Fighter: ಘರ್ಜಿಸಲು ರೆಡಿಯಾದ ಮರಿ ಟೈಗರ್ ಈಗ 'ಫೈಟರ್'.. ಟೀಸರ್ ಚಿಂದಿ

ಸ್ಯಾಂಡಲ್‌ವುಡ್‌ನಲ್ಲಿ ರಿಸ್ಕ್ ತೆಗೆದುಕೊಂಡು ಆಕ್ಷನ್ ಮಾಡೋ ಕೆಲವೇ ಕೆಲವು ನಟರಲ್ಲಿ ವಿನೋದ್ ಪ್ರಭಾಕರ್ ಕೂಡ ಒಬ್ಬರು. ತಂದೆಯಂತೆಯೇ ಆಕ್ಷನ್ ಸಿನಿಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿರೊ ನಟನ ಹೊಸ ಸಿನಿಮಾ ಬಿಡುಗಡೆ ಸಜ್ಜಾಗುತ್ತಿದೆ. ಆ ಸಿನಿಮಾವೇ 'ಫೈಟರ್'

'ಮರಿ ಟೈಗರ್' ಈಗ ಸ್ಯಾಂಡಲ್‌ವುಡ್‌ನಲ್ಲಿ 'ಫೈಟರ್' ಆಗಿ ಕಣಕ್ಕಿಳಿಯಲಿದ್ದಾರೆ. ವಿನೋದ್ ಪ್ರಭಾಕರ್‌ ಸಿನಿಮಾ ರುಚಿಗೆ ತಕ್ಕಂತೆ 'ಫೈಟರ್' ಮೂಡಿ ಬಂದಿದೆ ಅನ್ನೋದು ಟೀಸರ್‌ ನೋಡಿ ಹೇಳುತ್ತಿರೋ ಮಾತು. 'ರಾಬರ್ಟ್' ಸಿನಿಮಾ ಬಳಿಕ ವಿನೋದ್ ಪ್ರಭಾಕರ್‌ಗೆ ಅಭಿಮಾನಿಗಳು ಸಂಖ್ಯೆ ಹೆಚ್ಚಾಗಿದ್ದು, ಈ ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ.

vinod-prabhakar-fighter-teaser

ವಿನೋದ್ ಪ್ರಭಾಕರ್ 'ಫೈಟರ್' ಅಂದ ತಕ್ಷಣ ಬರೀ ಹೊಡೆದಾಟವೇ ಇಲ್ಲ. ಇಲ್ಲಿ 'ಮರಿ ಟೈಗರ್' ಅನ್ಯಾಯದ ವಿರುದ್ಧ ಹೋರಾಡುವ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿನೋದ್ ಪ್ರಭಾಕರ್ ನಟಿಸಿದ ಹೊಸ ಸಿನಿಮಾ 'ಫೈಟರ್' ಬಿಡುಗಡೆ ಪೂರ್ವ ತಯಾರಿ ಮಾಡಿಕೊಳ್ಳುತ್ತಿದೆ.

ಈ ಹಿನ್ನೆಲೆಯಲ್ಲಿ 'ಫೈಟರ್' ಸಿನಿಮಾ ತಂಡದ ಟೀಸರ್ ರಿಲೀಸ್ ಮಾಡಿದೆ. ಈ ಸಿನಿಮಾವನ್ನು ನೂತನ್ ಉಮೇಶ್ ನಿರ್ದೇಶನ ಮಾಡಿದ್ದು, ಟೀಸರ್ ರಿಲೀಸ್ ಆಗಿದೆ. ಈ ಕಾರ್ಯಕ್ರಮಕ್ಕಾಗಿ ಇಡೀ ಸಿನಿಮಾ ತಂಡವೇ ಸೇರಿತ್ತು.

vinod-prabhakar-fighter-teaser

'ಫೈಟರ್' ಟೀಸರ್ ರಿಲೀಸ್ ಬಳಿಕ ನಿರ್ದೇಶಕ ನೂತನ್ ಉಮೇಶ್ ಮಾಹಿತಿಯನ್ನು ಹಂಚಿಕೊಂಡರು. "ಈ ಸಿನಿಮಾದ ಟೈಟಲ್ ಅನ್ನು ವಿನೋದ್ ಪ್ರಭಾಕರ್ ಅಭಿಮಾನಿಗಳೇ ಅನಾವರಣ ಮಾಡಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಹೂರ್ತಕ್ಕೆ ಆಗಮಿಸಿ ಸಿನಿಮಾಗೆ ಚಾಲನೆ ನೀಡಿದ್ದರು. ಸದ್ಯದಲ್ಲೇ ಹಾಡುಗಳು ಹಾಗೂ ಟ್ರೈಲರ್ ರಿಲೀಸ್ ಆಗಲಿದೆ. ಅಕ್ಟೋಬರ್‌ನಲ್ಲಿ ಸಿನಿಮಾ ರಿಲೀಸ್ ಮಾಡೋ ಪ್ಲ್ಯಾನ್ ಇದೆ" ಎಂದು ನಿರ್ದೇಶಕ ಹೇಳಿದ್ದಾರೆ.

