'ಭೈರತಿ ರಣಗಲ್‌'ಗೂ 'ಜನುಮದ ಜೋಡಿ'ಗೂ ಇರುವ ನಂಟೇನು? ಶಿವಣ್ಣ ಕೊಟ್ಟ ಎರಡು ಲಿಂಕ್ ಏನು?

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಮತ್ತೆ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. 'ಭೈರತಿ ರಣಗಲ್' ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ರಿಲೀಸ್ ಆದ ಮೂರು ದಿನಗಳಿಂದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಬ್ಲ್ಯಾಕ್ ಅಂಡ್ ಬ್ಲ್ಯಾಕ್ ಕಾಸ್ಟ್ಯೂಮ್‌ನಲ್ಲಿ ಶಿವಣ್ಣನ ಮ್ಯಾನರಿಸಂ ಕಂಡು ಸಿನಿಪ್ರಿಯರು ಫಿದಾ ಆಗಿದ್ದಾರೆ.

ಶಿವರಾಜ್‌ಕುಮಾರ್ ಒಂದೊಂದು ಸಿನಿಮಾದಲ್ಲಿ ಒಂದೊಂದು ಮ್ಯಾನರಿಸಂನಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಕೆಲವು ಲುಕ್ ಹಾಗೂ ಮ್ಯಾನರಿಸಂ ಅನ್ನು ಅದೆಷ್ಟೇ ವರ್ಷಗಳಾದರೂ ಅವರ ಅಭಿಮಾನಿಗಳು ಮರೆಯುವುದಿಲ್ಲ. ಅಂತಹ ಪಾತ್ರಗಳಲ್ಲಿ 'ಭೈರತಿ ರಣಗಲ್' ಕೂಡ ಒಂದು. 'ಮಫ್ತಿ' ಲುಕ್ ಬಂದಾಗಲೇ ಶಿವಣ್ಣನ ರೋಲ್ ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ಈಗ 7 ವರ್ಷಗಳ ಬಳಿಕ ಮತ್ತೆ ಅದೇ ಲುಕ್‌ನಲ್ಲಿ ಬಂದಾಗಲೂ ಜನರು ಮೆಚ್ಚುಗೆ ಕೊಟ್ಟಿದ್ದಾರೆ.

What is the connection between Shivarajkumar movie Bhairathi Ranagal and Janumada jodi film

ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ ಅಂದರೆ, ಶಿವಣ್ಣ ನಟಿಸಿದ 'ಭೈರತಿ ರಣಗಲ್‌'ಗೂ 'ಜನುಮದ ಜೋಡಿ'ಗೂ ಎರಡು ನಂಟಿದೆ. ಅದನ್ನು ಯಶಸ್ಸಿನ ಖುಷಿಯಲ್ಲಿರುವ ಸ್ವತ: ಶಿವಣ್ಣ ಅವರೇ ರಿವೀಲ್ ಮಾಡಿದ್ದಾರೆ. ಹಾಗಿದ್ದರೆ, 'ಭೈರತಿ ರಣಗಲ್‌' ಹಾಗೂ 'ಜನುಮದ ಜೋಡಿ' ಸಿನಿಮಾಗಳಿಗಿರುವ ಎರಡು ಕಾಮನ್ ನಂಟು ಏನು ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಜನುಮದ ಜೋಡಿ' ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ವೃತ್ತಿ ಬದುಕಿನ ಸೂಪರ್ ಹಿಟ್ ಸಿನಿಮಾ. ನಾಗಾಭರಣ ನಿರ್ದೇಶಿಸಿದ್ದ ಈ ಸಿನಿಮಾ ರಿಲೀಸ್ ಆಗಿ 28 ವರ್ಷಗಳಾಗಿವೆ. ಆದರೂ, ಸಿನಿಪ್ರಿಯರು ಈ ಸಿನಿಮಾವನ್ನು ಮರೆತಿಲ್ಲ. 'ಜನುಮದ ಜೋಡಿ' ಸಿನಿಮಾ ಶಿವಣ್ಣನ ವೃತ್ತಿ ಬದುಕಿನ ಎವರ್‌ಗ್ರೀನ್ ಸಿನಿಮಾ ಎಂದು ಹೇಳಬಹುದು. ಈ ಸಿನಿಮಾ 1996, ನವೆಂಬರ್ 15ರಂದು ರಿಲೀಸ್ ಆಗಿತ್ತು. ಸಿನಿಮಾದಷ್ಟೇ ಹಾಡುಗಳ ಕೂಡ ದೊಡ್ಡ ಮಟ್ಟಕ್ಕೆ ಸಕ್ಸಸ್ ಆಗಿತ್ತು.

