For Quick Alerts
  ALLOW NOTIFICATIONS  
  For Daily Alerts

  ಚಿತ್ರಮಂದಿರ ತೆರೆಯದಿದ್ದರೆ ಒಟಿಟಿಯಲ್ಲಿ ಬಿಡುಗಡೆಯಾಗುತ್ತದೆಯೇ ಕೆಜಿಎಫ್ 2?: ಯಶ್ ನೀಡಿದ ಮಾಹಿತಿ

  |

  ತೀವ್ರ ಕುತೂಹಲ ಮೂಡಿಸಿರುವ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಎಲ್ಲೆಡೆ ಬೇಡಿಕೆ ಹೆಚ್ಚುತ್ತಿದೆ. ಇತ್ತ ಚಿತ್ರೀಕರಣಗಳು ನಡೆಯದೆ ಅ. 23ರಂದು ನಿಗದಿತ ದಿನಾಂಕದಂದು ಕೆಜಿಎಫ್ ತೆರೆಗೆ ಬರುತ್ತದೆಯೇ ಇಲ್ಲವೇ ಎಂಬುದು ಗೊಂದಲ ಮೂಡಿಸಿದೆ. ಅತ್ತ ಚಿತ್ರಮಂದಿರಗಳು ತೆರೆಯುವುದು ಕೂಡ ಅನುಮಾನ ಎಂಬ ಸ್ಥಿತಿ ಇದೆ.

  ಹೀಗೆ ಆಗುತ್ತೆ ಅಂತ ಗೊತ್ತಿದ್ರೆ ಮದಕರಿ ನಾಯಕ ಸಿನಿಮಾ ಮಾಡ್ತಾನೆ ಇರ್ಲಿಲ್ಲ ಅಂದ್ರು ರಾಕ್ ಲೈನ್ ವೆಂಕಟೇಶ್ | Madakari

  ಈ ನಡುವೆ ಕೆಜಿಎಫ್ 2ನ ಓವರ್ ದಿ ಟಾಪ್ ಪ್ರಸಾರದ ಹಕ್ಕು ಖರೀದಿಗಾಗಿ ಭಾರಿ ಪೈಪೋಟಿ ನಡೆದಿದೆ. 55-60 ಕೋಟಿ ನೀಡಿ ಒಟಿಟಿ ಪ್ರಸಾರದ ಹಕ್ಕು ಖರೀದಿಗೆ ಪ್ರಮುಖ ಸಂಸ್ಥೆಗಳು ಸ್ಪರ್ಧೆ ನಡೆಸುತ್ತಿವೆ. ಲಾಕ್ ಡೌನ್ ಅವಧಿಯಲ್ಲಿ ಒಟಿಟಿ ಮಾಧ್ಯಮ ಹೆಚ್ಚು ಲಾಭ ಗಳಿಸಿದೆ. ದೇಶ ವಿದೇಶಗಳ ಸಿನಿಮಾಗಳನ್ನು ಜನರು ವೀಕ್ಷಿಸಿದ್ದಾರೆ. ಇದರಿಂದ ಸಹಜವಾಗಿಯೇ ಜನರು ಒಟಿಟಿಯತ್ತ ಒಲವು ತೋರಿಸುತ್ತಿದ್ದಾರೆ. ಹಾಗೆಯೇ ನಷ್ಟದಲ್ಲಿರುವ ನಿರ್ಮಾಪಕರು ಒಟಿಟಿ ಮೂಲಕವೇ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ . ಆದರೆ ಕೆಜಿಎಫ್ ಚಾಪ್ಟರ್ 2 ಒಟಿಟಿಯಲ್ಲಿ ಬಿಡುಗಡೆಯಾಗುವುದಿಲ್ಲ. ಮುಂದೆ ಓದಿ...

  ಒಟಿಟಿಯಲ್ಲಿ ಬಿಡುಗಡೆಯಾಗೊಲ್ಲ

  ಒಟಿಟಿಯಲ್ಲಿ ಬಿಡುಗಡೆಯಾಗೊಲ್ಲ

  ಕೆಜಿಎಫ್ ಚಾಪ್ಟರ್ 2 ಚಿತ್ರದ ಒಟಿಟಿ ಬಿಡುಗಡೆ ಕುರಿತಾದ ರೂಮರ್‌ಗಳನ್ನು ನಟ ಯಶ್ ತಳ್ಳಿಹಾಕಿದ್ದಾರೆ. ಯಾವ ಕಾರಣಕ್ಕೂ ಕೆಜಿಎಫ್ ಒಟಿಟಿಯಲ್ಲಿ ಬಿಡುಗಡೆಯಾಗುವುದಿಲ್ಲ. ಈ ರೀತಿಯ ವದಂತಿಗಳು ಸತ್ಯವಲ್ಲ ಎಂದು ಯಶ್ ಹೇಳಿರುವುದಾಗಿ ರಿಪಬ್ಲಿಕ್ ವರ್ಲ್ಡ್ ವರದಿ ಮಾಡಿದೆ.

