Balaramana Dinagalu: ಟೈಗರ್ ವಿನೋದ್ ಪ್ರಭಾಕರ್ 'ಬಲರಾಮನ ದಿನಗಳು' ರಿಲೀಸ್ ಡೇಟ್ ಫಿಕ್ಸ್
ಐಪಿಎಲ್ ಮುಗಿಯುತ್ತಿದ್ದಂತೆ ಸಿನಿಮಾರಂಗ ಮತ್ತೆ ಅಕ್ಟೀವ್ ಆಗಿದೆ. ಒಂದೊಂದು ಸಿನಿಮಾಗಳು ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡುತ್ತಿವೆ. ಅದರಲ್ಲೂ ಜೂನ್ ತಿಂಗಳ ಮೊದಲ ವಾರದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ 'ಪೆದ್ದಿ'ಗೆ ಕಿಚ್ಚನ ಅಕ್ಕನ ಮಗ ಸಂಜಿತ್ ಸರೋವರ್ ತಮ್ಮ ಚೊಚ್ಚಲ ಸಿನಿಮಾ 'ಮ್ಯಾಂಗೋ ಪಚ್ಚ' ಮೂಲಕ ಟಕ್ಕರ್ ಕೊಡುತ್ತಿದ್ದಾರೆ. ಅಪ್ಪಟ ಕನ್ನಡ ಸಿನಿಮಾದ ನಿರೀಕ್ಷೆಯಲ್ಲಿದ್ದವರಿಗೆ 'ಮ್ಯಾಂಗೋ ಪಚ್ಚ' ನೋಡುವುದಕ್ಕೆ ಸಿಗುತ್ತಿದೆ. ಇದಾದ ಎರಡು ವಾರಗಳ ಬಳಿಕ ಮತ್ತೊಂದು ಸಿನಿಮಾ ರಿಲೀಸ್ ಆಗುತ್ತಿದೆ. ಅದುವೇ 'ಬಲರಾಮನ ದಿನಗಳು'.
'ಆ ದಿನಗಳು' ಅಂತಹ ಅಂಡರ್ ವರ್ಲ್ಡ್ ಜೊತೆ ಕನೆಕ್ಟ್ ಆಗಿದ್ದ ಸುಂದರವಾದ ಲವ್ ಸ್ಟೋರಿಯನ್ನು ಹೇಳಿದ್ದ ಕೆ ಎಂ ಚೈತನ್ನು ಈ ಸಿನಿಮಾದ ನಿರ್ದೇಶಕ. ವಿನೋದ ಪ್ರಭಾಕರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರೆ, ಇವರಿಗೆ ನಾಯಕಿಯಾಗಿ ಪ್ರಿಯಾ ಆನಂದ್ ನಟಿಸುತ್ತಿದ್ದಾರೆ. ಹೀಗಾಗಿ ಸ್ಯಾಂಡಲ್‌ವುಡ್‌ನಲ್ಲಿ 'ಬಲರಾಮನ ದಿನಗಳು' ಹೊಸ ಟ್ರೆಂಡ್ ಹುಟ್ಟಾಕಬಹುದೆಂಬ ನಿರೀಕ್ಷೆಯಲ್ಲಿದೆ.

