For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ, ಬಾಲಯ್ಯ, ವಿಜಯ್, ಅಜಿತ್‌ ಸಿನಿಮಾಗೆ ಕರ್ನಾಟಕದಲ್ಲೂ ಬೇಡಿಕೆ: ಯಾರಿಗೆ ಎಷ್ಟೆಷ್ಟು ಥಿಯೇಟರ್‌?

  |

  ಸಂಕ್ರಾಂತಿ ಹಬ್ಬಕ್ಕೆ ಪರಭಾಷಾ ಸಿನಿಮಾಗಳ ದರ್ಬಾರ್ ಜೋರಾಗಿದೆ. ಟಾಲಿವುಡ್ ಹಾಗೂ ಕಾಲಿವುಡ್‌ನಲ್ಲಿ ದಿಗ್ಗಜರ ಬಾಕ್ಸಾಫೀಸ್‌ನಲ್ಲಿ ಕಾದಾಡುವುದಕ್ಕೆ ಸಜ್ಜಾಗಿ ನಿಂತಿದ್ದಾರೆ. ತೆಲುಗುನಲ್ಲಿ ಚಿರಂಜೀವಿ Vs ಬಾಲಯ್ಯ, ತಮಿಳಿನಲ್ಲಿ ದಳಪತಿ ವಿಜಯ್ Vs ಅಜಿತ್ ನಡುವೆ ಫೈಟ್ ಆರಂಭ ಆಗಿದೆ.

  ವಿಜಯ್ ಅಭಿನಯದ 'ವಾರಿಸು' ಸಿನಿಮಾ ಜನವರಿ 10 ರಂದೇ ವಿದೇಶದಲ್ಲಿ ಪ್ರೀಮಿಯರ್ ಕಂಡಿದೆ. ಉಳಿದ ಮೂರು ಸಿನಿಮಾಗಳೂ ಕೂಡ ವಿದೇಶಗಳಲ್ಲಿ ಗ್ರ್ಯಾಂಡ್ ಪ್ರೀಮಿಯರ್ ಮಾಡುವುದಕ್ಕೆ ಭರ್ಜರಿ ಪ್ಲ್ಯಾನ್ ಮಾಡಿಟ್ಟುಕೊಂಡಿದೆ.

  ವಿಜಯ್ vs ಅಜಿತ್ 7ನೇ ಬಾರಿಗೆ ಸಂಕ್ರಾಂತಿ ರೇಸ್: ಕಳೆದ 6 ಬಾರಿ ಗೆದ್ದವರಾರು, ಬಿದ್ದವರಾರು? ವಿಜಯ್ vs ಅಜಿತ್ 7ನೇ ಬಾರಿಗೆ ಸಂಕ್ರಾಂತಿ ರೇಸ್: ಕಳೆದ 6 ಬಾರಿ ಗೆದ್ದವರಾರು, ಬಿದ್ದವರಾರು?

  ಕರ್ನಾಟಕದಲ್ಲಿ ಸೂಪರ್‌ಸ್ಟಾರ್ ಸಿನಿಮಾಗಳು ಸಂಕ್ರಾಂತಿ ವೇಳೆ ರಿಲೀಸ್ ಆಗದೇ ಇರೋದ್ರಿಂದ ಈ ಸಿನಿಮಾ ಹೆಚ್ಚು ಥಿಯೇಟರ್‌ಗಳು ಸಿಕ್ಕಿವೆ. ವಿತರಕರೊಬ್ಬರ ಪ್ರಕಾರ, ಕರ್ನಾಟಕದಾದ್ಯಂತ ಈ ನಾಲ್ಕು ಸಿನಿಮಾಗಳಿಂದ ಸುಮಾರು 600ರಷ್ಟು ಥಿಯೇಟರ್‌ಗಳು ಪರಭಾಷೆಯ ಸಿನಿಮಾಗಳಿಗೆ ಸಿಕ್ಕಿವೆ.

  'ವಾರಿಸು' ಸಿನಿಮಾ ಅತೀ ಹೆಚ್ಚು ಥಿಯೇಟರ್

  'ವಾರಿಸು' ಸಿನಿಮಾ ಅತೀ ಹೆಚ್ಚು ಥಿಯೇಟರ್

  'ಬೀಸ್ಟ್' ಸೋಲಿನ ಬಳಿಕ ದಳಪತಿ ವಿಜಯ್ ಸಿನಿಮಾ 'ವಾರಿಸು' ಬಿಡುಗಡೆಗೆಯಾಗುತ್ತಿದೆ. ಜನವರಿ 11ರಂದು ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ತಮಿಳು ಹಾಗೂ ತೆಲುಗು ಎರಡೂ ಭಾಷೆಯಲ್ಲೂ ಸಿನಿಮಾ ರಿಲೀಸ್ ಆಗುತ್ತಿರೋದ್ರಿಂದ ಸಹಜವಾಗಿಯೇ ಬೇಡಿಕೆ ಹೆಚ್ಚಿದೆ. ಹಾಗೇ ಕರ್ನಾಟಕದಲ್ಲೂ ವಿಜಯ್ ಸಿನಿಮಾ ನೋಡೋಕೆ ಜನರು ತುದಿಗಾಲಲ್ಲಿ ನಿಂತಿದ್ದಾರೆ. ಅಲ್ಲದೆ ಕನ್ನಡ ಸಿನಿಮಾಗಳಿಲ್ಲದೇ ಇರೋದ್ರಿಂದ ಉಳಿದ ಮೂರು ಸಿನಿಮಾಗಳಿಗಿಂತ ಹೆಚ್ಚು ಥಿಯೇಟರ್ ಈ ಚಿತ್ರಕ್ಕೇ ಸಿಕ್ಕಿದೆ. ಅಂದ್ಹಾಗೆ 'ವಾರಿಸು'ಗೆ ಕರ್ನಾಟಕದಲ್ಲಿ ಸುಮಾರು 165 ಚಿತ್ರಮಂದಿರಗಳಿ ಸಿಕ್ಕಿವೆ ಎನ್ನುತ್ತಿವೆ ವಿತರಕರ ಮೂಲಗಳು.

