ಶಿವಣ್ಣ ನಟಿಸುತ್ತಿರುವ ಬಯೋಪಿಕ್ ಸಿನಿಮಾದ ಟೈಟಲ್ ಏನು? ಗುಟ್ಟು ಬಿಟ್ಟುಕೊಟ್ಟ ಸೆಂಚುರಿಸ್ಟಾರ್

ಅನಾರೋಗ್ಯದ ಬಳಿಕ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಮತ್ತೆ ಟ್ರ್ಯಾಕ್‌ಗೆ ಮರಳಿದ್ದಾರೆ. ಸಿನಿಮಾ ಕೆಲಸಗಳಲ್ಲಿ ನಿಧಾನವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳಲ್ಲಿ ನಟಿಸುವುದಕ್ಕೆ ಮತ್ತೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಸಿನಿಮಾಗಳ ಮಧ್ಯೆನೇ ಈಗಾಗಲೇ ಕಂಪ್ಲೀಟ್ ಮಾಡಿರುವ '45' ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ.

ಇತ್ತೀಚೆಗೆ '45' ಸಿನಿಮಾ ತಂಡ ಪ್ಯಾನ್ ಇಂಡಿಯಾ ಪ್ರಚಾರದಲ್ಲಿ ಭಾಗಿಯಾಗಿದೆ. ಮುಂಬೈ, ಹೈದರಾಬಾದ್, ಚೆನ್ನೈ, ಕೊಚ್ಚಿಯಲ್ಲಿ ಮೊದಲ ಬಾರಿಗೆ ಪ್ರಚಾರ ಮಾಡುವುದಕ್ಕೆ ಹೊರಟಿದೆ. ಈ ಇವೆಂಟ್‌ಗಳಲ್ಲಿ ಉಪೇಂದ್ರ, ಅರ್ಜುನ್ ಜನ್ಯಾ ಜೊತೆ ಶಿವರಾಜ್‌ಕುಮಾರ್ ಭಾಗಿಯಾಗಿದ್ದಾರೆ. ಇತ್ತೀಚೆಗೆ ನಡೆದ ಹೈದರಾಬಾದ್‌ ಇವೆಂಟ್‌ನಲ್ಲಿ ಶಿವರಾಜ್‌ಕುಮಾರ್ ಮತ್ತೊಂದು ಹೊಸ ಸಿನಿಮಾದ ಗುಟ್ಟನ್ನು ಬಿಟ್ಟು ಕೊಟ್ಟಿದ್ದಾರೆ.

What is the name of the Shivarajkumar starrer biopic that he revealed at the 45-film event in Hyderabad

ಶಿವಣ್ಣನ ಕೈಯಲ್ಲಿ ಈಗಾಗಲೇ ಸಾಕಷ್ಟು ಸಿನಿಮಾಗಳು ಇವೆ. ಅನಾರೋಗ್ಯದಿಂದ ಒಪ್ಪಿಕೊಂಡ ಒಂದಷ್ಟು ಸಿನಿಮಾಗಳು ಪೋಸ್ಟ್‌ಪೋನ್ ಆಗಿದ್ದವಷ್ಟೇ. ಶಿವಣ್ಣ ಅನಾರೋಗ್ಯದಿಂದ ರಿಕವರಿಯಾಗಿ ಹೊರ ಬರುವುದರೊಳಗೆ ಗುಟ್ಟಾಗಿಯೇ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆ ಸಿನಿಮಾ ಯಾವುದು ಅನ್ನೋದನ್ನು ಶಿವಣ್ಣ ಹೈದರಾಬಾದ್‌ನಲ್ಲಿ ನಡೆದ 45 ಸಿನಿಮಾ ಇವೆಂಟ್‌ನಲ್ಲಿ ರಿವೀಲ್ ಮಾಡಿದ್ದಾರೆ.

ಈಗ ಸಾಕಷ್ಟು ಬಯೋಪಿಕ್‌ಗಳು ಬರುತ್ತಿವೆ. ಪವರ್‌ಸ್ಟಾರ್ ಪುನೀತ್‌ ರಾಜ್‌ಕುಮಾರ್ ಹಾಗೂ ಲೆಜೆಂಡರಿ ರಾಜ್‌ಕುಮಾರ್ ಅವರಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಕನ್ನಡದ ಯಾವುದೇ ಸಿನಿಮಾ ರಿಲೀಸ್ ಆದರೂ ಮೊದಲು ಅವರಿಗೆ ಗೌರವ ನೀಡಲಾಗುತ್ತೆ. ನಾವು ಪುನೀತ್ ರಾಜ್‌ಕುಮಾರ್ ಅವರ ಬಯೋಪಿಕ್ ಅನ್ನು ನಿರೀಕ್ಷೆ ಮಾಡಬಹುದಾ? ಎಂದು ತೆಲುಗು ಪತ್ರಕರ್ತರು ಪ್ರಶ್ನೆ ಮಾಡಿದ್ದರು.

What is the name of the Shivarajkumar starrer biopic that he revealed at the 45-film event in Hyderabad

"ನನಗೆ ಬಯೋಪಿಕ್ ಬಗ್ಗೆ ನಂಬಿಕೆ ಇಲ್ಲ. ನೀವ್ಯಾಕೆ ನಿಮ್ಮ ತಂದೆಯ ಬಯೋಪಿಕ್ ಅನ್ನು ಮಾಡುವುದಿಲ್ಲ ಅಂತ ಯಾರೋ ಒಬ್ಬರು ಕೇಳಿದ್ದರು. ನಾವು ಮಾಡಬಾರದು ಅಂತ ಹೇಳಿದೆ. ಅವರು ಹಾಗೇ ಇರಬೇಕು. ಅವರು ಲಿವಿಂಗ್ ಲೆಜೆಂಡ್. ನನ್ನ ಪಾಲಿಗೆ ಅವರು ಲಿವಿಂಗ್ ಲೆಜೆಂಡ್. ಪುನೀತ್ ಹಾಗೂ ರಾಜ್‌ಕುಮಾರ್ ಇಬ್ಬರೂ ಯಾವಾಗಲೂ ನನ್ನ ಪಾಲಿಗೆ ಜೀವಂತವಾಗಿರುತ್ತಾರೆ. ಅವರು ಇಲ್ಲಿ ಇಲ್ಲ ಅಂತ ನಾನು ನಂಬುವುದೇ ಇಲ್ಲ. ಅವರು ಇಲ್ಲೇ ಇದ್ದಾರೆ. ಅವರು ನಿಮ್ಮ ಹೃದಯದಲ್ಲಿ ಇದ್ದಾರೆ. ಅವರ ಹೃದಯದಲ್ಲಿ ಇದ್ದಾರೆ. ಅವರ ಕಣ್ಣುಗಳು ನೋಡುತ್ತಿವೆ." ಎಂದು ಶಿವಣ್ಣ ತೆಲುಗು ಪತ್ರಕರ್ತರಿಗೆ ಹೇಳಿದ್ದಾರೆ.

"ನಾನು ಅವರ ಬಗ್ಗೆ ಯೋಚನೆ ಮಾಡಿದಾಗ ಅಳು ಬರುತ್ತೆ. ಆ ಸಿನಿಮಾವನ್ನು ಮಾಡುವಾಗ ನನಗೆ ಅಪ್‌ಸೆಟ್ ಆಗುವುದು ಇಷ್ಟವಿಲ್ಲ. ನನಗೆ ಕೆಲವರು ಬಯೋಪಿಕ್ ಮಾಡುವಂತೆ ಹೇಳಿದ್ದರು. ಆದರೆ, ಇಲ್ಲ ಅಂತ ಹೇಳಿದ್ದೇನೆ. ಆದರೆ, ನಾನು ಒಂದು ಬಯೋಪಿಕ್ ಮಾಡುತ್ತಿದ್ದೇನೆ. ಅದು ತುಂಬಾನೇ ಇಂಟ್ರೆಸ್ಟಿಂಗ್ ಸಿನಿಮಾ ಆಗಬಹುದು. ಆ ಟೈಟಲ್ ಅನ್ನು ರಿವೀಲ್ ಮಾಡಬೇಕೋ ಬೇಡವೋ ಗೊತ್ತಿಲ್ಲ. ಅದನ್ನು ಆರೇಂಜ್ ಎಂದು ಹೇಳುತ್ತಾರೆ. ನಾನು ಬರೀ ಆರೇಂಜ್ ಅಂತ ಅಷ್ಟೇ ಹೇಳುತ್ತೇನೆ" ಎಂದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದಾರೆ.

ಇದೇ ವೇದಿಕೆ ಮೇಲೆ ಉಪ್ಪಿಗೂ ಶಿವಣ್ಣನ ಜೊತೆ ನಟಿಸಿದ ಅನುಭವದ ಬಗ್ಗೆ ಪ್ರಶ್ನೆ ಮಾಡಿದ್ದರು. ತೆಲುಗು ನಾಡಿನಲ್ಲಿ ಶಿವಣ್ಣನನ್ನು ಉಪೇಂದ್ರ ಹಾಡಿ ಹೊಗಳಿದ್ದಾರೆ. ಶಿವಣ್ಣ ಸಿಕ್ಕಾಪಟ್ಟೆ ಫಾಸ್ಟ್. ಅವರು ತುಂಬಾನೇ ಸಿಂಪಲ್. ಯಾವುದೇ ಪಾತ್ರವಿದ್ದರೂ ಹೀಗೆ ಮಾಡಬೇಕಿತ್ತು ಅಂದರೆ, ಅದಕ್ಕೆ ಸೈ ಎನ್ನುತ್ತಾರೆ ಎಂದು ಹೇಳಿದರು. ಆಗ ಶಿವಣ್ಣ 'ಓಂ' ಸಿನಿಮಾದ ಜೈಲಿನ ದೃಶ್ಯವನ್ನು ನೆನಪಿಸಿಕೊಂಡರು. ಅದರಲ್ಲಿ ಶಿವರಾಜ್‌ಕುಮಾರ್ ಅವರನ್ನು ಕೇವಲ ಅಂಡರ್‌ವೇರ್‌ನಲ್ಲಿ ಕೂರಿಸಿರುತ್ತಾರೆ. ದೊಡ್ಮನೆ ಹೀರೋನಾ ಹೀಗೆಲ್ಲ ತೋರಿಸುವುದಕ್ಕೆ ನಿರ್ದೇಶಕರು ಭಯಬೀಳುತ್ತಿದ್ದರು. ಆದರೆ, ಶಿವಣ್ಣ ಮಾತ್ರ ಆರಾಮಾಗಿ ಈ ಸೀನ್‌ನಲ್ಲಿ ನಟಿಸಿದ್ದರು.

More from Filmibeat

English summary
What is the name of the Shivarajkumar starrer biopic that he revealed at the 45-film event in Hyderabad?
Read more about: shivarajkumar biopic sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X