ಕಳೆದ ವರ್ಷ ವಿನೋದ್ ಪ್ರಭಾಕರ್ ನಟನೆಯ 'ಮಾದೇವ' ಚಿತ್ರರಂಗಕ್ಕೆ ಮೊದಲ ಯಶಸ್ಸನ್ನು ತಂದುಕೊಟ್ಟಿತ್ತು. ಈಗ ಸರಿಯಾಗಿ ಒಂದು ವರ್ಷದ ಬಳಿಕ 'ಬಲರಾಮನ ದಿನಗಳು' ರಿಲೀಸ್ ಆಗುತ್ತಿದೆ. ಇಲ್ಲಿವರೆಗೂ ರಿಲೀಸ್ ಡೇಟ್ ಅನ್ನು ಗೌಪ್ಯವಾಗಿದ್ದ ಚಿತ್ರತಂಡ ಎರಡು ವಿಷಯಗಳನ್ನು ಹಂಚಿಕೊಂಡಿದೆ. ಅವುಗಳೇನು ಅಂತ ನೋಡುವುದಕ್ಕೆ ಮುಂದೆ ಓದಿ.
ಈಗಾಗಲೇ 'ಬಲರಾಮನ ದಿನಗಳು' ಹಾಡುಗಳು ಹಾಗೂ ಟೀಸರ್‌ನಿಂದ ಗಮನ ಸೆಳೆದಿದೆ. ಅದರಲ್ಲೂ ಟೀಸರ್ ಪ್ರೇಕ್ಷಕರಲ್ಲಿ ನಿರೀಕ್ಷೆಗಳನ್ನು ಹುಟ್ಟಾಕುವಂತೆ ಮಾಡಿದೆ. ಕಳೆದ ಕೆಲವು ತಿಂಗಳಿಂದ ಸಿನಿಮಾ ಬಿಡುಗಡೆದಗೆ ತಯಾರಿ ನಡೆಯುತ್ತಲೇ ಇತ್ತು. ಆದ್ರೀಗ ಐಪಿಎಲ್ ಮುಗಿಯುತ್ತಿದ್ದಂತೆ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದೆ. ಇದೇ ತಿಂಗಳು ಅಂದರೆ, ಜೂನ್ 26ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಅಂದ್ಹಾಗೆ 'ಬಲರಾಮನ ದಿನಗಳು' ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ರಾಜ್ಯಾದ್ಯಾಂತ ವಿತರಣೆ ಮಾಡುತ್ತಿದೆ. 'ಬಲರಾಮನ ದಿನಗಳು' ಸಿನಿಮಾ ಆ ದಿನಗಳ ಮತ್ತೊಂದು ಅಧ್ಯಾಯ.. ಎಂದು ಚಿತ್ರತಂಡ ಹೇಳಿಕೊಂಡಿದೆ. ಹೀಗಾಗಿ ಆದಿನಗಳು ಖ್ಯಾತಿಯ ಕೆ.ಎಂ ಚೈತನ್ಯ ಮತ್ತೊಂದು ಕಲ್ಟ್ ಕ್ಲಾಸಿಕ್ ಅನ್ನು ಕನ್ನಡಿಗರಿಗೆ ಕೊಡುತ್ತಾರಾ? ಅನ್ನೋದು ಜೂನ್ 26ರ ಬಳಿಕೆ ತಿಳಿಯಲಿದೆ.

80ರ ದಶಕದ ಕತೆಯನ್ನು ಈ ಸಿನಿಮಾ ಮೂಲಕ ಹೇಳುವುದಕ್ಕೆ ಹೊರಟಿದೆ. ಈ ಸಿನಿಮಾಗೆ ವೇಣುರವರ ಕ್ಯಾಮರಾ ವರ್ಕ್ ಇದೆ. ವಿನೋದ್ ಪ್ರಭಾಕರ್ ಈ ಸಿನಿಮಾದಲ್ಲಿ ಬಲರಾಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಗೆ ನಾಯಕಿಯಾಗಿ ಪ್ರಿಯಾ ಆನಂದ್ ನಟಿಸಿದ್ದು, ಪದ್ಮಾವತಿ ಫಿಲಂಸ್ ಬ್ಯಾನರ್ ನಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ 'ಬಲರಾಮನ ದಿನಗಳು' ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಈ ಸಿನಿಮಾದ ಮತ್ತೊಂದು ವಿಶೇಷ ಅಂದರೆ, 'ಆ ದಿನಗಳು' ಸಿನಿಮಾದಲ್ಲಿದ್ದ ಪಾತ್ರಗಳು ಇಲ್ಲೂ ಮುಂದುವರೆದಿವೆ. ಅತುಲ್ ಕುಲಕರ್ಣಿ, ಶರತ್ ಲೋಹಿತಾಶ್ವ, ಆಶಿಶ್ ವಿದ್ಯಾರ್ಥಿ ಹಾಗೂ ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಸೇರಿದಂತೆ ಹಲವು ಕಲಾವಿದರ ದಂಡು ಈ ಸಿನಿಮಾದಲ್ಲಿ ನಟಿಸಿದೆ. ತಮಿಳಿನ ಜನಪ್ರಿಯ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣ್ ಈ ಸಿನಿಮಾಗೆ ಟ್ಯೂನ್‌ಗಳನ್ನು ಹಾಕಿದ್ದಾರೆ. ಬೆಳಕಿನ ಮಾಂತ್ರಿಕ ಹೆಚ್ ಸಿ ವೇಣು ಕ್ಯಾಮರಾವರ್ಕ್ ಈ ಸಿನಿಮಾಗಿದೆ. ಕೆ.ಜಿ.ಎಫ್ ಖ್ಯಾತಿಯ ಹರಿದಾಸ್ ಎಡಿಟಿಂಗ್ ಮಾಡಿದ್ದಾರೆ. ಈಗಾಗ್ಲೇ ಬಿಡುಗಡೆಯಾಗಿರೋ ಟೀಸರ್ ಹಾಗೂ ಹಾಡುಗಳು ದೊಡ್ಡದಾಗಿ ಮ್ಯಾಜಿಕ್ ಮಾಡೋ ಸೂಚನೆ ನೀಡಿದೆ.


Click it and Unblock the Notifications