»   » ಹೊಸಬರ ಸಿನಿಮಾ 'ಶ್ರೀನಿವಾಸ ಕಲ್ಯಾಣ' ಟ್ರೈಲರ್ ನೋಡಿದ್ರಾ?

ಹೊಸಬರ ಸಿನಿಮಾ 'ಶ್ರೀನಿವಾಸ ಕಲ್ಯಾಣ' ಟ್ರೈಲರ್ ನೋಡಿದ್ರಾ?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಹೊಸಬರ ಸಿನಿಮಾ ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಅಷ್ಟೊಂದು ಏನಿಲ್ಲಾ ಅಂತ ಹೇಳೋಕೆ ಹಾಗೋದೆ ಇಲ್ಲಾ. ಯಾಕಂದ್ರೆ ಅದನ್ನ ಪ್ರೂ ಮಾಡೋಕೆ ಅಂತಾನೆ ಈಗ ಒಂದು ಹೊಸ ಬರ ಸಿನಿಮಾ ದ ಥಿಯೇಟ್ರಿಕಲ್ ಟ್ರೈಲರ್ ಬಿಡುಗಡೆ ಆಗಿದೆ.

'ಇದೊಂದು ಕತ್ತಲೇ ಇಂದಲೇ ಶುರು ಆಗುವ ಕಥೆ' ಎಂತಲೇ ಟ್ರೈಲರ್ ತೋರಿಸಿರುವ ಚಿತ್ರತಂಡ, ಸಿನಿ ಪ್ರಿಯರಿಗೆ ಡಬಲ್ ಮೀನಿಂಗ್ ಡೈಲಾಗ್ ಗಳೊಂದಿಗೆ ಪಕ್ಕಾ ಮನರಂಜನೆ ನೀಡುವ ಸಿನಿಮಾ ಕೊಡುವ ಭರವಸೆ ನೀಡಿದೆ.

ಶ್ರೀನಿವಾಸ ಕಲ್ಯಾಣ

ಥಿಯೇಟ್ರಿಕಲ್ ಟ್ರೈಲರ್ ನಲ್ಲೇ 'ದೇವ್ರಾಣೆಗೂ ದೇವ್ರ್ ಸಿನಿಮಾ ಅಲ್ಲ' ಅಂತ ಹೇಳಿಕೊಂಡು ಡಬಲ್ ಮೀನಿಂಗ್ ಡೈಲಾಗ್ ಗಳೊಂದಿಗೆ ಎಲ್ಲರ ಗಮನ ಸೆಳೆಯುವ ಈ ಸಿನಿಮಾದ ಹೆಸರು 'ಶ್ರೀನಿವಾಸ ಕಲ್ಯಾಣ'.

ರೊಮ್ಯಾಂಟಿಕ್ ಕಾಮಿಡಿ ಸಿನಿಮಾ

'ಶ್ರೀನಿವಾಸ ಕಲ್ಯಾಣ' ಸ್ಯಾಂಡಲ್ ವುಡ್ ನ ಅಪ್‌ ಕಮಿಂಗ್ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ಈ ಸಿನಿಮಾಗೆ ಆರ್‌ಜೆ ಎಂ.ಜಿ ಶ್ರೀನಿವಾಸ್ ಎಂಬುವವರು ಚಿತ್ರಕಥೆ ಬರೆದು ತಾವೆ ನಿರ್ದೇಶನ ಮಾಡಿದ್ದಾರೆ.

'ಶ್ರೀನಿವಾಸ ಕಲ್ಯಾಣ' ದಲ್ಲಿ ಯಾರೆಲ್ಲಾ ಇದ್ದಾರೆ..

'ಶ್ರೀನಿವಾಸ ಕಲ್ಯಾಣ' ಸ್ಯಾಂಡಲ್ ವುಡ್‌ ನಲ್ಲಿ ಮೂಡಿಬರುತ್ತಿರುವ ಹೊಸಬರ ಸಿನಿಮಾ. ಚಿತ್ರದಲ್ಲಿ ಹಿರಿಯ ನಟ ದತ್ತಣ ಅವರನ್ನು ಹೊರತುಪಡಿಸಿ ಉಳಿದಂತೆ ಎಲ್ಲರೂ ಹೊಸಬರೇ ಈ ಚಿತ್ರದಲ್ಲಿ ಇದ್ದಾರೆ. ಆರ್‌ಜೆ ಎಂ.ಜಿ.ಶ್ರೀನಿವಾಸ್, ಕವಿತಾ, ನಿಖಿಲಾ ರಾವ್, ಸುಜಯ್ ಶಾಸ್ತ್ರಿ ಎಂಬುವವರು ನಟಿಸಿದ್ದಾರೆ.

ಲವ್, ಕಾಮಿಡಿ,

ಲವ್, ಫ್ರೆಂಡ್ಸ್‌ಶಿಪ್, ಮದುವೆ ಗಳ ಸುತ್ತ ಸುತ್ತುವ ಈ ಸಿನಿಮಾ ಮಾರ್ಸ್ ಫಿಲ್ಮ್ ಅಡಿಯಲ್ಲಿ ನಿರ್ಮಾಣ ಆಗುತ್ತಿದೆ. ಸಿನಿಮಾ ಗೆ ಅಶ್ವಿನ್ ಕಡಂಬೂರ್ ಛಾಯಾಗ್ರಹಣ ಇದ್ದು, ಮಿಧುಮ್ ಮುಕುಂದನ್ ಮತ್ತು ರಘು ಥಾಣೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಿನಿಮಾ ಫೆಬ್ರವರಿಯಲ್ಲಿ ರಿಲೀಸ್ ಆಗಲಿದೆಯಂತೆ.

'ಶ್ರೀನಿವಾಸ ಕಲ್ಯಾಣ' ಥಿಯೇಟ್ರಿಕಲ್ ಟ್ರೈಲರ್

English summary
'Srinivasa Kalyana' Theatrical Trailer Released. Srinivasa Kalyana is a upcoming Kannada Romantic Comedy Film written and directed by M.G Srinivas.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada