ಯುವ ರಾಜ್‌ಕುಮಾರ್ ಜೊತೆಗಿನ ಸಂಬಂಧದ ಬಗ್ಗೆ ಮೌನ ಮುರಿದ ಸಪ್ತಮಿ ಗೌಡ; ಪ್ರಕರಣದ ಬಗ್ಗೆ ಹೇಳಿದ್ದೇನು?

'ಕಾಂತಾರ' ಬಳಿಕ ಸಪ್ತಮಿ ಗೌಡ ಪ್ಯಾನ್ ಇಂಡಿಯಾ ನಟಿಯಾಗಿ ಹೊರ ಹೊಮ್ಮಿದ್ದಾರೆ. ಕನ್ನಡ ಸೇರಿದಂತೆ ಪರ ಭಾಷೆಯಲ್ಲೂ ಇವರಿಗೆ ಬೇಡಿಕೆ ಹೆಚ್ಚಾಗಿದೆ. ಇತ್ತೀಚೆಗಷ್ಟೇ ತೆಲುಗಿನ ಚೊಚ್ಚಲ ಸಿನಿಮಾ ಕಂಪ್ಲೀಟ್ ಮಾಡಿದ್ದಾರೆ. ಟಾಲಿವುಡ್ ಹೀರೋ ನಿತಿನ್ ನಟಿಸುತ್ತಿರುವ 'ತಮ್ಮುಡು' ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಜುಲೈ 4ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಂಬಂಧ ಹೈದರಾಬಾದ್‌ನಲ್ಲಿ ಭರ್ಜರಿ ಪ್ರಚಾರದಲ್ಲಿ ಸಪ್ತಮಿಗೌಡ ತೊಡಗಿಸಿಕೊಂಡಿದ್ದಾರೆ.

ಚೊಚ್ಚಲ ತೆಲುಗು ಸಿನಿಮಾ 'ತಮ್ಮುಡು' ಬಗ್ಗೆ ಸಪ್ತಮಿ ಗೌಡ ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅವರ ಪಾತ್ರದ ಬಗ್ಗೆ ಕೆಲವು ಸುಳಿವುಗಳನ್ನು ಬಿಟ್ಟು ಕೊಟ್ಟಿದ್ದಾರೆ. 'ಕಾಂತಾರ' ಸಿನಿಮಾ ಬಳಿಕ ತೆಲುಗು ಸಿನಿಮಾಗೆ ಹೇಗೆ ಅವಕಾಶ ಸಿಕ್ಕಿತು ಅನ್ನೋದನ್ನು ತೆಲುಗು ಪತ್ರಕರ್ತರ ಜೊತೆ ಹಂಚಿಕೊಂಡಿಕೊಂಡಿದ್ದಾರೆ. ಇದೇ ವಿವಾದಾತ್ಮಕ ವಿಷಯದ ಬಗ್ಗೆನೂ ಮಾತಾಡಿದ್ದಾರೆ.

What did Sapthami Gowda say after breaking her silence about her relationship with Yuva Rajkumar

ತೆಲುಗು ಫಿಲ್ಮಿಬೀಟ್‌ನ ರಾಜಾ ಬಾಬು ಅವರಿಗೆ ನೀಡಿದ ಸಂದರ್ಶನದಲ್ಲಿ ಯುವ ರಾಜ್‌ಕುಮಾರ್ ಜೊತೆಗಿನ ಸಂಬಂಧ ಹಾಗೂ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರಕರಣದ ಬಗ್ಗೆ ಕೊನೆಗೂ ಮೌನ ಮುರಿದಿರುವ ಸಪ್ತಮಿ ಗೌಡ ಏನು ಹೇಳಿದ್ದಾರೆ?

ಮುಂದೆ ಓದಿ

ಯುವ ರಾಜ್‌ಕುಮಾರ್ ಜೊತೆಗಿನ ಸಂಬಂಧದ ಬಗ್ಗೆ ಮೌನ ಮುರಿದ ಸಪ್ತಮಿ ಗೌಡ
ಕನ್ನಡ ಹಾಗೂ ತೆಲುಗಿನಲ್ಲಿ ಯಾರೊಂದಿಗೂ ಸ್ನೇಹವಿಲ್ಲ ಎಂದ ಸಪ್ತಮಿ ಗೌಡ
ತಮ್ಮುಡು ಸಿನಿಮಾದ ಪಾತ್ರ 'ಕಾಂತಾರ' ವನ್ನೇ ಹೋಲುತ್ತಿರುವುದು ಏಕೆ?

ಸಪ್ತಮಿಗೆ ಗೌಡ ತೆಲುಗು ಸಿನಿಮಾ ಆಫರ್ ಬಂದಿದ್ದು ಹೇಗೆ ಎನ್ನುವುದನ್ನು ಈ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. "ಕಾಂತಾರ ಸಿನಿಮಾ ಬಳಿಕ ವೇಲು ಸರ್ ನನ್ನನ್ನು ಸಂಪರ್ಕ ಮಾಡಿದ್ದರು. ಆಮೇಲೆ ಹೈದರಾಬಾದ್‌ಗೆ ಬಂದೆ, ಮೊದಲು ಲುಕ್ ಟೆಸ್ಟ್ ಆಯ್ತು. ಅದಾಗಲೇ ರತ್ನಾ ಪಾತ್ರವನ್ನು ಬರೆಯಲಾಗಿತ್ತು. ರತ್ನಾ ಹೇಗಿರುತ್ತಾಳೆ? ಅವಳ ಪಾತ್ರವೇನು ಅನ್ನೋದನ್ನು ಮೊದಲೇ ಬರೆದಿದ್ದರು. ಆ ಮೇಲೆ ಆ ಪಾತ್ರವನ್ನು ಡೆವೆಲಪ್ ಮಾಡಲಾಗಿತ್ತು. ಆ ವೇಳೆ ನನಗೆ ಕುದುರೆ ಸವಾರಿ ಮಾಡುವುದಕ್ಕೆ ಹೇಳಿದ್ದರು. ಅಲ್ಲಿಂದ ನಾನು ಕುದುರೆ ಸವಾರಿ ಮಾಡುವುದಕ್ಕೆ ಶುರು ಮಾಡಿದೆ. ಆನಂತರ ಈ ಸಿನಿಮಾದ ಸ್ಕೇಲ್ ದೊಡ್ಡದಾಯ್ತು. ಈ ವೇಳೆ ನಿತಿನ್ ಅವರು ಶೂಟಿಂಗ್ ವೇಳೆ ಗಾಯಗೊಂಡಿದ್ದರಿಂದ ಚಿತ್ರೀಕರಣ ಸ್ವಲ್ಪ ಮುಂದಕ್ಕೆ ಹೋಯ್ತು." ಎನ್ನುತ್ತಾರೆ.

What did Sapthami Gowda say after breaking her silence about her relationship with Yuva Rajkumar

ಕುದುರೆ ಸವಾರಿಯ ಅನುಭವ ಹೇಗಿತ್ತು?

'ತಮ್ಮುಡು' ಸಿನಿಮಾಗಾಗಿ ಸಪ್ತಮಿ ಗೌಡ ದಿನಕ್ಕೆ ಮೂರರಿಂದ ನಾಲ್ಕು ಗಂಟೆ ಕುದುರೆ ಸವಾರಿಯನ್ನು ಮಾಡಬೇಕಿತ್ತು. ಈ ವೇಳೆ ಕಾಲುಗಳಿಗೆ ನಿರಂತರವಾಗಿ ಪೆಟ್ಟಾಗುತ್ತಲೇ ಇತ್ತು. ಹೀಗಾಗಿ ವೈದ್ಯರನ್ನು ಕರೆಸಿ ಟಿಟಿ ಲಸಿಕೆಯನ್ನು ಹಾಕಿಸಿಕೊಳ್ಳುತ್ತಿದ್ದರಂತೆ. ಕುದುರೆ ಸವಾರಿ, ಬೆಟ್ಟ ಗುಟ್ಟಗಳಲ್ಲಿ ಶೂಟಿಂಗ್ ಮಾಡುವ ಬಗ್ಗೆ ಮನ ಬಿಚ್ಚಿ ಮಾತಾಡಿದ್ದಾರೆ.
"ಅದು ಬೆಟ್ಟ ಗುಡ್ಡಗಳಿಂದ ಕೂಡಿತ್ತು. ಬಂಡೆಗಳು ಇದ್ದವು. ಹೀಗಾಗಿ ಕುದುರೆಗೂ ಕೂಡ ಬೆಟ್ಟ ಏರುವುದಕ್ಕೆ ಕಷ್ಟ ಎನಿಸುತ್ತಿತ್ತು. ಒಂದು ದೃಶ್ಯದಲ್ಲಿ ಕುದುರೆ ಬೆಟ್ಟ ಏರಬೇಕಿತ್ತು. ಅದನ್ನು ರಾತ್ರಿ 7 ಗಂಟೆಗೆ ಚಿತ್ರೀಕರಣ ಮಾಡಲಾಗಿತ್ತು. ಅದು ನನಗೂ ಹಾಗೂ ಕುದುರೆ ಎರಡಕ್ಕೂ ತುಂಬಾನೇ ಕಷ್ಟ ಆಗಿತ್ತು. ಏನಾದರೂ ಮಿಸ್ ಆಗಿದ್ದರೆ, ಕುದುರೆ ಹಾಗೂ ನಾನು ಇಬ್ಬರೂ ಬೆಟ್ಟದಿಂದ ಕೆಳಗೆ ಬೀಡುತ್ತಿದ್ವಿ" ಎಂದು ಶೂಟಿಂಗ್ ಅನುಭವವನ್ನು ಹಂಚಿಕೊಂಡಿದ್ದಾರೆ.

