'ವಿಶ್ವರೂಪಂ-2' ನೋಡಿದ ಮೇಲೆ ಈ ಮೂರು ಸನ್ನಿವೇಶಕ್ಕೆ ವಿರೋಧ

By Bharath Kumar

ಗ್ಲೋಬಲ್ ಸ್ಟಾರ್ ಕಮಲ್ ಹಾಸನ್ ಶ್ರೇಷ್ಠ ನಟ. ಇಂತಹ ಶ್ರೇಷ್ಠ ನಟನ ಚಿತ್ರಕ್ಕೂ ಅಡೆತಡೆಗಳು ತಪ್ಪಿದಲ್ಲ. 2013ರಲ್ಲಿ ಬಿಡುಗಡೆಯಾಗಿದ್ದ ವಿಶ್ವರೂಪಂ ಸಿನಿಮಾ ವಿರೋಧದ ನಡುವೆಯೇ ತೆರೆಕಂಡಿತ್ತು.

ಈಗ ಯಾವುದೇ ಆತಂಕವಿಲ್ಲದೇ ಬಿಡುಗಡೆಯಾಗಿದ್ದ ವಿಶ್ವರೂಪಂ 2 ಚಿತ್ರಕ್ಕೆ ಹೊಸ ಸಂಕಷ್ಟ ಎದುರಾಗಿದೆ. ಸಿನಿಮಾ ನೋಡಿದ ಮೇಲೆ ಚಿತ್ರದ ಕೆಲವು ದೃಶ್ಯ ಹಾಗೂ ಡೈಲಾಗ್ ಗಳಿಗೆ ಕತ್ತರಿ ಹಾಕಬೇಕು ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಈಗಾಗಲೇ ಸೆನ್ಸಾರ್ ಆಗಿ ರಿಲೀಸ್ ಆಗಿರುವ ಚಿತ್ರದಲ್ಲಿ ಹಿಂದಿ ವರ್ಷನ್ ಗೆ 12 ಕಟ್, ತಮಿಳು ವರ್ಷನ್ ನಲ್ಲಿ 22 ಕಟ್ ಆಗಿದೆ. ಹೀಗಿದ್ದರೂ ಈಗ ಕಮಲ್ ಚಿತ್ರಕ್ಕೆ ಮತ್ತೆ ಸೆನ್ಸಾರ್ ಸಮಸ್ಯೆಯಾಗಬಹುದು ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ. ಮುಂದೆ ಓದಿ.....

'ಭಾರತ ಮಾತಾ' ಡೈಲಾಗ್ ಕಟ್ ಮಾಡಿ

'ಭಾರತ ಮಾತಾ' ಡೈಲಾಗ್ ಕಟ್ ಮಾಡಿ

ವಿಶ್ವರೂಪಂ 2 ಚಿತ್ರದಲ್ಲಿ ನಾಯಕಿ ಪೂಜ ಕುಮಾರ್ ಹೇಳುವ 'ಭಾರತ ಮಾತಾ....' ಸಂಭಾಷಣೆಯನ್ನ ಚಿತ್ರದಿಂದ ತೆಗೆದು ಹಾಕುವುದು ಒಳ್ಳೆಯದು ಎಂದು ಸೆನ್ಸಾರ್ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ ಎನ್ನಲಾಗಿದೆ. ಸಿನಿಮಾ ಮುಂಚೆ ಸೆನ್ಸಾರ್ ಆಗಿದ್ದರೂ, ಸಿನಿಮಾ ರಿಲೀಸ್ ಆದಮೇಲೆಯೂ ಈ ಚಿತ್ರದ ಮೇಲೆ ಕಣ್ಣಿಟ್ಟಿರುವ ಅಧಿಕಾರಿಗಳು ಈ ಸಂಭಾಷಣೆಯಿಂದ ವಿವಾದ ಉಂಟಾಗಬಹುದು ಎಂದು ಹೇಳುತ್ತಿದೆ.

ರೊಮ್ಯಾಂಟಿಕ್ ಸೀನ್

ರೊಮ್ಯಾಂಟಿಕ್ ಸೀನ್

ಇನ್ನು ನಟ ಕಮಲ್ ಹಾಸನ್ ಮತ್ತು ಪತ್ನಿ ಪಾತ್ರದಲ್ಲಿ ಅಭಿನಯಿಸಿರುವ ಪೂಜ ಕುಮಾರ್ ಅವರ ನಡುವೆ ಒಂದು ರೊಮ್ಯಾಂಟಿಕ್ ದೃಶ್ಯವಿದೆ. ಬೆಡ್ ಮೇಲೆ ಇಬ್ಬರು ರೊಮ್ಯಾನ್ಸ್ ಮಾಡುವ ಈ ಸನ್ನಿವೇಶವನ್ನ ಕಟ್ ಮಾಡುವಂತೆ ಸೂಚಿಸಿದೆಯಂತೆ.

