ಶಿವಣ್ಣನಿಗೆ ಅಮೆರಿಕದಲ್ಲಿ ಶಸ್ತ್ರ ಚಿಕಿತ್ಸೆ ಯಾವಾಗ? ವಾಪಸ್ ಹಿಂತಿರುಗುವುದು ಎಂದು? ಆರೋಗ್ಯ ಈಗ ಹೇಗಿದೆ?

ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಅಭಿಮಾನಿಗಳು ಆತಂಕದಲ್ಲಿ ಇದ್ದಾರೆ. ಶಿವಣ್ಣ ತನಗೆ ಹುಷಾರಿಲ್ಲ ಅಂತ ಹೇಳಿದ ದಿನದಿಂದ ಅವರ ಆರೋಗ್ಯದ ಬಗ್ಗೆ ತಿಳಿದು ಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಲೇ ಇದ್ದಾರೆ. ತನ್ನ ಎಲ್ಲಾ ಕಮಿಟ್ಮೆಂಟ್‌ಗಳನ್ನು ಮುಗಿಸಿರುವ ಶಿವರಾಜ್‌ಕುಮಾರ್ ಇದೇ ತಿಂಗಳು ಅಮೆರಿಕಗೆ ಹೋಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ.

ಶಿವರಾಜ್‌ಕುಮಾರ್ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ದಿನದಿಂದ ಬೆಂಗಳೂರಿನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು ನಾಲ್ಕೈದು ತಿಂಗಳಿನಿಂದ ಚಿಕಿತ್ಸೆಗೆ ಒಳಗಾಗಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಈಗಾಗಲೇ ಮೂರು ಹಂತದಲ್ಲಿ ಅನಾರೋಗ್ಯಕ್ಕೆ ಚಿಕಿತ್ಸೆಯನ್ನು ಪಡೆದಿದ್ದಾರೆ. ಮೊದಲ ವೈದ್ಯರು ನಿಗದಿ ಮಾಡಿದಂತೆ ಅಮೆರಿಕದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ.

When will Shivarajkumar go to America for treatment When will he return here is the details

ಬೆಂಗಳೂರಿನಲ್ಲಿ ಶಿವಣ್ಣ ಚಿಕಿತ್ಸೆ ಪಡೆದ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿದೆ. ಆದಷ್ಟು ಬೇಗ ಗುಣಮುಖರಾಗುವ ಭರವಸೆಯನ್ನು ಶಿವಣ್ಣನೇ ಅಭಿಮಾನಿಗಳಿಗೆ ಕೊಟ್ಟಿದ್ದಾರೆ. ಆದರೆ, ಶಸ್ತ್ರ ಚಿಕಿತ್ಸೆ ಬಳಿಕ ಒಂದು ತಿಂಗಳು ವಿಶ್ರಾಂತಿ ಪಡೆಯಬೇಕಾಗಿದೆ. ಈ ಕಾರಣಕ್ಕೆ ಅಮೆರಿಕದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಹಾಗಿದ್ದರೆ, ಶಿವಣ್ಣ ಅಮೆರಿಕಾಗೆ ಹೋಗೋದು ಯಾವಾಗ? ಶಸ್ತ್ರ ಚಿಕಿತ್ಸೆಗೆ ಒಳಗಾಗುವ ದಿನ ಯಾವುದು? ವಾಪಸ್ ಬರುವುದು ಯಾವಾಗ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಅಮೆರಿಕಗೆ ಹೋಗುವುದು ಯಾವಾಗ?

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಇದೇ ತಿಂಗಳು ಡಿಸೆಂಬರ್ 18ರಂದು ಅಮೆರಿಕಗೆ ತೆರಳುತ್ತಿದ್ದಾರೆ. ಈ ವಿಷಯವನ್ನು ಸ್ವತ: ಗೀತಾ ಶಿವರಾಜ್‌ಕುಮಾರ್ ಅವರೇ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೇಲೆ ಹೇಳಿದ್ದಾರೆ. ಶಿವಣ್ಣನ ಆರೋಗ್ಯದ ಬಗ್ಗೆ ಗೀತಕ್ಕ ಭಾವುಕರಾಗಿ ಮಾತಾಡಿದ್ದರು. ಇವರನ್ನು ನೋಡಿ ಶಿವಣ್ಣ ಕೂಡ ಅಷ್ಟೇ ಭಾವುಕರಾಗಿದ್ದು ಕಣ್ಣೀರು ವೀಕ್ಷಕರನ್ನೂ ಭಾವುಕರನ್ನಾಗಿಸಿತ್ತು.

