"ಯಶ್ ಹತ್ತಿರ ಮಾತಾಡಿದೆ, ಎಷ್ಟು ನೊಂದು ಕೊಂಡಿದ್ದಾರೆ"; ಫ್ಯಾನ್ಸ್ ಸಾವಿನ ಬಗ್ಗೆ ರಾಘಣ್ಣ ಹೇಳಿದ್ದೇನು?
ಯಶ್ ಹುಟ್ಟುಹಬ್ಬದಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸೂರಣಗಿ ಗ್ರಾಮದ ಮೂವರು ಯುವಕ ಮೃತ ಪಟ್ಟಿದ್ದರು. ಬ್ಯಾನರ್ ನಿಲ್ಲಿಸುವ ವೇಳೆ ವಿದ್ಯುತ್ ಸ್ಪರ್ಶಿಸಿ ಮೂವರು ಸಾವನ್ನಪ್ಪಿದ್ದರು. ಈ ಘಟನೆ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.
ಸೂರಣಗಿ ಗ್ರಾಮದ ಮುರಳಿ ನಡವಿನಮನಿ (20), ಹನಮಂತ ಹರಿಜನ್ (21), ಹಾಗೂ ನವೀನ್ ಗಾಜಿ(19) ಮೃತ ಅಭಿಮಾನಿಗಳು. ಇನ್ನು ಮೂವರು ಯುವಕರು ಗಂಭೀರವಾಗಿ ಗಾಯಗೊಂಡಿದ್ದು ಲಕ್ಷ್ಮೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಿಷಯ ತಿಳಿದು ಸ್ವತ: ಯಶ್ ಮೃತ ಅಭಿಮಾನಿಗಳ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದರು.

ಇಂದು (ಜನವರಿ 17) ನಟ ಯಶ್ ಮೂವರು ಅಭಿಮಾನಿಗಳ ಕುಟುಂಬಕ್ಕೆ ಹಣ ಸಹಾಯ ಮಾಡಿ ಮಾಡಿದ್ದಾರೆ. ನಟ ಯಶ್ ಆಪ್ತರು ಅಭಿಮಾನಿಗಳಾದ ಮುರಳಿ, ನವೀನ್ ಮತ್ತು ಹನುಮಂತ ಅವರ ಕುಟುಂಬಕ್ಕೆ 5 ಲಕ್ಷ ರೂಪಾಯಿಯ ಚೆಕ್ ಕೊಟ್ಟು ಸಾಂತ್ವಾನ ಹೇಳಿ ಬಂದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಅಭಿಮಾನದ ಬಗ್ಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಪ್ರಕ್ರಿಯೆ ನೀಡಿದ್ದಾರೆ. ತಮ್ಮ ತಂದೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಯಶ್ ನೊಂದು ಕೊಂಡಿದ್ದರು ಎಂದು ಹೇಳಿದ್ದಾರೆ.
ಅಣ್ಣಾವ್ರ ಅಭಿಮಾನಿಗಳು ಕೂಡ ಹೀಗೆ ಹುಚ್ಚು ಅಭಿಮಾನವನ್ನು ಮೆರೆಯುತ್ತಿದ್ದರು. 80 ರಿಂದ 100 ಅಡಿ ಕಟೌಟ್ ಅನ್ನು ಹಾಕುತ್ತಿದ್ದರು. ಆ ವೇಳೆನೂ ನೂಕು ನುಗ್ಗಲಾಗಿ ಜನರಿಗೆ ತೊಂದರೆಯಾಗಿತ್ತು. ಆಗ ಡಾ.ರಾಜ್‌ಕುಮಾರ್ ಅಭಿಮಾನಿಗಳನ್ನು ಕರೆದು ಇದೆಲ್ಲ ಬೇಡ ಎಂದು ಮನವಿ ಮಾಡಿಕೊಂಡಿದ್ದನ್ನು ನೆನಪಿಸಿಕೊಂಡಿದ್ದಾರೆ.

