"ನಟಿಯರು ಇಷ್ಟವಿಲ್ಲ ಅಂತ ನೇರವಾಗಿ ಹೇಳಬೇಕು"; ಸ್ಯಾಂಡಲ್‌ವುಡ್‌ನಲ್ಲಿ ಸಮಿತಿ ರಚನೆ ಬಗ್ಗೆ ಏನಂತಾರೆ ಉಪ್ಪಿ?
ಹೇಮಾ ಸಮಿತಿ ವರದಿ ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಮಾಲಿವುಡ್‌ನ ದಿಗ್ಗಜರು ಈ ವರದಿಯಿಂದ ತಲೆತಗ್ಗಿಸಿ ನಿಂತಿದ್ದಾರೆ. ನಟಿಯರು ಮುಂದೆ ಬಂದು ತಮಗಾದ ಶೋಷಣೆಯನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಹೇಮಾ ಸಮಿತಿ ವರದಿ ಬಗ್ಗೆ ಕೆಲವು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಮತ್ತೆ ಕೆಲವರು ದುರುಪಯೋಗದ ಮಾತುಗಳನ್ನು ಆಡುತ್ತಿದ್ದಾರೆ. ಇದೇ ವೇಳೆ ಉಪೇಂದ್ರ ಕೂಡ ತಮ್ಮ ಪ್ರತಿಕ್ರಿಯೆಯನ್ನು ಮಾದ್ಯಮಗಳಿಗೆ ನೀಡಿದ್ದಾರೆ.
ಮಲಯಾಳಂನಲ್ಲಿ ಹೇಮಾ ಕಮಿಟಿ ವರದಿ ಸದ್ದು ಮಾಡುತ್ತಿದ್ದಂತೆ ತೆಲುಗು, ತಮಿಳು ಸೇರಿದಂತೆ ಕನ್ನಡದಲ್ಲೂ ಇಂತಹದ್ದೇ ಕಮಿಟಿ ರಚನೆ ಆಗಬೇಕು ಎಂಬ ಕೂಗು ಕೇಳಿ ಬರುತ್ತಿದೆ. ತೆಲುಗು ಚಿತ್ರರಂಗದಲ್ಲಿ ನಟಿಯರು ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಓಪನ್ ಆಗಿ ಮಾತಾಡುವುದಕ್ಕೆ ಶುರು ಮಾಡಿದ್ದಾರೆ. ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ವಿರುದ್ಧ ನಟಿಯೊಬ್ಬರು ಮಾಡಿದ ಆರೋಪ ಟಾಲಿವುಡ್‌ನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ.

ನಿನ್ನೆ ಸ್ಯಾಂಡಲ್‌ವುಡ್‌ನಲ್ಲೂ ನಟಿಯರ ಮೇಲಿನ ದೌರ್ಜನ್ಯವನ್ನು ತಪ್ಪಿಸಲು ಕಮಿಟಿ ರಚನೆ ಆಗಲೇ ಬೇಕು ಎಂದು ಒತ್ತಾಯ ಹಾಕಿದ್ದಾರೆ. 'ಫೈರ್'ನ ಸದಸ್ಯರೊಂದಿಗೆ ಈಗಾಗಲೇ ಫಿಲ್ಮ್ ಚೇಂಬರ್‌ನಲ್ಲಿ ನಡೆದ ಚರ್ಚೆ ಕಿತ್ತಾಟದಲ್ಲಿ ಮುಕ್ತಾಯಗೊಂಡಿದೆ. ಈ ಬೆನ್ನಲ್ಲೇ ರಿಯಲ್ ಸ್ಟಾರ್ ಉಪೇಂದ್ರ ಈ ಮೂವ್ಮೆಂಟ್ ಬಗ್ಗೆ ಶಾಕಿಂಗ್ ಹೇಳಿಕೊಟ್ಟಿದ್ದಾರೆ. ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸ್ಯಾಂಡಲ್‌ವುಡ್‌ನಲ್ಲಿ ಕೆಲವು ಮಂದಿಗೆ ಒಂದು ಕಮಿಟಿ ರಚನೆ ಆಗಬೇಕು. ಆ ಮೂಲಕ ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರ ರಕ್ಷಣೆ ಆಗಬೇಕು ಅಂತ ಪಟ್ಟು ಹಿಡಿದಿದ್ದಾರೆ. ಇದರೊಂದಿಗೆ ಕನ್ನಡ ಚಿತ್ರರಂಗದಲ್ಲಾದ ಲೈಂಗಿಕ ದೌರ್ಜನ್ಯದ ಬಗ್ಗೆನೂ ಸಮಿತಿ ಬೆಳಕು ಚೆಲ್ಲಬೇಕು ಅಂತ ಪಟ್ಟ ಹಿಡಿದ್ದಾರೆ. ಈ ಬಗ್ಗೆ ಉಪ್ಪಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಲೈಂಗಿಕ ದೌರ್ಜನ್ಯ ಆಗಿದೆ ಅನ್ನೋ ತೀರ ವೈಯಕ್ತಿಕ. ಅದನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವ ವಿಚಾರವಲ್ಲ. ಇಬ್ಬರ ನಡುವೆ ಏನು ನಡೆದಿದೆ ಅನ್ನೋದು ಅವರಿಗಷ್ಟೇ ಗೊತ್ತು. ಅದನ್ನು ಈಗ ಸಮಿತಿ ಮಾಡಿ ಅದರಲ್ಲಿ ಹೇಳಿಕೊಳ್ಳುವುದು ಆಸಕ್ತಿ ತೋರುತ್ತಿದ್ದಾರೆಂದು ಹೇಳಿದ್ದಾರೆ.