"ಫೈಟರ್ ಎಂದರೆ ಹೊಡೆದಾಡುವವನು ಎಂದುಕೊಳ್ಳುತ್ತಾರೆ. ಆದರೆ, ನಮ್ಮ 'ಫೈಟರ್' ಅನ್ಯಾಯದ ವಿರುದ್ಧ ಹೋರಾಡುತ್ತಾನೆ" ಎನ್ನುತ್ತಾರೆ ನಿರ್ದೇಶಕ ನೂತನ್ ಉಮೇಶ್. 'ಫೈಟರ್' ಸಿನಿಮಾಗಾಗಿ ವಿನೋದ್ ಪ್ರಭಾಕರ್ ಲುಕ್ ಬದಲಾಗಿದೆ.

ಈ ಸಿನಿಮಾ ಅದ್ಧೂರಿಯಾಗಿಯೇ ಮೂಡಿ ಬಂದಿದೆ. ನಿರ್ಮಾಪಕ ಸೋಮಶೇಖರ್ ಫೈಟರ್‌ಗೆ ಹಣ ಹೂಡಿದ್ದಾರೆ. ಈ ಸಿನಿಮಾಗೆ ಗುರುಕಿರಣ್ ಸಂಗೀತ ನೀಡಿದ್ದು, ವಿನೋದ್ ಪ್ರಭಾಕರ್‌ಗೆ ಪಾವನ ಹಾಗೂ ಲೇಖಾ ಚಂದ್ರ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಹಲವು ವರ್ಷಗಳ ಬಳಿಕ ನಟಿ ನಿರೋಷ ಈ ಸಿನಿಮಾ ಮೂಲಕ ಮತ್ತೆ ಎಂಟ್ರಿ ಕೊಟ್ಟಿದ್ದಾರೆ.

"ಫೈಟರ್‌ನಲ್ಲಿ ಬರೀ ಹೋರಾಟ ಹಾಗೂ ಹೊಡೆದಾಟವಿಲ್ಲ. ತಂದೆ-ತಾಯಿ ಹಾಗೂ ಮಗನ ಬಾಂಧವ್ಯವಿದೆ. ಜೊತೆಗೆ ಥ್ರಿಲ್ಲರ್ ಅಂಶಗಳನ್ನು ಒಳಗೊಂಡ ಕೌಟುಂಬಿಕ ಮನರಂಜನೆಯ ಸಿನಿಮಾವಿದು. ನಾನು ಈ ಹಿಂದೆ ನಟಿಸಿದ ಸಿನಿಮಾಗಳಿಗಿಂತ ಈ ಸಿನಿಮಾ ವಿಭಿನ್ನವಾಗಿದೆ. ಈ ಸಿನಿಮಾದಲ್ಲಿ ಸಮಾಜ ವ್ಯವಸ್ಥೆಯ ವಿರುದ್ಧ ಹೋರಾಡುವ ಫೈಟರ್ ನಾನು" ಎನ್ನುತ್ತಾರೆ ವಿನೋದ್ ಪ್ರಭಾಕರ್.

ಗುರುಕಿರಣ್ ಸಂಗೀತ ನೀಡಿರುವ ಈ ಸಿನಿಮಾ ಎರಡು ಹಾಡುಗಳಿವೆ. ಹಾಗೇ ಥ್ರಿಲ್ಲರ್ ಮಂಜು ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದ್ದು, ಆಕ್ಷನ್ ಸೀನ್‌ಗಳಿಗೂ ಅಷ್ಟೇ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಸದ್ಯ ಟೀಸರ್ ರಿಲೀಸ್ ಆಗಿದ್ದು, ಸಿನಿಮಾ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಡಲಾಗಿದೆ.

More from Filmibeat

English summary
Vinod Prabhakar new movie Fighter Teaser creating buzz in Sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X