ಕೆಣಕಿದರೆ ಕುರಿಯೂ ಮಾರಿಯಾಗಬಲ್ಲದು.. ಮಾರಿ ಮಾರಿ.. ಮಾರಿಗೆ ದಾರಿ:'ಟೋಬಿ'ಯ ಸಿಟ್ಟೇನು?

'ಒಂದು ಮೊಟ್ಟೆಯ ಕಥೆ', 'ಗರುಡ ಗಮನ ವೃಷಭ ವಾಹನ' ಈ ಎರಡು ಸಿನಿಮಾಗಳ ಹೆಸರು ಬರುತ್ತಿದ್ದಂತೆ ರಾಜ್‌ ಬಿ ಶೆಟ್ಟಿ ನೆನಪಾಗುತ್ತಾರೆ. ಸದ್ಯ ಸ್ಯಾಂಡಲ್‌ವುಡ್‌ನ ಹ್ಯಾಪನಿಂಗ್ ಸ್ಟಾರ್ ಇವರೇನೆ.

ಸೂಪರ್‌ಸ್ಟಾರ್‌ಗಳೆಲ್ಲಾ ವರ್ಷಕ್ಕೆ ಒಂದೊಂದೇ ಸಿನಿಮಾ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಕೆಲವರು ಮೂರು ವರ್ಷಕ್ಕೊಂದು ಸಿನಿಮಾ ಮಾಡ್ತಿದ್ದಾರೆ. ಹೀಗಾಗಿ ಕನ್ನಡ ಚಿತ್ರರಂಗ ಆತಂಕದಲ್ಲಿತ್ತು. ಆ ವೇಳೆನೇ ನಾನಿದ್ದೀನಿ ಅಂತಿರೋರೆ ರಾಜ್‌ ಬಿ ಶೆಟ್ಟಿ. 'ಗರುಡ ಗಮನ ವೃಷಭ ವಾಹನ' ರಿಲೀಸ್ ಬಳಿಕ ಮೂರು ಸಿನಿಮಾ ಮಾಡಿ ಮುಗಿಸಿದ್ದಾರೆ.

What is Toby: Raj B Shetty first big budget movie releasing on august 25th

ಈಗ ಮೂರನೇ ಸಿನಿಮಾದ ಟೈಟಲ್ ಹಾಗೂ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದ್ದಾರೆ. ಅದುವೇ 'ಟೋಬಿ'. ಸಿನಿಮಾ ಟೈಟಲ್ ಅನೌನ್ಸ್ ಆಗುತ್ತಿದ್ದಂತೆ ರಾಜ್ ಬಿ ಶೆಟ್ಟಿಯ 'ಟೋಬಿ' ಸದ್ದು ಮಾಡೋಕೆ ಶುರು ಮಾಡಿದೆ. ಅಷ್ಟಕ್ಕೂ 'ಟೋಬಿ' ಅಂದ್ರೇನು? ಮತ್ತೆ ಸೇಡು ತೀರಿಸಿಕೊಳ್ತಾರಾ? ಇಂತಹದ್ದೇ ಒಂದು ಪ್ರಶ್ನೆಗಳಿಗಿಲ್ಲಿ ಉತ್ತರವಿದೆ.

ಮೊದಲ ಬಿಗ್ ಬಜೆಟ್ ಸಿನಿಮಾ

'ಟೋಬಿ' ರಾಜ್‌ ಬಿ ಶೆಟ್ಟಿ ವೃತ್ತಿ ಬದುಕಿನ ಮೊದಲ ಬಿಗ್ ಬಜೆಟ್ ಸಿನಿಮಾ. 'ಒಂದು ಮೊಟ್ಟೆಯ ಕಥೆ', ಗರುಡ ಗಮನ ವೃಷ್ಟಭ ವಾಹನ ಸಿನಿಮಾಗಿಂತಲೂ ಈ ಸಿನಿಮಾದ ಬಜೆಟ್ ದೊಡ್ಡದಿದೆ. ಪಕ್ಕಾ ಕಮರ್ಷಿಯಲ್ ಕಮ್ ಕಂಟೆಂಟ್ ಸಿನಿಮಾವಿದು ಅನ್ನೋದನ್ನು ಈಗಾಗಲೇ ರಾಜ್ ಬಿ ಶೆಟ್ಟಿ ಖಚಿತ ಪಡಿಸಿದ್ದಾರೆ.

ಸ್ಯಾಂಡಲ್‌ವುಡ್ ಮೂಲಗಳ ಪ್ರಕಾರ, ರಾಜ್‌ ಬಿ ಶೆಟ್ಟಿಯ 'ಟೋಬಿ' ಸಿನಿಮಾ ಬಜೆಟ್ ಬರೋಬ್ಬರಿ 15 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇಷ್ಟು ದೊಡ್ಡ ಬಜೆಟ್ ಸಿನಿಮಾನಲ್ಲಿ ರಾಜ್ ಬಿ ಶೆಟ್ಟಿ ಸಿನಿಮಾ ನಿರ್ಮಾಣ ಆಗಿಯೇ ಇಲ್ಲ. ಹೀಗಾಗಿ ಸ್ಯಾಂಡಲ್‌ವುಡ್ ಮಂದಿ ಈ ಸಿನಿಮಾ ಮೇಲೆ ಒಂದು ಕಣ್ಣಿಟ್ಟಿರೋದಂತೂ ಸತ್ಯ.

