Balaramana Dinagalu: 'ಆ ದಿನಗಳು' ನೆನಪಿಸಬಹುದೇ 'ಬಲರಾಮನ ದಿನಗಳು'; ರಿಲೀಸ್‌ಗೆ ಫಿಕ್ಸ್ ಆಯ್ತಾ ಮುಹೂರ್ತ?

2026 ಆರಂಭದಲ್ಲೇ ಸ್ಯಾಂಡಲ್‌ವುಡ್ ಸೆಂಚುರಿ ಬಾರಿಸುವುದಕ್ಕೆ ಸಜ್ಜಾಗಿ ನಿಂತಂತೆ ಇದೆ. ಕಳೆದ ವರ್ಷ ಸೆಕೆಂಡ್‌ ಹಾಫ್‌ನಲ್ಲಿ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದವು. ಆದರೆ, ಮೊದಲಾರ್ಧ ಹೀನಾಯವೆಂದು ಪರಿಗಣಿಸಲಾಗಿತ್ತು. ಆದರೆ, ಈ ವರ್ಷದ ಆರಂಭದಲ್ಲಿಯೇ ಕೆಲವು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗಲಿವೆ. ಅವುಗಳಲ್ಲಿ 'ಬಲರಾಮನ ದಿನಗಳು' ಕೂಡ ಒಂದು.

ಕನ್ನಡ ಚಿತ್ರರಂಗದಲ್ಲಿ ಬಹುಕೋಟಿ ವೆಚ್ಚದ ಸಿನಿಮಾಗಳು ಒಂದರ ಹಿಂದೊಂದು ನಿರ್ಮಾಣವಾಗುತ್ತಿದೆ. ಆ ಎಲ್ಲಾ ಸಿನಿಮಾಗಳು 2026ರ ಆರಂಭದಲ್ಲಿಯೇ ಬಿಡುಗಡೆಯಾಗುತ್ತಿವೆ. ಈ ಬಹು‌ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ವಿನೋದ್ ಪ್ರಭಾಕರ್ ಹಾಗೂ ನಿರ್ದೇಶಕ ಕೆ.ಎಂ. ಚೈತನ್ಯ ಜೋಡಿಯ 'ಬಲರಾಮನ ದಿನಗಳು' ಸಿನಿಮಾ ಸ ಸೇರ್ಪಡೆಯಾಗಿದೆ. ಈ ಸಿನಿಮಾ ಹೊಸ ವರ್ಷದ ಆರಂಭದಲ್ಲಿ ಸದ್ದು ಮಾಡೋಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

Vinod Prabhakar K M Chaitanya combination movie Balaramana Dinagalu may release in Feb 2026

'ಬಲರಾಮನ ದಿನಗಳು' ಕನ್ನಡ ಚಿತ್ರರಂಗದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಯಾಕಂದ್ರೆ, ಕೆ.ಎಂ.ಚೈತನ್ಯ ಈ ಹಿಂದೆ ಭೂಗತ ಲೋಕದ ಹಿನ್ನೆಲೆಯಲ್ಲಿ ನಡೆಯುವ ಲವ್ ಸ್ಟೋರಿಯನ್ನು ನಿರ್ದೇಶನ ಮಾಡಿದ್ದರು. ಅದುವೇ 'ಆ ದಿನಗಳು'. ಚೇತನ್ ನಾಯಕನಾಗಿ ಮೊದಲ ಬಾರಿಗೆ ನಟಿಸಿದ್ದ ಈ ಸಿನಿಮಾವನ್ನು ಕನ್ನಡಿಗರು ಮೆಚ್ಚಿಕೊಂಡಿದ್ದರು. ಆ ಬಳಿಕ ಮತ್ತೆ ಭೂಗತ ಲೋಕದ ಕಥೆಗಳನ್ನು ಕೆ.ಎಂ. ಚೈತನ್ಯ ನಿರ್ದೇಶನ ಮಾಡಿರಲಿಲ್ಲ. ಹೀಗಾಗಿ ಕಾರಣಕ್ಕೆ 'ಬಲರಾಮನ ದಿನಗಳು' ಕನ್ನಡ ಚಿತ್ರರಂಗದ ಬಹುನಿರೀಕ್ಷೆಯ ಸಿನಿಮಾ ಎನಿಸಿಕೊಂಡಿದೆ.

ಈ ಸಿನಿಮಾಗಾಗಿ ಕೆ.ಎಂ ಚೈತನ್ಯ ತಮಿಳು ನಟ ದುಬಾರಿ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿರುವ ಸಂತೋಷ್ ನಾರಾಯಣ್ ಅವರನ್ನು ಸ್ಯಾಂಡಲ್‌ವುಡ್‌ಗೆ ಕರೆದುಕೊಂಡು ಬಂದಿದ್ದಾರೆ. ರಜನಿಕಾಂತ್ ನಟಿಸಿದ 'ಕಬಾಲಿ' ಸಿನಿಮಾ ಸೇರಿ, ಅಲ್ಲಿನ ದಿಗ್ಗಜರ ಸಿನಿಮಾಗಳಿಗೆ ಟ್ಯೂನ್ ಹಾಕಿದ್ದರು. ಈಗ ಅದೇ ಮ್ಯೂಸಿಕ್ ಡೈರೆಕ್ಟರ್ ವಿನೋದ್ ಪ್ರಭಾಕರ್ ಸಿನಿಮಾಗೂ ಟ್ಯೂನ್ ಹಾಕಿದ್ದಾರೆ. ಹೀಗಾಗಿ ಸಾಂಗ್ ಹಾಗೂ ಬಿಜಿಎಂ ಎಲ್ಲವೂ ಮಸ್ತ್ ಕಿಕ್ ಕೊಡುತ್ತೆ ಎಂದು ನಿರೀಕ್ಷೆ ಮಾಡಲಾಗುತ್ತಿದೆ.

