ಬಿಗ್‌ ಬಾಸ್ ಕನ್ನಡ ಸೀಸನ್ 10 ರನ್ನರ್ ಅಪ್ ಡ್ರೋನ್ ಪ್ರತಾಪ್ ಈಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ?

ಬಿಗ್‌ ಬಾಸ್ ಕನ್ನಡ ರಿಯಾಲಿಟಿ ಶೋ ಅದೆಷ್ಟೋ ಮಂದಿಗೆ ಬದುಕನ್ನು ಬದಲಿಸಿದೆ. ಸಮಾಜದಲ್ಲಿ ನೆಗೆಟಿವ್ ಇಮೇಜ್ ಹೊಂದಿದ್ದವರು ಬಿಗ್ ಬಾಸ್ ಮನೆಯೊಳಗೆ ಬರುತ್ತಿದ್ದಂತೆ ಬದಲಾಗಿದ್ದಾರೆ. ಅವರ ಬದಲಾವಣೆಯೊಂದಿಗೆ ಇಮೇಜ್ ಕೂಡ ಹಾಗೇ ಬದಲಾಗಿದೆ. ಅಂತಹವರಲ್ಲಿ ಕಳೆದ ಸೀಸನ್‌ನ ರನ್ನರ್ ಅಪ್ ಡ್ರೋನ್ ಪ್ರತಾಪ್ ಕೂಡ ಒಬ್ಬರು.

ಡ್ರೋನ್ ಪ್ರತಾಪ್ ಬಿಗ್‌ ಬಾಸ್ ಕನ್ನಡ ಸೀಸನ್ 10ಕ್ಕೆ ಹೋಗುವುದಕ್ಕೂ ಮುನ್ನ ಸಮಾಜದಲ್ಲಿ ಅವರ ಇಮೇಜ್ ಬೇರೆನೇ ಇತ್ತು. ಡ್ರೋನ್ ಪ್ರತಾಪ್ ಅವರನ್ನು ಇಷ್ಟ ಪಡುವುದಕ್ಕಿಂತ ದ್ವೇಷ ಮಾಡುವವರೇ ಹೆಚ್ಚಿದ್ದರು. ಆದ್ರೀಗ ಹಾಗಿಲ್ಲ, ಡ್ರೋನ್ ಪ್ರತಾಪ್ ಇಷ್ಟ ಪಡುವವರ ಸಂಖ್ಯೆ ದ್ವೇಷ ಮಾಡುವವರಿಗಿಂತ ಹೆಚ್ಚಾಗಿದೆ.

Where is Bigg Boss Kannada season 10 runner-up Drone Prathap doing now

ಬಿಗ್‌ ಬಾಸ್ ಅನ್ನುವ ಒಂದು ರಿಯಾಲಿಟಿ ಶೋ ಎಷ್ಟು ಪವರ್‌ಫುಲ್ ಅನ್ನೋದನ್ನು ಕಳೆದ ಹತ್ತು ಸೀಸನ್ ಕೂಡ ಸಾಬೀತು ಮಾಡಿಕೊಂಡು ಬಂದಿದೆ. ಈಗ ಹನ್ನೊಂದನೇ ಸೀಸನ್ ಆರಂಭ ಆಗುವುದಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಇದೇ ವೇಳೆ ಡ್ರೋನ್ ಪ್ರತಾಪ್ ಅವರನ್ನು ನೆನಪಿಸಿಕೊಂಡವರಿಗೇನು ಕಮ್ಮಿಯಿಲ್ಲ. ಅಷ್ಟಕ್ಕೂ ಡ್ರೋನ್ ಪ್ರತಾಪ್ ಈಗ ಏನು ಮಾಡುತ್ತಿದ್ದಾರೆ? ಎಲ್ಲಿದ್ದಾರೆ? ಅನ್ನೋರಿಗೆ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಒಂದು ವಿಡಿಯೋ ಬಿಟ್ಟಿದ್ದಾರೆ.

ರೈತನಾದರೇ ಡ್ರೋನ್ ಪ್ರತಾಪ್

ಡ್ರೋನ್ ಪ್ರತಾಪ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ತನ್ನ ತಂದೆಯೊಂದಿಗೆ ಹೊಲದಲ್ಲಿ ಕೂತು ಊಟ ಮಾಡುತ್ತಿದ್ದಾರೆ. ಡ್ರೋನ್ ಪ್ರತಾಪ್ ಹಾಗೂ ಅವರ ತಂದೆ ಇಬ್ಬರೂ ಕೂಡ ಆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಹಚ್ಚ ಹಸುರಿನ ಹೊಲದಲ್ಲಿ ಡ್ರೋನ್ ಪ್ರತಾಪ್ ಶರ್ಟ್, ಕೈ ಕಾಲುಗಳೆಲ್ಲ ಮಣ್ಣಾಗಿವೆ. ಹೊಲದಲ್ಲಿಯೇ ಕೂತು ತಂದೆಯೊಂದಿಗೆ ಊಟ ಮಾಡಿದ್ದಾರೆ. ಈ ವಿಡಿಯೋ ನೋಡಿ ಡ್ರೋನ್ ಪ್ರತಾಪ್ ರೈತನಾದರೇ ಎಂದು ನೆಟ್ಟಿಗರು ಖುಷಿ ಪಡುತ್ತಿದ್ದಾರೆ.