ಲಿಪ್ ಲಾಕ್ ದೃಶ್ಯಕ್ಕೂ ಕತ್ತರಿ

ಲಿಪ್ ಲಾಕ್ ದೃಶ್ಯಕ್ಕೂ ಕತ್ತರಿ

ನಟಿ ಪೂಜಾ ಮತ್ತು ಕಲಮ್ ನಡುವೆ ಒಂದು ಲಪ್ ಲಾಕ್ ಸನ್ನಿವೇಶವನ್ನ ಕೂಡ ಚಿತ್ರದಿಂದ ಕೈಬಿಡಿ ಎಂದು ಸೆನ್ಸಾರ್ ಅಧಿಕಾರಿಗಳು ಸಲಹೆ ನೀಡಿದ್ದಾರಂತೆ. ಒಟ್ಟು ಚಿತ್ರದಲ್ಲಿ ಮೂರ್ನಾಲ್ಕು ಕಡೆ ಲಿಪ್ ಲಾಕ್ ಸೀನ್ ಇದೆ. ಆದ್ರೆ, ನಿರ್ಧಿಷ್ಟವಾಗಿ ಒಂದು ದೃಶ್ಯವನ್ನ ತೆಗೆಯಲು ಸೂಚಿಸುತ್ತಿದ್ದಾರಂತೆ.

ಕೆಲವು ವಿವಾದಾತ್ಮಕ ಪದಗಳು

ಕೆಲವು ವಿವಾದಾತ್ಮಕ ಪದಗಳು

ಇವಷ್ಟೇ ಅಲ್ಲದೇ ಚಿತ್ರದಲ್ಲಿ ಕೆಲವು ಪದಗಳನ್ನ ಕೂಡ ಮ್ಯೂಟ್ ಮಾಡಲು ಅಭಿಪ್ರಾಯ ಪಟ್ಟಿದ್ದಾರಂತೆ. ಚಿತ್ರದಲ್ಲಿ ಕಮಲ್ ಹಾಸನ್ ಮುಸಲ್ಮಾನ ಮಿಲಟರಿ ಅಧಿಕಾರಿಯಾಗಿ ಅಭಿನಯಿಸಿದ್ದಾರೆ. ಅಲ್ಲಾ, ಪಾಕಿಸ್ತಾನ ಹಾಗೂ ವಿದೇಶಿ ಏಜೆಂಟ್ ಗಳ ಬಗ್ಗೆ ಕೆಲವು ಪದಗಳನ್ನ ಬಳಸುವುದು ಸೂಕ್ತವಲ್ಲ ಎಂದು ತಿಳಿಸಿದೆ.

ಇದಕ್ಕೆ ಕಾರಣ ಇದೆ

ಇದಕ್ಕೆ ಕಾರಣ ಇದೆ

ಅಂದ್ಹಾಗೆ, 'ವಿಶ್ವರೂಪಂ-2' ಸಿನಿಮಾ ಟೆರರಿಸ್ಟ್ ಕಥೆ ಹೊಂದಿದೆ. ಯುಸ್ ಮಿಲಿಟರಿಗೆ ಟೆರರಿಸ್ಟ್ ದಮನ ಮಾಡಲು ಭಾರತದ ಸ್ಪೈ ಏಜೆಂಟ್ ಕಮಲ್ ಹಾಸನ್ ನೆರವಾಗುವುದು ಚಿತ್ರದ ಕಥೆ. ಹೀಗಾಗಿ, ಇಲ್ಲಿ ಟೆರರಿಸ್ಟ್ ಚಟುವಟಿಕೆಗಳು, ಮಿಲಿಟರಿ ಚಟುವಟಿಕೆಗಳು, ದೇಶಗಳ ಬಗ್ಗೆ ಸಂಭಾಷಣೆ ಅಗತ್ಯ. ಸಿನಿಮಾ ದೃಷ್ಟಿಯಲ್ಲಿದ್ದರೂ, ಇದರಿಂದ ಯಾರಿಗೂ ನೋವು ಉಂಟಾಗಬಾರದು ಎಂಬ ಉದ್ದೇಶ.

More from Filmibeat

English summary
CBFC directs Kamal Haasan’s Vishwaroopam 2 to mute some dialogue and aslo Says 'Bharat Mata' dialogue is anti national.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X