ರಕ್ಷಿತ್ ಶೆಟ್ಟಿ ಜೊತೆ ಫೋಟೊದಲ್ಲಿರುವ ವಿಶ್ವ ಪರ್ಯಟನೆ ಮಾಡಿರೋ ಈ ಬಾಲಕ ಯಾರು?
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇಂದು (ಜೂನ್ 6) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 41 ನೇ ವರ್ಷಕ್ಕೆ ಕಾಲಿಟ್ಟಿರುವ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಆತ್ಮೀಯರು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಹಾಗೇ ರಕ್ಷಿತ್ ಶೆಟ್ಟಿಯನ್ನು ಮಾಸ್ ಅವತಾರದಲ್ಲಿ ನೋಡುವುದಕ್ಕೆ ತುಡಿತ ವ್ಯಕ್ತಪಡಿಸಿದ್ದಾರೆ.
ರಕ್ಷಿತ್ ಶೆಟ್ಟಿ ಸದ್ಯ 'ರಿಚರ್ಡ್ ಆಂಟನಿ' ಸಿನಿಮಾ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ಸದ್ಯ ಈ ಸಿನಿಮಾ ಪ್ರಿ-ಪ್ರೊಡಕ್ಷನ್ ಹಂತದಲ್ಲಿದೆ. ರಕ್ಷಿತ್ ಹುಟ್ಟುಹಬ್ಬದಂದು ಈ ಸಿನಿಮಾ ಬಗ್ಗೆ ಏನಾದರೂ ಅಪ್‌ಡೇಟ್ ಸಿಗಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಈ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಏನೂ ಇಲ್ಲ. ಹೊಂಬಾಳೆ ಫಿಲ್ಮ್ಸ್ ಬರ್ತ್‌ಡೇ ವಿಶ್ ಮಾಡುವುದರ ಜೊತೆಗೆ 'ರಿಚರ್ಡ್ ಆಂಟನಿ'ಗಾಗಿ ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಿರುವುದನ್ನು ರಿವೀಲ್ ಮಾಡಿದ್ದಾರೆ.

ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದಂದೇ ಸೋಶಿಯಲ್ ಮೀಡಿಯಾದಲ್ಲಿ ಫೋಟೊವೊಂದು ಹರಿದಾಡುತ್ತಿದೆ. ಈ ಫೋಟೊ ನೋಡಿ ನೆಟ್ಟಿಗರು ಖುಷಿ ಪಡುತ್ತಿದ್ದಾರೆ. ಅಷ್ಟಕ್ಕೂ ಈ ಫೋಟೊದಲ್ಲಿ ರಕ್ಷಿತ್ ಶೆಟ್ಟಿ ಜೊತೆ ಪುಟ್ಟ ಬಾಲಕ ನಿಂತಿದ್ದಾನೆ. ಈತ ಕೂಡ ರಕ್ಷಿತ್ ಶೆಟ್ಟಿ ಬರ್ತ್‌ಡೇಗೆ ಶುಭಾಶಯ ಕೋರಿದ್ದಾರೆ. ಅಷ್ಟಕ್ಕೂ ಆ ಪುಟ್ಟ ಬಾಲಕ ಯಾರೆಂದು ಗುರುತಿಸ ಬಲ್ಲಿರಾ?..
'ಕಿರಿಕ್ ಪಾರ್ಟಿ' ರಕ್ಷಿತ್ ಶೆಟ್ಟಿ ಪಕ್ಕದಲ್ಲಿ ನಿಂತಿರುವ ಈ ಬಾಲಕ ಇಂದು ಸೋಶಿಯಲ್ ಮೀಡಿಯಾದ ಸೆನ್ಸೇಷನ್. ಯೂಟ್ಯೂಬ್‌ನಲ್ಲಿ, ಇನ್‌ಸ್ಟಾಗ್ರಾಂನಲ್ಲಿ ಇವರದ್ದೇ ಹವಾ. ಈಗಲಾದರೂ, ಯಾರೆಂದು ಗುರುತಿಸಬಹುದೇ? ಹೌದು ನೀವು ಊಹೆ ಮಾಡಿದಂತೆ ಈತ ಕನ್ನಡದ ಯೂಟ್ಯೂಬ್ ಸ್ಟಾರ್ ಡಾ.ಬ್ರೋ. ಉರ್ಫ್ ಗಗನ್ ಶ್ರೀನಿವಾಸ್. ಹಿಂದೊಮ್ಮೆ ಬಾಲಕನಾಗಿದ್ದಾಗ ರಕ್ಷಿತ್ ಶೆಟ್ಟಿ ಜೊತೆ ತೆಗಿಸಿಕೊಂಡ ಫೋಟೊವನ್ನು ಶೇರ್ ಮಾಡಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಡಾ.ಬ್ರೋಗೆ (ಗಗನ್ ಶ್ರೀನಿವಾಸ್) ಹವಾ ಎಷ್ಟಿದೆ ಅನ್ನೋದು ಗೊತ್ತೇ ಇದೆ. ದೇಶ, ವಿದೇಶಗಳನ್ನು ಪರ್ಯಟನೆ ಮಾಡುತ್ತಾ ಕನ್ನಡಿಗರಿಗೆ ಅಲ್ಲಿನ ಸುಂದರ ತಾಣಗಳನ್ನು, ವಿಶೇಷವಾದ ಸ್ಥಳಗಳನ್ನು ತೋರಿಸುತ್ತಾ? ರಂಜಿಸುತ್ತಿದ್ದಾರೆ. ಹೀಗಾಗಿ ಡಾ. ಬ್ರೋಗೆ ವಿಡಿಯೋಗಳಿಗೆ ಸಿಕ್ಕಾಪಟ್ಟೆ ಬೇಡಿಕೆಯಿದೆ. ಡಾ.ಬ್ರೋ ಯೂಟ್ಯೂಬ್ ಚಾನೆಲ್ ಅನ್ನು ಫಾಲೋ ಮಾಡುವವರ ಸಂಖ್ಯೆನೂ ದೊಡ್ಡದಿದೆ.
ಡಾ.ಬ್ರೋ ಕೇವಲ ಕರ್ನಾಟಕದಲ್ಲಿರುವವರಿಗೆ ಅಷ್ಟೇ ಅಲ್ಲ, ವಿಶ್ವದ ಮೂಲೆ ಮೂಲೆಯಲ್ಲಿರೋ ಕನ್ನಡಿಗರಿಗೂ ಇಷ್ಟ. "ನಮಸ್ಕಾರ ದೇವ್ರು.." ಅಂತ ತಮ್ಮ ಸ್ಟೈಲ್‌ನಲ್ಲಿ ವಿಡಿಯೋ ಮಾಡುವುದಕ್ಕೆ ಶುರು ಮಾಡಿದರೆ, ಮಿಲಿಯನ್ ಲೆಕ್ಕದಲ್ಲಿ ವೀವ್ಸ್ ಅನ್ನು ಗಿಟ್ಟಿಸಿಕೊಳ್ಳುವುದು ಗ್ಯಾರಂಟಿ. ಅಯೋಧ್ಯೆ ಸೀರಿಸ್ ಬಳಿಕ ಬ್ರೇಕ್ ತೆಗೆದುಕೊಂಡಿದ್ದ ಡಾ.ಬ್ರೋ ಮತ್ತೆ ಆಕ್ಟಿವ್ ಆಗಿದ್ದಾರೆ.
ಡಾ.ಬ್ರೋ ಮೂರು ವಾರಗಳ ಹಿಂದಷ್ಟೇ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಇಂಡೋನೇಷ್ಯಾದ ಜ್ವಾಲಾಮುಖಿಯ ಬಗ್ಗೆ ವಿಡಿಯೋ ಮಾಡಿದ್ದರು. ಆ ವಿಡಿಯೋ ಕೂಡ ಸುಮಾರು 1.6 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಈ ವಿಡಿಯೋ ಬಳಿಕವೂ ಮೂರು ವಾರ ಗ್ಯಾಪ್ ಕೊಟ್ಟಿದ್ದು, ಹೊಸ ವಿಡಿಯೋಗಾಗಿ ನೆಟ್ಟಿಗರು ಎದುರು ನೋಡುತ್ತಿದ್ದಾರೆ.


Click it and Unblock the Notifications











