ಬಚ್ಚಿಟ್ಟಿದ್ದ ದಾಸನ ಅಪಘಾತದ ಕಾರು, ಶ್ರೀರಂಗಪಟ್ಟಣದಲ್ಲಿ ಪತ್ತೆ
ಬೆಳಂಬೆಳಿಗ್ಗೆ ಮೈಸೂರಿನ ಹಿನಕಲ್ ಬಳಿಯ ರಿಂಗ್ ರಸ್ತೆಯಲ್ಲಿ ನಟ ದರ್ಶನ್ ಕಾರು ಅಪಘಾತಕ್ಕೆ ಒಳಗಾಗಿತ್ತು. ಅಪಘಾತವಾದ ಬಳಿಕ ಕಾರನ್ನ ಬೆಂಗಳೂರಿಗೆ ಟೋಯಿಂಗ್ ಮೂಲಕ ತೆಗದುಕೊಂಡು ಹೋಗಲಾಗಿದೆ ಎಂದು ಹೇಳಲಾಗಿತ್ತು. ಆದ್ರೆ, ಕಾರು ಶ್ರೀರಂಗಪಟ್ಟಣದಲ್ಲಿಯೇ ಪತ್ತೆಯಾಗಿದೆ.
ದರ್ಶನ್ ಕಾರು ಅಪಘಾತ ಪ್ರಕರಣವನ್ನ ದಾಖಲಿಸಿಕೊಂಡ ವಿವಿ ಪುರಂ ಪೋಲಿಸರು ಕಾರನ್ನ ವಾಪಸ್ ತರಿಸಿ ಎಂದು ಹೇಳಿದ್ದರು. ಈ ನಡುವೆ ಪ್ರಕರಣದ ಬೆನ್ನಟ್ಟಿದ ವಿವಿ ಪುರಂ ಸಂಚಾರಿ ಠಾಣೆ ಪೊಲೀಸರು ಕಾರು ಇರುವ ಸ್ಥಳ ಪತ್ತೆ ಹಚ್ಚಿದ್ದು ಕಾರನ್ನ ಸದ್ಯ ವಶಕ್ಕೆ ಪಡೆದಿದ್ದಾರೆ.
ಅಪಘಾತದ ಬಳಿಕ ಕಾರನ್ನು ದರ್ಶನ್ ಸ್ನೇಹಿತರು ಏಕಾಏಕಿ ಶ್ರೀರಂಗಪಟ್ಟಣದ ಬಳಿಯ ಸ್ನೇಹಿತನ ತೋಟದಲ್ಲಿ ಬಚ್ಚಿಟ್ಟಿದ್ದರು ಎನ್ನಲಾಗಿದೆ. ಅಪಘಾತವನ್ನ ಮುಚ್ಚಿಡುವ ಉದ್ದೇಶದಿಂದ ಕಾರನ್ನ ಸ್ಥಳದಿಂದ ರಾತ್ರೋರಾತ್ರಿ ಸ್ಥಳಾಂತರ ಮಾಡಿದ್ದಾರೆ ಎಂಬ ಆರೋಪವು ಇದೆ.

ಇದೀಗ, ಕಾರು ಇರುವ ಸ್ಥಳಕ್ಕೆ ಆರ್ ಟಿ ಓ ಅಧಿಕಾರಿಗಳು ಬಂದ ಪರಿಶೀಲನೆ ನಡೆಸಲಾಗುತ್ತದೆ. ಕಾರಿಗೆ ನಂಬರ್ ರಿಜಿಸ್ಟರ್ ಆಗಿದೆಯೇ? ಇನ್ಸೂರೆನ್ಸ್ ಮಾಡಿಸಲಾಗಿದೆಯಾ ಎಂದು ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ.
ಅಪಘಾತ ನಡೆದ ಸ್ಥಳ ವಿವಿ ಪುರಂ ಸಂಚಾರಿ ಠಾಣೆ ವ್ಯಾಪ್ತಿಗೆ ಸೇರಿತ್ತು. ಮತ್ತೊಂದೆಡೆ ದರ್ಶನ್, ಹಿರಿಯ ನಟ ದೇವರಾಜ್ ಮತ್ತು ಪ್ರಜ್ವಲ್ ದೇವರಾಜ್ ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


Click it and Unblock the Notifications











