ದರ್ಶನ್-ಧ್ರುವ ಮ್ಯಾಟರ್: "ಡಿ ಬಾಸ್‌ಗಾಗಿ ಇಡೀ ಪ್ರಪಂಚವನ್ನೇ ಎದುರು ಹಾಕೋತಿನಿ" ವಿನೋದ್ ಪ್ರಭಾಕರ್
ಕಾವೇರಿ ಹೋರಾಟದ ವೇಳೆ ಧ್ರುವ ಸರ್ಜಾ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವೆ ಮನಸ್ತಾಪ ಇರೋದು ಮೇಲ್ನೋಟಕ್ಕೆ ಅನಿಸಿತ್ತು. ವೇದಿಕೆ ಮೇಲೆ ಶಿವಣ್ಣನೊಂದಿಗೆ ಕೂತಿದ್ದ ಧ್ರುವ ಸರ್ಜಾ ಮುಖಕ್ಕೆ ಮುಖ ಕೊಟ್ಟು ಮಾತಾಡಿರಲಿಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರುತ್ತಿದ್ದಂತೆ ಎದ್ದು ಹೋಗಿದ್ದರು.
ಅದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ದರ್ಶನ್ ಅಭಿಮಾನಿಗಳು ಹಾಗೂ ಧ್ರುವ ಅಭಿಮಾನಿಗಳ ಮಧ್ಯೆ ಈ ವಿಚಾರಕ್ಕೆ ವಾದ-ವಿವಾದವೂ ನಡೆದಿತ್ತು. ಇಂದು (ಅಕ್ಟೋಬರ್ 6) ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹುಟ್ಟುಹಬ್ಬ. ಈ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಧ್ರುವ ತಮ್ಮಿಬ್ಬರ ನಡುವಿನ ವೈಮನಸ್ಸನ್ನು ಹೊರಹಾಕಿದ್ದಾರೆ.

ಇಲ್ಲಿಂದ ಧ್ರುವ ಸರ್ಜಾ ಹಾಗೂ ದರ್ಶನ್ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋದು ಕನ್ಫರ್ಮ್ ಆಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮರಿ ಟೈಗರ್ ವಿನೋದ್ ಪ್ರಭಾಕರ್ ಪ್ರತಿಕ್ರಿಯೆ ನೀಡಿದ್ದಾರೆ. "ಡಿ ಬಾಸ್‌ಗಾಗಿ ಇಡೀ ಪ್ರಪಂಚವನ್ನೇ ಎದುರು ಹಾಕಿಕೊಳ್ಳುತ್ತೇನೆ" ಎಂದು ಫಸ್ಟ್ ನ್ಯೂಸ್‌ಗೆ ಹೇಳಿಕೆ ನೀಡಿದ್ದಾರೆ. ವಿನೋದ್ ಪ್ರಭಾಕರ್ ಈ ಹೇಳಿಕೆ ಕೊಟ್ಟಿದ್ದೇಕೆ? ಈ ಹೇಳಿಕೆಯ ಅರ್ಥವೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಧ್ರುವ ಸರ್ಜಾ ಹೇಳಿದ್ದು ಏನು?
ದರ್ಶನ್ ಬಗ್ಗೆ ಹುಟ್ಟುಹಬ್ಬದಂದು ಧ್ರುವ ಸರ್ಜಾ ಹೇಳಿದ ಮಾತು ವೈರಲ್ ಆಗಿದೆ. " ದರ್ಶನ್ ಸರ್ ನಮ್ಮ ಸೀನಿಯರ್. ಅವರಿಗೆ ನಾವು ಗೌರವ ಕೊಟ್ಟೆ ಕೊಡುತ್ತೇವೆ. ಅವರು ಮುಂದೆ ಇದ್ದಾಗ ಮಾತ್ರವಲ್ಲ. ಅವರು ಇಲ್ಲದ ಸಮಯದಲ್ಲೂ ನಾವು ಅಷ್ಟೇ ಮರ್ಯಾದೆ ಕೊಡುತ್ತೇವೆ. ಆದರೆ, ನನಗೆ ಎರಡು ಮೂರು ಪ್ರಶ್ನೆ ಕೇಳಬೇಕು ಅಂತಿದೆ ಅವರಿಗೆ. ಅದು ಕೇಳಿದ ಮೇಲೆ ನನಗೆ ಕ್ಲಿಯರ್ ಆಗುತ್ತದೆ. ಅದು ಕ್ಲಿಯರ್ ಆಗದೆ, ಒಳಗಡೆ ಒಂದು ಹೊರಗಡೆ ಒಂದು ಇಟ್ಟುಕೊಂಡು ನಾಟಕ ಆಡೋದು ನನಗೆ ಸರಿ ಕಾಣಿಸುತ್ತಿಲ್ಲ." ಎಂದು ಧ್ರುವ ಸರ್ಜಾ ಹೇಳಿದ್ದರು.
ಧ್ರುವ-ದರ್ಶನ್ ಬಗ್ಗೆ ವಿನೋದ್ ಹೇಳಿದ್ದೇನು?
ದರ್ಶನ್‌ರನ್ನು ಧ್ರುವ ಸರ್ಜಾ ಯಾವಾಗಲೂ ಸೀನಿಯರ್ ಅಂತಲೇ ಹೇಳಿಕೊಂಡು ಬಂದಿದ್ದಾರೆ. ಆದರೆ, ಇದ್ದಕ್ಕಿದ್ದ ಹಾಗೇ ಧ್ರುವ ಸರ್ಜಾ ಹಾಗೂ ದರ್ಶನ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಈ ಬಗ್ಗೆ ಮಾಧ್ಯಮದವರು ಕೇಳಿದಾಗ ವಿನೋದ್ ಪ್ರಭಾಕರ್ " ನನಗೆ ಈ ಬಗ್ಗೆ ಏನಾಗಿದೆ ಅಂತ ಗೊತ್ತಿಲ್ಲ. ಕಳೆದ ನಾಲ್ಕು ದಿನಗಳಿಂದ ನಾನು ಸಿನಿಮಾದ ಪ್ರಮೋಷನ್‌ನಲ್ಲಿಯೇ ಇದ್ದೀನಿ. ಏನಾಗಿದೆ ಅಂತ ನಾನು ನೋಡಿಲ್ಲ. ಅದನ್ನು ನೋಡಿದ ಮೇಲೆ ನಾನು ಮಾತಾಡುತ್ತೇನೆ. ನೋಡಿದ ಮೇಲೆ ಖಂಡಿತಾ ಏನು ಅಂತ ಮಾತಾಡುತ್ತೇನೆ." ಎಂದು ವಿನೋದ್ ಪ್ರಭಾಕರ್ ಹೇಳಿದ್ದಾರೆ.