"ನಮ್ಮ ತಂದೆಯಿಂದಲೇ 80 ಅಡಿ 90 ಅಡಿ ಕಟೌಟ್ ಶುರುವಾಗಿತ್ತು. ಒಂದು ಸಿನಿಮಾಗೆ 100 ಅಡಿ ಕಟೌಟ್ ಹಾಕಿಬಿಟ್ರು. ಆಗ ತುಂಬಾ ಜನ ಆಗಿ ನೂಕುನುಗ್ಗಲಾಗಿಡ್ತು. ಕೆಲವರಿಗೆ ತುಂಬಾನೇ ತೊಂದರೆ ಆಗಿಬಿಡ್ತು. ಆಗ ನಮ್ಮ ತಂದೆಗೆ ಈ ವಿಷಯ ಮುಟ್ಟಿತು. ಸಾರಾ ಗೋವಿಂದು ಎಲ್ಲರನ್ನೂ ಕರೆಸಿದ್ರು. ನೋಡಪ್ಪ ಸಿನಿಮಾ ನೋಡಿ ಸಂತೋಷ ಪಡುವುದಕ್ಕೆ ನಾವು ಮಾಡುವುದು. ಜನರು ಪ್ರಾಣ ಕಳೆದುಕೊಂಡ್ರೆ ನನಗೆ ಏನು ಸಿಕ್ತು. ರಾಜ್‌ಕುಮಾರ್ ಕಟೌಟ್ ನೋಡುವುದಕ್ಕೆ ಹೋದೆ. ನೂಕುನುಗ್ಗಲಾಗಿ ತೀರಿ ಹೋದ್ರು ಅಂದ್ರೆ. ಹೀಗೆ ಮಾಡಬೇಡಿ. ಅವರು ಬದುಕಿದ್ರೆ ನಾನು ಬದುಕಿರುತ್ತೇನೆ ಅಂತ ಹೇಳಿದ್ರು. ಇಲ್ಲ ನೀವು ಹೀಗೆ ಕಟ್ಟೋ ಹಾಕಿದ್ದರೆ, ನಾನು ಥಿಯೇಟರ್‌ಗೆ ಬರೋದಿಲ್ಲ ಅಂತ ಹೇಳಿಬಿಟ್ರು." ಎಂದು ರಾಘಣ್ಣ ತಂದೆ ಮಾತನ್ನು ನೆನಪಿಸಿಕೊಂಡಿದ್ದಾರೆ.
ಇನ್ನು ಮೂವರು ಅಭಿಮಾನಿಗಳು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ದಿನ ಯಶ್ ಅವರ ಬಳಿ ರಾಘಣ್ಣ ಮಾತಾಡಿದ್ದರು. ಆ ವೇಳೆ ಯಶ್ ನೊಂದಿದ್ದರು ಎಂದು ಹೇಳಿದ್ದಾರೆ. "ಮೊನ್ನೆ ನಾನು ಯಶ್ ಹತ್ತಿರ ಮಾತಾಡಿದೆ. ಆಗ ಅವರು ಕಾರಲ್ಲಿ ಗದಗ್‌ಗೆ ಹೋಗುತ್ತಿದ್ದರು. ಅಲ್ಲಿಗೆ ಹೋಗುತ್ತಿದ್ದೇನೆ ರಾಘಣ್ಣ ಅಂದರು. ಒಂದೊಂದು ಸಾರಿ ಅವರ ಅಭಿಮಾನ ಹುಚ್ಚು ಅಂತ ಅನಿಸಿಬಿಡುತ್ತೆ. ಇದಕ್ಕಿಂತ ದೊಡ್ಡದು ಏನೂ ಇಲ್ಲ ನನಗೆ ಅಂತ ಅನಿಸುತ್ತೆ. ಆಕ್ಟರ್‌ಗಳನ್ನು ದೇವರು ತರ ನೋಡುತ್ತಾರೆ." ಎಂದು ಯೂಟ್ಯೂಬ್ ಚಾನೆಲ್‌ಗೆ ರಾಘಣ್ಣ ಹೇಳಿದ್ದಾರೆ.
ಹಾಗೇ, "ಈಗ ಯಶ್ ಎಷ್ಟು ನೊಂದು ಕೊಂಡಿರುತ್ತಾರೆ. ನಂದು ಕಟೌಟ್ ಕಟ್ಟುವುದಕ್ಕೆ ಹೋಗಿ ಹೀಗೆ ಆಗ್ಬಿಡ್ತಲ್ಲ ಅಂತ. ನಮ್ಮ ತಂದೆ ಕೂಡ ಬಹಳ ನೊಂದು ಕೊಂಡಿದ್ದರು. ಅದಾದ್ಮೇಲೆ ಸ್ವಲ್ಪ ಕಮ್ಮಿ ಮಾಡಿದ್ರು." ಎಂದು ರಾಘಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications











