AI ಬಳಸಿ ಸೃಷ್ಟಿಸಿದ ದೃಶ್ಯದಲ್ಲಿ ವಿಷ್ಣು-ಅಂಬಿ 'ಜೇಮ್ಸ್ ಬಾಂಡ್'; ಹೇಗಿದೆ 'ಏಜೆಂಟ್ ಜಯಸಿಂಹ'?

ಒಂದು ಕಾಲದಲ್ಲಿ ವಿಷ್ಣುವರ್ಧನ್ ಹಾಗೂ ಅಂಬರೀಶ್ ಸಿನಿಮಾಗಳು ಮಾಸ್ ಪ್ರಿಯರನ್ನು ಹೆಚ್ಚೆಬ್ಬಿಸುತ್ತಿದ್ದರು. ಇವರಿಬ್ಬರೂ ತಮ್ಮದೇ ಮ್ಯಾನರಿಸಂನಲ್ಲಿ ಆಕ್ಷನ್ ಸಿನಿಮಾಗಳನ್ನು ಮಾಡಿದವರು. ವಿಷ್ಣುದಾದ ಬೇಕಾದಷ್ಟು ಸಾಹಸಮಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂಬರೀಶ್ ರೆಬೆಲ್ ಅವತಾರದಲ್ಲಿ ಕಾಣಿಸಿಕೊಂಡ ಚಿತ್ರಗಳು ಕೂಡ ಕಮ್ಮಿಯಿಲ್ಲ.

ಇನ್ನು ತೆರೆಯ ಹಿಂದೆ ಅಂಬರೀಶ್ ಹಾಗೂ ವಿಷ್ಣುವರ್ಧನ್ ಕುಚಿಕು ಗೆಳೆಯರು ಅನ್ನೋದು ಗೊತ್ತೇ ಇದೆ. ಹೀಗಿದ್ದರೂ, ಈ ಜೋಡಿ ಒಟ್ಟಿಗೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ತೀರಾ ಕಡಿಮೆ. ಇಬ್ಬರೂ ಇದ್ದಾಗ ಒಟ್ಟಿಗೆ ಇನ್ನೊಂದು ಸಿನಿಮಾಗಳನ್ನು ಮಾಡಬಾರದೇ ಅಂತ ಇಬ್ಬರ ಅಭಿಮಾನಿಗಳು ಕೂಡ ಅದೆಷ್ಟೋ ಬಾರಿ ಅಂದುಕೊಂಡಿದ್ದೂ ಇದೆ.

What would it be like if Vishnuvardhan and Ambareesh made a movie using AI Video is Trending

ಈಗ ಇಬ್ಬರನ್ನೂ ಕಳೆದುಕೊಂಡಿರೋ ಅಭಿಮಾನಿಗಳಿಗೆ ಚಿಕ್ಕದೊಂದು ಆಸೆ ಮೂಡಿದೆ. ಅದಕ್ಕೆ ಕಾರಣ AI ತಂತ್ರಜ್ಞಾನ ಬಳಿ ಸೃಷ್ಟಿಸಿರುವ ಒಂದು ವಿಡಿಯೋ. ಸೋಶಿಯಲ್ ಮೀಡಿಯಾದಲ್ಲಿ ವಿಷ್ಣುವರ್ಧನ್ ಹಾಗೂ ಅಂಬರೀಶ್ ಇಬ್ಬರೂ ಎಐ ತಂತ್ರಜ್ಞಾನ ಬಳಸಿ ಸಿನಿಮಾ ಮಾದರಿಯಲ್ಲೇ ವಿಡಿಯೋ ಒಂದನ್ನು ಸೃಷ್ಟಿಸಲಾಗಿದೆ. ಈಗ ಇವರಿಬ್ಬರೂ ಯೌವನಾವಸ್ಥೆಯಲ್ಲಿ ಇದ್ದಿದ್ದರೆ ಆ ಆಕ್ಷನ್ ಸಿನಿಮಾ ಹೇಗಿರುತ್ತಿತ್ತು? ಸದ್ಯ ಈ ವಿಡಿಯೋಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಿನಿಮಾ ಮಂದಿ ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಸಿನಿಮಾ ಮಾಡಿದರೆ ಹೇಗಿರುತ್ತೆ? ಈ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಗುವುದು ಅನುಮಾನ. ಹಾಲಿವುಡ್ ಅಂತ ಶ್ರೀಮಂತ ಚಿತ್ರರಂಗವೇ ಸಿನಿಮಾದಲ್ಲಿ ಎಐ ತಂತ್ರಜ್ಞಾನವನ್ನು ಬಳಸುವುದನ್ನು ವಿರೋಧಿಸುತ್ತಿದ್ದಾರೆ. ಇನ್ನೂ ಲೋಕಲ್ ಭಾಷೆಯ ಚಿತ್ರತಂಡ ಇಂತಹ ಪ್ರಯತ್ನಕ್ಕೆ ಅದ್ಯಾವಾಗ ಮುಂದಾಗುತ್ತೋ? ಈಗಲೇ ಊಹಿಸಿಕೊಳ್ಳುವುದು ಕಷ್ಟ.

