»   » 'ಶ್ರೀನಿವಾಸ ಕಲ್ಯಾಣ' ದಿಂದ ಸ್ಕೂಲ್ ನಲ್ಲಿ ಲವ್ ಆಗಿದ್ದ ಎಲ್ಲರಿಗಾಗಿ ಈ ಹಾಡು..

'ಶ್ರೀನಿವಾಸ ಕಲ್ಯಾಣ' ದಿಂದ ಸ್ಕೂಲ್ ನಲ್ಲಿ ಲವ್ ಆಗಿದ್ದ ಎಲ್ಲರಿಗಾಗಿ ಈ ಹಾಡು..

Posted By:
Subscribe to Filmibeat Kannada

ಕಾಲೇಜು ಲೈಫಿನ 'ಕಿರಿಕ್ ಪಾರ್ಟಿ' ನೋಡಿ ಎಂಜಾಯ್ ಮಾಡಿರುವ ಸ್ಯಾಂಡಲ್ ವುಡ್ ಸಿನಿ ಪ್ರಿಯರಿಗೆ, ಸದ್ಯದಲ್ಲೇ ಸ್ಕೂಲ್ ನಲ್ಲಿ ಲವ್ ಆಗುವ ಚಿತ್ರಕಥೆ ಆಧಾರಿತ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ನೋಡುವ ಅವಕಾಶ ಲಭಿಸಲಿದೆ.

ಇತ್ತೀಚೆಗಷ್ಟೇ ಥಿಯೇಟ್ರಿಕಲ್ ಟ್ರೈಲರ್ ಬಿಡುಗಡೆ ಮಾಡಿ, ಡಿಫರೆಂಟ್ ಡಬಲ್ ಮೀನಿಂಗ್ ಡೈಲಾಗ್ ಗಳ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ 'ಶ್ರೀನಿವಾಸ ಕಲ್ಯಾಣ' ಹೊಸತನದಿಂದ ಮನರಂಜನೆ ನೀಡುವ ಭರವಸೆ ಮೂಡಿಸುತ್ತಿದೆ. ಬಿಡುಗಡೆಗೆ ಸಜ್ಜಾಗುತ್ತಿರುವ ಚಿತ್ರತಂಡ ಈಗ ಸ್ಕೂಲ್ ಅಲ್ಲಿ ಲವ್ ಆದ ಎಲ್ಲಾ ಸ್ನೇಹಿತರಿಗಾಗಿ ವಿಡಿಯೋ ಸಾಂಗ್ ಒಂದನ್ನು ಡೆಡಿಕೇಟ್ ಮಾಡಿದೆ.[ಹೊಸಬರ ಸಿನಿಮಾ 'ಶ್ರೀನಿವಾಸ ಕಲ್ಯಾಣ' ಟ್ರೈಲರ್ ನೋಡಿದ್ರಾ?]

Watch

'ಗ್ಯಾಪು ಗ್ಯಾಪಲಿ ಸಿಲ್ಲಿ ಗ್ಯಾಪಲಿ ನಂಗು ಆಯ್ತು ಫಸ್ಟ್ ಲವ್" ಎಂಬ ಲಿರಿಕ್ ವಿಡಿಯೋ ಹಾಡೇ ಸ್ಕೂಲ್ ಲೈಫ್ ನಲ್ಲಿ ಲವ್ ಆದ ಎಲ್ಲಾ ಸ್ನೇಹಿತರಿಗೆ ಅರ್ಪಿಸಿರುವ ಸಾಂಗ್. ಅಲ್ಲದೇ ಬಿಡುಗಡೆ ಬರದಲ್ಲಿ 'ಶ್ರೀನಿವಾಸ ಕಲ್ಯಾಣ' ಚಿತ್ರದ ಅಫೀಶಿಯಲ್ ಪೇಜ್ ನಲ್ಲಿ "ಹೊಸ doveಗಳು ಒಂತರ yash ಇದ್ ಹಂಗೆ, ಅವ್ರ್ ಇರೋವರ್ಗು ಅವ್ರ್ದೆ ಹವಾ .. ಹಳೇ doveಗಳು ಒಂತರ ಅಣ್ಣವರ್ ಇದ್ ಹಂಗೆ, ಯಾವಾಗ್ಲೂ ಅವ್ರ್ದೆ ಹವಾ .." ಎಂಬ ಸೂಪರ್ ಡೈಲಾಗ್ ಅನ್ನು ಗೀಚಲಾಗಿದೆ.

Watch

ವಿಡಿಯೋ ಸಾಂಗ್ ನಲ್ಲಿ ಚಿತ್ರದ ನಾಯಕಿ ಕವಿತಾ ಮತ್ತು ನಾಯಕ ಎಂ ಜಿ ಶ್ರೀನಿವಾಸ್ ಸ್ಕೂಲ್ ಲೈಫ್‌ ಗೆ ತಕ್ಕ ಕಾಸ್ಟ್ಯೂಮ್‌ ನಲ್ಲಿ ಕಾಣಿಸಿಕೊಂಡಿದ್ದು, ಮತ್ತೊಮ್ಮೆ ಎಲ್ಲರಿಗೂ ಈ ಹಾಡು ಶಾಲಾ ದಿನಗಳ ಹಳೇ ಪ್ರೀತಿಗಳನ್ನು ನೆನಪಿಸುವಲ್ಲಿ ಫೇಲ್ ಅಂತೂ ಅಗೋಲ್ಲ ಅನಿಸುತ್ತಿದೆ. ಬಿಡುಗಡೆ ಆದ ಎರಡೇ ದಿನಕ್ಕೆ ಸಾಂಗ್ 2.7 ಲಕ್ಷ ವೀಕ್ಷಣೆ ಪಡೆದಿದೆ. ಮಿದುನ್ ಮುಕುಂದನ್ ಹಾಡಿರುವ, ಪ್ರಸನ್ನ ವಿ ಎಂ ಅವರ ಸಾಹಿತ್ಯದ ಈ ವಿಡಿಯೋ ಸಾಂಗ್ ಹೇಗಿದೆ ನೀವೆ ಒಮ್ಮೆ ನೋಡಿ.

English summary
Watch "Gapu Gapalli" HD Video Song from "Srinivasa Kalyana" starring M G Srinivas, Kavitha, Nikhila Rao and Others. Music composed by Midhun Mukundan and Raghavendra Thane...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada