ಸಾಹಸಸಿಂಹ ಪುಣ್ಯಭೂಮಿ ವಿವಾದ: ಮತ್ತೆ ಕಾನೂನು ಹೋರಾಟಕ್ಕೆ ಮುಂದಾದ ವಿಷ್ಣು ಸೇನಾ ಸಮಿತಿ

ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಪುಣ್ಯಭೂಮಿ ವಿವಾದ ಇನ್ನೂ ಮುಗಿದಿಲ್ಲ. ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಆಗಿದ್ದರೂ, ಅಭಿಮಾನ್ ಸ್ಟುಡಿಯೋದಲ್ಲಿಯೇ ಪುಣ್ಯಭೂಮಿ ಆಗಬೇಕು ಅಂತ ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಈ ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಹೀಗಾಗಿ ಮತ್ತೆ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಂತ್ಯಕ್ರಿಯೆಯನ್ನು ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ನೆರವೇರಿಸಲಾಗಿತ್ತು. ಅಲ್ಲಿಂದ ಅದೇ ಪುಣ್ಯಭೂಮಿ ಅಂತ ವಿಷ್ಣುವರ್ಧನ್ ಅಭಿಮಾನಿಗಳು ತೀರ್ಮಾನ ಮಾಡಿಕೊಂಡಿದ್ದಾರೆ. ಹೀಗಾಗಿ ಪುಣ್ಯಭೂಮಿ ಮಾಡಲು ಅಭಿಮಾನ್ ಸ್ಟುಡಿಯೋದಲ್ಲಿ 20 ಗುಂಟೆ ಜಾಗವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದರು.

Vishnuvardhan Punyabhoomi Controversy Vishnu Sena Samathi decided to go with the legal fight

ಹಿರಿಯ ನಟ ಬಾಲಕೃಷ್ಣ ಅವರ ಕಲಾಸೇವೆ ಮೆಚ್ಚಿ ಸರ್ಕಾರ 20 ಎಕರೆ ಜಮೀನನ್ನು ನೀಡಿತ್ತು. ಅಲ್ಲೇ ಅಭಿಮಾನ್ ಸ್ಟುಡಿಯೋ ನಿರ್ಮಾಣ ಆಗಿತ್ತು. ಈಗ ಬಾಲಣ್ಣನ ಮಕ್ಕಳು ಹಾಗೂ ಮೊಮ್ಮಕ್ಕಳು 10 ಎಕ್ಕರೆಯನ್ನು ಮಾರಿದ್ದಾರೆ. ಇದು ಕಾನೂನಿಗೆ ವಿರುದ್ಧವಾಗಿದೆ. ಈ ಬೆನ್ನಲ್ಲೇ ಉಳಿದ ಜಮೀನು ಅರಣ್ಯ ವ್ಯಾಪ್ತಿಗೆ ಬಂದಿದೆ. ಹೀಗಾಗಿ ಪುಣ್ಯಭೂಮಿ ನಿರ್ಮಾಣಕ್ಕೆ ಎರಡೂ ಕಡೆಯಿಂದಲೂ ಅಡಚಣೆಯಾಗಿದೆ. ಈ ಸಂಬಂಧ ಡಾ.ವಿಷ್ಣು ಸೇನಾ ಸಮಿತಿ ಸಂಘದ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಕಾನೂನು ಹೋರಾಟ ಮಾಡಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ. ಈ ಹೋರಾಟದ ವಿವರವನ್ನು ಬಹಿರಂಗ ಪಡಿಸಿದ್ದಾರೆ.

ಡಾ.ವಿಷ್ಣು ಸೇನಾ ಸಮಿತಿ ನಿರ್ಧಾರವೇನು?

ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿನಲ್ಲಿ ನಿರ್ಮಾಣವಾಗಿದ್ದರೂ ಸಹ ಅಂತ್ಯಕ್ರಿಯೆಗೊಂಡಂತಹ ಅಭಿಮಾನ್ ಸ್ಟುಡಿಯೋದಲ್ಲಿ ಅವರ ಪುಣ್ಯಭೂಮಿಗೆ ಕನಿಷ್ಠ 20 ಗುಂಟೆಗಳ ಜಾಗ ನೀಡಬೇಕೆಂದು ಕೋರಿ ಡಾ.ವಿಷ್ಣು ಸೇನಾ ಸಮಿತಿಯು 18.09.2015ರ ಕೇಸ್ .RD/308/LJB/2015ರ ಕೇಸಿನಲ್ಲಿ ತಮ್ಮ ವಾದವನ್ನು ಮಂಡಿಸಿತ್ತು. ಜೊತೆಗೆ ಹಿರಿಯ ನಟ ಬಾಲಕೃಷ್ಣ ಅವರಿಗೆ ನೀಡಿರುವಂತಹ ಜಮೀನು ಅರಣ್ಯ ಇಲಾಖೆಗೆ ಒಳಪಟ್ಟಿರುತ್ತದೆ ಮತ್ತು ಅವರ ಕಾಲ ನಂತರದಲ್ಲಿ ಅವರ ಮಕ್ಕಳು/ಮೊಮ್ಮಕ್ಕಳು ಹತ್ತು ಎಕರೆಯನ್ನು ಮಾರಾಟ ಮಾಡಿ ಸರ್ಕಾರಕ್ಕೆ ವಂಚಿಸಿರುತ್ತಾರೆ ಎಂಬ ವಿಷಯವನ್ನು ಪ್ರಸ್ತಾಪಿಸಿತ್ತು.

ಈ ಕುರಿತು ವಾದ ವಿವಾದ ಆಲಿಸಿದ ನ್ಯಾಯಾಲಯವು "ಈ ಸಂಬಂಧ ಅಭಿಮಾನಿ ಸಂಘವಾದ ಡಾ.ವಿಷ್ಣು ಸೇನಾ ಸಮಿತಿಗೆ ಹಕ್ಕಿರುವುದಿಲ್ಲವೆಂದೂ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಥವಾ ಸರ್ಕಾರದ ಮೂಲಕ ಈ ವಿಷಯವನ್ನು ಇತ್ಯರ್ಥಪಡಿಸಿಕೊಳ್ಳಬೇಕೆಂದು ತಿಳಿಸಿತು.

ನ್ಯಾಯಾಧೀಶರ ಅಭಿಪ್ರಾಯದಂತೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ನಟ ದಿ.ಬಾಲಕೃಷ್ಣ ಅವರ ಕಲಾಸೇವೆಗೆ ಮೆಚ್ಚಿ ಸರ್ಕಾರವು ನೀಡಿದ 20 ಎಕರೆಯ ಭೂಮಿಯನ್ನು ಅವರ ಮಕ್ಕಳು ಖಾಸಗಿ ಸ್ವತ್ತಿನಂತೆ ಭಾವಿಸಿ ಹತ್ತು ಎಕರೆಯನ್ನು ಮಾರಾಟ ಮಾಡಿರುತ್ತಾರೆ. ಇದು ಸರ್ಕಾರದ ಭೋಗ್ಯ ಹಕ್ಕುಗಳ ಕಾಯ್ದೆಗೆ ವಿರುದ್ದವಾಗಿರುತ್ತದೆ. ಮತ್ತು ಸದರಿ ಜಮೀನು ಅರಣ್ಯ ವ್ಯಾಪ್ತಿಯಲ್ಲಿ ಬರುವುದರಿಂದ ಈ ಜಾಗದ ಅನುದಾನ ಸಹ ತಪ್ಪಾಗಿದ್ದು ಅದನ್ನು ಸರಿಪಡಿಸಲು ಸರ್ಕಾರವನ್ನು ಒತ್ತಾಯಿಸುವ ನಿರ್ಧಾರಕ್ಕೆ ಡಾ.ವಿಷ್ಣು ಸೇನಾ ಸಮಿತಿಯು ಬಂದಿದೆ. ಆ ನಿಟ್ಟಿನಲ್ಲಿ ಅಗತ್ಯವಿರುವ ಕಾನೂನು ಪ್ರಕ್ರಿಯೆ ಮತ್ತು ಹೋರಾಟಕ್ಕೆ ಡಾ.ವಿಷ್ಣು ಸೇನಾ ಸಮಿತಿಯು ಚಾಲನೆ ನೀಡಲಿದೆ ಎಂದು ಡಾ.ವಿಷ್ಣು ಸೇನಾ ಸಮಿತಿ ತಿಳಿಸಿದೆ.

More from Filmibeat

English summary
Vishnuvardhan Punyabhoomi Controversy; Vishnu Sena Samathi decided to go with the legal fight:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X