'ಅವತಾರ ಪುರುಷ 2' ನೋಡಲು ಬಂದ ತಾರೆಯರು; 'ಆಪ್ತಮಿತ್ರ , 'ರಂಗಿತರಂಗ' ನೆನಪಿಸಿಕೊಂಡ ಸ್ಟಾರ್‌ಗಳು

ಸಿಂಪಲ್ ಸುನಿ ಹಾಗೂ ಶರಣ್ ಕಾಂಬಿನೇಷನ್ ಸಿನಿಮಾ 'ಅವತಾರ ಪುರುಷ 2' ರಿಲೀಸ್ ಆಗಿದೆ. ಆದರೆ, ಅದಕ್ಕಿಂತಲೂ ಮುನ್ನ ಕನ್ನಡ ಸೆಲೆಬ್ರೆಟಿಗಳಿಗಾಗಿ ಪ್ರಿಮೀಯರ್ ಶೋ ಅನ್ನು ಹಮ್ಮಿಕೊಳ್ಳಲಾಗಿತ್ತು. ಕನ್ನಡ ಚಿತ್ರರಂಗದ ನಟ- ನಟಿಯರು, ನಿರ್ದೇಶಕರು ಈ ಸಿನಿಮಾದ ಪ್ರೀಮಿಯರ್‌ ಶೋಗೆ ಬಂದು ಸಿನಿಮಾ ನೋಡಿ ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ.

'ಅವತಾರ ಪುರುಷ' ಥಿಯೇಟರ್‌ನಲ್ಲಿ ಹೆಚ್ಚು ಸದ್ದು ಮಾಡಲಿಲ್ಲ. ಆದರೆ, ಓಟಿಟಿಗೆ ಬಂದ್ಮೇಲೆ ಸಿನಿಮಾ ನೋಡಿ ಥ್ರಿಲ್ ಆಗಿದ್ದರು. ಅಷ್ಟೇ ಅಲ್ಲದೆ ಕಿರುತೆರೆಯಲ್ಲಿ ಪ್ರಸಾರವಾದಗೂ ಮೆಚ್ಚಿಕೊಂಡಿದ್ದರು. ಆದ್ರೀಗ ಪಾರ್ಟ್ 2 ರಿಲೀಸ್‌ ಆಗಿದೆ. ಸಿನಿಮಾ ನೋಡಿದ ಸೆಲೆಬ್ರೆಟಿಗಳು ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ. ಸುನಿ ನಿರ್ದೇಶನ, ಶರಣ್ ನಟನೆ ಹಾಗೂ ವಿಎಫ್‌ಎಕ್ಸ್ ಅನ್ನು ಮೆಚ್ಚಿಕೊಂಡಿದ್ದಾರೆ. ಸಿನಿಮಾ ನೋಡಿ ಸೆಲೆಬ್ರೆಟಿಗಳು ಏನಂದ್ರು? ಅದರ ಝಲಕ್ ಇಲ್ಲಿದೆ.

What is the opinion of Kannada movie celebrities after watching Avatara Purusha 2

"ಶರಣ್ ಸರ್ ನೋಡಿ ಫ್ಯಾನ್ ಆಗ್ಬಿಟ್ಟೆ"

"ನಾನು ಸುನಿ ಸರ್ ಅವರ ದೊಡ್ಡ ಫ್ಯಾನ್. ಸುನಿ ಸರ್ ಇದೇ ಮೊದಲ ಬಾರಿಗೆ ಈ ರೀತಿ ಜಾನರ್ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡಿದ್ದು. ನನಗೆ ಅವತಾರ ಪುರುಷ್ 1 ಗಿಂತ ಅವತಾರ ಪುರುಷ 2 ತುಂಬಾನೇ ಇಷ್ಟ ಆಯ್ತು. ವಿಲಿಯಂ ಸರ್ ಅವರ ಸಿನಿಮ್ಯಾಟೋಗ್ರಫಿ ಅದ್ಭುತವಾಗಿದೆ. ಶರಣ್ ಸರ್ ನಟನೆ ನೋಡಿ ನಾನು ಫ್ಯಾನ್ ಆಗ್ಬಿಟ್ಟೆ. ಡೈಲಾಗ್ಸ್, ಮ್ಯೂಸಿಕ್, ಹಿನ್ನೆಲೆ ಸಂಗೀತ ತುಂಬಾನೇ ಚೆನ್ನಾಗಿದೆ. ಸಿಜಿ ವರ್ಕ್, ವಿಜ್ಯೂವಲ್ ಅದ್ಭುತವಾಗಿದೆ." ಎಂದು ನಟಿ ಸಾಥ್ವಿಕ ರಾವ್ ಅಭಿಪ್ರಾಯ ಪಟ್ಟಿದ್ದಾರೆ.