ಈ ಸಿನಿಮಾಗೆ 'ಟೋಬಿ' ಟೈಟಲ್ ಯಾಕೆ?

ರಾಜ್‌ ಬಿ ಶೆಟ್ಟಿ ಕರಿಯರ್‌ನಲ್ಲಿ ಪಕ್ಕಾ ಕಮರ್ಷಿಯಲ್ ಸಿನಿಮಾದಲ್ಲಿ ನಟಿಸಿಲ್ಲ. ಇದೂವರೆಗೂ ನಟಿಸಿದ ಸಿನಿಮಾಗಳು ಕಂಟೆಂಟ್ ಅನ್ನೇ ಆಧರಿಸಿದ ಸಿನಿಮಾಗಳೇ. ಹೀಗಾಗಿ ಪಕ್ಕಾ ಕಮರ್ಷಿಯಲ್ ಸಿನಿಮಾ ಮಾಡಬೇಕು ಅಂತ ರಾಜ್ ಬಿ ಶೆಟ್ಟಿ ನಿರ್ಧರಿಸಿದ್ದರು. ಹೀಗಾಗಿ ಟೈಟಲ್ ಮೂಲಕನೇ ಸಿನಿಮಾದತ್ತ ಪ್ರೇಕ್ಷಕರನ್ನು ಸೆಳೆಯುವುದಕ್ಕೆ ಆರಂಭಿಸಿದ್ದಾರೆ.

ಹಾಗಿದ್ರೆ, 'ಟೋಬಿ' ಅಂದ್ರೇನು? ಈ ಪ್ರಶ್ನೆ ರಾಜ್‌ ಬಿ ಶೆಟ್ಟಿ ಅಧಿಕೃತವಾಗಿ ಉತ್ತರ ಕೊಟ್ಟಿಲ್ಲ. ಆದರೆ, ಸ್ಯಾಂಡಲ್‌ವುಡ್‌ನಲ್ಲಿ 'ಟೋಬಿ' ಒಂದಿಷ್ಟು ಸುದ್ದಿಗಳು ಓಡಾಡುತ್ತಿದೆ. ಟೋಬಿ ಅನ್ನೋದು ಈ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿಯ ಹೆಸರು ಎನ್ನಲಾಗುತ್ತಿದೆ.


ರಾಜ್ ಬಿ ಶೆಟ್ಟಿ ಸಿಟ್ಟೇ ಸಿನಿಮಾ

'ಟೋಬಿ' ಸಿನಿಮಾದ ಟೈಟಲ್ ಅನೌನ್ಸ್ ಆಗುವುದಕ್ಕೂ ಮುನ್ನ ರಾಜ್‌ ಬಿ ಶೆಟ್ಟಿ ಇನ್‌ಸ್ಟಾಗ್ರಾಂ ಲೈವ್ ಬಂದಿದ್ದರು. ಈ ವೇಳೆ ರಾಜ್ ಬಿ ಶೆಟ್ಟಿ ಒಬ್ಬ ಕಲಾವಿದನಿಗೆ ಆದ ಅನುಭವಗಳನ್ನೇ ಸಿನಿಮಾ ಮೂಲಕ ವ್ಯಕ್ತಪಡಿಸಬೇಕು ಅಂತ ಹೇಳಿದ್ದಾರೆ. ಹಾಗೇ ತಮ್ಮ ಸಿಟ್ಟಿಗೆ ಕ್ರಿಯೇಟಿವ್ ಟಚ್ ಕೊಟ್ಟು ಸಿನಿಮಾ ಮಾಡಿದ್ದಾರೆ.

ಸದಾ ಪ್ರಯೋಗಗಳನ್ನೇ ಮಾಡುತ್ತಿರುವ ರಾಜ್ ಬಿ ಶೆಟ್ಟಿ 'ಟೋಬಿ' ಮೂಲಕ ಮತ್ತೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ. ಕಂಟೆಂಟ್ ಜೊತೆಗೆ ಮಾಸ್ ಎಲಿಮೆಂಸ್ಟ್ ಇಟ್ಟು ಸಿನಿಮಾ ಮಾಡಿದ್ದಾರೆ. ಹೀಗಾಗಿ 'ಟೋಬಿ' ಬಗ್ಗೆ ತಿಳಿದುಕೊಳ್ಳುವುದಕ್ಕೆ ಆಗಸ್ಟ್ 25ರ ವರೆಗೆ ಕಾಯಲೇಬೇಕು.

More from Filmibeat

English summary
What is Toby? Raj B Shetty first big budget movie releasing on august 25th, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X