Kabzaa Day 1 Collections : " ಕಲೆಕ್ಷನ್ ಎಷ್ಟು ಅಂತ ಅಧಿಕೃತವಾಗಿ ನಿಮ್ಮ ಮುಂದೆ ಇಡ್ತೀನಿ" – ಆರ್ ಚಂದ್ರು..ಉಪ್ಪಿ ಏನಂದ್ರು?

ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗಿದೆ ಅಂದಾಗ, ಆ ಸಿನಿಮಾದ ರೆಸ್ಪಾನ್ಸ್ ಹೇಗಿದೆ? ಅನ್ನೋ ಕುತೂಹಲವಿರುತ್ತೆ. ರೆಸ್ಪಾನ್ಸ್ ಬಳಿಕ ಸಿನಿಮಾ ಕಲೆಕ್ಷನ್ ಮೇಲೆ ಎಲ್ಲರ ಕಣ್ಣು ಹೋಗುತ್ತೆ. ಈಗ ಈ ವರ್ಷದ ಮೊದಲ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾದ ಕಲೆಕ್ಷನ್ ಮೇಲೆ ಎಲ್ಲರೂ ಕಣ್ಣಿಟ್ಟಿದ್ದಾರೆ.

ಈಗ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಶಿವಣ್ಣ ಜೊತೆಯಾಗಿ ನಟಿಸಿದ 'ಕಬ್ಜ' ಸಿನಿಮಾದ ಕಲೆಕ್ಷನ್ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಮೊದಲ ದಿನ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಈ ಎಷ್ಟು ಕಲೆಕ್ಷನ್ ಮಾಡಿರಬಹುದು ಅನ್ನೋ ಲೆಕ್ಕಾಚಾರ ಶುರುವಾಗಿದೆ. ಮೊದಲ ದಿನದ ಕಲೆಕ್ಷನ್ ಬಗ್ಗೆ ಕೇಳಿದಾಗ ನಿರ್ದೇಶಕ ಆರ್ ಚಂದ್ರು, ರಿಯಲ್ ಸ್ಟಾರ್ ಉಪೇಂದ್ರ, ಸ್ಯಾಂಡಲ್‌ವುಡ್ ನಿರ್ಮಾಪಕ ಶ್ರೀಕಾಂತ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

"ಅಧಿಕೃತವಾಗಿ ನಿಮ್ಮ ಮುಂದಿಡುತ್ತೇವೆ"

'ಕಬ್ಜ' ಸಿನಿಮಾ ಸೆಕೆಂಡ್ ಶೋಗೆ ರೆಸ್ಪಾನ್ಸ್ ಅದ್ಭುತವಾಗಿ ಸಿಗುತ್ತಿದೆ ಎಂದು ನಿರ್ದೇಶಕ ಆರ್ ಚಂದ್ರು ಹೇಳಿದ್ದಾರೆ. ಮಾಸ್, ಕ್ಲಾಸ್ ಸೇರಿದಂತೆ ಫ್ಯಾಮಿಲಿ ಆಡಿಯನ್ಸ್ ಕೂಡ ಈ ಸಿನಿಮಾ ನೋಡೋಕೆ ಬರುತ್ತಿದ್ದಾರೆ. ಹೀಗಾಗಿ ವಿತರಕರಿಂದ ಮಾಹಿತಿ ನಾಳೆ(ಮಾರ್ಚ್ 18) ನಿಮ್ಮ ಮುಂದೆ ಕಲೆಕ್ಷನ್ ರಿಪೋರ್ಟ್ ಇಡುತ್ತೇವೆ ಎನ್ನುತ್ತಾರೆ ಚಂದ್ರು.

 What Did Kabzaa Director R Chandru Says About First Day Box Office Collection

"ಬಾಕ್ಸಾಫೀಸ್‌ ಕಲೆಕ್ಷನ್ ನಾವೇ ನಾಳೆ ಅಧಿಕೃತವಾಗಿ ಬಿಡುಗಡೆ ಮಾಡುತ್ತೇವೆ. ಇವತ್ತು ಕಂಡೆ ಶೋ ಎಲ್ಲಾ ಕಡೆ ಫುಲ್ ಆಗಿದೆ. ನರ್ತಕಿ ಫುಲ್ ಆಗಿದೆ. ನರ್ತಕಿ ಐದೂ ಶೋ ಫುಲ್ ಆಗಿದೆ. ನನಗೆ 10 ಗಂಟೆ ಶೋ ಅನ್ನೋದೇ ಮಿರಾಕಲ್. ಟಗರು ನೋಡಿದ್ದೆ. ಈಗ ನಮ್ಮ ಸಿನಿಮಾನೂ ಊರ್ವಶಿಯಲ್ಲಿ ಐದು ಶೋ ಫುಲ್ ಆಗಿದೆ. ಏನೇ ಹೇಳಿದ್ರೂ, ಅಧಿಕೃತವಾಗಿ ಹೇಳುತ್ತೇನೆ. ವಿತರಕರಿಂದ ಮಾಹಿತಿ ತೆಗೆದುಕೊಂಡು ನಿಮ್ಮ ಮುಂದೆ ಇಟ್ಬಿಟ್ಟು ಬಾಕ್ಸಾಫೀಸ್ ಕಲೆಕ್ಷನ್ ಅನ್ನು ಸರಿಯಾಗಿ ಕೊಡುತ್ತೇನೆ." ಎಂದು ನಿರ್ದೇಶಕ ಆರ್ ಚಂದ್ರು ಹೇಳಿದ್ದಾರೆ.

