ನಟ ವಿನಾಯಕ್ ಜೋಶಿಗೆ ಕಂಕಣ ಭಾಗ್ಯ: ಬ್ಯಾಡ್ಮಿಂಟನ್ ಚಾಂಪಿಯನ್ ಜತೆ ಮದುವೆ

ಲಾಕ್ ಡೌನ್ ಅವಧಿಯಲ್ಲಿ ಅತ್ಯಂತ ಸರಳವಾಗಿ ಅನೇಕ ಮದುವೆಗಳು ನಡೆದಿವೆ. ಇದರಿಂದ ಸೆಲೆಬ್ರಿಟಿಗಳೂ ಹೊರತಾಗಿಲ್ಲ. ಹಾಗೆಯೇ ಮತ್ತಷ್ಟು ಮದುವೆಗಳೂ ಸೆಟ್ಟೇರಿವೆ. ಈ ಸಾಲಿಗೆ ನಟ ವಿನಾಯಕ್ ಜೋಶಿ ಸೇರಿಕೊಳ್ಳುತ್ತಿದ್ದಾರೆ.

ನಟ ವಿನಾಯಕ್ ಜೋಶಿ ಶೀಘ್ರದಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ. ಅವರು ಮದುವೆಯಾಗುತ್ತಿರುವ ಯುವತಿ ಕೂಡ ಆಲ್ ರೌಂಡರ್. ವಿವಿಧ ಕ್ಷೇತ್ರಗಳಲ್ಲಿ ತೊಡಿಸಿಕೊಂಡಿದ್ದಾರೆ. ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಚಾಂಪಿಯನ್ ಕೂಡ ಹೌದು. ಮನಮೆಚ್ಚಿದ ಹುಡುಗಿಯ ಜತೆಗೆ ವಿನಾಯಕ್ ಜೋಶಿ ಹಸೆಮಣೆ ಏರಲಿದ್ದಾರೆ. ಬಾಲನಟನಾಗಿ ಪರಿಚಿತರಾಗಿದ್ದ ವಿನಾಯಕ್ ಜೋಶಿ ಅವರು ಮದುವೆಯಾಗಲಿರುವ ಯುವತಿಯ ಹೆಸರು ವರ್ಷಾ ಬೆಳವಾಡಿ. ಮುಂದೆ ಓದಿ...

ತಮಿಳು ಚಿತ್ರದಲ್ಲಿ ನಟಿಸಿರುವ ವರ್ಷಾ

ತಮಿಳು ಚಿತ್ರದಲ್ಲಿ ನಟಿಸಿರುವ ವರ್ಷಾ

ವರ್ಷಾ ಬೆಳವಾಡಿ, ಬ್ಯಾಡ್ಮಿಂಟನ್ ಜತೆಗೆ ನಟನೆಯಲ್ಲಿಯೂ ಗುರುತಿಸಿಕೊಂಡಿದ್ದಾರೆ. ಒಂದು ತಮಿಳು ಚಿತ್ರದಲ್ಲಿ ನಟಿಸಿದ್ದು, ಅದಿನ್ನೂ ಬಿಡುಗಡೆಯಾಗಬೇಕಿದೆ. ಅನೇಕ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಅಕಾಡೆಮಿಯಲ್ಲಿ ಕೋಚ್

ಅಕಾಡೆಮಿಯಲ್ಲಿ ಕೋಚ್

ವರ್ಷಾ, ಕಳೆದ ವರ್ಷ ಬ್ಯಾಡ್ಮಿಂಟನ್‌ನ ಜಾಗತಿಕ ರಾಂಕಿಂಗ್‌ನಲ್ಲಿ 120ನೇ ಸ್ಥಾನದಲ್ಲಿದ್ದರು. ಸದ್ಯಕ್ಕೀಗ ಅವರು ಬ್ಯಾಡ್ಮಿಂಟನ್ ಅಕಾಡೆಮಿಯೊಂದರಲ್ಲಿ ಕೋಚ್ ಆಗಿದ್ದಾರೆ. ವರ್ಷಾ ಮತ್ತು ವಿನಾಯಕ್ ಬಾಲ್ಯದಲ್ಲಿಯೇ ಪರಿಚಿತರು. ಆದರೆ ಆ ಪರಿಚಯದ ಬಳಿಕ ಮತ್ತೆ ಮುಖಾಮುಖಿಯಾಗಿದ್ದು 25 ವರ್ಷಗಳ ನಂತರವಂತೆ.

25 ವರ್ಷಗಳ ನಂತರ ಭೇಟಿ

25 ವರ್ಷಗಳ ನಂತರ ಭೇಟಿ

ವಿನಾಯಕ್ ಜೋಶಿ ಏಳು ವರ್ಷದವರಾಗಿದ್ದಾಗ ಕಾರ್ಯಕ್ರಮವೊಂದರಲ್ಲಿ ವರ್ಷಾ ಜತೆ ನೃತ್ಯ ಮಾಡಿದ್ದರು. ನಂತರ ಅವರ ಸಂಪರ್ಕ ಇರಲಿಲ್ಲ. ಸುಮಾರು 25 ವರ್ಷಗಳ ಬಳಿಕ ಇಬ್ಬರಿಗೂ ಕಾಮನ್ ಫ್ರೆಂಡ್ ಒಬ್ಬರ ಮೂಲಕ ಮತ್ತೆ ಭೇಟಿಯಾಯಿತು. ಆ ಭೇಟಿ ಮುಂದುವರಿಯಿತು. ಈಗ ಮದುವೆಯ ಹಂತಕ್ಕೆ ಬಂದಿದೆ.

ಸರಳ ವಿವಾಹ

ಸರಳ ವಿವಾಹ

ಮದುವೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ನಿಬಂಧನೆಗಳು ಇರುವುದರಿಂದ ಕೆಲವೇ ಆಪ್ತರ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ಸರಳ ವಿವಾಹವಾಗಲು ಈ ಜೋಡಿ ತೀರ್ಮಾನಿಸಿದೆ. 32 ವರ್ಷದ ನಟ ವಿನಾಯಕ್ ಜೋಶಿ, 'ನಮ್ಮೂರ ಮಂದಾರ ಹೂವೆ', 'ಅಮೃತ ವರ್ಷಿಣಿ, 'ಲಾಲಿ', 'ಆರ್ಯಭಟ' ಮುಂತಾದ ಚಿತ್ರಗಳಲ್ಲಿ ಬಾಲನಟನಾಗಿ ನಟಿಸಿದ್ದರು. ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದರು.

ಜೋಶೆಲೇ ವೆಬ್ ಸೀರೀಸ್

ಜೋಶೆಲೇ ವೆಬ್ ಸೀರೀಸ್

ಎಫ್ ಎಂ ರೇಡಿಯೋ ಜಾಕಿಯಾಗಿಯೂ ಗುರುತಿಸಿಕೊಂಡಿದ್ದ ಅವರು, ಅಪ್ಪು ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಗೆಳೆಯನ ಪಾತ್ರದಲ್ಲಿ ನಟಿಸಿದ್ದರು. ತಮ್ಮ ಗುಂಡು ಗುಂಡಾದ ದೇಹವನ್ನು ತೆಳ್ಳಗಾಗಿಸಿ ಹೊಸ ಗೆಟಪ್‌ನಲ್ಲಿ ಅಚ್ಚರಿ ಮೂಡಿಸಿದ್ದರು. 'ಗೋವಿಂದಾಯ ನಮಃ', 'ನಮ್ ದುನಿಯಾ ನಮ್ ಸ್ಟೈಲ್', 'ಅಂಬರ', 'ನಿನ್ನಿಂದಲೇ' ಸೇರಿದಂತೆ ವಿವಿಧ ಚಿತ್ರಗಳಲ್ಲಿ ನಟಿಸಿದ್ದಾರೆ. ಜೋಶೆಲೇ ಎಂಬ ವೆಬ್ ಸೀರೀಸ್ ನಿರ್ಮಿಸಿ, ನಿರ್ದೇಶಿಸಿದ್ದಾರೆ. 'ಬಿಗ್ ಬಾಸ್‌'ನಲ್ಲಿ ಸಹ ವಿನಾಯಕ್ ಜೋಶಿ ಸ್ಪರ್ಶಿಸಿದ್ದರು.

More from Filmibeat

English summary
Actor Vinayak Joshi is all set to marry national level Badminton player and actress Varsha Belawadi soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X