ಕುದುರೆ ಮೇಲಿನಿಂದ ಬಿದ್ದ ರಕ್ಷಿತ್ : ಸ್ಪಷ್ಟನೆ ನೀಡಿದರು ಪುಷ್ಕರ್

By Naveen

ನಟ ರಕ್ಷಿತ್ ಶೆಟ್ಟಿ ಚಿತ್ರೀಕರಣದ ವೇಳೆ ಕುದುರೆ ಮೇಲಿಂದ ಬಿದ್ದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿದೆ. ಇದೀಗ ಆ ವಿಷಯಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಸ್ಪಷ್ಟನೆ ನೀಡಿದ್ದಾರೆ.

'ಶ್ರೀಮನ್ನಾರಾಯಣ' ಸಿನಿಮಾದ ಶೂಟಿಂಗ್ ವೇಳೆ ಕುದುರೆ ಮೇಲೆ ಕುಳಿತ್ತಿದ್ದ ರಕ್ಷಿತ್ ಆಕಸ್ಮಿಕವಾಗಿ ಬಿದ್ದಿದರು. ಈ ವಿಡಿಯೋ ಇಂದು ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿದೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ವಿಡಿಯೋ ವೈರಲ್ ಆಗುತ್ತಿದೆ. ಈ ಬಗ್ಗೆ ಇದೀಗ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

''ರಕ್ಷಿತ್ ಮತ್ತು ಕುದುರೆ ಇಬ್ಬರು ಸೇಫ್ ಆಗಿ ಇದ್ದಾರೆ. ಇದು ಎರಡು ತಿಂಗಳ ಹಿಂದಿನ ವಿಡಿಯೋ. ಈಗ ಅದು ಹೇಗೆ ಮೀಡಿಯಾಗೆ ಸಿಕ್ಕಿದೆ ಎಂಬುದು ತಿಳಿದಿಲ್ಲ. ಆದರೆ, ಈ ಮೂಲಕ ಸ್ಪಷ್ಟನೆ ನೀಡುತ್ತಿದ್ದೇನೆ. ಎಲ್ಲರೂ ಆರಾಮಾಗಿ ಇದ್ದಾರೆ. ನಿಮ್ಮ ಕಾಳಜಿಗೆ ಧನ್ಯವಾದ'' ಎಂದು ತಿಳಿಸಿದ್ದಾರೆ.

watch video : rakhsit shetty falling down from horse

ಅಂದಹಾಗೆ, 'ಶ್ರೀಮನ್ನಾರಾಯಣ' ಸಿನಿಮಾ ರಕ್ಷಿತ್ ಶೆಟ್ಟಿ ನಟನೆಯ ಹೊಸ ಸಿನಿಮಾವಾಗಿದೆ. ಈ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿ ದೊಡ್ಡ ಹಿಟ್ ಆಗಿದೆ. ಶಾನ್ವಿ ಶ್ರೀವತ್ಸವ ಸಿನಿಮಾ ನಾಯಕಿ ಆಗಿದ್ದಾರೆ.

More from Filmibeat

English summary
Watch Video : Kannada actor Rakshit shetty falling down from horse in 'Avane srimannarayana' movie shooting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X