ಗಣೇಶ್ ಸಿನಿಮಾದಲ್ಲಿ ಕೃಷ್ಣನ ಪ್ರಣಯ ಸಖಿಯಾದ ಶರಣ್ಯ ಶೆಟ್ಟಿ: ಈ ನಟಿ ಯಾರು? ಹಿನ್ನೆಲೆಯೇನು?

ಗೋಲ್ಡನ್ ಸ್ಟಾರ್ ಗಣೇಶ್ ಮತ್ತೆ ರೊಮ್ಯಾಂಟಿಕ್ ಮೂಡಿಗೆ ಜಾರಿದ್ದಾರೆ. 'ದಂಡುಪಾಳ್ಯ' ನಿರ್ದೇಶಕರು ಹಿಂಸಾತ್ಮಕ ಸಿನಿಮಾಗಳನ್ನು ಮಾಡುವುದನ್ನು ಬಿಟ್ಟಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಕೆಲವೇ ದಿನಗಳ ಹಿಂದಷ್ಟೇ ಹೊಚ್ಚ ಹೊಸ ಸಿನಿಮಾ 'ಕೃಷ್ಣ ಪ್ರಣಯ ಸಖಿ' ಸೆಟ್ಟೇರಿದೆ.

ಈ ಸಿನಿಮಾಗೆ ಇಬ್ಬರು ನಾಯಕಿಯರು ಅಂತ ಈ ಹಿಂದೆನೇ ಹೇಳಿದ್ದೆವು. ಒಬ್ಬರು ಮಲಯಾಳಂ ನಟಿ ಮಾಳವಿಕಾ ನಾಯರ್ ಈಗಾಗಲೇ ಸೆಟ್ಟಿಗೆ ಎಂಟ್ರಿ ಕೊಟ್ಟಿದ್ದಾರೆ. ಮತ್ತೊಬ್ಬರು ಅಪ್ಪಟ ಕನ್ನಡದ ನಟಿ ಶರಣ್ಯ ಶೆಟ್ಟಿ.

Sharanya Shetty-Ganesh

ಅಷ್ಟಕ್ಕೂ ಈ ನಟಿ ನಟನೆಗೇನು ಹೊಸಬರಲ್ಲ. ಹೀಗಾಗಿ ಸಿನಿಮಾ ಹಾಗೂ ಕಿರುತೆರೆ ವೀಕ್ಷಕರಿಗೆ ಈ ನಟಿ ಚಿರಪರಿಚಿತರೇ. ಹಾಗಿದ್ರೆ, ಗಣೇಶ್ ಜೊತೆ ಡ್ಯೂಯೆಟ್ ಮಾಡೋಕೆ ರೆಡಿಯಾಗಿರೋ ಶರಣ್ಯ ಶೆಟ್ಟಿ ಯಾರು? ಇವರ ಹಿನ್ನೆಲೆಯೇನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಶರಣ್ಯ ಶೆಟ್ಟಿ ಹಿನ್ನೆಲೆಯೇನು?

ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಸಿನಿಮಾ 'ಕೃಷ್ಣ ಪ್ರಣಯ ಸಖಿ'. ಈ ಸಿನಿಮಾದಲ್ಲಿರೋ ಇಬ್ಬರು ನಾಯಕಿಯರಲ್ಲಿ ಒಬ್ಬರು ಮಾಳವಿಕಾ ನಾಯರ್. ಈಗಾಗಲೇ ಇವರ ಪರಿಚಯ ಆಗಿದೆ. ಇನ್ನೊಬ್ಬರು ಶರಣ್ಯ ಶೆಟ್ಟಿ. ಮಾಡಲಿಂಗ್‌ನಿಂದ ಇವರ ವೃತ್ತಿ ಜೀವನ ಶುರುವಾಗಿತ್ತು. ಕನ್ನಡದ ಜನಪ್ರಿಯರ ಧಾರಾವಾಹಿಯಿಂದ ನಟನೆಯನ್ನೇ ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Sharanya Shetty-Ganesh

ಹೌದು, ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ಗಟ್ಟಿಮೇಳ' ಸಿನಿಮಾದಲ್ಲಿ ಸಾಹಿತ್ಯ ಅನ್ನುವ ಪಾತ್ರದಲ್ಲಿ ನಟಿಸುತ್ತಿದ್ದರು. ಇದೇ ಧಾರಾವಾಹಿ ಮೂಲಕ ನಟನೆಗೆ ಎಂಟ್ರಿ ಕೊಟ್ಟಿದ್ದಾರೆ. ಇದೇ ಗ್ಯಾಪ್‌ನಲ್ಲಿ ಸಿನಿಮಾಗಳಲ್ಲೂ ನಟಿಸಿದ್ದಾರೆ. '1980' ಇವರ ಮೊದಲ ಸಿನಿಮಾ. ಆ ಬಳಿಕ 'ಪೆಂಟಗಾನ್', 'ಸ್ಪೂಕಿ ಕಾಲೇಜ್','ಹುಟ್ಟು ಹಬ್ಬದ ಶುಭಾಶಯಗಳು' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇಂಜಿನಿಯರಿಂಗ್ ಪದವೀಧರೆ

ಶರಣ್ಯ ಶೆಟ್ಟಿ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಮುಗಿಸಿದ್ದು, ವಿದ್ಯಾಭ್ಯಾಸ ಮಾಡುವಾಗಲೇ 'ಗಟ್ಟಿಮೇಳ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಅಲ್ಲಿಂದ ನಟನೆ ಹಾಗೂ ಶಿಕ್ಷಣ ಎರಡನ್ನೂ ಬ್ಯಾಲೆನ್ಸ್ ಮಾಡಿದ್ದರು. ಈಗ ಸಂಪೂರ್ಣವಾಗಿ ನಟನೆಯಲ್ಲಿಯೇ ತೊಡಗಿಸಿಕೊಂಡಿದ್ದಾರೆ. ಗಣೇಶ್ ಜೊತೆ ನಟಿಸುತ್ತಿರುವ 'ಕೃಷ್ಣ ಪ್ರಣಯ ಸಖಿ' ಸಿನಿಮಾ ಇವರ ವೃತ್ತಿ ಬದುಕಿನ ದೊಡ್ಡ ಸಿನಿಮಾ.

ಈ ಸಿನಿಮಾದಲ್ಲಿ ಗಮನ ಸೆಳೆದರೆ, ಶರಣ್ಯ ಶೆಟ್ಟಿ ಕನ್ನಡ ಚಿತ್ರರಂಗ ಪ್ರಮುಖ ನಟಿಯರ ಸಾಲಿಗೆ ಸೇರುವ ಎಲ್ಲಾ ಅವಕಾಶಗಳೂ ಇವೆ. ಶ್ರೀನಿವಾಸ್ ರಾಜು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಗಣೇಶ್ ಜೊತೆಗೆ ಕಾಮಿಡಿ ಕಿಂಗ್ ಸಾಧು ಕೋಕಿಲಾ, ಗಿರಿ ಶಿವಣ್ಣ, ಸುಧಾರಾಣಿ ಸೇರಿದಂತೆ ಗಣ್ಯರೇ ನಟಿಸಿದ್ದಾರೆ.

More from Filmibeat

English summary
Who is Sharanya Shetty? one of the female lead in the Ganesh movie Krishna Pranaya Sakhi, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X