"ಡಿ ಬಾಸ್‌ಗಾಗಿ ಇಡೀ ಪ್ರಪಂಚವನ್ನು ಎದುರು ಹಾಕೋತಿನಿ"
ಅಷ್ಟೇ ಅಲ್ಲದೆ. ದರ್ಶನ್‌ಗಾಗಿ ಇಡೀ ಪ್ರಪಂಚವನ್ನೇ ಎದುರು ಹಾಕೋತಿನಿ ಎಂದು ಹೇಳಿದ್ದಾರೆ. "ನಾನು ಒಂದು ವಿಷಯ ಹೇಳ್ಲಾ? ನಾನು ಇಡೀ ಪ್ರಪಂಚನಾ ಎದುರು ಹಾಕಿಕೊಳ್ತೀನಿ. ಒನ್ ಅಂಡ್ ಓನ್ಲಿ ಡಿ ಬಾಸ್‌ಗಾಗಿ. ಯಾಕಂದ್ರೆ, ಅವರು ನನ್ನ ಅಣ್ಣ. ಪ್ರತಿಯೊಂದು ಹಂತದಲ್ಲಿಯೂ ಅವರು ಸಪೋರ್ಟ್ ಮಾಡಿಕೊಂಡು ಬಂದಿದ್ದಾರೆ. ಯಾರು ಏನೇ ಹೇಳಲಿ. ನನಗೆ ಡಿ ಬಾಸ್ ಮುಖ್ಯ. ನನ್ನ ಅಣ್ಣನಾದ ಡಿ ಬಾಸ್ ಮುಖ್ಯ ಅವರ ಪರವಾಗಿ ಯಾವಾಗ ಬೇಕಾದರೂ ಇರುತ್ತೇನೆ." ಎಂದು ವಿನೋದ್ ಪ್ರಭಾಕರ್ ಫಸ್ಟ್ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
'ಫೈಟರ್' ಸಿನಿಮಾ ರಿಲೀಸ್
ಇದು ವಿನೋದ್ ಪ್ರಭಾಕರ್ ನಟನೆಯ 'ಫೈಟರ್' ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿದೆ. ಮೊದಲ ದಿನವೇ ಸಿನಿಮಾ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ವಿನೋದ್ ಪ್ರಭಾಕರ್ ಸಿನಿಮಾ ನೋಡುವುದಕ್ಕೆ ಜನರು ಬರುತ್ತಿದ್ದಾರೆ. ಇನ್ನೊಂದು ಕಡೆ ಚಿರಂಜೀವಿ ಸರ್ಜಾ ನಟನೆಯ ಕೊನೆಯ ಸಿನಿಮಾ 'ರಾಜಮಾರ್ತಾಂಡ' ಕೂಡ ರಿಲೀಸ್ ಆಗಿದೆ.


Click it and Unblock the Notifications