ಯಾರಿಗೆ ತೊಂದರೆ ಆಗಿದೆಯೋ ಅವರು ನೇರವಾಗಿ ಹೇಳಿಬಿಡಬೇಕು. ಆ ಕ್ಷಣದಲ್ಲಿಯೇ ತಿರುಗಿ ಹೇಳುವುದರಿಂದ ಆ ಕ್ಷಣದಲ್ಲಿಯೇ ಪರಿಹಾರ ಸಿಗುತ್ತೆ. ಹೆಚ್ಚು ದಿನಗಳು ಕಳೆದರೆ ಅದಕ್ಕೆ ಪರಿಹಾರ ಸಿಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಆರೋಪ ಮಾಡುತ್ತಿರುವವರು ಹೇಳುತ್ತಿರುವುದು ನಿಜ ಹೇಳುತ್ತಿದ್ದಾರಾ? ಇಲ್ಲ ಸುಳ್ಳು ಹೇಳುತ್ತಿದ್ದಾರಾ? ಅನ್ನುವ ಅನುಮಾನ ಮೂಡುವುದಕ್ಕೆ ಶುರುವಾಗಿತ್ತೆ ಎಂದಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಫಿಲ್ಮ್ ಚೇಂಬರ್ ಇದೆ. ಕಲಾವಿದರ ಸಂಘವಿದೆ. ಅದನ್ನು ಬಿಟ್ಟು ಕಮಿಟಿ ಯಾಕೆ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಮುಂದೆ ಯಾವ ರೀತಿ ನಿರ್ಧಾರ ಬೇಕಾದರೂ ತೆಗೆದುಕೊಳ್ಳಬಹುದು. ಅದು ನನಗೆ ಗೊತ್ತಿಲ್ಲ. ತೀರಾ ಅವಶ್ಯಕತೆ ಇದೆ ಅಂತಾದರೆ, ಸಮಿತಿ ರಚನೆ ಆಗಲಿ ಅಂತ ಉಪ್ಪಿ ಅಭಿಪ್ರಾಯ ಪಟ್ಟಿದ್ದಾರೆ. ಹಾಗೇ ಹೆಣ್ಮಕ್ಕಳು ಕಾಂಪ್ರಮೈಸ್ ಆದರೆ ತಪ್ಪು ಯಾರದ್ದು ಅನ್ನುವ ಪ್ರಶ್ನೆ ಮೂಡುತ್ತೆ ಎಂದು ಉಪ್ಪಿ ಹೇಳಿದ್ದಾಗಿ ನ್ಯೂಸ್ 18 ಕನ್ನಡದಲ್ಲಿ ವರದಿಯಾಗಿದೆ.
ಹೆಣ್ಣು ಮಕ್ಕಳಿಗೆ ಉಪ್ಪಿ ಕೆಲವು ಸಲಹೆಗಳನ್ನು ನೀಡಿದ್ದಾರೆ. ನಟಿಯರು ಇಷ್ಟವಿಲ್ಲ ಅನ್ನೋದನ್ನು ನೇರವಾಗಿ ಹೇಳಬೇಕು. ಮತ್ತೆ ಕಾಲ್ ಮಾಡಬೇಡಿ ಅಂತ ಹೇಳಿದ ಮೇಲೂ ಸುಮ್ಮನೆ ಆಗದಿದ್ದರೆ ಹೊರಗೆ ಬಂದು ಹೇಳಿಕೊಳ್ಳಬೇಕು. ನಟಿಯರು ಮುಂದೆ ಬಂದು ಹೇಳಿಕೊಂಡಾಗಲೇ ಮಾದರಿ ಆಗುತ್ತೆ. ಕಿರುಕುಳ ನೀಡುತ್ತಿರುವವರ ವಿರುದ್ಧ ಸಿಡಿದೆದ್ದು ಹೊರಗೆ ಬರಬೇಕು. ಹೆಣ್ಣು ಮಕ್ಕಳು ಕಾಂಪ್ರಮೈಸ್ ಆಗಿಬಿಟ್ಟರೆ ತಪ್ಪು ಯಾರದ್ದು ಅನ್ನೋ ಪ್ರಶ್ನೆ ಹುಟ್ಟಿಕೊಳ್ಳುತ್ತೆ. ಅಂತಹ ಸಂದರ್ಭ ಬರಬಾರದೆಂದು ರಿಯಲ್ ಸ್ಟಾರ್ ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications











