'ಭೀಮ' ಸಿನಿಮಾದಲ್ಲಿ ಕೋಳಿ ಹಿಡಿದು ನಿಂತ ಅಶ್ವಿನಿ: ಯಾರಿದು ನಾಟಿ ಕ್ರಶ್?
ದುನಿಯಾ ವಿಜಯ್ ಟಾಲಿವುಡ್‌ಗೆ ಕಾಲಿಟ್ಟು ಬಂದಲ್ಲಿಂದ ಸಿಕ್ಕಾಪಟ್ಟೆ ಚುರುಕಾಗಿಬಿಟ್ಟಿದ್ದಾರೆ. ತಮ್ಮ ಸಿನಿಮಾವನ್ನು ಹೇಗೆ ಜನರಿಗೆ ತಲುಪಿಸಬೇಕು ಅನ್ನೋದರಲ್ಲಿ ಎಕ್ಸ್‌ಪರ್ಟ್ ಆಗಿಬಿಟ್ಟಿದ್ದಾರೆ. ಯಾವ್ಯಾವ ಟೈಮ್‌ಗೆ ಏನೇನು ಮಾಡಬೇಕು? ಅನ್ನೋದು ಗೊತ್ತಾಗಿದೆ.
ಬಾಲಯ್ಯ ಜೊತೆ 'ವೀರ ಸಿಂಹ ರೆಡ್ಡಿ' ಸಿನಿಮಾದಲ್ಲಿ ಸೆಣೆಸಾಡಿದ ಬಳಿಕ ದುನಿಯಾ ವಿಜಯ್ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ತಾವೇ ನಿರ್ದೇಶಿಸಿ, ನಟಿಸುತ್ತಿರುವ 'ಭೀಮ' ಸಿನಿಮಾ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ.
ಇಲ್ಲಿವರೆಗೂ ದುನಿಯಾ ವಿಜಯ್ ಅಭಿಮಾನಿಗಳಿಗೆ 'ಭೀಮ'ನನ್ನು ಪರಿಚಯಿಸಿದ್ದರಷ್ಟೇ. ಆದರೆ, 'ಭೀಮ' ಅರಗಿಣಿ ಯಾರು? ಅನ್ನೋ ಗುಟ್ಟನ್ನು ಬಿಟ್ಟು ಕೊಟ್ಟಿರಲಿಲ್ಲ. ಪ್ರೇಮಿಗಳ ದಿನದಂದು 'ಭೀಮಾ' ಸಿನಿಮಾದ ನಾಯಕಿಯನ್ನು ಪರಿಚಯಿಸಲಾಗಿದೆ. ಅಷ್ಟಕ್ಕೂ ಭೀಮ ಜೊತೆ ಕಾಣಿಸಿಕೊಳ್ಳುತ್ತಿರುವ ನಾಟಿ ಕ್ರಶ್ ಯಾರು? ಅವರ ಹಿನ್ನೆಲೆಯೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಭೀಮ'ನ ಬೆಡಗಿ ಪಕ್ಕಾ ನಾಟಿ
'ಸಲಗ' ಸಿನಿಮಾ ಬಳಿಕ ದುನಿಯಾ ವಿಜಯ್ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ. ಜೊತೆಗೆ ಇದೇ ಸಿನಿಮಾದಲ್ಲಿ ಹೀರೊ ಆಗಿಯೂ ನಟಿಸುತ್ತಿದ್ದಾರೆ. ಹೀಗಾಗಿ 'ಭೀಮ' ಮೇಲೆ ಅದೇ ಕುತೂಹಲವಿದೆ. ಈಗ ಈ ಸಿನಿಮಾಗೆ ಹೊಸ ಪ್ರತಿಭೆಯನ್ನು ಹೀರೊಯಿನ್ ಆಗಿ ಪರಿಚಯ ಮಾಡಿಸಲಾಗುತ್ತಿದೆ. ಅವರೇ ಅಶ್ವಿನಿ. ಇವರ ಫಸ್ಟ್ ಲುಕ್ ರಿಲೀಸ್ ಆಗಿದ್ದಷ್ಟೇ, ಸ್ಯಾಂಡಲ್‌ವುಡ್‌ನ ನಾಟಿ ಕ್ರಶ್ ಅಂತ ಕರೆಯೋಕೆ ಶುರು ಮಾಡಿದ್ದಾರೆ.

