ಹಾಲಿನ ಅಭಿಷೇಕ ಮಾಡುವಾಗ ಅವಘಡ: ಕುಸಿದ ಅಜಿತ್ ಕಟೌಟ್, ಐವರಿಗೆ ಗಂಭೀರ ಗಾಯ.!

Recommended Video

ಕುಸಿದು ಬಿದ್ದ ಕಟೌಟ್, ಐವರಿಗೆ ಗಂಭೀರ ಗಾಯ.! | FILMIBEAT KANNADA

ಇದಕ್ಕೆ ಅತಿರೇಕದ ಅಭಿಮಾನ ಎನ್ನಬೇಕೋ.. ಹುಚ್ಚುತನ ಅಂತ ತಲೆ ಚಚ್ಚಿಕೊಳ್ಳಬೇಕೋ.. ಗೊತ್ತಿಲ್ಲ. ಒಟ್ನಲ್ಲಿ, ಅಭಿಮಾನ ಪ್ರದರ್ಶಿಸಲು ಹೋಗಿ ಐವರು ಅಭಿಮಾನಿಗಳು ಆಸ್ಪತ್ರೆ ಸೇರಿದ್ದಾರೆ.

ನೆಚ್ಚಿನ ನಟನ ಬೃಹತ್ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಲು ಹೋಗಿ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ತಮಿಳುನಾಡಿನಲ್ಲಿ ನಡೆದಿದೆ.

ನಿಮಗೆಲ್ಲಾ ಗೊತ್ತಿರುವ ಹಾಗೆ, ಇಂದು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಪೇಟಾ' ಚಿತ್ರ ತೆರೆಗೆ ಬಂದಿದೆ. ರಜನಿ ಚಿತ್ರಕ್ಕೆ ಪೈಪೋಟಿ ನೀಡಲು ಅಜಿತ್ ಅಭಿನಯದ 'ವಿಶ್ವಾಸಂ' ಕೂಡ ಇಂದೇ ತೆರೆಗೆ ಅಪ್ಪಳಿಸಿದೆ. ಸಂಕ್ರಾಂತಿ ಹಬ್ಬದ ಸುಸಂದರ್ಭದಲ್ಲಿ ಈ ಎರಡೂ ಚಿತ್ರಗಳು ರಿಲೀಸ್ ಆಗಿರುವುದು ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಿದೆ.

Watch video: Ajith cut out falls 5 injured in Tamil Nadu

'ವಿಶ್ವಾಸಂ' ಚಿತ್ರವನ್ನ ಅದ್ಧೂರಿಯಾಗಿ ಬರಮಾಡಿಕೊಳ್ಳಲು ಥಿಯೇಟರ್ ಗಳ ಮುಂದೆ ಅಜಿತ್ ರವರ ಬೃಹತ್ ಕಟೌಟ್ ಗಳನ್ನು ನಿಲ್ಲಿಸಲಾಗಿತ್ತು. ಈ ಪೈಕಿ ಒಂದು ಕಟೌಟ್ ಗೆ ಹಾಲಿನ ಅಭಿಷೇಕ ಮಾಡಲು ಅಭಿಮಾನಿಗಳ ದಂಡು ಮೇಲೆ ಹತ್ತಿದ್ದಾರೆ. ಅತಿಯಾದ ಭಾರವನ್ನು ತಡೆಯಲಾರದೆ, ಕಟೌಟ್ ದಿಢೀರನೆ ಕುಸಿದು ಬಿತ್ತು. ಹಾಲಿನ ಅಭಿಷೇಕ ಮಾಡಲು ನಿಂತಿದ್ದ ಅಭಿಮಾನಿಗಳು ಕೂಡ ದೊಪ್ಪನೆ ಕೆಳಗೆ ಬಿದ್ದರು. ಪರಿಣಾಮ ಐವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

'ಪೇಟಾ' ಟ್ವಿಟ್ಟರ್ ವಿಮರ್ಶೆ: ರಜನಿ ಸಾರ್ ಈಸ್ ಬ್ಯಾಕ್, ಅಭಿಮಾನಿಗಳು ಫುಲ್ ಖುಷ್.!

ಒಂದ್ಕಡೆ, ಉಭಯ ಸ್ಟಾರ್ ಗಳ ಅಭಿಮಾನಿಗಳ ಮಧ್ಯೆ ಕಿತ್ತಾಟ ನಡೆದಿದ್ದು, ರಜನಿ ಪೋಸ್ಟರ್ ಗಳನ್ನು ಅಜಿತ್ ಫ್ಯಾನ್ಸ್ ಹರಿದು ಹಾಕಿ ಬೆಂಕಿ ಹಚ್ಚಿದ್ದಾರೆ. ಇನ್ನೊಂದ್ಕಡೆ, ಹಾಲಿನ ಅಭಿಷೇಕ ಮಾಡಲು ಹೋಗಿ ಅಜಿತ್ ಅಭಿಮಾನಿಗಳು ಆಸ್ಪತ್ರೆ ಸೇರಿದ್ದಾರೆ.

ಸಿನಿಮಾ ನೋಡಿ ಸಂಭ್ರಮ ಪಡಬೇಕಿದ್ದ ಅಭಿಮಾನಿಗಳು, ಅಭಿಮಾನ ಮೆರೆಯಲು ಹೋಗಿ ಅವಘಡಕ್ಕೀಡಾಗಿರುವುದು ವಿಷಾದನೀಯವೇ ಸರಿ.

More from Filmibeat

English summary
Watch video: Ajith cut out falls 5 injured in Tamil Nadu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X