ಅಪಘಾತದ ವೇಳೆ ದರ್ಶನ್ ಕಾರು ಚಲಾಯಿಸುತ್ತಿದ್ದ ರಾಯ್ ಅಂಟೋನಿ ಯಾರು.?
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ನಿನ್ನೆ ರಾತ್ರಿ ಕಾರು ಅಪಘಾತದ ವೇಳೆ ದರ್ಶನ್ ಗನ್ ಮ್ಯಾನ್ ಹಾಗೂ ಕಾರು ಚಾಲಕ ರಾಯ್ ಆಂಟೋನಿ ಕೂಡ ಜೊತೆ ಇದ್ದರು. ಇದರೊಟ್ಟಿಗೆ ಕಾರು ಚಲಾಯಿಸುತ್ತಿದ್ದದ್ದು ಇದೇ ಆಂಟೋನಿ ಎಂದು ಬಲ್ಲ ಮೂಲಗಳಿಂದ ಲಭ್ಯವಾಗಿದೆ.
ರಾಯ್ ಆಂಟೋನಿ ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿ ಎಂದು ಹೇಳಲಾಗಿದೆ. ನಟ ದರ್ಶನ್ ಕಾರು ಸಂಖ್ಯೆ JA 51 JD 79999 ಆರ್ಡಿ ಕ್ಯೂ 7 ಅಪಘಾತವಾದ ಕಾರ್. ಅಪಘಾತದ ಬಳಿಕ ಕಾರನ್ನು ಬೆಂಗಳೂರಿಗೆ ರಾತ್ರೋರಾತ್ರಿ ಶಿಫ್ಟ್ ಮಾಡಲಾಗಿತ್ತು.
ಸದ್ಯ ಈ ಕಾರನ್ನು ಮೈಸೂರು ಪೊಲೀಸರು ವಿಚಾರಣೆಗಾಗಿ ಬೆಂಗಳೂರಿನಿಂದ ವಾಪಸ್ ತರಿಸಲು ಸಜ್ಜಾಗಿದ್ದಾರೆ. ಆಸ್ಪತ್ರೆ ಬಳಿ ವಿವಿ ಪುರಂ ಸಂಚಾರಿ ಠಾಣೆ ಇನ್ಸ್ಪೆಕ್ಟರ್ ರವಿಯಿಂದ ವಿಚಾರಣೆ ನಡೆಯುತ್ತಿದೆ.

ಇನ್ನು ಮತ್ತೊಂದೆಡೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್ ಅವರ ಆರೋಗ್ಯದ ಬಗ್ಗೆ ಆಸ್ಪತ್ರೆಯ ವೈದ್ಯರು ಸ್ಪಷ್ಟನೆ ನೀಡಿದ್ದಾರೆ. ದರ್ಶನ್ ಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆದಿದ್ದು, ಯಾವುದೇ ಪ್ರಾಣಾಪಾಯವಿಲ್ಲ ಎಂದು ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಉಪೇಂದ್ರ ಶೆಣೈ ತಿಳಿಸಿದ್ದಾರೆ.

''ದರ್ಶನ್ ಕೈಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು 25 ಹೊಲಿಗೆ ಹಾಕಲಾಗಿದೆ. ಅವರ ಮುಂಗೈ ಮುರಿದಿದೆ. ಅದಕ್ಕೆ ಪ್ಲೇಟ್ ಹಾಕಿದ್ದೇವೆ. ಸದ್ಯ ಆಸ್ಪತ್ರೆಯಲ್ಲಿಯೇ ಇರುತ್ತಾರೆ. ಸಾಧ್ಯವಾದರೇ ಇಂದು ವಾರ್ಡ್ ಗೆ ಶಿಫ್ಟ ಮಾಡಲಾಗುವುದು. 24 ರಿಂದ 48 ಗಂಟೆಯವರೆಗೂ ಆಸ್ಪತ್ರೆಯಲ್ಲಿಯೇ ಪರಿಶೀಲನೆಯಲ್ಲಿ ಇರಿಸಲಾಗುತ್ತದೆ. ಇಬ್ಬರು ನುರಿತ ವೈದ್ಯರಿಂದ ಸೂಕ್ತ ಚಿಕಿತ್ಸೆ ನಡೆಸಲಾಗುತ್ತಿದೆ. ಇಂದು ಮಧ್ಯಾಹ್ನದ ವೇಳೆಗೆ ವಾರ್ಡ್ ಗೆ ಶಿಪ್ಟ್ ಮಾಡಲಾಗುವುದು'' ಎಂದರು.


Click it and Unblock the Notifications