When will Shivarajkumar go to America for treatment When will he return here is the details

ಚಿಕಿತ್ಸೆ ಯಾವಾಗ?

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ ಮೊದಲೇ ನಿಗದಿಯಾದಂತೆ ಅಮೆರಿಕದಲ್ಲಿ ಚಿಕಿತ್ಸೆ ನಡೆಯಲಿದೆ. ಡಿಸೆಂಬರ್ 24ರಂದು ಶಿವಣ್ಣನಿಗೆ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಅಮೆರಿಕದ ಮಿಯಾಮಿಯಲ್ಲಿ ಶಸ್ತ್ರ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೈದ್ಯರು ಶಿವಣ್ಣ ಹೆಲ್ತ್ ಅಪ್‌ಡೇಟ್ ಅನ್ನು ಕಳುಹಿಸಿಕೊಟ್ಟಿದ್ದು, ಶಸ್ತ್ರ ಚಿಕಿತ್ಸೆ ನಿಗದಿ ಪಡಿಸಿದ ದಿನದಂದೆ ನಡೆಯಲಿದೆ ಎಂದು ಹೇಳಲಾಗಿದೆ.

ವಾಪಾಸ್ ಮರಳುವುದು ಯಾವಾಗ?

ಶಸ್ತ್ರ ಚಿಕಿತ್ಸೆ ಬಗ್ಗೆ ಒಂದು ತಿಂಗಳು ಅಮೆರಿಕದಲ್ಲಿಯೇ ಉಳಿದುಕೊಳ್ಳಲಿದ್ದಾರೆ. ವೈದ್ಯರು ನಿರಂತರವಾಗಿ ಒಂದು ತಿಂಗಳು ಶಿವಣ್ಣನ ಆರೋಗ್ಯದ ಮೇಲೆ ನಿಗಾ ಇಡಲಿದ್ದಾರೆ. ಆನಂತರ ಎಲ್ಲವೂ ಸರಿ ಹೋದ ಬಳಿಕ ಬೆಂಗಳೂರಿಗೆ ಹಿಂತಿರುಗಲಿದ್ದಾರೆ. ಇಲ್ಲಿಗೆ ಬಂದ ಮೇಲೆ ಒಂದಿಷ್ಟು ತಿಂಗಳು ವಿಶ್ರಾಂತಿಯನ್ನು ಪಡೆಯಲಿದ್ದಾರೆ. ಆರೋಗ್ಯ ಸಂಪೂರ್ಣ ಸುಧಾರಿಸಿದ ಬಳಿಕ ಮತ್ತೆ ಸಿನಿಮಾಗಳಲ್ಲಿ ಭಾಗವಹಿಸಲಿದ್ದಾರೆ.

ಶಿವಣ್ಣ ಒಪ್ಪಿಕೊಂಡಿರುವ ಸಿನಿಮಾಗಳ್ಯಾವುವು?

ಆರೋಗ್ಯ ಸುಧಾರಿಸಿಕೊಂಡು ಶಿವಣ್ಣ ಸಿನಿಮಾ ಕೆಲಸಗಳಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ 'ಎ ಫಾರ್ ಆನಂದ್' ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದು ಅವರದ್ದೇ ಹೋಮ್ ಪ್ರೊಡಕ್ಷನ್ ಸಿನಿಮಾ. ಆದರೆ, ಇದಕ್ಕೂ ಮುನ್ನ ಟಾಲಿವುಡ್‌ ನಟ ರಾಮ್‌ ಚರಣ್ ನಟನೆಯ ಸಿನಿಮಾಗೆ ಶಿವಣ್ಣ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ. ಆ ಬಳಿಕ 'ಎ ಫಾರ್ ಆನಂದ್' ಚಿತ್ರದಲ್ಲಿ ನಟಿಸಲಿದ್ದಾರೆ. ಈಗಾಗಲೇ ಅರ್ಜುನ್ ಜನ್ಯ ನಿರ್ದೇಶಿಸಿದ '45' ಸಿನಿಮಾ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

More from Filmibeat

English summary
When will Shivarajkumar go to America for treatment? When will he return? here is the details;
Read more about: shivarajkumar movies health
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X