ವಿನೋದ್ ಪ್ರಭಾಕರ್ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್: ಬಿಡುಗಡೆ ಸಜ್ಜಾಗದ 'ವರದ'

'ಮರಿ ಟೈಗರ್' ವಿನೋದ್ ಪ್ರಭಾಕರ್ ಹೊಸ ಸಿನಿಮಾ 'ವರದ' ರಿಲೀಸ್‌ಗೆ ರೆಡಿಯಾಗಿದೆ. ದರ್ಶನ್ ಜೊತೆ 'ರಾಬರ್ಟ್' ಸಿನಿಮಾದಲ್ಲಿ ನಟಿಸಿದ ಬಳಿಕ ಬಿಡುಗಡೆಯಾಗುತ್ತಿರುವ ಸಿನಿಮಾವಿದು. 'ರಾಬರ್ಟ್' ಚಿತ್ರದಿಂದ ವಿನೋದ್ ಪ್ರಭಾಕರ್ ಇಮೇಜ್ ಬದಲಾಗಿದ್ದು, ಹೊಸ ಸಿನಿಮಾ 'ವರದ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿದೆ ಎನ್ನುವ ನಂಬಿಕೆ ಚಿತ್ರತಂಡಕ್ಕಿದೆ. ಈಗಾಗಲೇ ಸಿನಿಮಾ ಸೆನ್ಸಾರ್ ಕೂಡ ಆಗಿದ್ದು ಬಿಡುಗಡೆ ಸಕಲ ಸಿದ್ಧತೆಗಳು ನಡೆದಿವೆ.

ಟೈಗರ್ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ 'ವರದ' ಚಿತ್ರವನ್ನು ನೋಡಿ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ಸಿನಿಮಾ ಬಗ್ಗೆ ಸೆನ್ಸಾರ್ ಮಂಡಳಿ ಮೆಚ್ಚುಗೆ ಮಾತುಗಳನ್ನಾಡಿದ್ದು, ಸಿನಿಮಾವನ್ನು ಫೆಬ್ರವರಿ 18ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನಿಸಿದೆ. 'ರಾಬರ್ಟ್' ಬಳಿಕ ವಿನೋದ್ ಪ್ರಭಾಕರ್ ಅಭಿನಯದ ಸಿನಿಮಾ ಬಿಡುಗಡೆಗೆ ಆಗುತ್ತಿರುವುದರಿಂದ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ‌.

'ವರದ' ವಿನೋದ್ ಪ್ರಭಾಕರ್ ಅಭಿನಯದ ಮಾಸ್ ಸಿನಿಮಾ

ವಿನೋದ್ ಪ್ರಭಾಕರ್ ಸಿನಿಮಾ ಅಂದ್ರೆ ಅದು ಮಾಸ್ ಅನ್ನುವ ನಂಬಿಕೆ. ಆದರೆ, 'ವರದ' ಸಿನಿಮಾದಲ್ಲಿ ಬರೀ ಆ್ಯಕ್ಷನ್ ಅಷ್ಟೇ ಇಲ್ಲ. ಬದಲಿಗೆ ಅಪ್ಪ-ಮಗನ ನಡುವಿನ ಸೆಂಟಿಮೆಂಟ್ ಇದೆ. ಹೀಗಾಗಿ ಇದು ಕಂಪ್ಲೀಟ್ ಫ್ಯಾಮಿಲಿ ಕೂತು ನೋಡುವ ಸಿನಿಮಾ ಎನ್ನುತ್ತಿದೆ ಚಿತ್ರತಂಡ. ಆಟೋರಾಜ, ಕಳ್ಳ ಮಳ್ಳ ಸುಳ್ಳ, ಡಿಕೆ, ಯೋಗಿಯಂತಹ ಸಿನಿಮಾಗಳನ್ನು ನಿರ್ದೇಶಿಸಿರುವ ಉದಯ ಪ್ರಕಾಶ್ 'ವರದ' ಮೂಲಕ ಕಮರ್ಷಿಯಲ್ ಎಂಟರೈಟನ್ ಸಿನಿಮಾ ನಿರ್ದೇಶಿಸಿದ್ದಾರೆ.

Vinod Prabhakar starrer Varadha Kannada movie releasing on feb 18th

ಉದಯ ಪ್ರಕಾಶ್ ಕೇವಲ ನಿರ್ದೇಶನವನ್ನಷ್ಟೇ ಮಾಡಿಲ್ಲ. ಬದಲಾಗಿ ನಿರ್ಮಾಣ ಕೂಡ ಮಾಡಿದ್ದಾರೆ. ಈ ಸಿನಿಮಾದ ಸಹ ನಿರ್ಮಾಪಕರು ಸುನಿತಾ ಪ್ರಕಾಶ್. ವರದ ಚಿತ್ರದ ಹಾಡುಗಳಿಗೆ ಕೆ.ಕಲ್ಯಾಣ್ , ಚೇತನ್ ಕುಮಾರ್ ಹಾಗೂ ನಂದೀಶ್ ಹಾಡುಗಳನ್ನು ಬರೆದಿದ್ದಾರೆ. ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ. ಭಜರಂಗಿ ಆನಂದ್ ಛಾಯಾಗ್ರಹಣವಿದ್ದರೆ, ವೆಂಕಿ ಸಂಕಲನ, ಕಂಬಿ ರಾಜು ಕೊರಿಯೋಗ್ರಫಿ ಹಾಗೂ ಡಿಫರೆಂಟ್ ಡ್ಯಾನಿ, ವಿಕ್ರಂ ಮೋರ್, ಅಶ್ರಫ್ ಗುರ್ಕಲ್ ಆಕ್ಷನ್ ಚಿತ್ರಕ್ಕಿದೆ.

ತಂದೆ ಪಾತ್ರದಲ್ಲಿ ಹಿರಿಯ ನಟ ಚರಣ್ ರಾಜ್

'ವರದ' ಸಿನಿಮಾದ ವಿಶೇಷತೆ ಏನು ಅಂದರೆ, ಹಿರಿಯ ನಟ ಚರಣ್ ರಾಜ್ ಈ ಸಿನಿಮಾದಲ್ಲಿ ನಟ ವಿನೋದ್ ಪ್ರಭಾಕರ್ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹಳ ದಿನಗಳ ಬಳಿಕ ಮತ್ತೆ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಚರಣ್ ರಾಜ್ ಕೂಡ ಈ ಸಿನಿಮಾದ ಪ್ರಮುಖ ಆಸ್ತಿ. ಸಿನಿಮಾದುದ್ದಕ್ಕೂ ತಂದೆ-ಮಗನ ಬಾಂಧವ್ಯ ಹಾಗೂ ಸೆಂಟಿವೆಂಟ್ ದೃಶ್ಯಗಳು ನೋಡಲು ಸಿಗುತ್ತವೆ.

Vinod Prabhakar starrer Varadha Kannada movie releasing on feb 18th

ವಿನೋದ್ ಪ್ರಭಾಕರ್‌ಗೆ ಈ ಸಿನಿಮಾದಲ್ಲಿ ನಾಯಕಿಯಾಗಿ ಅಮಿತಾ ಕಾಣಿಸಿಕೊಂಡಿದ್ದಾರೆ. ಅನಿಲ್ ಸಿದ್ದು, ಎಂ.ಕೆ.ಮಠ, ಅಶ್ವಿನಿ ಗೌಡ, ಗಿರೀಶ್ ಜತ್ತಿ, ಪ್ರಶಾಂತ್ ಸಿದ್ದಿ, ರಾಧ ರಂಗನಾಥ್, ರಾಜೇಶ್ವರಿ, ದುರ್ಗ, ಮಾನಸ, ಅರವಿಂದ್, ರೋಬೊ ಗಣೇಶ್, ಲೋಕೇಶ್, ನಮನ, ರಾಮಸ್ವಾಮಿ 'ವರದ'ನಿಗೆ ಜೊತೆಯಾಗಿದ್ದಾರೆ. ಈ ಹಿಂದೆನೇ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಕೊರೊನಾದಿಂದಾಗಿ ಸಿನಿಮಾವನ್ನು ಮುಂದೂಡಲ್ಪಟ್ಟಿತ್ತು. ಕೊನೆಗೂ ಕೊರೊನಾ ಕಡಿಮೆಯಾದ ಬಳಿಕ ಮತ್ತೆ ಸಿನಿಮಾ ಬಿಡುಗಡೆಗೆ ಚಿತ್ರತಂಡ ಸಜ್ಜಾಗಿದ್ದು, ಫೆಬ್ರವರಿ 18ಕ್ಕೆ ಬಿಡುಗಡೆ ಮಾಡಲಿದೆ.

More from Filmibeat

English summary
Vinod Prabhakar starrer Varadha movie releasing on feb 18th. Censor board has given U/A certificate to Varada Kannada movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X