"ಭಗವಂತ ನನ್ನನ್ನು ಒಂಟಿ ಮಾಡಿಬಿಟ್ಟ.. ಯಾರೂ ಇಲ್ಲ.. ಇನ್ಮುಂದೆ ಇವರೇ ಬಂಧು ಬಳಗ"- ವಿನೋದ್ ರಾಜ್ ಭಾವುಕ

ಕನ್ನಡ ಚಿತ್ರರಂಗ ಕಂಡ ಲೆಜೆಂಡರಿ ನಟಿ ಲೀಲಾವತಿ ಇಂದು (ಡಿಸೆಂಬರ್ 8) ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಆರೋಗ್ಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇತ್ತು. ಇಂದು ದಿಢೀರನೇ ಹೃದಯ ಸ್ತಂಬನ ಆಗಿದ್ದರಿಂದ ಲೀಲಾವತಿ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಹಿರಿಯ ನಟಿ ಲೀಲಾವತಿ ಅನಾರೋಗ್ಯದಿಂದ ಹಾಸಿಗೆ ಹಿಡಿದ ದಿನದಿಂದಲೂ ಪುತ್ರ ವಿನೋದ್ ರಾಜ್ ಸೇವೆಯಲ್ಲಿ ತೊಡಗಿದ್ದರು. ಅಮ್ಮನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡಿದ್ದರು. ಇಂದು (ಡಿಸೆಂಬರ್ 8) ತಾಯಿಯನ್ನು ಕಳೆದುಕೊಂಡು ಭಾವುಕರಾಗಿದ್ದಾರೆ.

Vinod Raj reaction on his mother legendary actor Leelavathi Death

ಖಾಸಗಿ ಆಸ್ಪತ್ರೆಯ ಮುಂದೆ ಲೀಲಾವತಿಯವರ ನಿಧನ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, "ಭಗವಂತ ನನ್ನನ್ನು ಒಂಟಿ ಮಾಡಿಬಿಟ್ಟ" ಎಂದು ಹೇಳಿ ಭಾವುಕರಾಗಿದ್ದಾರೆ. ಇದೇ ಅಮ್ಮ ಕನಸು ಪಶು ಆಸ್ಪತ್ರೆಯನ್ನು ಅವರು ಜೀವಿತಾವಧಿಯಲ್ಲೇ ಉದ್ಘಾಟನೆ ಮಾಡಿದ್ದನ್ನು ಸ್ಮರಿಸಿಕೊಂಡಿದ್ದಾರೆ.

ಲೀಲಾವತಿಯರ ಆರೋಗ್ಯ ಸಮಸ್ಯೆ ಬಗ್ಗೆ ವಿನೋದ್ ರಾಜ್ ಮಾಹಿತಿ ಹಂಚಿಕೊಂಡಿದ್ದಾರೆ. "ಹೃದಯ ಸಮಸ್ಯೆ.. ವಯಸ್ಸು ಸಮಸ್ಯೆ.. ಹೃದಯ ಸ್ಪಂದನ ಆಗಿದೆ. ಏನು ಹೇಳಬೇಕು ಅಂತ ಗೊತ್ತಾಗುತ್ತಿಲ್ಲ. ಭಗವಂತ ನನ್ನನ್ನು ಒಂಟಿ ಮಾಡಿಬಿಟ್ಟ ಅಷ್ಟೇ. ಕನಸಿ ಆಸ್ಪತ್ರೆಯನ್ನು ಉದ್ಘಾಟನೆ ಮಾಡಿಸಿಬಿಟ್ಟರು. ಅದೇ ಪುಣ್ಯ." ಎಂದು ವಿನೋದ್ ರಾಜ್ ಭಾವುಕರಾಗಿದ್ದಾರೆ.

ಇಲ್ಲಿರುವ ಜನರು ಬಂಧು ಬಳಗ. ಇನ್ನೂ ಯಾರೂ ಇಲ್ಲ ಎಂದು ವಿನೋದ್ ಕಣ್ಣೀರು ಹಾಕಿದ್ದಾರೆ. "ಡಿ ಕೆ ಶಿವಕುಮಾರ್ ಅವರು.. ಇಲ್ಲಿರುವ ಪೊಲೀಸರು, ಜನರು ಅದೆಷ್ಟು ಒದ್ದಾಡಿದರೋ ಪಾಪ. ಇವರುಗಳೇ ಅಣ್ಣ ತಮ್ಮಂದಿರು. ಯಾರೂ ಇಲ್ಲ. ಇವರೇ ಬಂದು ಬಳಗ." ಎಂದು ವಿನೋದ್ ರಾಜ್ ಪ್ರತಿಕ್ರಿಯಿಸಿದ್ದಾರೆ.

Vinod Raj reaction on his mother legendary actor Leelavathi Death

ಲೀಲಾವತಿಯವ ಪಾರ್ಥಿವ ಶರೀರವನ್ನು ಅವರ ಮನೆಗೆ ತೆಗೆದುಕೊಂಡು ಹೋಗಲಾಗಿದೆ. ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ಸಕಲ ಸಿದ್ಧತೆಗಳನ್ನು ಮಾಡಲಾಗಿತ್ತಿದೆ.

More from Filmibeat

English summary
Vinod Raj reaction on his mother legendary actor Leelavathi Death:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X