Ramya Controversy: ರಮ್ಯಾ-ಹಾಸ್ಟೆಲ್ ಹುಡುಗರ ನಡುವಿನ ಆದ ಒಪ್ಪಂದವೇನು? ಚಿತ್ರತಂಡದ ವಿರುದ್ಧ ನಟಿ ತಿರುಗಿಬಿದ್ದಿದ್ದೇಕೆ?

ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಕುಮಾರ್ ವಿವಾದಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದ್ದೆ. ಈ ಬೆನ್ನಲ್ಲೇ ಮತ್ತೊಂದು ವಿವಾದ ಭುಗಿಲೆದ್ದಿದೆ. ಮೋಹಕತಾರೆ ರಮ್ಯಾ ಹಾಗೂ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ತಂಡದ ನಡುವಿನ ವಿವಾದ ಕೋರ್ಟ್ ಮೆಟ್ಟಿಲೇರಿದೆ.

ಬಹುತೇಕ ಹೊಸಬರೇ ಸೇರಿ ನಿರ್ಮಿಸಿರುವ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಜುಲೈ 21ಕ್ಕೆ ರಿಲೀಸ್ ಆಗಬೇಕಿದೆ. ಈ ಬೆನ್ನಲ್ಲೇ ಅತಿಥಿ ಪಾತ್ರದಲ್ಲಿ ನಟಿಸಿರುವ ರಮ್ಯಾ ಚಿತ್ರತಂಡದ ವಿರುದ್ಧ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ದಿಢೀರನೇ ರಮ್ಯಾ ಯಾಕೆ ಚಿತ್ರತಂಡದ ವಿರುದ್ಧ ತಿರುಗಿಬಿದ್ದಿದ್ದಾರೆ? 1 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ಯಾಕೆ? ಅನ್ನೋ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

What exactly happened between Ramya and Hostel Hudugaru Bekagiddare Movie Team

ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್ ಮಾಡುವ ಆಲೋಚನೆಯಲ್ಲಿದ್ದ ರಮ್ಯಾ ಮೊದಲು ಇದೇ ಸಿನಿಮಾಗೆ ಬಣ್ಣ ಹಚ್ಚಿದ್ದರು. ಇತ್ತೀಚೆಗೆ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದಲ್ಲಿ ರಮ್ಯಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ವರದಿಯೂ ಆಗಿತ್ತು. ಇಷ್ಟೆಲ್ಲಾ ಆದ್ಮೇಲೂ ರಮ್ಯಾ ಈ ಸಿನಿಮಾದಲ್ಲಿ ತನ್ನ ದೃಶ್ಯವನ್ನು ತೆಗೆದು ಹಾಕಿ ಎಂದು ಹೇಳುತ್ತಿರುವುದು ಯಾಕೆ? ಒಂದು ಕೋಟಿ ರೂ. ಬೇಡಿಕೆ ಇಡಲು ಕಾರಣವೇನು? ಈ ವಿವಾದ ಯಾಕೆ ಅನ್ನೋದನ್ನು ತಿಳಿಯೋದಕ್ಕೆ ಮೊದಲು ಒಪ್ಪಂದ ಏನಾಗಿತ್ತು? ಅಂತ ತಿಳಿಯೋದು ಮುಖ್ಯ..

ಇಬ್ಬರ ನಡುವಿನ ಒಪ್ಪಂದವೇನು?

ಬಹುತೇಕ ಹೊಸಬರೇ ಸೇರಿ ನಿರ್ಮಿಸಿರುವ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಈ ಸಿನಿಮಾದ ಪ್ರಮುಖ ಆಕರ್ಷಣೆಯೇ ಮೋಹಕ ತಾರೆ ರಮ್ಯಾ. ಈ ಸಿನಿಮಾ ಅಂದ್ಕೊಂಡಂತೆ ರಿಲೀಸ್ ಆದರೆ, ಅದರಲ್ಲಿ ರಮ್ಯಾ ದೃಶ್ಯವಿದ್ದರೆ, ಕಮ್‌ಬ್ಯಾಕ್ ಮಾಡಿದ ಮೊದಲ ಸಿನಿಮಾ ಇದೇ ಆಗಲಿದೆ.

