CCL 2025: ಬಿಗ್‌ಬಾಸ್ ತ್ರಿವಿಕ್ರಮ್ ಭರ್ಜರಿ ಪ್ರಾಕ್ಟೀಸ್; ಚೆನ್ನೈ ವಿರುದ್ಧ ಪಂದ್ಯದಲ್ಲಿ ಅಖಾಡಕ್ಕೆ ಇಳಿಯುತ್ತಾರಾ?
ಸಿಸಿಎಲ್ 2025 (CCL 2025) ಪಂದ್ಯಗಳು ಈ ವೀಕೆಂಡ್‌ನಿಂದ ಮತ್ತೆ ಆರಂಭ ಆಗುತ್ತವೆ. ಇದೇ ಶುಕ್ರವಾರ ಅಂದರೆ ಫೆಬ್ರವರಿ 14ರಿಂದ ಫೆಬ್ರವರಿ 16ರವರೆಗೆ ಸಿಸಿಎಲ್ ಪಂದ್ಯ ಹೈದರಾಬಾದ್ ಹಾಗೂ ಕಟಕ್‌ನಲ್ಲಿ ನಡೆಯಲಿದೆ. ಹೈದರಾಬಾದ್‌ನಲ್ಲಿ ಎರಡು ದಿನಗಳಲ್ಲಿ ನಾಲ್ಕು ಪಂದ್ಯಗಳು ನಡೆಯಲಿದ್ದು, ಅದರಲ್ಲಿ ಎರಡು ಪಂದ್ಯಗಳು ಕರ್ನಾಟಕ ಬುಲ್ಡೋಜರ್ ತಂಡದ್ದೇ ಪಂದ್ಯ ನಡೆಯಲಿದೆ.
ಕರ್ನಾಟಕ ಬುಲ್ಡೋಜರ್ಸ್ ತಂಡ ಫೆಬ್ರವರಿ 14ರಂದು ಶುಕ್ರವಾರ ಹೈದರಾಬಾದ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಚೆನ್ನೈ ರೈನೋಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಹೈ ವೋಲ್ಟೇಜ್ ಪಂದ್ಯ ಆಗಿದ್ದು, ಸಿನಿ ಪ್ರಿಯರಿಗೆ ಹಾಗೂ ಕ್ರಿಕೆಟ್ ಪ್ರೇಮಿಗಳಿಗೆ ಭರ್ಜರಿ ಮನರಂಜನೆ ನೀಡಲಿದೆ. ಹೀಗಾಗಿ ಕರ್ನಾಟಕ ತಂಡ ಭರ್ಜರಿ ಅಭ್ಯಾಸ ಪಂದ್ಯದಲ್ಲಿ ತೊಡಗಿದೆ.

ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 11ರ ರನ್ನರ್ ಅಪ್ ತ್ರಿವಿಕ್ರಮ್ ಸಿಸಿಎಲ್ ತಂಡವನ್ನು ಸೇರಿಕೊಂಡಿದ್ದು, ಪ್ರಾಕ್ಟೀಸ್ ಮಾಡುತ್ತಿದ್ದಾರೆ. ತೆಲುಗು ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ತ್ರಿವಿಕ್ರಮ್ ಮೈದಾನಕ್ಕೆ ಇಳಿದಿರಲಿಲ್ಲ. ಆದರೆ, ಮುಂದಿನ ಪಂದ್ಯಗಳಲ್ಲಿ ಕರ್ನಾಟಕ ಬುಲ್ಡೋಜರ್ ತಂಡದ ಪರ ತ್ರಿವಿಕ್ರಮ್ ಆಡುವ ಸಾಧ್ಯತೆಗಳಿವೆ. ಹೀಗಾಗಿ ಬಿಡುವಿಲ್ಲದೆ ಅಭ್ಯಾಸ ಪಂದ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ.
