"ಸ್ವಾತಂತ್ರ್ಯಕ್ಕಾಗಿ ಸ್ವತಂತ್ರವಾಗಿ ವೋಟ್ ಮಾಡಿ": 'ಪೆಪೆ' ಮಸ್ತ್ ಪ್ರಚಾರ

ವಿನಯ್ ರಾಜ್‌ಕುಮಾರ್ ರಾಯಲ್ ಸ್ಟಾರ್ ಆಗಿ ಬದಲಾಗಿದ್ದಾರೆ. 'ಪೆಪೆ' ಟೀಸರ್ ನೋಡಿದ ಮೇಲೆ ಮಾಸ್ ಅವತಾರಕ್ಕೂ ಸೈ, ಕ್ಲಾಸ್ ಅವತಾರಕ್ಕೂ ಸೈ ಅನ್ನೋದನ್ನು ಎಲ್ಲರಿಗೂ ಗೊತ್ತಾಗಿದೆ.

ವಿನಯ್ ರಾಜ್‌ಕುಮಾರ್ ಬೇರೆ ಸಿನಿಮಾ ಆಯ್ಕೆ ಮಾಡಿಕೊಳ್ಳುವ ಪರಿ ಬದಲಾಗಿದೆ. ಒಂದೇ ರೀತಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಸದ್ಯ ವಿನಯ್ ಕೈಯಲ್ಲಿರೋ ಸಿನಿಮಾಗಳು ಒಂದಕ್ಕಿಂತ ಒಂದು ಡಿಫ್ರೆಂಟ್ ಎನಿಸುತ್ತಿವೆ. ಅದರಲ್ಲೊಂದು ಸಿನಿಮಾ 'ಪೆಪೆ'.

Vinay Rajkumar Starrer Pepe Kannada Movie teaser gift for birthday

ಇಂದು (ಮೇ 7) ವಿನಯ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೇ ಖುಷಿಯಲ್ಲಿ 'ಪೆಪೆ' ತಂಡ ಚಿಕ್ಕದೊಂದು ಟೀಸರ್ ರಿಲೀಸ್ ಮಾಡಿ ತಮ್ಮ ನಾಯಕನಿಗೆ ಚಿಕ್ಕದೊಂದು ಗಿಫ್ಟ್ ಕೊಟ್ಟಿದೆ.

'ಪೆಪೆ' ಟೈಟಲ್ ಡಿಫ್ರೆಂಟ್.. ಇನ್ನು ಟೀಸರ್ ಕೂಡ ಅಷ್ಟೇ ಡಿಫ್ರೆಂಟ್ ಆಗಿತ್ತು. ಇಲ್ಲಿಂದಲೇ ಸಿನಿಮಾ ಬಗ್ಗೆ ಕುತೂಹಲ ಹುಟ್ಟಿಕೊಂಡಿದೆ. ಈಗಾಗಲೇ ರಿಲೀಸ್ ಆಗಿರೋ ಟೀಸರ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದರು. ವಿನಯ್ ರಾಜ್‌ಕುಮಾರ್ ಇಂತಹ ರಗಡ್‌ ಲುಕ್ ಕೊಟ್ಟಿರಲಿಲ್ಲ. ಆದರೆ, 'ಪೆಪೆ' ವಿನಯ್‌ ರಾಜ್‌ಕುಮಾರ್‌ಗೆ ಹೊಸ ಇಮೇಜ್ ಕೊಡಲಿದೆ.

'ಪೆಪೆ' ಗ್ಯಾಂಗ್‌ಸ್ಟರ್ ಸಿನಿಮಾ

ರಾಘವೇಂದ್ರ ರಾಜ್ ಕುಮಾರ್ ಮೊದಲ ಪುತ್ರ ವಿನಯ್ ರಾಜ್ ಕುಮಾರ್ ಬರ್ತ್ ಡೇ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ. ಇದೇ ಸಂಭ್ರಮದಲ್ಲಿ 'ಪೆಪೆ' ತಂಡ ತಮ್ಮ ನಾಯಕನಿಗೆ ಬರ್ತ್‌ಡೇ ಟೀಸರ್ ಗಿಫ್ಟ್ ಮಾಡಿದೆ. ಈ ಟೀಸರ್ ಕೂಡ ಸಖತ್ ಸಿನಿಪ್ರಿಯರ ನಿದ್ದೆ ಕೆಡಿಸಿದೆ.

Vinay Rajkumar Starrer Pepe Kannada Movie teaser gift for birthday

ಅಂದ್ಹಾಗೆ, 'ಪೆಪೆ' ಸಿನಿಮಾ ಹಳ್ಳಿ ಬ್ಯಾಕ್‌ಡ್ರಾಪ್‌ನಲ್ಲಿ ಸಿನಿಮಾವನ್ನು ಶೂಟಿಂಗ್ ಮಾಡಲಾಗಿದೆ. ಇದೊಂದು ಗ್ಯಾಂಗ್‌ಸ್ಟರ್ ಸಿನಿಮಾ ಆಗಿದ್ದು, ವಿನಯ್ ರಾಜ್‌ಕುಮಾರ್ ಮಾಸ್‌ ಲುಕ್ ಪ್ರೇಕ್ಷಕರನ್ನು ಸೆಳೆಯುತ್ತಿದೆ.

"ಸ್ವಾತಂತ್ರ್ಯಕ್ಕಾಗಿ ಸ್ವತಂತ್ರವಾಗಿ ವೋಟ್ ಮಾಡಿ"

ವಿನಯ್ ರಾಜ್‌ಕುಮಾರ್ ಬರ್ತ್‌ಡೇ ಆಚರಣೆ ಮಾಡಿದ್ದರೂ ಆಯ್ತು. ಅದೇ ನೆಪದಲ್ಲಿ ಟೀಸರ್ ರಿಲೀಸ್ ಮಾಡಿದ್ದೂ ಆಯ್ತು. ಇದೇ ಗ್ಯಾಪ್‌ನಲ್ಲಿ ಪ್ರೇಕ್ಷಕರಿಗೆ ವೋಟ್ ಮಾಡಿ ಅಂತ ಡಿಫ್ರೆಂಟ್ ಆಗಿ ಪ್ರಚಾರ ಮಾಡಿದೆ ಚಿತ್ರತಂಡ.

"ಸ್ವಾತಂತ್ರ್ಯಕ್ಕಾಗಿ ಸ್ವತಂತ್ರವಾಗಿ ವೋಟ್ ಮಾಡಿ" ಅಂತ 'ಪೆಪೆ' ಚಿತ್ರತಂಡ ಟೀಸರ್ ಕೊನೆಯಲ್ಲಿ ಹೇಳಿದೆ. ಈ ಮೂಲಕ ಒಂದೇ ಟೀಸರ್‌ನಲ್ಲಿ ಬರ್ತ್‌ಡೇ ಆಚರಣೆ ಮಾಡಿದ್ದೂ ಆಯ್ತು. ಸಿನಿಪ್ರಿಯರಿಗೆ ವೋಟ್ ಮಾಡಿ ಅಂತ ಹೇಳಿದ್ದೂ ಆಗಿದೆ.

ಕಾಜಲ್ ಕುಂದರ್ ಹೀರೊಯಿನ್

ಶ್ರೀಲೇಶ್‌ ಎಸ್‌ ನಾಯರ್‌ ಪೆಪೆ ಸಿನಿಮಾದ ನಿರ್ದೇಶಕರು. ಅಂದ್ಹಾಗೆ ವಿನಯ್ ಸಿನಿಮಾಗೆ ನಾಯಕಿ ಹೀರೊಯಿನ್‌ ಆಗಿ ಕಾಜಲ್ ಕುಂದರ್ ನಟಿಸಿದ್ದಾರೆ. ಮಯೂರ್ ಪಟೇಲ್, ಯಶ್ ಶೆಟ್ಟಿ, ಬಾಲರಾಜ್ ವಾಡಿ, ಮೆದಿನಿ ಕೆಳಮನಿ, ಅರುಣಾ ಬಾಲರಾಜ್, ನವೀನ್ ಡಿ ಪಡಿಲ್ ನಟಿಸಿದ್ದಾರೆ. 'ಪೆಪೆ' ಸಿನಿಮಾಗೆ ಅಭಿಷೇಕ್ ಜಿ ಕಾಸರಗೋಡು ಕ್ಯಾಮೆರಾ ವರ್ಕ್ ಇದ್ರೆ, ಪೂರ್ಣಚಂದ್ರ ತೇಜಸ್ವಿ ಟ್ಯೂನ್ ಹಾಕಿದ್ದಾರೆ.

ಡಾ. ರವಿವರ್ಮಾ, ಚೇತನ್ ಡಿಸೋಜಾ, ಡಿಫ್ರೆಂಟ್ ಡ್ಯಾನಿ, ನರಸಿಂಹ ಆಕ್ಷನ್ ಸೀನ್ ಶೂಟ್ ಮಾಡಿದ್ದಾರೆ. ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರ ಸೇರಿದಂತೆ ಹಲವೆಡೆ 'ಪೆಪೆ' ಸಿನಿಮಾವನ್ನು ಶೂಟಿಂಗ್ ಮಾಡಲಾಗಿದೆ.

More from Filmibeat

English summary
Vinay Rajkumar Starrer Pepe Kannada Movie teaser gift for birthday, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X