Don't Miss!
- News
Vishnuvardhan Memorial: ಇಂದು ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ, ವಿಷ್ಣು ಅಭಿಮಾನಿಗಳ ಅಸಮಾಧಾನವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Sports
ಮುಂದಿನ ತಿಂಗಳು ಬಿಸಿಸಿಐ ಹೊಸ ಒಪ್ಪಂದ: ಸೂರ್ಯ, ಪಾಂಡ್ಯ, ಗಿಲ್ಗೆ ಬಂಪರ್ ಸಾಧ್ಯತೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಣ್ಣಾವ್ರ ಬಿಡುಗಡೆಗೆ ಸರಕಾರ ಕೊಟ್ಟ ದುಡ್ಡಿನ ಬಗ್ಗೆ ಸ್ಪೋಟಕ ಮಾಹಿತಿ ಹೊರಹಾಕಿದ ತಮಿಳು ಪತ್ರಕರ್ತ
ದೇಶದ ಇತಿಹಾಸದಲ್ಲೇ ಭಾರೀ ಸಂಚಲನ ಮೂಡಿಸಿದ್ದ ಕನ್ನಡದ ವರನಟ ಡಾ.ರಾಜ್ ಕುಮಾರ್ ಅವರ ಅಪಹರಣದ ಹಿಂದಿನ ಸತ್ಯಾಸತ್ಯತೆಯ ಬಗ್ಗೆ ಅಧಿಕೃತವಾಗಿ ಯಾವ ಮಾಹಿತಿಯೂ ಸರಕಾರದಿಂದ ಹೊರಬಿದ್ದಿಲ್ಲ.
ಆದರೆ, ಆ ಸಮಯದಲ್ಲಿದ್ದ ತಮಿಳುನಾಡು / ಕರ್ನಾಟಕ ಪೊಲೀಸರು ಮತ್ತು ಪತ್ರಕರ್ತರು ಈ ವಿಚಾರದಲ್ಲಿ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ, ಈ ಸಂಬಂಧ ಹಲವು ಪುಸ್ತಕಗಳು ಬಿಡುಗಡೆಯಾಗಿವೆ ಕೂಡಾ..
ಡಾ.ರಾಜ್
ಕುಮಾರ್
'ಕಸ್ತೂರಿ
ನಿವಾಸ'
ಚಿತ್ರಕ್ಕೆ
50
ವರ್ಷದ
ಸಂಭ್ರಮ
ಇನ್ನು, ಎ.ಎಂ.ಆರ್ ರಮೇಶ್ ಮತ್ತು ರಾಮ್ ಗೋಪಾಲ್ ವರ್ಮಾ ಈ ಸಬ್ಜೆಕ್ಟ್ ಮೇಲೆ ಚಿತ್ರವನ್ನೂ ತೆಗೆದಿದ್ದಾರೆ. ಈಗ, ತಮಿಳು ಪತ್ರಕರ್ತರೊಬ್ಬರು ಡಾ.ರಾಜ್ ಬಿಡುಗಡೆಗೆ ಅಂದಿನ ಸರಕಾರ ಕೊಟ್ಟ ಹಣವೆಷ್ಟು ಎನ್ನುವುದರ ಬಗ್ಗೆ ಮಾಹಿತಿ ಹೊರಹಾಕಿದ್ದಾರೆ.

2000ನೇ ಇಸವಿಯ ಜುಲೈ 30ರ ರಾತ್ರಿ
2000ನೇ ಇಸವಿಯ ಜುಲೈ 30ರ ರಾತ್ರಿ ಪತ್ನಿ ಪಾರ್ವತಮ್ಮ ಅವರೊಂದಿಗೆ ತಮ್ಮ ಹುಟ್ಟೂರು ಗಾಜನೂರಿಗೆ ಹೋಗಿದ್ದ ಡಾ. ರಾಜ್ ಕುಮಾರ್ ಅವರನ್ನು ಕಾಡುಗಳ್ಳ, ನರಹಂತಕ ವೀರಪ್ಪನ್ ಅಪಹರಿಸಿದ್ದ. ಆ ಸುದ್ದಿ ರಾಜ್ಯದ ಜನತೆಗೆ ಮರುದಿನ ಬೆಳಿಗ್ಗೆ ಬರಸಿಡಿಲಿನಂತೆ ಅಪ್ಪಳಿಸಿತ್ತು. ಘಟನೆ ನಡೆದ 108 ದಿನಗಳ ಬಳಿಕ ರಾಜ್ ಕುಮಾರ್ ಬಿಡುಗಡೆಯಾಗಿ ಮನೆಗೆ ಮರಳಿದ್ದರು.

