ಹೆರಿಗೆಯಾದ ಮರುದಿನವೇ ಗಂಡನ ಮುಂದೆ ಪತ್ರಕರ್ತೆ ಕೇಳಿದ ಪ್ರಶ್ನೆಗೆ ಬಾಲಿವುಡ್‌ ಬಿಟ್ಟಿದ್ದ ಭಾಗ್ಯಶ್ರೀ: ಆ ಪ್ರಶ್ನೆ ಏನು?

ಬಾಲಿವುಡ್‌ನ ಎವರ್‌ಗ್ರೀನ್ ಸಿನಿಮಾ 'ಮೈನೆ ಪ್ಯಾರ್ ಕಿಯಾ'. ಈ ಸಿನಿಮಾ ಇಂದಿಗೂ ಪ್ರೇಮಿಗಳ ಫೇವರಿಟ್. ಸಲ್ಮಾನ್ ಖಾನ್ ಹಾಗೂ ಭಾಗ್ಯಶ್ರೀ ಜೋಡಿಯಾಗಿ ನಟಿಸಿದ್ದ ಈ ಸಿನಿಮಾ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಆ ಸಿನಿಮಾ ಎಷ್ಟು ಹಿಟ್ ಆಯ್ತೋ.. ಭಾಗ್ಯಶ್ರೀ ಹಾಗೂ ಸಲ್ಮಾನ್ ಖಾನ್ ಜೋಡಿನೂ ಅಷ್ಟೇ ಹಿಟ್ ಆಗಿತ್ತು.

ಸಲ್ಮಾನ್ ಖಾನ್ ಹಾಗೂ ಭಾಗ್ಯಶ್ರೀ ಇಬ್ಬರೂ ಬಾಲಿವುಡ್‌ನ ಬೆಸ್ಟ್ ಅಂತ ಮಾತಾಡಿಕೊಳ್ಳುತ್ತಿದ್ದರು. ಇಬ್ಬರು ಸೇರಿ ಇನ್ನೊಂದಿಷ್ಟು ಸಿನಿಮಾ ಮಾಡಬಹುದು ಎಂದು ನಿರೀಕ್ಷೆ ಮಾಡುತ್ತಿದ್ದರು. ಆದರೆ, ಭಾಗ್ಯಶ್ರೀ ವಿವಾಹವಾಗಿ ಬಾಲಿವುಡ್‌ನಿಂದ ಅಂತರ ಕಾಯ್ದುಕೊಂಡಿದ್ದರು. ಅದಕ್ಕೆ ಏನು ಕಾರಣ ಅನ್ನೋದನ್ನು ಈಗ ರಿವೀಲ್ ಮಾಡಿದ್ದಾರೆ.

When Bhagyashree Gave birth to her son next morning asked about affair with Salman Khan

ಸಲ್ಮಾನ್ ಖಾನ್ ಜೊತೆ ಯಾರೇ ಸಿನಿಮಾ ಮಾಡಿದ್ರೂ, ಆ ನಟಿ ಜೊತೆ ಅಫೇರ್ ಅನ್ನೋ ಪಟ್ಟ ಅಂಟಿಕೊಳ್ಳುತ್ತೆ. ಆದರೆ, 80ರ ದಶಕದಲ್ಲಿ ಆಫೇರ್ ಅನ್ನೋದನ್ನು ತುಂಬಾನೇ ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿದ್ದರು. ಭಾಗ್ಯಶ್ರೀಗೆ ಇಂತಹದ್ದೇ ಒಂದು ಅನುಭವ ಆಗಿತ್ತು.

ಪತ್ರಕರ್ತೆಯಿಂದ ಅವಮಾನ

ಬಾಲಿವುಡ್‌ ನಟಿ ಭಾಗ್ಯಶ್ರೀ 1990ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಹಿಮಾಲಯಾ ದಸ್ಸಾನಿ ಎಂಬುವವರನ್ನು ವಿವಾಹವಾಗಿದ್ದರು. ಇಲ್ಲಿಂದ 'ಮೈ ನೆ ಪ್ಯಾರ್ ಕಿಯಾ' ನಟಿ ಸಿನಿಪ್ರಿಯರಿಗೆ ಹಾಗೂ ಅಭಿಮಾನಿಗಳಿಗೆ ಅಪರೂಪ ಎಂಬಂತಾಗಿಬಿಟ್ಟರು. ಅಷ್ಟಕ್ಕೂ ಮದುವೆ ಆಗಿದ್ದೇನೋ ಸರಿ. ಆದರೆ, ಸಿನಿಮಾರಂಗದಿಂದಲೇ ದೂರ ಉಳಿದಿದ್ದೇಕೆ? ಅನ್ನೋದನ್ನು ಸಂಗತಿಯನ್ನು ಈಗ ಹೊರಹಾಕಿದ್ದಾರೆ.

ವಿವಾಹದ ಬಳಿಕ ಭಾಗ್ಯಶ್ರೀ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆ ವೇಳೆ ಭಾಗ್ಯಶ್ರೀ ಆಸ್ಪತ್ರೆಯಲ್ಲಿರುವಾಗಲೇ ಅಂದಿನ ಪತ್ರಕರ್ತೆಯೊಬ್ಬರು ಕೇಳಿದ ಪ್ರಶ್ನೆ ಹೇಗೆ ಮುಜುಗರಕ್ಕೀಡು ಮಾಡಿದ್ದರು ಅನ್ನೋದನ್ನು ರಿವೀಲ್ ಮಾಡಿದ್ದಾರೆ.