ಯುವ ಬಗ್ಗೆ ಮೌನ ಮುರಿದ ಸಪ್ತಮಿ ಗೌಡ

'ಯುವ' ಸಿನಿಮಾ ವೇಳೆ ಸಪ್ತಮಿ ಗೌಡ ಹಾಗೂ ಯುವ ರಾಜ್‌ಕುಮಾರ್ ನಡುವೆ ಅನ್ನೋನ್ಯತೆ ಹೆಚ್ಚಾಗಿತ್ತು. ಯುವ ರಾಜ್‌ಕುಮಾರ್ ವಿಚ್ಛೇದನಕ್ಕೆ ಮುಂದಾಗಿದ್ದಕ್ಕೆ ಕಾರಣವೇ ಸಪ್ತಮಿ ಎಂದು ಪತ್ನಿ ಶ್ರೀದೇವಿ ಬೈರಪ್ಪ ದೂರಿದ್ದರು. ಈ ಆರೋಪದ ಬಳಿಕ ಸಪ್ತಮಿ ಗೌಡ ಕೋರ್ಟ್ ಮೆಟ್ಟಿಲೇರಿದ್ದರು. ಶ್ರೀದೇವಿ ಬೈರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರು. ಈ ಬಗ್ಗೆ ತೆಲುಗು ಫಿಲ್ಮಿಬೀಟ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

"ಯುವ ರಾಜ್‌ಕುಮಾರ್ ವಿಷಯಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳು ಇಂಟರ್‌ನೆಟ್‌ನಲ್ಲಿ ಹರಿದಾಡಿತ್ತು. ಅದು ಈಗ ಕೋರ್ಟ್‌ನಲ್ಲಿ ಇದೆ. ಈ ಪ್ರಕರಣ ಕೋರ್ಟ್‌ನಲ್ಲಿ ಇರುವುದರಿಂದ ಅದು ಏನು ಹೇಳುತ್ತೋ ಆಗ ಎಲ್ಲರಿಗೂ ಗೊತ್ತಾಗುತ್ತೆ. ಆಗ ನಾನು ಖಂಡಿತವಾಗಿಯೂ ಈ ಬಗ್ಗೆ ಮಾತಾಡುತ್ತೇನೆ." ಎಂದು ಈ ಪ್ರಕರಣದ ಬಗ್ಗೆ ಸಪ್ತಮಿ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ಚಿತ್ರರಂಗದಲ್ಲಿ ಸ್ನೇಹಿತರಿಲ್ಲ

"ತೆಲುಗಿನಲ್ಲಿ ಯಾರೂ ಸ್ನೇಹಿತರಿಲ್ಲ. ತಮ್ಮುಡು ಬಳಿಕ ಸ್ನೇಹಿತರನ್ನು ಮಾಡಿಕೊಳ್ಳುತ್ತೇನೆ. ಸಾಮಾನ್ಯವಾಗಿ ಕನ್ನಡದಲ್ಲಿಯೂ ತುಂಬಾನೇ ಸ್ನೇಹಿತರಿಲ್ಲ. ನಾನು ಎಲ್ಲರೊಂದಿಗೂ ಕೆಲಸ ಮಾಡಿದ್ದೇನೆ. ಎಲ್ಲರೂ ನನಗೆ ಗೊತ್ತು. ಆದರೆ, ಅವರೊಂದಿಗೆ ನಿರಂತರವಾಗಿ ಮಾತಾಡುವುದಿಲ್ಲ. ಸ್ಕೂಲ್ ಫ್ರೆಂಡ್ಸ್ ಜೊತೆ ಇನ್ನೂ ಸ್ನೇಹವನ್ನು ಇಟ್ಟುಕೊಂಡಿದ್ದೇನೆ." ಎಂದು ಸಪ್ತಮಿ ಗೌಡ ಹೇಳಿದ್ದಾರೆ.

ಹಾಗೇ ತಮ್ಮ ಕೈಯಲ್ಲಿರುವ ಪ್ರಾಜೆಕ್ಟ್‌ಗಳ ಬಗ್ಗೆನೂ ಸಪ್ತಮಿ ಗೌಡ ಮಾತಾಡಿದ್ದಾರೆ. "ನಾನು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಕನ್ನಡದಲ್ಲಿ ಎರಡು ಸಿನಿಮಾವನ್ನು ಮಾಡುತ್ತಿದ್ದೇನೆ. ಕೆಲವು ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಇವೆ. ಎರಡು ತೆಲುಗು ಸಿನಿಮಾಗಳಿವೆ. ಒಂದು ತಮಿಳು ಸಿನಿಮಾಗೆ ಸಹಿ ಮಾಡಿದ್ದೇನೆ. ತಮ್ಮುಡು ಸಿನಿಮಾದಿಂದ ತೆಲುಗಿನಲ್ಲಿ ಒಳ್ಳೆಯ ಯಶಸ್ಸು ಸಿಗುತ್ತೆ ಎಂದು ನಂಬಿದ್ದೇನೆ. ಇಡೀ ಸಿನಿಮಾದಲ್ಲಿ ಇರುವುದಿಲ್ಲ. ಕೆಲವು ಹೊತ್ತು ಇದ್ದರೂ, ಪಾತ್ರ ತುಂಬಾನೇ ಪವರ್‌ಫುಲ್ ಆಗಿದೆ." ಎಂದಿದ್ದಾರೆ.

More from Filmibeat

English summary
What did Sapthami Gowda say after breaking her silence about her relationship with Yuva Rajkumar?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X