ಉಪೇಂದ್ರ ಬರ್ತಡೇ ಪಾರ್ಟಿ: ಸೂಪರ್ ಆಗಿ ಡ್ಯಾನ್ಸ್ ಮಾಡಿದ ಶಿಲ್ಪಾ, ಗಣೇಶ್.!
Recommended Video

ಸೆಪ್ಟೆಂಬರ್ 18 ರಂದು ರಿಯಲ್ ಸ್ಟಾರ್ ಉಪೇಂದ್ರ ತಮ್ಮ 50ನೇ ಜನ್ಮದಿನವನ್ನ ಭರ್ಜರಿಯಾಗಿ ಆಚರಿಸಿಕೊಂಡರು. ಕೇಕ್ ಕತ್ತರಿಸಿ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬ ಆಚರಿಸಿದ ಉಪೇಂದ್ರ, ಅಂದೇ ತಮ್ಮ 'ಉತ್ತಮ ಪ್ರಜಾಕೀಯ ಪಾರ್ಟಿ'ಯನ್ನ ಲೋಕಾರ್ಪಣೆ ಗೊಳಿಸಿದರು.
ಸೆಪ್ಟೆಂಬರ್ 18 ರಂದು ಬೆಳಗ್ಗೆ, ಮಧ್ಯಾಹ್ನ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರ ಜೊತೆಗೆ ಉಪೇಂದ್ರ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡರೆ, ಸಂಜೆ ಚಲನಚಿತ್ರ ಸ್ನೇಹಿತರಿಗಾಗಿ ಗ್ರ್ಯಾಂಡ್ ಪಾರ್ಟಿ ಅರೇಂಜ್ ಮಾಡಿದ್ದರು.

ಕುಟುಂಬಸ್ಥರು, ಸ್ನೇಹಿತರು ಹಾಗೂ ಚಿತ್ರರಂಗದವರಿಗೆ ಉಪೇಂದ್ರ ಮನೆಯಲ್ಲಿಯೇ ಪಾರ್ಟಿ ನಡೆಯಿತು. ಈ ಪಾರ್ಟಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಶಿಲ್ಪಾ ಗಣೇಶ್, ಹರ್ಷಿಕಾ ಪೂಣಚ್ಚ ಜೊತೆಗೆ ಚಿತ್ರರಂಗದ ಗಣ್ಯರು ಪಾಲ್ಗೊಂಡಿದ್ದರು.
ಪಾರ್ಟಿಯಲ್ಲಿ ಗಣೇಶ್, ಶಿಲ್ಪಾ ಗಣೇಶ್, ಹರ್ಷಿಕಾ ಪೂಣಚ್ಚ ಹಾಗೂ ಪ್ರಿಯಾಂಕಾ ಉಪೇಂದ್ರ ಕುಣಿದು ಕುಪ್ಪಳಿಸಿದ್ದಾರೆ. ಆ ವಿಡಿಯೋನ ಸ್ವತಃ ಹರ್ಷಿಕಾ ಪೂಣಚ್ಚ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.
'ಝೂಮ್' ಚಿತ್ರದ ಹಾಡಿಗೆ ಗಣೇಶ್ ದಂಪತಿ ಡ್ಯಾನ್ಸ್ ಮಾಡಿರುವುದು ವಿಡಿಯೋದಲ್ಲಿ ಸೆರೆ ಆಗಿದೆ.


Click it and Unblock the Notifications