ರಂಗಭೂಮಿಯಿಂದ ಬಂದ ನಾಟಿ ಕ್ರಶ್
'ಭೀಮ' ಸಿನಿಮಾ ಎಂಟ್ರಿ ಕೊಟ್ಟ ಅಶ್ವಿನಿ ಪಕ್ಕಾ ದೇಸಿ ಪ್ರತಿಭೆ. ಅಪ್ಪಟ ಕನ್ನಡದ ಹುಡುಗಿ. ಬೆಂಗಳೂರಿನಲ್ಲೇ ಬೆಳೆದಿದ್ದರೂ, ತಂದೆ-ತಾಯಿಗೆ ಗ್ರಾಮೀಣ ಪ್ರದೇಶದ ಅನುಭವಿದೆ. ಹಾಗಂತ ದಿಢೀರನೇ ಬಣ್ಣ ಹಚ್ಚಿ ಕನ್ನಡ ಚಿತ್ರರಂಗಕ್ಕೆ ಧುಮುಕಿಲ್ಲ. ರಂಗಭೂಮಿಯ ಹಲವು ನಾಟಕಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಸುಮಾರು 15ಕ್ಕೂ ಅಧಿಕ ನಾಟಕಗಳಲ್ಲಿ ಅಶ್ವಿನಿ ನಟಿಸಿರುವ ಅನುಭವಿದೆ.

ಅಶ್ವಿನಿಗೆ ಕಲ್ಪನಾ ಪ್ರೇರಣೆ
ಅಶ್ವಿನಿ ರಂಗಭೂಮಿಯಲ್ಲಿ ನಟಿಸಿದ ಅನುಭವವಿದೆ. ಆದರೂ, ನಟನೆಗೆ ಪ್ರೇರಣೆಯಾದರು ಕನ್ನಡ ಚಿತ್ರರಂಗದ ಮಿನುಗುತಾರೆ ಕಲ್ಪನಾ. ಹೀಗಾಗಿ ಫಸ್ಟ್ ಲುಕ್‌ನಲ್ಲಿ ಗಮನಸೆಳೆದಿದ್ದಾರೆ. ರಂಗಭೂಮಿ ಕಲಾವಿದೆಯಾಗಿರುವುದರಿಂದ ನಟನೆಯಲ್ಲಿ ಪರಿಣಿತಿಯನ್ನು ಹೊಂದಿದ್ದಾರೆ. ಈ ಕಾರಣಕ್ಕೆ ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಯೊಂದು ಸಿಗುವ ಎಲ್ಲಾ ಸಾಧ್ಯತೆಗಳೂ ಇವೆ.

ಅಶ್ವಿನಿಗೆ ಅವಕಾಶ ಸಿಕ್ಕಿದ್ದೇಗೆ?
" ಒಂದು ಬುಕ್ ರಿಲೀಸ್ ಕಾರ್ಯಕ್ರಮದಲ್ಲಿ ಸರ್ ನನ್ನನ್ನು ನೋಡಿದ್ದು. ಅಲ್ಲಿ ಒಂದು ಪಾತ್ರ ಇದೆ ಮಾಡುತ್ತೀಯಾ ಅಂತ ಕೇಳಿದ್ರು. ಮಾಡುತ್ತೀನಿ ಅಂತ ಹೇಳಿದೆ. ಆ ಪ್ರಕ್ರಿಯೆ ಶುರುವಾದಾಗ ನನಗೆ ಗೊತ್ತಾಗಿಲ್ಲ. ಆರೇಳು ತಿಂಗಳ ಹಿಂದಷ್ಟೇ ನನಗೆ ಹೀರೊಯಿನ್ ಪಾತ್ರ ಅಂತ ಗೊತ್ತಾಯ್ತು. ಅಲ್ಲಿವರೆಗೂ ನನಗೆ ಹೇಳಿರಲಿಲ್ಲ." ಎಂದು ಅಶ್ವಿನಿ ಹೇಳುತ್ತಾರೆ.


Click it and Unblock the Notifications