ಶಿವಣ್ಣನ ವೃತ್ತಿ ಬದುಕಿನ ಎವರ್‌ಗ್ರೀನ್ ಸಿನಿಮಾ 'ಜನುಮದ ಜೋಡಿ' ರಿಲೀಸ್ ಆಗಿದ್ದು ನವೆಂಬರ್ 15ರಂದು. ಅಂದಿನ ಕಾಲಕ್ಕೆ ಕನ್ನಡ ಚಿತ್ರರಂಗದ ಕಡೆಗೆ ಬೇರೆ ಭಾಷೆಯ ಜನರು ತಿರುಗಿ ನೋಡುವಂತೆ ಮಾಡಿದ ಸಿನಿಮಾವಿದು. ಅದೇ ನವೆಂಬರ್ 15ರಂದು ಕಾಕತಾಳೀಯವೇನೋ ಎನ್ನುವಂತೆ 'ಭೈರತಿ ರಣಗಲ್' ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾಗೂ ಕೂಡ ಪ್ರೇಕ್ಷಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ವಿಷಯವನ್ನು ಶಿವರಾಜ್‌ಕುಮಾರ್ ನೆನಪಿಸಿಕೊಂಡಿದ್ದಾರೆ.

What is the connection between Shivarajkumar movie Bhairathi Ranagal and Janumada jodi film

"ನವೆಂಬರ್ 15ನೇ ತಾರೀಕು ಜನುಮದ ಜೋಡಿ ಡೇಟ್ ಅದು. 96ರಲ್ಲಿ ಆ ಸಿನಿಮಾ ರಿಲೀಸ್ ಆಗಿತ್ತು. ಅದನ್ನು ನಮ್ಮ ತಾಯಿ ನಿರ್ಮಾಣ ಮಾಡಿದ್ದರು. ಈ ಸಿನಿಮಾವನ್ನು ನನ್ನ ಹೆಂಡ್ತಿ ನಿರ್ಮಾಣ ಮಾಡಿದ್ದಾರೆ. ಇಬ್ಬರೂ ಶಕ್ತಿ. ಅವರು ಸಿನಿಮಾ ಮಾಡಿದ್ದಾಗ ಚೆನ್ನಾಗಿ ಆಗುತ್ತವೆ. ಅಲ್ಲಿ ನಾಗಾಭರಣ ನಿರ್ದೇಶನ ಮಾಡಿದ್ದರು. ಇಲ್ಲಿ ನರ್ತನ್ ಡೈರೆಕ್ಟ್ ಮಾಡಿದ್ದು, ಇಬ್ಬರ ಹೆಸರು ಎನ್ ಅಕ್ಷರದ ಸಾಮ್ಯತೆಯಿದೆ" ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ.

ಇದೇ ವೇಳೆ 'ಭೈರತಿ ರಣಗಲ್' ಹಾಗೂ 'ಜನುಮದ ಜೋಡಿ' ಎರಡೂ ಸಿನಿಮಾಗಳೂ ಒಂದೇ ಡೇಟ್‌ನಲ್ಲಿ ರಿಲೀಸ್ ಆಗಿದ್ದಕ್ಕೆ ಶಿವರಾಜ್‌ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ. "ಕಾಕತಾಳೀಯವಾಗಿ ಒಂದೇ ಡೇಟ್‌ನಲ್ಲಿ ಸಿನಿಮಾ ರಿಲೀಸ್ ಆಗಿದೆ. ಹಾಗೇ ಒಳ್ಳೆಯ ಓಪನಿಂಗ್ ಕೊಟ್ಟಿದ್ದು ಖುಷಿ ಕೊಟ್ಟಿದೆ. ಈ ಎಲ್ಲಾ ಕ್ರೆಡಿಕ್ ನರ್ತನ್‌ಗೆ ಹೋಗಬೇಕು. ತುಂಬಾ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಒಂದೊಳ್ಳೆ ಸಿನಿಮಾ ಸ್ಟೋರಿ ಡೈರೆಕ್ಷನ್ ಮುಖ್ಯ. ಪ್ರೊಡಕ್ಷನ್ ಸೈಡ್‌ನಿಂದ ಗೀತಾ ಹಾಗೂ ನರ್ತನ್ ಸೇರಿ ಒಳ್ಳೆಯ ಸಿನಿಮಾ ಮಾಡಿದ್ದಾರೆ" ಎಂದಿದ್ದಾರೆ.

More from Filmibeat

English summary
What is the connection between Shivarajkumar movie Bhairathi Ranagal and Janumada Jodi film?;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X