"ಕಲೆಕ್ಷನ್ ನೆಕ್ಸ್ಟ್ ಲೆವೆಲ್‌ನಲ್ಲಿದೆ"

'ಕಬ್ಜ' ಸಿನಿಮಾದ ಕಲೆಕ್ಷನ್ ನೆಕ್ಸ್ಟ್‌ ಲೆವೆಲ್‌ನಲ್ಲಿದೆ ಅಂತಾನೂ ಹೇಳುತ್ತಿದ್ದಾರೆ. ಆದರೆ, ಅಂದಾಜು ಲೆಕ್ಕವನ್ನೂ ಸಹ ಹೇಳಲು ಇಚ್ಛೆ ಪಡಲಿಲ್ಲ. ಇತ್ತ ಉಪೇಂದ್ರ ಕೂಡ ಸಿನಿಮಾಗೆ ರೆಸ್ಪಾನ್ಸ್ ಚೆನ್ನಾಗಿ ಸಿಕ್ಕಿದೆ ಎಂದಿದ್ದಾರೆ. " ಅಧಿಕೃತವಾಗಿ ಹೇಳೋಣ. ನಿಮಗೆ ಗೊತ್ತಾಗುತ್ತಿದೆ ಕಲೆಕ್ಷನ್ ಏನು ಅಂತ. ಕಲೆಕ್ಷನ್ ಬಗ್ಗೆ ಡಿಟೈಲ್ ಆಗಿ ಚಂದ್ರು ಹೇಳ್ತಾರೆ. ನೆಕ್ಸ್ಟ್‌ ಲೆವೆಲ್‌ನಲ್ಲಿ ಇದೆ ಅಂತ ಹೇಳುತ್ತಿದ್ದಾರೆ." ಎಂದು ಉಪ್ಪಿ ಕಲೆಕ್ಷನ್ ಬಗ್ಗೆ ಕೇಳಿದಾಗ ನಿರ್ದೇಶಕ ಚಂದ್ರು ಕಡೆ ಕೈ ಮಾಡಿ ತೋರಿಸಿದ್ರು.

ಇನ್ನು ನಿರ್ದೇಶಕ ಆರ್ ಚಂದ್ರುಗೆ ಬೆನ್ನುಲುಬಾಗಿ ನಿಂತಿರುವ ಕೆಪಿ ಶ್ರೀಕಾಂತ್ ಕೂಡ ಸಿನಿಮಾ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. "ರೆಸ್ಪಾನ್ಸ್ ಅದ್ಭುತವಾಗಿದೆ. ಏನಂದ್ರೆ, ಈಗ ಮಾರ್ನಿಂಗ್ ಶೋ ನೋಡಿದ್ರೆ ಮಾತ್ರ ಜನ ಸೆಕೆಂಡ್ ಶೋಗೆಲ್ಲ ಬರೋದು. ಈಗ ಪಬ್ಲಿಸಿಟಿ ಜೊತೆ ಕಂಟೆಂಟ್ ಕೂಡ ಗೆದ್ದಿದೆ ಅಂತ. ಎರಡೂ ಗೆದ್ದಿದೆ. ಪಬ್ಲಿಸಿಟಿಯಿಂದ ಮಾರ್ನಿಂಗ್ ಶೋ ಬರ್ತಾರೆ. ಮ್ಯಾಟನಿ ಶೋ ಬರ್ತಾರೆ. ಸೆಕೆಂಡ್ ಶೋ ಫುಲ್ ಆಯ್ತು ಅಂದರೆ, ಕಂಟೆಂಟ್ ಗೆದ್ದಿದೆ ಅಂತ." ನಿರ್ಮಾಪಕ ಶ್ರೀಕಾಂತ್.

 What Did Kabzaa Director R Chandru Says About First Day Box Office Collection

" ಕಷ್ಟಪಟ್ಟು ಕೆಲಸ ಮಾಡಿದ್ರೆ, ಒಳ್ಳೆ ಸಿನಿಮಾ ಮಾಡಿದ್ರೆ, ಕನ್ನಡಿಗರು ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗುತ್ತಾರೆ. ಭಾರತದಾದ್ಯಂತ ಅಲ್ಲ. ಪ್ರಪಂಚದಾದ್ಯಂತ ಕನ್ನಡದ ಬಾವುಟ ಹಾರಿಸುತ್ತಾರೆ ಅನ್ನೋದಕ್ಕೆ ಮಾಸ್ ಆಡಿಯನ್ಸ್, ಕ್ಲಾಸ್ ಆಡಿಯನ್ಸ್ ಜೊತೆ ಫ್ಯಾಮಿಲಿ ಬರುತ್ತಿರೋದು ನನಗೆ ಖುಷಿಯಾಗುತ್ತಿದೆ." ಎನ್ನುತ್ತಾರೆ ಆರ್‌ ಚಂದ್ರು.

More from Filmibeat

English summary
What Did Kabzaa Director R Chandru Says About First Day Box Office Collection, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X