When Bhagyashree Gave birth to her son next morning asked about affair with Salman Khan

ಗಂಡನ ಮುಂದೆ ಅಫೇರ್ ಬಗ್ಗೆ ಪ್ರಶ್ನೆ

ಸಿದ್ದಾರ್ಥ್ ಕನ್ನನ್ ಎಂಬುವವರೊಂದಿನ ಸಂದರ್ಶನದಲ್ಲಿ ಮಾತಾಡುವಾಗ, ಭಾಗಶ್ರೀ ತನಗಾದ ಅವಮಾನದ ಬಗ್ಗೆ ಮಾತಾಡಿದ್ದಾರೆ. " ಆಗ ತಾನೇ ನಾನು ಅಭಿಮನ್ಯು (ಪುತ್ರ)ಗೆ ಜನ್ಮ ನೀಡಿದ್ದೆ. ನನ್ನ ಅತ್ತಿಗೆ ಹೊರಗೆ ಇದ್ದಳು. ಆಗ ಪ್ರೆಸ್ ರಿಪೋರ್ಟರ್ ಒಬ್ಬರು ದೊಡ್ಡ ಹೂಗುಚ್ಚ ಹಿಡಿದುಕೊಂಡು ನನ್ನನ್ನು ಭೇಟಿ ಮಾಡಬೇಕು ಅಂತ ಬಂದಿದ್ದರು. ಅಲ್ಲೇ ನನ್ನ ಪತಿ ಹಿಮಾಲನೂ ಇದ್ದರು." ಎಂದು ಆ ಘಟನೆಯನ್ನು ವಿವರಿಸಿದ್ದಾರೆ.

ಬಳಿಕ ಪತ್ರಕರ್ತೆ ಕೇಳಿದ ಪ್ರಶ್ನೆಯೇನು ಅನ್ನೋದನ್ನು ವಿವರಿಸಿದ್ದಾರೆ. "ಸಲ್ಮಾನ್ ಖಾನ್ ಜೊತೆ ಭಾಗ್ಯಲಕ್ಷ್ಮಿಯ ಅಫೇರ್ ಬಗ್ಗೆ ನಿಮಗೆ ಏನು ಅನಿಸುತ್ತೆ? ಈಗ ನಿಮ್ಮೊಂದಿಗೆ ಈ ಮಗವನ್ನು ಪಡೆದಿದ್ದಾರೆ." ಎಂದು ಪತ್ರಕರ್ತೆ ಪ್ರಶ್ನೆ ಮಾಡಿದ್ದರಂತೆ.

ಬಾಲಿವುಡ್‌ನಿಂದ ಅಂತರ ಕಾಯ್ದುಕೊಂಡಿದ್ದೇಕೆ?

ಈ ಘಟನೆ ಬಳಿಕ ಭಾಗ್ಯಶ್ರೀ ಒಂದು ನಿರ್ಧಾರಕ್ಕೆ ಬಂದಿದ್ದರು. " ಮೈನೇ ಪ್ಯಾರ್ ಕಿಯಾ ಸೆಟ್ಟಿನಲ್ಲಿ ಯಾರೊಬ್ಬರು ಈ ಬಗ್ಗೆ ಪ್ರಶ್ನೆ ಮಾಡಿರಲಿಲ್ಲ. ಸಲ್ಮಾನ್ ಖಾನ್ ಒಬ್ಬ ಒಳ್ಳೆ ವ್ಯಕ್ತಿ. ನಮ್ಮ ನಡುವೆ ಏನೂ ಇರಲಿಲ್ಲ. ಆದರೆ, ಈ ಪ್ರಶ್ನೆ ನನಗೆ ಹೆರಿಗೆಯಾದ ಮಾರನೇ ದಿನವೇ ಕೇಳಲಾಗಿತ್ತು. ಆಗ ಜನರು ಹೇಗೆ ಒಬ್ಬರನ್ನೊಬ್ಬರ ಕೆಟ್ಟಾದಾಗಿ ನಡೆಸಿಕೊಳ್ಳುತ್ತಾರೆ ಎಂದು ಅನಿಸಿತ್ತು" ಎಂದಿದ್ದಾರೆ.

ಇಷ್ಟೇ ಅಲ್ಲದೆ, ಈ ಘಟನೆ ನಡೆದ ಬಳಿಕ ಮನೆಗೆ ಸಿನಿಮಾ ಮ್ಯಾಗಜೀನ್ ಅನ್ನು ತರಿಸುವುದನ್ನೇ ನಿಲ್ಲಿಸಿದ್ದರಂತೆ. ಅಲ್ಲದೆ ಸಿನಿಮಾರಂಗದಿಂದಲೇ ದೂರ ಉಳಿಯುವಂತೆ ನಿರ್ಧಾರ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಭಾಗ್ಯಶ್ರೀ ಇತ್ತೀಚೆಗೆ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

More from Filmibeat

English summary
When Bhagyashree Gave birth to her son next morning some one asked about affair with Salman Khan, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X