  ದೊಡ್ಡ ಸ್ಟಾರ್‌ಗಳನ್ನು ಹಿಂದಿಕ್ಕಿ ಹೊಸದೊಂದು ದಾಖಲೆ ಬರೆದ ರಾಕಿಂಗ್ ಸ್ಟಾರ್ ಯಶ್ದೊಡ್ಡ ಸ್ಟಾರ್‌ಗಳನ್ನು ಹಿಂದಿಕ್ಕಿ ಹೊಸದೊಂದು ದಾಖಲೆ ಬರೆದ ರಾಕಿಂಗ್ ಸ್ಟಾರ್ ಯಶ್

  ದೊಡ್ಡ ಪರದೆಗೆ ಅನುಗುಣವಾಗಿ ವಿನ್ಯಾಸ

  ದೊಡ್ಡ ಪರದೆಗೆ ಅನುಗುಣವಾಗಿ ವಿನ್ಯಾಸ

  ಕೆಜಿಎಫ್ 2 ಚಿತ್ರವನ್ನು ದೊಡ್ಡ ಪರದೆಯ ಅನುಭವಕ್ಕೆ ಅನುಗುಣವಾಗಿ ವಿನ್ಯಾಸ ಮಾಡಲಾಗಿದೆ. ಪ್ರೇಕ್ಷಕರ ನಿರೀಕ್ಷೆಗಳೇನು ಎನ್ನುವುದು ನಮ್ಮ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನನಗೆ ತಿಳಿಸಿದೆ. ಮೊದಲ ಭಾಗಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಈ ಸಿನಿಮಾ ಇರಬೇಕೆಂದು ಎಲ್ಲರೂ ಬಯಸುತ್ತಿದ್ದಾರೆ ಎಂದು ಯಶ್ ಹೇಳಿದ್ದಾರೆ.

  ನಿರಾಶೆ ಉಂಟುಮಾಡಲು ಬಯಸೊಲ್ಲ

  ನಿರಾಶೆ ಉಂಟುಮಾಡಲು ಬಯಸೊಲ್ಲ

  ಜನರ ನಿರೀಕ್ಷೆಗೆ ಅನುಗುಣವಾಗಿ ಸಿನಿಮಾ ಇರಲಿದೆ. ನನ್ನ ಅಭಿಮಾನಿಗಳಿಗೆ ಎಂದಿಗೂ ನಿರಾಶೆ ಉಂಟುಮಾಡಲು ಬಯಸುವುದಿಲ್ಲ. ಈ ರೀತಿಯ ಸುದ್ದಿಗಳು ಎಲ್ಲಿಂದ ಬರುತ್ತವೆಯೋ ಗೊತ್ತಿಲ್ಲ. ಕೆಜಿಎಫ್ 2ಅನ್ನು ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡುವ ಪ್ರಶ್ನೆಯೇ ಇಲ್ಲ ಎಂದಿರುವುದಾಗಿ ವರದಿಯಾಗಿದೆ.

  ಚಿತ್ರರಂಗದಲ್ಲಿ 12ನೇ ವರ್ಷಕ್ಕೆ ಕಾಲಿಡುತ್ತಿರುವ ಯಶ್: ಸಂಭ್ರಮಾಚರಣೆಗೆ ಅಭಿಮಾನಿಗಳು ಸಜ್ಜುಚಿತ್ರರಂಗದಲ್ಲಿ 12ನೇ ವರ್ಷಕ್ಕೆ ಕಾಲಿಡುತ್ತಿರುವ ಯಶ್: ಸಂಭ್ರಮಾಚರಣೆಗೆ ಅಭಿಮಾನಿಗಳು ಸಜ್ಜು

  ನಿರೀಕ್ಷೆ ಮುಟ್ಟುವ ಭರವಸೆ

  ನಿರೀಕ್ಷೆ ಮುಟ್ಟುವ ಭರವಸೆ

  ಮೊದಲ ಭಾಗಕ್ಕಿಂತಲೂ ಹೆಚ್ಚಿನ ಜನರು ಎರಡನೆಯ ಭಾಗದ ಬಗ್ಗೆ ಆಸಕ್ತಿ ಇರಿಸಿಕೊಂಡಿದ್ದಾರೆ. ಜನರ ನಿರೀಕ್ಷೆಗಳ ಮಟ್ಟವನ್ನು ತಲುಪುತ್ತೇವೆ ಎಂಬ ಭರವಸೆ ಹೊಂದಿದ್ದೇನೆ ಎಂದು ಯಶ್ ತಿಳಿಸಿದ್ದಾರೆ. ಕೆಜಿಎಫ್ ಚಿತ್ರದ ಕೆಲವು ಭಾಗಗಳ ಚಿತ್ರೀಕರಣ ಬಾಕಿ ಇದೆ. ಲಾಕ್ ಡೌನ್ ಸಮಯದಲ್ಲಿ ಅದರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಾಗುತ್ತಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಅ. 23ರಂದು ಚಿತ್ರಮಂದಿರಗಳಲ್ಲಿ ಕೆಜಿಎಫ್‌ನ ರಾಕಿ ಬಾಯ್ ಅಬ್ಬರ ಶುರುವಾಗಲಿದೆ.

  'ಕೆಜಿಎಫ್ 2' ಸ್ಯಾಟಲೈಟ್ ಹಕ್ಕು ದಾಖಲೆಯ ಮೊತ್ತಕ್ಕೆ ಮಾರಾಟ?'ಕೆಜಿಎಫ್ 2' ಸ್ಯಾಟಲೈಟ್ ಹಕ್ಕು ದಾಖಲೆಯ ಮೊತ್ತಕ್ಕೆ ಮಾರಾಟ?

  English summary
  Yash has clarified that, KGF Chapter 2 will not be released on OTT platform.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X