ಎಸ್ ಎಂ ಕೃಷ್ಣ ತಮಿಳುನಾಡಿಗೆ ತೆರಳಿ ಎಂ. ಕರುಣಾನಿಧಿ ಜತೆ ಸಭೆ
ಅಂದು ರಾತ್ರಿ 1.30ರ ವೇಳೆ ಪಾರ್ವತಮ್ಮ ರಾಜ್ ಕುಮಾರ್, ಬೆಂಗಳೂರಿಗೆ ಧಾವಿಸಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರನ್ನು ಭೇಟಿ ಮಾಡಿದ್ದರು. ಎಸ್ ಎಂ ಕೃಷ್ಣ ಬೆಳಿಗ್ಗೆಯೇ ತಮಿಳುನಾಡಿಗೆ ತೆರಳಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಜತೆ ಸಭೆ ನಡೆಸಿದ್ದರು. ಈ ವಿಚಾರದ ಬಗ್ಗೆ ತಮಿಳು ಪತ್ರಕರ್ತ ಶಿವ ಸುಬ್ರಮಣಿಯನ್ ಹೊರತಂದಿರುವ ಪುಸ್ತಕದಲ್ಲಿ ಅಣ್ಣಾವ್ರ ಬಿಡುಗಡೆಗೆ ನೀಡಲಾದ ಹಣದ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.

ಒಂದು ಸಾವಿರ ಕೋಟಿ ಹಣ ಡಿಮಾಂಡ್ ಮಾಡಿದ್ದ
ರಾಜ್ ಬಿಡುಗಡೆಗೆ ಮೊದಲು ಕಾಡುಗಳ್ಳ ವೀರಪ್ಪನ್ ಒಂದು ಸಾವಿರ ಕೋಟಿ ಹಣ ಡಿಮಾಂಡ್ ಮಾಡಿದ್ದ. ಅದರಲ್ಲಿ 900 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು 100 ಕೋಟಿ ಲಿಕ್ವಿಡ್ ಕ್ಯಾಶ್ ನೀಡಬೇಕೆಂದು ಪಟ್ಟು ಹಿಡಿದಿದ್ದ ಎಂದು ಶಿವ ಸುಬ್ರಮಣಿಯನ್ ಬರೆದ 'ಲೈಫ್ ಎಂಡ್ ಫಾಲ್ ಆಫ್ ವೀರಪ್ಪನ್' ಪುಸ್ತಕದಲ್ಲಿ ಬರೆಯಲಾಗಿದೆ.
Recommended Video

ಪತ್ರಕರ್ತ ನಕ್ಕೀರನ್ ಮೂಲಕ ಸಂಧಾನ
ಕೊನೆಗೆ, ಪತ್ರಕರ್ತ ನಕ್ಕೀರನ್ ಮೂಲಕ ಸಂಧಾನ ನಡೆದು ಮೂರು ಕಂತಿನಲ್ಲಿ ಹದಿನೈದು ಕೋಟಿ ರೂಪಾಯಿಯನ್ನು ನೀಡಲಾಗಿತ್ತು. ಈ ಮೊತ್ತವನ್ನು ವೀರಪ್ಪನ್ ಒಪ್ಪಿಕೊಳ್ಳಲು ನಕ್ಕೀರನ್ ಆರು ಸುತ್ತಿನ ಮಾತುಕತೆ ನಡೆಸಿದ್ದ. ಹಣ, ಚಿನ್ನದ ಜೊತೆಗೆ ಬೇರೆ ಅವನ ಬೇಡಿಕೆಯನ್ನೂ ಈಡೇರಿಸಲಾಗಿತ್ತು ಎಂದು ಪುಸ್ತಕದಲ್ಲಿ ನಮೂದಾಗಿದೆ.