»   » 'ವಿಶ್ವರೂಪಂ 2'ರಲ್ಲಿ ಕಮಲ್ ಲಿಪ್ ಲಾಕ್ ಸೀನ್

'ವಿಶ್ವರೂಪಂ 2'ರಲ್ಲಿ ಕಮಲ್ ಲಿಪ್ ಲಾಕ್ ಸೀನ್

Posted By:
Subscribe to Filmibeat Kannada

'ವಿಶ್ವರೂಪಂ' ಚಿತ್ರದ ಕೊನೆಯಲ್ಲಿ ಒಂದು ಬೆಡ್ ರೂಂ ಸೀನ್ ಇತ್ತು. ಅದು ಹೊರತುಪಡಿಸಿದರೆ ಇನ್ಯಾವುದೇ ಲವ್ವು, ಡವ್ವು, ಡ್ಯುಯೆಟ್ ಸೀನ್ ಗಳಿರಲಿಲ್ಲ. ಆದರೆ 'ವಿಶ್ವರೂಪಂ ಭಾಗ 2'ರಲ್ಲಿ ಮಾತ್ರ ಕಮಲ್ ರೊಮ್ಯಾಂಟಿಕ್ ಸನ್ನಿವೇಶಗಳಿಗೆ ಮಣೆ ಹಾಕುತ್ತಿದ್ದಾರೆ ಎಂಬ ಮಾಹಿತಿ ಲೀಕ್ ಆಗಿದೆ.

ಸದ್ಯಕ್ಕೆ 'ವಿಶ್ವರೂಪಂ 2'ರ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಬಾರಿ ತಾಯಿ ಮಗನ ಸೆಂಟಿಮೆಂಟ್ ಸಹ ಇರುತ್ತದಂತೆ. ಇದರ ಜೊತೆಗೆ ಕಮಲ್ ಮತ್ತು ಪೂಜಾ ಕುಮಾರ್ ನಡುವಿನ ತುಟಿಗೆ ತುಟಿ ಚುಂಬನ ಪ್ರಮುಖ ಆಕರ್ಷಣೆಯಾಗಿ ನಿಲ್ಲಲಿದೆ ಎಂಬ ಸುದ್ದಿಯೂ ಇದೆ.

ಇನ್ನೊಂದು ವಿಶೇಷ ಎಂದರೆ ಭಾಗ 2ರ ಬಹುತೇಕ ಚಿತ್ರೀಕರಣ ಸ್ವದೇಶದಲ್ಲೇ ನಡೆಯಲಿದೆ. ಈ ಬಾರಿ ಉಗ್ರವಾದದ ಮತ್ತೊಂದು ಮುಖವನ್ನು ಕಮಲ್ ತೋರಿಸಲು ಹೊರಟಿದ್ದಾರೆ. ಉಗ್ರವಾದ, ಮಾನವೀಯ ಮೌಲ್ಯಗಳು ಈ ಬಾರಿಯ ಕಥಾವಸ್ತು. ಬಹುಶಃ 2013ರ ಕೊನೆಗೆ ಚಿತ್ರದ ಬಿಡುಗಡೆಯಾಗುವ ಸಾಧ್ಯತೆಗಳಿವೆ.

'ವಿಶ್ವರೂಪಂ' ಚಿತ್ರದಲ್ಲಿ ಅಭಿನಯಿಸಿದ್ದ ಪೂಜಾ ಕುಮಾರ್, ಆಂಡ್ರಿಯಾ ಹಾಗೂ ರಾಹುಲ್ ಬೋಸ್ ಭಾಗ 2ರಲ್ಲೂ ಇರುತ್ತಾರೆ. ಚಿತ್ರದಲ್ಲಿ ಹೊಸ ಪಾತ್ರವೊಂದು ಇರುತ್ತದೆ ಎನ್ನಲಾಗಿದ್ದು, ಸದ್ಯಕ್ಕೆ ಅದರ ಬಗ್ಗೆ ಕಮಲ್ ಆಗಲಿ ಚಿತ್ರತಂಡವಾಗಲಿ ತುಟಿಪಿಟಕ್ ಎಂದಿಲ್ಲ.

ಇನ್ನು 'ವಿಶ್ವರೂಪಂ 2' ಚಿತ್ರವನ್ನು ಡಿಟಿಎಚ್ ಮೂಲಕ ಬಿಡುಗಡೆ ಮಾಡುತ್ತಾರೋ ಅಥವಾ ನೇರವಾಗಿ ಥಿಯೇಟರ್ ನಲ್ಲೇ ರಿಲೀಸ್ ಮಾಡುತ್ತಾರೋ ಎಂಬ ಬಗ್ಗೆಯೂ ಇನ್ನೂ ತೀರ್ಮಾನಿಸಿಲ್ಲ. ಪಿವಿಆರ್ ಸಿನಿಮಾಸ್ ಜೊತೆ ಕಮಲ್ ಕೈಜೋಡಿಸಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ. (ಏಜೆನ್ಸೀಸ್)

English summary
The buzz is that Viswaroopam-2 , the sequel of Vishwaroopam there is a lip lock scene between Kamal Hassan and Pooja Kumar in this film. The Sequel will have romance angle with both Andrea and Pooja having more screen space with Kamal Hasan which might eventually end up in some steamy lip lock sequences
Please Wait while comments are loading...