Vinod Prabhakar K M Chaitanya combination movie Balaramana Dinagalu may release in Feb 2026

ಅಂದ್ಹಾಗೆ 'ಬಲರಾಮನ ದಿನಗಳು' ಸಂತೋಷ್ ನಾರಾಯಣ್ ಅವರ 51ನೇ ಸಿನಿಮಾ. ಈ ಸಿನಿಮಾದ ಶೂಟಿಂಗ್ ಮುಗಿದಿದ್ದು, ಬಿಡುಗಡೆಗೆ ಸಜ್ಜಾಗುತ್ತಿರುವುದರಿಂದ ಡಿಸೆಂಬರ್ ತಿಂಗಳಲ್ಲಿ ಮೊದಲ ಹಾಡನ್ನು ಬಿಡುಗಡೆ ಮಾಡುವುದಕ್ಕೆ ಕೆ.ಎಂ ಚೈತನ್ಯ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಸಿನಿಮಾವನ್ನು ಪದ್ಮಾವತಿ ಫಿಲಂಸ್ ಬ್ಯಾನರ್‌ನಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ನಿರ್ಮಾಣ ಮಾಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.

ಇನ್ನೊಂದು ಕಡೆ ವಿನೋದ್ ಪ್ರಭಾಕರ್ ಕೂಡ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಇವರು ನಟಿಸಿದ 'ಮಾದೇಶ' ಸಿನಿಮಾ ಕಳೆದ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ಯಶಸ್ಸು ಕಂಡ ಮೊದಲ ಹಿಟ್ ಸಿನಿಮಾ ಎನಿಸಿಕೊಂಡಿತ್ತು. ಅದೇ ಯಶಸ್ಸನ್ನು 'ಬಲರಾಮನ ದಿನಗಳು' ಸಿನಿಮಾದಿಂದ ಮುಂದುವರೆಯುತ್ತಾ? ಅನ್ನೋದನ್ನು ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇನ್ನು ಇವರಿಗೆ ನಾಯಕಿಯಾಗಿ ಬಹುಭಾಷಾ ನಟಿ ಪ್ರಿಯಾ ಆನಂದ್ ನಟಿಸಿದ್ದಾರೆ.

ವಿನೋದ್ ಪ್ರಭಾಕರ್ ಹಾಗೂ ಪ್ರಿಯಾ ಆನಂದ್ ಜೊತೆ ಮತ್ತೊಬ್ಬ ಬಹುಭಾಷಾ ನಟ ಅತುಲ್ ಕುಲಕರ್ಣಿ, ಶರತ್ ಲೋಹಿತಾಶ್ವ, ಆಶೀಶ್ ವಿದ್ಯಾರ್ಥಿ ಹಾಗೂ ಬಿಗ್ ಬಾಸ್ ಕನ್ನಡ 10ರ ಖ್ಯಾತಿಯ ವಿನಯ್ ಗೌಡ ಸೇರಿ ಹಲವು ಕನ್ನಡದ ಜನಪ್ರಿಯ ಕಲಾವಿದರು ನಟಿಸಿದ್ದಾರೆ. ಈಗಾಗ್ಲೇ 'ಬಲರಾಮನ ದಿನಗಳು' ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದೆ. 'ಬಲರಾಮನ ದಿನಗಳು'ದ ಹಾಡು ಡಿಸೆಂಬರ್‌ನಲ್ಲಿ ರಿಲೀಸ್ ಆಗುತ್ತಿದ್ದರು, ಅಲ್ಲಿಂದಲೇ ಪ್ರಚಾರ ಮಾಡುವುದಕ್ಕೆ ಇಡೀ ಚಿತ್ರತಂಡ ಮುಂದಾಇದೆ.

'ಬಲರಾಮನ ದಿನಗಳು' ಸಿಕ್ಕಾಪಟ್ಟೆ ದೊಡ್ಡ ಬಜೆಟ್ ಸಿನಿಮಾ. ಹೀಗಾಗಿ ಈ ಸಿನಿಮಾ ಕನ್ನಡಿಗರ ಗಮನ ಸೆಳೆಯುವಲ್ಲಿ ಯಶಸ್ಸಿಯಾಗಿದೆ. ಇನ್ನು ಹಾಡುಗಳು ರಿಲೀಸ್ ಆಗಬೇಕಿದೆ. ಇದಾದ್ಮೇಲೆ ಸಿನಿಮಾ ಕ್ರೇಜ್ ಇನ್ನಷ್ಟು ಮಾಡಬಹುದೆಂಬ ನಿರೀಕ್ಷೆಯಿದೆ. ಎಲ್ಲಾ ಅಂದುಕೊಂಡಂತೆ ಆದರ, 'ಬಲರಾಮನ ದಿನಗಳು' ಫೆಬ್ರುವರಿ ತಿಂಗಳಲ್ಲಿ ಪ್ರೇಕ್ಷಕರೆದುರಿಗೆ ಬಂದು ನಿಲ್ಲೋದು ನೂರಕ್ಕೆ ನೂರರಷ್ಟು ಖಚಿತ.

More from Filmibeat

English summary
Vinod Prabhakar-K M Chaitanya combination movie Balaramana Dinagalu may release in Feb 2026;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X