ್ ಮಾಡಿದ್ದೇ ಮಾಡಿದ್ದು, ಆಮೇಲೆ 'ಪೆಪೆ' ಸುದ್ದಿಯಲೇ ಇರಲಿಲ್ಲ. ಅಷ್ಟಕ್ಕೂ ಕುತೂಹಲ ಹುಟ್ಟಿಸಿದ ಸಿನಿಮಾ ಬಗ್ಗೆ ತಿಳಿದುಕೊಳ್ಳೋಕೆ ಸಿನಿಪ್ರಿಯರು ತುದಿಗಾಲಲ್ಲಿ ನಿಂತಿದ್ದರು. ಆದರೆ, 'ಪೆಪೆ' ಸೈಲೆಂಟ್ ಮೋಡ್‌ಗೆ ಜಾರಿತ್ತು.
ಈಗ ಇದ್ದಕ್ಕಿಂತೆ ಮತ್ತೆ ಸುದ್ದಿಯಲ್ಲಿದೆ. 'ಪೆಪೆ' ಸಿನಿಮಾ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಹಂತ ತಲುಪಿದೆ. ಇತ್ತೀಚೆಗೆ ಸಾಹಸ ನಿರ್ದೇಶಕ ರವಿವರ್ಮಾ ಈ ಸಿನಿಮಾದ ಕ್ಲೈಮ್ಯಾಕ್ಸ್ ಆಕ್ಷನ್ ಸೀನ್‌ಗಳನ್ನು ಸೆರೆಹಿಡಿದಿದ್ದಾರೆ. ಈ ದೃಶ್ಯಗಳ ಮೂಲಕವೇ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿ ಮುಗಿಸಲಾಗಿದೆ.
ಅಂದ್ಹಾಗೆ 'ಪೆಪೆ' ಕ್ಲೈಮ್ಯಾಕ್ಸ್ ಸೀನ್ ವಿನಯ್ ರಾಜ್‌ಕುಮಾರ್ ಸುಮಾರು 100 ಮಂದಿ ಫೈಟರ್‌ಗಳ ಜೊತೆ ಕಾದಾಡಿದ್ದಾರೆ. ಜೊತೆ ವಿನಯ್ ರಾಜ್‌ಕುಮಾರ್ ರಗಡ್ ಲುಕ್ ಈಗಾಗಲೇ ಕುತೂಹಲ ಕೆರಳಿಸಿದೆ. ಹೀಗಾಗಿ 'ಪೆಪೆ' ಸಿನಿಮಾ ಈಗ ಸ್ಯಾಂಡಲ್‌ವುಡ್‌ನಲ್ಲಿ ಕುತೂಹಲವನ್ನು ಸೃಷ್ಟಿಸಿದೆ. 1970 ರಿಂದ 2020ರವರೆಗೆ ನಡೆಯುವ ಗ್ಯಾಂಗ್‌ಸ್ಟರ್ ಸ್ಟೋರಿಯಿದು. ಕೊಡಗು, ಸಕಲೇಶಪುರ ಸೇರಿದಂತೆ ಹಲವೆಡೆ ಈ ಸಿನಿಮಾವನ್ನು ಸೆರೆಹಿಡಿಯಲಾಗಿದೆ.

'ಪೆಪೆ'ಯಲ್ಲಿ ವಿನಯ್ ರಾಜ್‌ಕುಮಾರ್ ಜೊತೆ ಮೆದಿನಿ ಕೆಳಮನಿ, ಯಶ್ ಶೆಟ್ಟಿ, ಕಾಜಲ್ ಕುಂದರ್, ಅರುಣಾ ಬಾಲರಾಜ್, ನವೀನ್ ಡಿ ಪಡಿಲ್, ಬಾಲಾ ರಾಜ್ವಾಡಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ. ಅಭಿಷೇಕ್ ಕಾಸರಗೋಡು ಕ್ಯಾಮೆರಾ ವರ್ಕ್, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಉದಯ್ ಮತ್ತು ಶ್ರೀರಾಮ್ ಈ ಸಿನಿಮಾದ ನಿರ್ಮಾಪಕರು.
ಕಳೆದ ನಾಲ್ಕು ವರ್ಷಗಳಿಂದ ವಿನಯ್ ರಾಜ್‌ಕುಮಾರ್ ನಟಿಸಿದ ಒಂದೇ ಒಂದು ಸಿನಿಮಾ ರಿಲೀಸ್ ಆಗಿಲ್ಲ. 2018ರಲ್ಲಿ ತೆರೆಕಂಡಿದ್ದ 'ಅನಂತು Vs ನುಸ್ರುತ್' ಕೊನೆಯ ಸಿನಿಮಾ. ಒಂದಿಷ್ಟು ಗ್ಯಾಪ್ ತೆಗೆದುಕೊಂಡು ಒಂದೊಂದೇ ಸಿನಿಮಾ ರಿಲೀಸ್ ಮಾಡುವುದಕ್ಕೆ ಸಿದ್ದರಾಗಿದ್ದಾರೆ. 'ಪೆಪೆ' ಜೊತೆ 'ಗ್ರಾಮಾಯಣ' ಹಾಗೂ 'ಅಂದೊಂದಿತ್ತು ಕಾಲ' ಸಿನಿಮಾಗಳು ಬಿಡುಗಡೆಗೆಯಾಗಲಿದೆ. ಮುಂದಿನ ವರ್ಷ ಈ ಸಿನಿಮಾಗಳು ಬಿಡುಗಡೆಯಾಗುವ ಸಾಧ್ಯತೆಯಿದೆ.


Click it and Unblock the Notifications











