ಸೋನು ಶ್ರೀನಿವಾಸ್ ಗೌಡ ಪೊಲೀಸ್ ಕಸ್ಟಡಿ ಅಂತ್ಯ; 14 ದಿನ ನ್ಯಾಯಾಂಗ ಬಂಧನ
ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಮತ್ತೊಂದು ವಿವಾದದಲ್ಲಿ ಸಿಕ್ಕಿಕೊಂಡಿದ್ದಾರೆ. ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಆರೋಪವನ್ನು ಎದುರಿಸುತ್ತಿದ್ದಾರೆ. ಈ ಆರೋಪದ ಬೆನ್ನಲ್ಲೇ ಸೋನು ಶ್ರೀನಿವಾಸ್ ಗೌಡರನ್ನು ಪೊಲೀಸರು ಬಂಧಿಸಿದ್ದರು. ಇಂದು ಪೊಲೀಸ್ ಕಸ್ಟಡಿ ಅಂತ್ಯ ಕಂಡ ಬೆನ್ನಲ್ಲೇ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು.
ನ್ಯಾಯಾಲಯ ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನದ ಆದೇಶ ಹೊರಡಿಸಿದೆ. ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಆಧಾರದ ಮೇಲೆ ಸೋನು ಶ್ರೀನಿವಾಸ ಗೌಡ ಜೈಲು ಸೇರಬಹುದೆಂದು ನಿರೀಕ್ಷೆ ಮಾಡಲಾಗಿತ್ತು.

ಸೋನು ಶ್ರೀನಿವಾಸ್ ಗೌಡ ಕೆಲವು ದಿನಗಳ ಹಿಂದಷ್ಟೇ ರಾಯಚೂರಿನ ದಂಪತಿಯ ಮಗುವನ್ನು ದತ್ತು ಪಡೆದಿದ್ದಾಗಿ ಹೇಳಿಕೊಂಡು ರೀಲ್ ಮಾಡಿದ್ದರು. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಕೂಡ ಮಾಡಿಕೊಂಡಿದ್ದರು. ಈ ರೀಲ್ಸ್‌ನಿಂದ ಬಂದ ಹಣದಲ್ಲಿ ಮಗುವಿನ ಪೋಷಕರಿಗೆ ಸಹಾಯ ಮಾಡುವುದಾಗಿ ಹೇಳಿಕೊಂಡಿದ್ದರು.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಜ್ಯ ಮಕ್ಕಳ ರಕ್ಷಣ ಘಟಕದ ಅಧಿಕಾರಿ ಗೀತಾ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಸೋನು ಶ್ರೀನಿವಾಸ್‌ಗೌಡರನ್ನು ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ, ಕಸ್ಟಡಿಗೆ ತೆಗೆದುಕೊಂಡಿದ್ದರು. ಇಂದು (ಮಾರ್ಚ್ 25) ಅವರ ಪೊಲೀಸ್ ಕಸ್ಟಡಿ ಅಂತ್ಯವಾಗಿತ್ತು. ಹೀಗಾಗಿ ಸೋನು ಶ್ರೀನಿವಾಸ್ ಗೌಡ ಜೈಲು ಸೇರುತ್ತಾರಾ? ಅಥವಾ ಬೇಲ್ ಸಿಗುತ್ತಾ? ಅನ್ನೋ ಪ್ರಶ್ನೆ ಎದುರಾಗಿತ್ತು.
ಸೋನು ಶ್ರೀನಿವಾಸ್ ಗೌಡ ಮಗುವನ್ನು ದತ್ತು ಪಡೆಯುವಾಗ ಕಾನೂನು ಪಾಲನೆ ಮಾಡಿರಲಿಲ್ಲ. ಕಾನೂನು ಬಾಹಿರವಾಗಿಯೇ ಮಗುವನ್ನು ದತ್ತು ಪಡೆದಿದ್ದಾರೆ. ಅಲ್ಲದೆ ಆ ಮಗುವಿನ ಗುರುತನ್ನು ಬಹಿರಂಗಪಡಿಸಿದ್ದಾರೆ. ಈ ಆರೋಪಗಳನ್ನು ಸೋನು ಶ್ರೀನಿವಾಸ್ ಗೌಡ ಎದುರಿಸುತ್ತಿದ್ದು, ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ಬಂಧಿಸಿದ್ದರು.

ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸರು ನಾಲ್ಕು ದಿನಗಳ ಕಾಲ ಸೋನು ಶ್ರೀನಿವಾಸ್ ಗೌಡರನ್ನು ಕಸ್ಟಡಿಗೆ ಪಡೆದಿದ್ದರು. ನಿನ್ನೆಯಷ್ಟೇ (ಮಾರ್ಚ್ 24) ಸೋನು ಶ್ರೀನಿವಾಸ್ ಗೌಡರನ್ನು ರಾಯಚೂರಿಗೆ ಕರೆತಂದು ಸ್ಥಳ ಮಹಜರು ಮಾಡಿದ್ದರು. ಅಲ್ಲದೆ ಸ್ಥಳೀಯರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು.
ಮಗುವನ್ನು ದತ್ತು ಪಡೆಯುವಾಗ ಮೊದಲು ಅರ್ಜಿ ಸಲ್ಲಿಸಬೇಕು. ಅಲ್ಲದೇ ಕೆಲವು ನಿಯಮಗಳನ್ನು ಪಾಲಿಸಬೇಕು. ಇದನ್ನು ಸೋನು ಶ್ರೀನಿವಾಸ್ ಗೌಡ ಮಾಡಿರಲಿಲ್ಲ. ನೇರವಾಗಿ ಮಗವನ್ನು ಪೋಷಕರಿಂದ ಕರೆದುಕೊಂಡು ಬಂದಿದ್ದರು. ದತ್ತು ಪಡೆದ ಬಳಿಕ ಮಗುವನ್ನು ಸೋಶಿಯಲ್ ಮೀಡಿಯಾಗಳಲ್ಲಿ ತೋರಿಸಬಾರದು ಎನ್ನಲಾಗಿದೆ. ಆ ನಿಯಮವನ್ನೂ ಸೋನು ಬ್ರೇಕ್ ಮಾಡಿದ್ದಾರೆ. ಇಷ್ಟೆ ಅಲ್ಲದೆ ಮಕ್ಕಳ ಕಲ್ಯಾಣ ಸಮಿತಿಯ ಸಮ್ಮುಖದಲ್ಲಿ ಮಕ್ಕಳನ್ನು ದತ್ತು ಪಡೆಯಬೇಕು. ಹೀಗಾಗಿ ಸೋನು ಗಂಭೀರ ಮೇಲೆ ಕೇಸ್ ದಾಖಲಾಗಿತ್ತು.
ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಸದ್ಯ ಸಂಕಷ್ಠಕ್ಕೆ ಸಿಲುಕಿರುವುದಂತೂ ಸತ್ಯ. 14 ದಿನಗಳ ನ್ಯಾಯಾಂಗ ಬಂಧನದ ಬಳಿಕ ಅವರ ಮುಂದಿರುವ ಹಾದಿ ಏನು? ಅನ್ನೋದು ತಿಳಿಯಬೇಕಿದೆ.


Click it and Unblock the Notifications