ಕರ್ನಾಟಕ ಬುಲ್ಡೋಜರ್‌ನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ತ್ರಿವಿಕ್ರಮ್ ಪ್ರಾಕ್ಟಿಸ್ ಮಾಡುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ತ್ರಿವಿಕ್ರಮ್ ಅನ್ನು ಕರ್ನಾಟಕ ಬುಲ್ಡೋಜರ್ ತಂಡದ ಪರ ಕಣಕ್ಕಿಳಿಸುವ ಸಾಧ್ಯತೆಯಿದೆ. ಎಡಗೈ ಬ್ಯಾಟ್ಸ್‌ಮ್ಯಾನ್ ಹಾಗೂ ಬೌಲರ್ ಆಗಿರುವ ತ್ರಿವಿಕ್ರಮ್ ಕರ್ನಾಟಕ ಬುಲ್ಡೋಜರ್ ಪರ ಆಡಿದರೆ ಇನ್ನಷ್ಟು ಬಲ ಬರುವ ಸಾಧ್ಯತೆಯಿದೆ. ಈ ಕಾರಣಕ್ಕೆ ತಂಡದ ಕೋಚ್ ತ್ರಿವಿಕ್ರಮ್‌ಗೆ ಪ್ರಾಕ್ಟೀಸ್ ಮಾಡಿಸುತ್ತಿದ್ದಾರೆ.
ಈ ಸೀಸನ್‌ನಲ್ಲಿ ಕರ್ನಾಟಕ ಬುಲ್ಡೋಜರ್ ತಂಡ ಪ್ರದೀಪ್ ಅನ್ನು ಮಿಸ್ ಮಾಡಿಕೊಂಡಿದೆ. ಪ್ರದೀಪ್ ಎಡಗೈ ಬ್ಯಾಟ್ಸ್‌ಮ್ಯಾನ್. ಹೀಗಾಗಿ ತಂಡಕ್ಕೆ ಎಡಗೈ ಹಾಗೂ ಬಲಗೈ ಕಾಂಬಿನೇಷನ್ ಇತ್ತು. ಆದರೆ, ಈ ಬಾರಿ ಅದನ್ನು ಮಿಸ್ ಮಾಡಿಕೊಂಡಿದ್ದರು. ಈಗ ತ್ರಿವಿಕ್ರಮ್ ಎಡಗೈ ಬ್ಯಾಟ್ಸ್‌ಮ್ಯಾನ್ ಹಾಗೂ ಬೌಲರ್ ಆಗಿರುವುದರಿಂದ ಅವರ ಸ್ಥಾನವನ್ನು ತುಂಬ ಬಲ್ಲರು. ಈ ಕಾರಣಕ್ಕೆ ತ್ರಿವಿಕ್ರಮ್ ಅನ್ನು ಮುಂದಿನ ಪಂದ್ಯಗಳಲ್ಲಿ ಆಡಿಸಬಹುದು.
ಇನ್ನು ಕರ್ನಾಟಕ ಬುಲ್ಡೋಜರ್ ತಂಡ ಫೆಬ್ರವರಿ 14ರಂದು ಚೆನ್ನೈ ರೈನೋಸ್ ತಂಡವನ್ನು ಎದುರಿಸಲಿದೆ. ಚೆನ್ನೈ ರೈನೋಸ್ ಹಾಗೂ ಕರ್ನಾಟಕ ಬುಲ್ಡೋಜರ್ ತಂಡ ಸಾಂಪ್ರದಾಯಿ ಎದುರಾಳಿಗಳಾಗಿದ್ದರಿಂದ ಕಿಚ್ಚ ಸುದೀಪ್ ಬಲಿಷ್ಠ ತಂಡವನ್ನು ಮೈದಾನಕ್ಕೆ ಇಳಿಸುವ ಸಾಧ್ಯತೆಯಿದೆ. ತೆಲುಗು ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಡಾರ್ಲಿಂಗ್ ಕೃಷ್ಣ, ರಾಜೀವ್, ಕರಣ್ ಆರ್ಯನ್ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು. ಹಾಗೇ ಬೌಲಿಂಗ್‌ನಲ್ಲಿ ಚಂದನ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ಅನುಪ್ ಭಂಡಾರಿ ಹಾಗೂ ಮಂಜುನಾಥ್ ಗೌಡ ವಿಕೆಟ್‌ಗಳನ್ನು ಕಬಳಿಸಿದ್ದರು.


Click it and Unblock the Notifications