"ಬೇರೆ ಲೋಕಕ್ಕೆ ಬಂದಿದ್ದು ಮೈನವಿರೇಳಿಸಿತ್ತು"

"ಶರಣ್ ಸರ್, ಅವರ ಕರಿಯರ್‌ನಿಂದ ಇಲ್ಲಿವರೆಗೂ ಎಲ್ಲಾ ತರಹದ ಪಾತ್ರಗಳನ್ನು ಮಾಡಿಕೊಂಡು ಬಂದಿದ್ದಾರೆ. ಅದರಲ್ಲಿ ಹೆಚ್ಚು ಪಾತ್ರಗಳು ನಿಮ್ಮನ್ನು ನಗಿಸಿರಬಹುದು. ಆದರೆ, ಅವತಾರ ಪುರುಷ 2 ನಲ್ಲಿ ಬೇರೆ ಲೋಕಕ್ಕೆ ಹೋಗಿ ಬರೋದು ಇದೆಯಲ್ಲ ಅದು ಮೈನವಿರೇಳಿಸಿತ್ತು. ಕಲ್ಪನೆ ಮಾಡಿಕೊಳ್ಳಬಹುದು. ಆದರೆ, ಅದನ್ನು ಸ್ಕ್ರೀನ್ ಪ್ಲೇಗೆ ತರೋದು ಮುಖ್ಯ. ಅದರಲ್ಲಿ ಸುನಿಯವರು ಗೆದ್ದಿದ್ದಾರೆ." ಎಂದು ನಿರ್ದೇಶಕ ಪವನ್ ಒಡೆಯರ್ ಹೇಳಿದ್ದಾರೆ.

"ಆಪ್ತಮಿತ್ರ , ರಂಗಿತರಂಗ ನೆನಪಾಯ್ತು"

"ನಾನು ಶರಣ್ ಅವರ ಅಭಿಮಾನಿ ನಾನು. ಸುನಿಯವರ ಅಭಿಮಾನಿ. ಶರಣ್ ಅವರ ಒಂದೊಂದು ಸಿನಿಮಾವನ್ನು ನಾನು ಫಾಲೋ ಮಾಡಿದ್ದೇನೆ. ಮೊದಲಿನಿಂದಲೂ ಪ್ರಯೋಗ ಮಾಡುತ್ತಲೇ ಬಂದಿದ್ದಾರೆ. ಗುರು ಶಿಷ್ಯರು ಇರಬಹುದು. ಈಗಿನ ಅವತಾರ ಪುರುಷ ಇರಬಹುದು ನೆಕ್ಸ್ಟ್‌ ಲೆವೆಲ್‌ಗೆ ಎಕ್ಸ್‌ಪೆರಿಮೆಂಟ್ ಮಾಡಿದ್ದಾರೆ. ನನಗೆ ಈ ಸಿನಿಮಾ ನೋಡುತ್ತಾ, ಆಪ್ತಮಿತ್ರ , ರಂಗಿತರಂಗ ನೆನಪಾಯ್ತು." ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

What is the opinion of Kannada movie celebrities after watching Avatara Purusha 2

"ನನ್ನ ಫೇವರಿಟ್ ನಟರು ಸಿನಿಮಾದಲ್ಲಿದ್ದಾರೆ"

"ಮೊದಲಿನಿಂದಲೂ ಈ ಸಿನಿಮಾ ಇಂಟ್ರೆಸ್ಟಿಂಗ್ ಆಗಿತ್ತು. ಏನಾಗುತ್ತೆ? ಏನಾಗುತ್ತೆ? ಅನ್ನೋ ಪ್ರಶ್ನೆ ಹುಟ್ಟಿಕೊಳ್ಳುತ್ತೆ. ಸಿನಿಮಾದ ಮೊದಲಾರ್ಧದಲ್ಲಿ ಬರುವ ಕಾಮಿಡಿ ಆಗಿರಬಹುದು. ಸೆಕೆಂಡ್ ಹಾಫ್‌ನಲ್ಲಿ ಬರುವ ಎಮೋಷನಲ್ ಸೀನ್ ಆಗಿರಬಹುದು ಎಲ್ಲವೂ ತುಂಬಾನೇ ಚೆನ್ನಾಗಿದೆ. ನಟನೆ ಬಗ್ಗೆ ಏನು ಹೇಳೋದು ಶರಣ್ ಸರ್ ತಿಂದು ಹಾಕಿದ್ದಾರೆ. ನನ್ನ ಫೇವರಿಟ್ ಎಲ್ಲರೂ ಸಿನಿಮಾದಲ್ಲಿದ್ದಾರೆ." ಎಂದು ನಟಿ ಬೃಂದಾ ಆಚಾರ್ಯ ಹೇಳಿದ್ದಾರೆ.