ಹಾಗೂ ಕನ್ನಡದಲ್ಲಿ 'ಘೋಸ್ಟ್' ನಿರ್ದೇಶಕ ಶ್ರೀನಿ ಎಐ ಬಳಸಿಕೊಂಡು ನವತರುಣನಾಗಿ ಅಣ್ಣಾವ್ರನ್ನು ಸೃಷ್ಟಿಸಿದ್ದರು. 'ಘೋಸ್ಟ್' ಸಿನಿಮಾ ಬಿಡುಗಡೆ ವೇಳೆ ಅಣ್ಣಾವ್ರ ತುಣುಕು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅಣ್ಣಾವರ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದರು. ಈಗ ಅಂತಹ ಇನ್ನೊಂದು ಪ್ರಯತ್ನ ಆಗಿದೆ. ವಿಷ್ಣುದಾದ ಹಾಗೂ ಅಂಬಿ ಇಬ್ಬರೂ ಯಂಗ್ ಲುಕ್‌ನಲ್ಲಿ ಸಿಕ್ಕಾಪಟ್ಟೆ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಆರಂಭದಲ್ಲಿ ಯಾವುದೋ ಒಂದು ಮಿಷನ್ ಮಿಗಿಸಿದ ಹಾಗೆ ಕಾಣಿಸುತ್ತಿದೆ. ಆಗಲೇ ಒಂದು ಅನಾಮಧೇಯ ಕರೆ ಬರುತ್ತೆ. ಗೆಳೆಯ ಎಂದು ಧ್ವನಿ ಕೇಳಿಸುತ್ತೆ. ಯಂಗ್ ಲುಕ್‌ನಲ್ಲಿ ಅಂಬರೀಶ್ ಆ ಕರೆಯನ್ನು ರಿಸೀವ್ ಮಾಡುತ್ತಾರೆ. ಬಳಿಕ ಫೈಟರ್ ಜೆಟ್‌ನಲ್ಲಿ ವಿಷ್ಣುವರ್ಧನ್ ಎಂಟ್ರಿ. ವಿಷ್ಣುದಾದ ಯಂಗ್ ಲುಕ್ ಅವರ ಫ್ಯಾನ್ಸ್‌ಗೆ ಕಂಡಿತವಾಗಿಯೂ ಇಷ್ಟ ಆಗುತ್ತೆ. ಪಕ್ಕಾ ಜೇಮ್ಸ್ ಬಾಂಡ್ ಲುಕ್‌ ಕೊಟ್ಟಿರುವ ವಿಷ್ಣುದಾದ ಕಾಸ್ಟ್ಯೂಮ್, ಗನ್ ಹಿಡಿಯುವ ಶೈಲಿ ಸಖತ್ ಸ್ಟೈಲಿಶ್ ಆಗಿದೆ. ಈ ವಿಡಿಯೋ ಇಬ್ಬರ ಅಭಿಮಾನಿಗಳಲ್ಲಿ ಹೊಸ ಆಸೆಯನ್ನು ಹುಟ್ಟಿಸಿದೆ.

ಕೇವಲ 57 ಸೆಕೆಂಡುಗಳ ವಿಡಿಯೋಗೆ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿಡಿಯೋದಲ್ಲಿ ಡಿಲೀಪ್ ಕೆಎಸ್ 46 ಎಂದು ಬರೆಯಲಾಗಿದೆ. ಅಸಲಿಗೆ ಮೂಲ ವಿಡಿಯೋ ಯಾವುದು ಯಾರ ಅಕೌಂಟ್‌ನಿಂದ ಬಂದಿದೆ ಅನ್ನೋದು ಗೊತ್ತಾಗಿಲ್ಲ.

More from Filmibeat

English summary
What would it be like if Vishnuvardhan and Ambareesh made a movie using AI? Video is Trending;
Read more about: vishnuvardhan ambareesh video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X