ವಿನೋದ್ ಪ್ರಭಾಕರ್ ಕೈ‌ಯಲ್ಲಿ 'ರೋಲೆಕ್ಸ್'; ಕೋಮಲ್-ಸೋನಲ್ ಮಧ್ಯೆ ಸ್ಪೆಷಲ್ ಎಂಟ್ರಿ

ಸ್ಯಾಂಡಲ್‌ವುಡ್‌ನಲ್ಲಿ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಇಲ್ಲ. ಆದರೆ, ಸ್ಟಾರ್‌ಗಳ ಸಿನಿಮಾಗಳು ಒಂದೊಂದಾಗಿಯೇ ಬಿಡುಗಡೆಯಾಗುತ್ತಿವೆ. ಇನ್ನು ಕೆಲವು ಸಿನಿಮಾಗಳು ಚಿತ್ರೀಕರಣದ ಹಂತದಲ್ಲಿ ಇವೆ. ಇನ್ನು ಮುಂಬರುವ ದಿನಗಳಲ್ಲಿ ಒಂದೊಂದಾಗಿಯೇ ಈ ಸಿನಿಮಾಗಳು ರಿಲೀಸ್ ಆಗಲಿವೆ. ಈ ಸಿನಿಮಾಗಳ ಸಾಲಿನಲ್ಲಿ ಇರುವ 'ರೋಲೆಕ್ಸ್' ಕೂಡ ಸೇರಿಕೊಂಡಿದೆ.

ಇತ್ತೀಚೆಗೆ ಕೋಮಲ್‌ ಕುಮಾರ್ ನಟಿಸಿದ ಸಿನಿಮಾಗಳು ನೋಡುವುದಕ್ಕೆ ಸಿಗುತ್ತಿವೆ. ಸದಾ ವಿಭಿನ್ನ ಹಾಗೂ ಹಾಸ್ಯ ಪ್ರಧಾನ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುವ ಜನಪ್ರಿಯ ನಟ ಕೋಮಲ್ ಕುಮಾರ್. ಈಗ ಮತ್ತೊಂದು ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಮಧು ಫಿಲಂ ಸರ್ಕ್ಯೂಟ್ಸ್ ಸಂಸ್ಥೆ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿರುವ ಸಿನಿಮಾ ಹೊಸ ಚಿತ್ರದ ಹೆಸರು 'ರೋಲೆಕ್ಸ್'.

Vinod Prabhakar special role in Komal Kumar and Sonal Monteiro starrer Rolex movie

ಕಳೆದ ಕೆಲವು ದಿನಗಳಿಂದ 'ರೋಲೆಕ್ಸ್' ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಸದ್ಯ ಈ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಇದೇ ವೇಳೆ ಸಿನಿಮಾ ತಂಡ ಸಿನಿಪ್ರಿಯರಿಗೆ ಸಖತ್ ಸರ್ಪ್ರೈಸ್ ಕೊಟ್ಟಿದೆ. ಕೋಮಲ್ ಕುಮಾರ್ ನಟಿಸುತ್ತಿರುವ ಈ ಸಿನಿಮಾಗೆ ಟೈಗರ್ ವಿನೋದ್ ಪ್ರಭಾಕರ್ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ 'ರೋಲೆಕ್ಸ್'ಗೆ ಮತ್ತಷ್ಟು ಬೆಲೆ ಬಂದಂತೆ ಆಗಿದೆ.

ಹೊಸ ಗೆಟಪ್‌ನಲ್ಲಿ ಕೋಮಲ್

ಈ ಹಿಂದೆ ಕಾಮಿಡಿ ಎಂಟರ್‌ಟೈನರ್ 'ಬಿಲ್ ಗೇಟ್ಸ್' ಸಿನಿಮಾವನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ಶ್ರೀನಿವಾಸ್ ಮಂಡ್ಯ 'ರೋಲೆಕ್ಸ್' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ತಮ್ಮ ಅಮೋಘ ಕಾಮಿಡಿ ಟೈಮಿಂಗ್ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಕೋಮಲ್ ಕುಮಾರ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಇದೂವರೆಗೆ ಕೋಮಲ್ ಕುಮಾರ್ ನಟಿಸದೇ ಇರುವ ತೀರಾ ವಿಭಿನ್ನ ಹಾಗೂ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಕೋಮಲ್ ಕುಮಾರ್ ಜೊತೆ ನಟಿ ಸೋನಾಲ್ ಮೊಂತೆರೊ ನಾಯಕಿಯಾಗಿ ನಟಿಸಿದ್ದಾರೆ.

