Shivrajkumar: ಶಿವಣ್ಣ ಚಿತ್ರರಂಗಕ್ಕೆ ಕಾಲಿಡದೆ ಇದ್ದಿದ್ದರೆ ಏನಾಗಿರುತ್ತಿದ್ರು? ಸೀಕ್ರೆಟ್ ಬಿಚ್ಚಿಟ್ಟ ಸೆಂಚುರಿ ಸ್ಟಾರ್
ದಕ್ಷಿಣ ಭಾರತದಲ್ಲೆಲ್ಲ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಬಗ್ಗೆನೇ ಚರ್ಚೆ. 'ಜೈಲರ್' ಸಿನಿಮಾದ ನರಸಿಂಹನ ಪಾತ್ರ ನೋಡುತ್ತಿದ್ದಂತೆ ಸಿನಿಪ್ರಿಯರು ಶಿವಣ್ಣನ ಖದರ್‌ಗೆ ಫಿದಾ ಆಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಶಿವಣ್ಣನ ಪಾತ್ರದ ಬಗ್ಗೆನೇ ಗುಣಗಾನ ಮಾಡುತ್ತಿದ್ದಾರೆ.
ನರಸಿಂಹನಾಗಿ ಸೆಂಚುರಿ ಸ್ಟಾರ್ ವಿಶ್ವದಾದ್ಯಂತ ಮಿಂಚುತ್ತಿದ್ದಾರೆ. ಇದರ ಹಿಂದೆನೇ ಧನುಷ್ ಜೊತೆ ನಟಿಸಿದ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಕೂಡ ಬಿಡುಗಡೆಯಾಗಬೇಕಿದೆ. ಹೀಗಾಗಿ ಶಿವಣ್ಣನಿಗೆ ದಕ್ಷಿಣ ಭಾರತದಲ್ಲಿ ಕ್ರೇಜ್ ಹೆಚ್ಚಾಗಿದೆ.

ಒಂದು ವೇಳೆ ಶಿವಣ್ಣ ಚಿತ್ರರಂಗಕ್ಕೆ ಬಾರದೇ ಹೋಗಿದ್ದರೆ ಈಗ ಏನು ಮಾಡುತ್ತಿದ್ದರು? ಇಂತಹದ್ದೊಂದು ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಲೇ ಇರುತ್ತೆ. ಅದಕ್ಕೆ ಶಿವರಾಜ್‌ಕುಮಾರ್ ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಅಣ್ಣಾವ್ರ ಹೆಸರು, ಸಿನಿಮಾದಲ್ಲಿ ಗೆಲ್ಲಲು ಪಡೆದ ತರಬೇತಿ, ಮೊದಲ ಸಿನಿಮಾ ಆನಂದ್ ಬಗ್ಗೆ ಇಂಡಿಯಾಗ್ಲಿಟ್ಜ್ ಜೊತೆ ಮಾತಾಡಿದ್ದಾರೆ. ಅದರ ಸಾರಾಂಶ ಇಲ್ಲಿದೆ.
"ರಾಜ್‌ಕುಮಾರ್ ಮಗ ಅಂತ ಒಂದೆರಡು ವರ್ಷ ನೋಡ್ಬಹುದು"
ಶಿವರಾಜ್‌ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ಅಣ್ಣಾವ್ರ ಮಗ ಅನ್ನೋ ಬ್ರ್ಯಾಂಡ್ ಇತ್ತು. ಅದು ಅವರ ಪಾಲಿಗೆ ಪ್ಲಸ್ ಕೂಡ ಆಗಿತ್ತು. ಹಾಗೇ ಮೈನಸ್ ಕೂಡ ಆಗಿತ್ತು. ಅದಕ್ಕೆ ಯಾರ ಶೈಲಿಯನ್ನೂ ಅನುಕರಣೆ ಮಾಡದೇ ಸಿನಿಮಾ ಮಾಡಲು ನಿರ್ಧರಿಸಿದ್ದರು. "ನಾನು ಸಿನಿಮಾಗೆ ನಂದೇ ಸ್ಟೈಲ್‌ನಲ್ಲಿ ಬರಬೇಕು. ಇಲ್ಲ ಅಂದರೆ ಮರೆತು ಬಿಡು ಅನ್ನೋ ಆಟಿಟ್ಯೂಡ್ ಇತ್ತು. ನಟನೆಯನ್ನು ಬಿಟ್ಟು ಬಿಡು. ಅದೊಂದೇ ಅಲ್ವಲ್ಲ. ಬೇರೆನೂ ಇದೆಯಲ್ಲ. ರಾಜ್‌ಕುಮಾರ್ ಮಗ ಅಂತ ಒಂದೆರಡು ವರ್ಷ ನೋಡಬಹುದು. 25 ವರ್ಷ, 37 ವರ್ಷ ಜನರು ದುಡ್ಡು ಕೊಟ್ಟು ಹೇಗೆ ಸಿನಿಮಾ ನೋಡುತ್ತಾರೆ. ನಾನು ಅವರಿಗೆ ಇಷ್ಟ ಆಗಬೇಕು. ಇಲ್ಲ ಅಂದರೆ ವೇಸ್ಟ್" ಎಂದು ಶಿವಣ್ಣ ಓಪನ್ ಆಗಿ ಮಾತಾಡಿದ್ದಾರೆ.

ನಟನಾಗದೇ ಹೋಗಿದ್ದರೆ ಏನಾಗಿರುತ್ತಿದ್ದರು?
ಶಿವಣ್ಣ ಒಂದು ವೇಳೆ ಸಿನಿಮಾರಂಗಕ್ಕೆ ಕಾಲಿಡದೇ ಹೋಗಿದ್ದರೆ ಏನಾಗಿರುತ್ತಿದ್ದರು? ಯಾವ ಫೀಲ್ಡ್‌ನಲ್ಲಿ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು? ಅನ್ನೋ ಕುತೂಹಲ ಸಹಜ. ಶಿವಣ್ಣ ಸಿನಿಮಾರಂಗಕ್ಕೆ ಬಾರದೇ ಹೋಗಿದ್ದರೆ, ಸಣ್ಣದೊಂದು ಫ್ಯಾಕ್ಟರಿ ನಿರ್ಮಿಸಿ ಉದ್ಯಮಿಯಾಗಲು ನಿರ್ಧರಿಸಿದ್ದರು. ಈ ಮಾತನ್ನು ಯೂಟ್ಯೂಬ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. "ಬಂದರೆ ನನ್ನ ಸ್ಟೈಲ್‌ನಲ್ಲಿ ಬರೋಣ.. ಇಲ್ಲ ಅಂದರೆ ಬಿಟ್ಟುಬಿಡೋಣ ಅಂತಲೇ ಇದ್ದಿದ್ದು. ನಾನು ಬಿಎಸ್‌ಸಿ ಕೆಮಿಸ್ಟ್ರಿ ಮಾಡಿದ್ದೆ. ನಾನು ಸಣ್ಣದೊಂದು ಫಾಕ್ಟರಿ ಮಾಡಿಕೊಂಡು ಇದ್ದು ಬಿಡೋಣ. ಸಣ್ಣದೊಂದು ಬ್ಯುಸಿನೆಸ್ ಮಾಡೋಣ. ತಂದೆ ಸೂಪರ್‌ಸ್ಟಾರ್ ಆಗಿದ್ದರು. ಹಣ ಹೇಗಿದ್ದರೂ ಇತ್ತು. ಟ್ರೈ ಮಾಡೋಣ ಸಿನಿಮಾ ಮಾಡಿದೆ" ಎಂದು ಶಿವಣ್ಣ ಹೇಳಿದ್ದಾರೆ.
ಯಾರನ್ನೂ ಅನುಕರಣೆ ಮಾಡಿಲ್ಲ
ಶಿವಣ್ಣ ಇವತ್ತು ಸಕ್ಸಸ್‌ಫುಲ್ ನಟ ಅಂತ ಅನಿಸಿಕೊಂಡಿದ್ದ ಅವರ ಆಟಿಟ್ಯೂಡ್‌ನಿಂದ. ಸ್ವತ: ತಂದೆಯ ಶೈಲಿಯನ್ನೂ ಫಾಲೋ ಮಾಡಿಲ್ಲ. "ಅಪ್ಪಾಜಿ ಹೆಸರನ್ನು ಉಳಿಸುವ ಜವಾಬ್ದಾರಿ ಯಾವಾಗಲೂ ಇತ್ತು. ಆದರೆ, ಅವರನ್ನು ಅನುಕರಣೆ ಮಾಡಬಾರದು ಅಂತ ನಿರ್ಧಾರ ಮಾಡಿದ್ದೆ. ನಾನು ಯಾವತ್ತೂ ನನ್ನ ಮೆಚ್ಚಿನ ನಟರಾದ ಕಮಲ್ ಹಾಸನ್, ರಜನಿಕಾಂತ್, ಅಮಿತಾಬ್ ಬಚ್ಚನ್ ಸರ್ ಅವರ ನಟನೆಯನ್ನು ಅನುಕರಣೆ ಮಾಡಿಲ್ಲ. ಅವರು ನನಗೆ ಸ್ಪೂರ್ತಿ. ಆದರೆ, ಅವರಾಗಿರುವುದಕ್ಕೆ ಸಾಧ್ಯವಿಲ್ಲ." ಎಂದಿದ್ದಾರೆ ಶಿವಣ್ಣ.
ಮೊದಲ ಸಿನಿಮಾ 'ಆನಂದ್'
"ಆನಂದ್ ಸಿನಿಮಾಗಾಗಿ ತುಂಬಾ ಕಷ್ಟ ಪಟ್ಟೆ. ಹಾರ್ಸ್ ರೈಡಿಂಗ್ ಕಲಿತೆ. ಜಿಮ್ನಾಸ್ಟಿಕ್ ಕಲಿತೆ. ಸಿಂಗೀತಂ ಶ್ರೀನಿವಾಸರಾವ್ ನಿರ್ದೇಶನ ಮಾಡಿದ್ದರು. ಇದೊಂದು ಗ್ಯಾಂಗ್ ಕಟ್ಟಿಕೊಂಡು ಮಜಾ ಮಾಡಿಕೊಂಡು ಮಾಡಿದ ಸಿನಿಮಾ." ಎಂದು ಮೊದಲ ಸಿನಿಮಾ 'ಆನಂದ್' ಅನ್ನು ನೆನಪಿಸಿಕೊಂಡಿದ್ದಾರೆ.


Click it and Unblock the Notifications