ತಂದೆ-ಮಗನ ಬಾಂಧವ್ಯ

ಡ್ರೋನ್ ಪ್ರತಾಪ್ ವಿವಾದಗಳಲ್ಲಿ ಸಿಕ್ಕಿಕೊಂಡಾಗ ಪೋಷಕರಿಂದ ದೂರವಿದ್ದರು. ತಂದೆ-ಮಗ ಇಬ್ಬರೂ ಕೆಲವು ವರ್ಷಗಳ ಕಾಲ ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತಾಡುತ್ತಲೇ ಇರಲಿಲ್ಲ. ಬಿಗ್‌ಬಾಸ್ ಮನೆಯಲ್ಲಿ ಮೂರು ನಾಲ್ಕು ವರ್ಷ ಮಾತಾಡಿಲ್ಲ ಎಂದು ಸ್ವತ: ಡ್ರೋನ್ ಪ್ರತಾಪ್ ಅವರೇ ಹೇಳಿದ್ದರು. ಈಗ ತಮ್ಮ ಹೊಲದಲ್ಲಿ ತಂದೆ ಮಗ ಇಬ್ಬರೂ ಒಟ್ಟಿಗೆ ಕೂತು ಊಟ ಮಾಡುವ ದೃಶ್ಯಕ್ಕೆ ನೆಟ್ಟಿಗರು ಮನ ಸೋತಿದ್ದಾರೆ.

ಏನಂದರು ನೆಟ್ಟಿಗರು?

"ಇದು ನಮ್ಮ ರೈತರ ಆತ್ಮೀಯ ಬಾಂಧವ್ಯ ಅಂದ್ರೆ ಅಪ್ಪ-ಮಕ್ಕಳ ಅನುಬಂಧ ಸೂಪರ್ ಗುರು ಜೈ" ಅಂತ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೇ "ಅಪ್ಪ ಮಗನ ದೂರವಾದ ಸಂಬಂಧ ಹತ್ತಿರವಾಯಿತು", "ಅಪ್ಪನೇ ನಮ್ಮ ಪ್ರಪಂಚ ಅಲ್ವ", "ಬಿಗ್ ಬಾಸ್ ಎಷ್ಟೇ ಸೀಸನ್ ಬಂದ್ರು ಪ್ರತಾಪ್ ಅಂತ ವ್ಯಕ್ತಿನಾ ಯಾವತ್ತೂ ಮರೆಯೋಕೆ ಸಾಧ್ಯ ಇಲ್ಲ", "ಈ ಪುಣ್ಯ ಬಿಗ್ ಬಾಸ್ ಅವರಿಗೆ ಮತ್ತು ಕಿಚ್ಚ ಸುದೀಪ್ ಅವರಿಗೆ ಸಲ್ಲಬೇಕು" ಅಂತ ನೆಟ್ಟಿಗರು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಿಗ್‌ಬಾಸ್‌ಗೆ ಮೆಚ್ಚುಗೆ

ಈ ವಿಡಿಯೋಗೆ ಕೇವಲ 24 ಗಂಟೆಯೊಳಗೆ ನಾಲ್ಕುವರೆ ಲಕ್ಷಕ್ಕೂ ಅಧಿಕ ಮಂದಿಯ ಲೈಕ್ಸ್ ಸಿಕ್ಕಿದೆ. ಅಪ್ಪ ಮಗನನ್ನು ಒಂದು ಮಾಡಿದ್ದಕ್ಕೆ ಬಿಗ್‌ಬಾಸ್‌ಗೆ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಬಿಗ್‌ಬಾಸ್ ಬಳಿಕೆ ಅದೆಷ್ಟೋ ಮಂದಿಯ ಬದುಕೇ ಬದಲಾಗಿದೆ. ಸಮಾಜದಲ್ಲಿ ಮತ್ತೆ ಗೌರವ ಸಿಕ್ಕಿದೆ. ಇಂತಹ ಸ್ಪರ್ಧಿಗಳಲ್ಲಿ ಡ್ರೋನ್ ಪ್ರತಾಪ್ ಕೂಡ ಒಬ್ಬರು. 11ನೇ ಸೀಸನ್‌ನಲ್ಲಿ ಏನಾದರೂ ಸ್ಪೆಷಲ್ ಎಂಟ್ರಿ ಕೊಡುತ್ತಾರಾ? ಅನ್ನೋದು ನೋಡಬೇಕಿದೆ.

More from Filmibeat

English summary
Where is Bigg Boss Kannada season 10 runner-up Drone Prathap doing now?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X