"ಬ್ಲಾಕ್ ಮ್ಯಾಜಿಕ್ ಫಸ್ಟ್ ಟೈಮ್ ನೋಡಿದ್ದು"

"ನಾನು ಬ್ಲ್ಯಾಕ್ ಮ್ಯಾಜಿಕ್ ಸಿನಿಮಾವನ್ನು ಮೊದಲ ಬಾರಿಗೆ ನೋಡುತ್ತಿದ್ದೇನೆ. ಅವತಾರ ಪುರುಷ ಪಾರ್ಟ್ 1 ಅನ್ನು ನಾನು ಥಿಯೇಟರ್‌ನಲ್ಲಿ ನೋಡಿದ್ದೆ. ಅವತಾರ ಪುರುಷ ಪಾರ್ಟ್ 2 ಅನ್ನು ಥಿಯೇಟರ್‌ನಲ್ಲಿ ನೋಡಬೇಕು ಅಂತ ನಾನು ಕೇಳಿಕೊಳ್ಳುತ್ತಿದ್ದೇನೆ. " ಬಿಗ್ ಬಾಸ್ ಶಶಿ ಹೇಳಿದ್ದಾರೆ.

"ಹಾರರ್, ಬ್ಲ್ಯಾಕ್ ಮ್ಯಾಜಿಕ್ ಇಷ್ಟ"

"ಈಗ ತಾನೇ ಅವತಾರ ಪುರುಷ ಪಾರ್ಟ್ 2 ನೋಡಿಕೊಂಡು ಬಂದೆ. ಹಾರರ್, ಬ್ಲ್ಯಾಕ್ ಮ್ಯಾಜಿಕ್ ಅಂತ ಸಿನಿಮಾಗಳು ನನಗೆ ತುಂಬಾನೇ ಇಷ್ಟ. ಸುನಿ ಸರ್ ನಿರ್ದೇಶನ ತುಂಬಾನೇ ಇಷ್ಟ ಆಯ್ತು. ಪ್ರಿ ಕ್ಲೈಮ್ಯಾಕ್ಸ್‌ನಲ್ಲಿ ಶರಣ್ ಅವರ ಡೈಲಾಗ್ ಇದೆ ಅದು ತುಂಬಾನೇ ಇಷ್ಟ ಆಯ್ತು. ಅದನ್ನು ನೀವು ಥಿಯೇಟರ್‌ನಲ್ಲೇ ನೋಡಬೇಕು." ಎಂದು ಐಶ್ವರ್ಯಾ ಸಿಂಧೋಗಿ ಹೇಳಿದ್ದಾರೆ.

"ಥಿಯೇಟರ್‌ನಲ್ಲಿ ಒಳ್ಳೆ ಎಕ್ಸ್‌ಪೀರಿಯನ್ಸ್"

"ತುಂಬಾ ವಿಷಯವನ್ನು ಆಳವಾಗಿ ಹೋಗಿ ಕಲಿತುಕೊಂಡು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇಂತಹ ಕಲೆ ಇರುವ ಕಲೆಗಾರರನ್ನು ನಾವು ರೆಸ್ಪೆಕ್ಟ್ ಮಾಡಬೇಕು. ಥಿಯೇಟರ್‌ನಲ್ಲಿ ಒಳ್ಳೆಯ ಎಕ್ಸ್‌ಪಿರಿಯನ್ಸ್ ಸಿಗುತ್ತೆ. ವಿಎಫ್‌ಎಕ್ಸ್ ತುಂಬಾನೇ ಚೆನ್ನಾಗಿ ಬಂದಿದೆ. ಹೊಸ ಜಗತ್ತಿಗೆ ಕರೆದುಕೊಂಡು ಹೋಗಿದ್ದಾರೆ. ಅದನ್ನು ನೋಡುವುದಕ್ಕೆ ಬಹಳ ಕುತೂಹಲಕಾರಿಯಾಗಿತ್ತು." ನಟ ರಿಷಿ ಹೇಳಿದ್ದಾರೆ.

More from Filmibeat

English summary
Kannada Stars reaction to Sharan Ashika Ranganath starrer Avatara Purusha 2 movie:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X