ಮೋಹಕತಾರೆ ರಮ್ಯಾ ಹಾಗೂ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ತಂಡದ ನಡುವೆ ಎರಡು ದಿನಗಳ ಚಿತ್ರೀಕರಣದ ಒಪ್ಪಂದ ಆಗಿತ್ತು. ರಮ್ಯಾ ಅವರೇ ಸೂಚಿಸಿದಂತಹ ಮೇಕಪ್ ಮ್ಯಾನ್, ಕಾಸ್ಟ್ಯೂಮ್ ಡಿಸೈನ್‌ನಿಂದ ಹಿಡಿದು ಎಲ್ಲವನ್ನೂ ಅವರ ಆಜ್ಞೆ ಮೇರೆಗೆ ನೀಡಲಾಗಿತ್ತು. ಪ್ರೋಮೊ ಹಾಗೂ ಸಿನಿಮಾದಲ್ಲಿ ಎರಡು ನಿಮಿಷದ ದೃಶ್ಯಕ್ಕೆಂದು ಅಗ್ರಿಮೆಂಟ್ ಮಾಡಿಕೊಳ್ಳಲಾಗಿತ್ತು ಎಂದು ಬಲ್ಲ ಮೂಲಗಳು ಫಿಲ್ಮಿಬೀಟ್‌ಗೆ ತಿಳಿಸಿದೆ.

What exactly happened between Ramya and Hostel Hudugaru Bekagiddare Movie Team

ಸಂಭಾವನೆಯ ಒಪ್ಪಂದವೇನು?

ಫಿಲ್ಮಿಬೀಟ್ ಮಾಹಿತಿ ನೀಡಿರುವ ಮೂಲಗಳ ಪ್ರಕಾರ, ರಮ್ಯಾ ಅವರೇ ಖುದ್ದಾಗಿ ಅಗ್ರಿಮೆಂಟ್ ಅನ್ನು ಮಾಡಿಸಿದ್ದರು. 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರತಂಡ ಅಗ್ರಿಮೆಂಟ್‌ನಲ್ಲಿದ್ದ ಆ ಎಲ್ಲಾ ಶರತ್ತುಗಳನ್ನು ಒಪ್ಪಿ ಸಹಿ ಮಾಡಿದ್ದರು. ಅದರಂತೆ ಆರಂಭದಲ್ಲಿ ರಮ್ಯಾ ಸಂಭಾವನೆ ಬೇಡ ಎಂದಿದ್ದರು ಎನ್ನಲಾಗಿದೆ.

ಬಳಿಕ ರಮ್ಯಾ ಸಂಭಾವನೆ ಬೇಕು ಎಂದು ಹೇಳಿದ್ದರು. ಹೀಗಾಗಿ ಚಿತ್ರದ ನಿರ್ಮಾಪಕರು ಸಿನಿಮಾದ ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕುಗಳಲ್ಲಿ ಶೇ.5ರಷ್ಟನ್ನು ಸಂಭಾವನೆ ರೂಪದಲ್ಲಿ ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದರು. ಈ ಅಗ್ರಿಮೆಂಟ್‌ಗೆ ರಮ್ಯಾ ಸಹಿ ಕೂಡ ಮಾಡಿದ್ದಾರೆಂದು ಮೂಲಗಳು ಹೇಳುತ್ತಿವೆ.

ಆದರೆ, ಕೊನೆ ಕೊನೆಯಲ್ಲಿ ಶೇ.20ರಷ್ಟನ್ನು ಸಂಭಾವನೆಯಂತೆ ನೀಡಬೇಕು ಎಂದು ಪಟ್ಟು ಹಿಡಿದಿದ್ದರು ಎಂದು ಮೂಲಗಳು ಫಿಲ್ಮಿಬೀಟ್‌ಗೆ ತಿಳಿಸಿವೆ. ಆದರೆ, ಈ ವಿವಾದದ ಬಗ್ಗೆ ಚಿತ್ರತಂಡ ಹಾಗೂ ರಮ್ಯಾ ಅಧಿಕೃತವಾಗಿ ಮಾಹಿತಿಯನ್ನು ಹಂಚಿಕೊಂಡಿಲ್ಲ.

2 ದಿನದ ಶೂಟಿಂಗ್‌ಗೆ ಖರ್ಚಾಗಿದ್ದೆಷ್ಟು?

ಚಿತ್ರತಂಡದ ಪ್ರಕಾರ, ರಮ್ಯಾ ಅವರೊಂದಿಗೆ ಒಪ್ಪಂದ ಮಾಡಿಕೊಂಡೇ ಸಿನಿಮಾದಲ್ಲಿ ಅವರ ದೃಶ್ಯಗಳನ್ನು ಇಡಲಾಗಿದೆ. ಸುಮಾರು ಎರಡು ದಿನಗಳ ಚಿತ್ರೀಕರಣಕ್ಕೆಂದು ಎಲ್ಲಾ ಸೇರಿ 35 ರಿಂದ 40 ಲಕ್ಷ ರೂ. ಹಣ ಖರ್ಚಾಗಿದೆ ಎಂದು ಹೇಳಿದ್ದಾರೆ. ಈಗ ದಿಢೀರನೇ ಸೀನ್‌ಗಳನ್ನು ಬಳಸಿಕೊಳ್ಳಬೇಡಿ ಎಂದರೆ ಹೇಗೆ? ಆ ಹಣವನ್ನು ಕೊಡುವವರು ಯಾರು? ಎಂದು ಪ್ರಶ್ನೆ ಮಾಡುತ್ತಿದ್ದಾರೆ.

"ಇಡೀ ಸಿನಿಮಾ ನೋಡಿ ಚೆನ್ನಾಗಿ ಎಂದು ಮೆಚ್ಚಿಕೊಂಡು ಅವರೇ ಬಂದು ಡಬ್ಬಿಂಗ್ ಮಾಡಿದ್ದಾರೆ. ಹಾಗೇ ಒಪ್ಪಿಗೆ ಇಲ್ಲದೆ ಇದ್ದಿದ್ದರೆ ಅಂದೇ ಹೇಳಬಹುದಿತ್ತು. ಈಗ ಸಿನಿಮಾ ಪ್ರಚಾರಕ್ಕೆ ಅಂತೆಲ್ಲ ಸೇರಿ ಲಕ್ಷಗಟ್ಟಲೆ ಹಣವನ್ನು ಖರ್ಚು ಮಾಡಿದ್ದೇವೆ. ಈಗ ಸಿನಿಮಾಗೆ ನ್ಯಾಯಾಲಯದಿಂದ ಸ್ಟೇ ತಂದಿದ್ದಾರೆ. ನಾವು ಚಿಕ್ಕವರು ಈ ನಷ್ಟವನ್ನು ತಡೆದುಕೊಳ್ಳುವ ಶಕ್ತಿಯಿಲ್ಲ. ಇದನ್ನು ಅವರು ಭರಿಸುತ್ತಾರಾ?" ಅಂತ ಚಿತ್ರತಂಡದ ಸದಸ್ಯರೊಬ್ಬರು ಪ್ರಶ್ನೆ ಮಾಡಿದ್ದಾರೆ. ಇಂದು (ಜುಲೈ 20) ಕೋರ್ಟ್‌ನಲ್ಲಿ ಏನು ತೀರ್ಪು ಬರುತ್ತೋ ಅದರ ಮೇಲೆ ಸಿನಿಮಾ ರಿಲೀಸ್ ಆಗುತ್ತೋ ಇಲ್ಲವೋ? ಅನ್ನೋದಕ್ಕೆ ಸ್ಪಷ್ಟತೆ ಸಿಗಲಿದೆ.

More from Filmibeat

English summary
Ramya and Hostel Hudugaru Bekagiddare Movie Controversy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X