  ಅಜಿತ್‌ಗೆ ಎಷ್ಟು ಥಿಯೇಟರ್?

  ಅಜಿತ್‌ಗೆ ಎಷ್ಟು ಥಿಯೇಟರ್?

  ತಮಿಳಿನ ಮತ್ತೊಮ್ಮ ಸೂಪರ್‌ಸ್ಟಾರ್ ಅಜಿತ್ ಕುಮಾರ್ ಸಿನಿಮಾ 'ಥುನಿವು' ಕೂಡ 'ವಾರಿಸು' ಜೊತೆನೇ ರಿಲೀಸ್ ಆಗುತ್ತಿದೆ. ಅಜಿತ್ ಸಿನಿಮಾ ಕೂಡ ಕರ್ನಾಟಕದಲ್ಲಿ ಸೂಪರ್ ಬ್ಯುಸಿನೆಸ್ ಮಾಡುತ್ತೆ. ಹೀಗಾಗಿ ಕರ್ನಾಟಕದ ವಿತರಕರು ಮುಗಿಬಿದ್ದು ಈ ಸಿನಿಮಾವನ್ನು ಖರೀದಿ ಮಾಡಿದ್ದಾರೆ. ಸದ್ಯಕ್ಕೆ ಸಿಕ್ಕಿರೋ ಲೆಕ್ಕದ ಪ್ರಕಾರ, 'ಥುನಿವು' ಕರ್ನಾಟಕದಾದ್ಯಂತ ಸುಮಾರು 125 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ತಮಿಳಿನಲ್ಲಿ 119 ಥಿಯೇಟರ್,ತೆಲುಗು ಅವತರಣಿಕೆಗೆ 6 ಚಿತ್ರಮಂದಿರಗಳಿ ಸಿಕ್ಕಿವೆ.

  'ವಾಲ್ತೇರು ವೀರಯ್ಯ'ಗೆ ಎಷ್ಟು ಚಿತ್ರಮಂದಿರ?

  'ವಾಲ್ತೇರು ವೀರಯ್ಯ'ಗೆ ಎಷ್ಟು ಚಿತ್ರಮಂದಿರ?

  'ಗಾಡ್ ಫಾದರ್' ಸಿನಿಮಾ ಬಳಿಕ ಮೆಗಾಸ್ಟಾರ್ ಚಿರಂಜೀವಿ ಮತ್ತೆ ಅಖಾಡಕ್ಕೆ ಇಳಿಯುತ್ತಿದ್ದಾರೆ. 'ವಾಲ್ತೇರು ವೀರಯ್ಯ' ಸಿನಿಮಾ ಮೂಲಕ ಗೆಲ್ಲೋಕೆ ತವಕಿಸುತ್ತಿದ್ದಾರೆ. ಸಹಜವಾಗಿ ಕರ್ನಾಟಕದಲ್ಲಿ ತೆಲುಗಿನ ಯಾವುದೇ ಸಿನಿಮಾ ರಿಲೀಸ್‌ ಆದರೂ, ಡಿಸೆಂಟ್ ಬ್ಯುಸಿನೆಸ್ ಮಾಡುತ್ತೆ. ಹೀಗಾಗಿ 'ವಾಲ್ತೇರು ವೀರಯ್ಯ' ಸಿನಿಮಾಗೆ ಕರ್ನಾಟಕದಲ್ಲಿ ಸುಮಾರು 150 ಚಿತ್ರಮಂದಿರಗಳು ಸಿಕ್ಕಿವೆ.

  'ವೀರ ಸಿಂಹ ರೆಡ್ಡಿ'ಗೆಷ್ಟು ಥಿಯೇಟರ್?

  'ವೀರ ಸಿಂಹ ರೆಡ್ಡಿ'ಗೆಷ್ಟು ಥಿಯೇಟರ್?

  ಟಾಲಿವುಡ್ ಲೆಜೆಂಡ್ ಬಾಲಯ್ಯ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಹಿಂದಿನ ಸಿನಿಮಾ 'ಅಖಂಡ' ಕರ್ನಾಟಕದಲ್ಲಿ ಜೋರಾಗಿಯೇ ಬ್ಯುಸಿನೆಸ್ ಮಾಡಿತ್ತು. ಹೀಗಾಗಿ ಈ ಬಾರಿ 'ವೀರ ಸಿಂಹ ರೆಡ್ಡಿ'ಯನ್ನು ಅತೀ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ವಿತರಕರ ಪ್ರಕಾರ, ಇಲ್ಲಿ ಬಾಲಯ್ಯನ ಸಿನಿಮಾ ಕೂಡ ಚಿರಂಜೀವಿ ಸಿನಿಮಾಗೆ ಸರಿ ಸಮನಾಗಿ 150 ಥಿಯೇಟರ್‌ಗಳಲ್ಲಿ ರಿಲೀಸ್ ಆಗುತ್ತಿದೆ.

  English summary
  Waltair Veeraiyya,Veera Simha Reddy,Varisu,Thunivu Theater List In Karnataka,Know More.
  Tuesday, January 10, 2023, 20:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X