'ಟೈಗರ್' ವಿನೋದ್ ಪ್ರಭಾಕರ್ ಎಂಟ್ರಿ

ಈ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ 'ಟೈಗರ್' ವಿನೋದ್ ಪ್ರಭಾಕರ್. ಅವರು ಇಲ್ಲಿ ಒಂದು ವಿಶೇಷ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿನೋದ್ ಪ್ರಭಾಕರ್ ಅವರ ವಿಭಿನ್ನ ಪಾತ್ರ ಕಿಕ್ ಕೊಡಲಿದೆ. ಕೋಮಲ್ ಕುಮಾರ್ ಹಾಗೂ ವಿನೋದ್ ಪ್ರಭಾಕರ್ ಅವರನ್ನು ಒಟ್ಟಾಗಿ ಸ್ಕ್ರೀನ್ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಕ್ಕಾಗಿ 'ರೋಲೆಕ್ಸ್' ಚಿತ್ರತಂಡ ವಿನೋದ್ ಪ್ರಭಾಕರ್ ಅವರಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸಿದೆ.

'ರೋಲೆಕ್ಸ್' ಸಿನಿಮಾ ಕೇವಲ ಕಾಮಿಡಿ ಮಾತ್ರವಲ್ಲದೆ, ಪ್ರೇಕ್ಷಕರನ್ನು ಹಿಡಿದಿಡುವ ಒಂದು ಉತ್ತಮ ಫ್ಯಾಮಿಲಿ ಎಂಟರ್‌ಟೈನರ್ ಸ್ಟೋರಿ ಇದೆ. ಈ ಸಿನಿಮಾದಲ್ಲಿ ಕೋಮಲ್ ಕುಮಾರ್, ಸೋನಾಲ್ ಮಾಂತೆರೋ, ವಿನೋದ್ ಪ್ರಭಾಕರ್ ಜೊತೆಗೆ ಅಚ್ಯುತಕುಮಾರ್, ನವೀನ್ ಪಡೀಲ್ ಹಾಗೂ ಅರುಣ್ ಬಾಲರಾಜ್ ಜನಪ್ರಿಯ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Vinod Prabhakar special role in Komal Kumar and Sonal Monteiro starrer Rolex movie

'ರೋಲೆಕ್ಸ್' ಅದ್ದೂರಿ ನಿರ್ಮಾಣ

'ರೋಲೆಕ್ಸ್' ಸಿನಿಮಾವನ್ನು ಆಂಧ್ರ ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರಸ್ತುತ ಅಧ್ಯಕ್ಷರಾಗಿರುವ ಅಂಬಟಿ ಮಧು ಮೋಹನಕೃಷ್ಣ ಅವರು ಬಂಡವಾಳ ಹೂಡಿದ್ದಾರೆ. ಮಧು ಫಿಲಂ ಸರ್ಕ್ಯೂಟ್ಸ್ ಬ್ಯಾನರ್‌ನಲ್ಲಿ ಅವರು ಕನ್ನಡದಲ್ಲಿ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾ ಇದಾಗಿದೆ. ಮುರಳಿಕೃಷ್ಣ ಅವರು ಈ ಸಿನಿಮಾದ ಕಾರ್ಯಕಾರಿ ನಿರ್ಮಾಪಕರಾಗಿ ಜವಾಬ್ದಾರಿ ನಿಭಾಯಿಸಿದ್ದಾರೆ.

ಈ ಸಿನಿಮಾದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಮೆಲೋಡಿ ಕಿಂಗ್ ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸ್ಯಾಂಡಲ್‌ವುಡ್‌ನ ಜನಪ್ರಿಯ ಸಾಹಿತಿ ಡಾ.ವಿ. ನಾಗೇಂದ್ರಪ್ರಸಾದ್, ಕವಿರಾಜ್, ರಾಜೇಶ್ ವರ್ಮ ಹಾಗೂ ಕಿನ್ನಾಳ್ ರಾಜ್ ಸಾಹಿತ್ಯ ರಚಿಸಿದ್ದಾರೆ. ರಾಕೇಶ್ ಸಿ ತಿಲಕ್ ಅವರ ಛಾಯಾಗ್ರಹಣ, ಅರವಿಂದ್ ರಾಜ್ ಅವರ ಸಂಕಲನ, ಯೋಗಾನಂದ್ ಅವರ ಸಾಹಸ ನಿರ್ದೇಶನ ಹಾಗೂ ಕಲೈ - ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

English summary
Vinod Prabhakar special role in Komal Kumar and Sonal Monteiro starrer Rolex movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X