ಯೋಗರಾಜ್ ಭಟ್ ಪ್ರಕಾರ ಈ ಬಾರಿ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲುತ್ತೆ? ವಿಡಿಯೋ ವೈರಲ್

ಸ್ಯಾಂಡಲ್‌ವುಡ್‌ನ ಸ್ಟಾರ್ ನಿರ್ದೇಶಕ ಯೋಗರಾಜ್‌ ಭಟ್ ಸಾಮಾನ್ಯವಾಗಿ ರಾಜಕೀಯದ ಬಗ್ಗೆ ಮಾತಾಡೋದಿಲ್ಲ. ಎಲ್ಲಾ ರಾಜಕೀಯ ಮುಖಂಡರೊಂದಿಗೂ ಚೆನ್ನಾಗಿರೋ ಭಟ್ಟರು ರಾಜಕೀಯ ಪಕ್ಷಗಳ ಬಗ್ಗೆ ನೇರವಾಗಿ ಮಾಡಿದ್ದೇ ಇಲ್ಲ. ಆದ್ರೀಗ ವೋಟ್ ಹಾಕಿ ಬಂದ್ಮೇಲೆ ಪತ್ನಿ ಹಾಗೂ ಮಗಳೊಂದಿಗೆ ರಾಜಕೀಯ ಲೆಕ್ಕಾಚಾರ ಹಾಕಿದ್ದಾರೆ.

ಭಟ್ಟರ ಸಿನಿಮಾಗಳಲ್ಲಿ ರಾಜಕೀಯದ ಛಾಯೆ ಇರುತ್ತೆ. ಆದರೆ, ಗೊತ್ತಿದ್ದೂ, ಗೊತ್ತಿಲ್ಲದಂತೆ ಪ್ರೇಕ್ಷಕರ ಕಣ್ಮುಂದೆ ಬಂದು ಹೋಗುತ್ತೆ. ಹೀಗಾಗಿ ರಾಜಕೀಯ ಪಕ್ಷ ಅಥವಾ ಮುಖಂಡರ ಬಗ್ಗೆ ನೇರವಾಗಿ ಮಾತಾಡಿದ್ದೇ ಇಲ್ಲ. ಅಂತಹ ಸಂದರ್ಭ ಬಂದರೆ, ಅವ್ರದ್ದೇ ಸ್ಟೈಲ್‌ನಲ್ಲಿ ಒಂದು ಸ್ಮೈಲ್ ಕೊಟ್ಟು ಎಸ್ಕೆಪ್ ಆಗಿದ್ದೂ ಇದೆ.

Yogaraj Bhat prediction with wife and daughter

ಅದ್ಯಾಕೋ ಈಗ ಪತ್ನಿ ರೇಣುಕಾ ಅವರೊಂದಿಗೆ ರಾಜಕೀಯ ಚರ್ಚೆ ಮಾಡಿದ್ದಾರೆ. ಮೀಸೆ ತೆಗೆದು ಹೊಸ ಅವತಾರದಲ್ಲಿ ಪ್ರತ್ಯಕ್ಷ ಆಗಿದ್ದಾರೆ. ಈ ಬಾರಿ ಯಾವ ಪಕ್ಷ ಗೆಲ್ಲಬಹುದು ಅನ್ನೋ ಪತ್ನಿಯ ಪ್ರಶ್ನೆಗೆ ತಮ್ಮದೇ ಟಿಪಿಕಲ್ ಸ್ಟೈಲ್‌ನಲ್ಲಿ ಯೋಗರಾಜ್ ಭಟ್ಟರು ಉತ್ತರ ಕೊಟ್ಟಿದ್ದಾರೆ. ಅದರ ಸಾರಾಂಶ ಇಲ್ಲಿದೆ.

ಯೋಗರಾಜ್ ಭಟ್‌ಗೆ ಪತ್ನಿ ಕೇಳಿದ ಪ್ರಶ್ನೆಗಳಿವು

ಪತ್ನಿ: ನೀವು ಯಾವ ಪಾರ್ಟಿ ಪರ ಅಂತ ಕೇಳಬಹುದಾ? ಯಾವ ಸೈಡ್ ನೀವು?

ಯೋಗರಾಜ್‌ ಭಟ್: ನಮ್ಮನ್ನ ಸಿನಿಮಾ ನಿರ್ದೇಶಕರು, ದಿಗ್ದರ್ಶಕರು ಅಂತ ಕರೀತಾರೆ. ಟಾಪು, ಬಾಟಮ್ಮು, ಫ್ರಂಟು, ಬ್ಯಾಕು, ಎಡ, ಬಲ ಎಲ್ಲಾ ಒಂದೇ ತರ ಅಂತ ಅಂದುಕೊಳ್ಳಬಹುದು. ಎಲ್ಲಾ ದಿಕ್ಕಿಗೂ ಸಮಾನ ರೆಸ್ಪೆಕ್ಟ್ ಕೊಡಬೇಕು. ಮನುಷ್ಯತ್ವ ಮುಖ್ಯ. ಮನುಷ್ಯನ ದಿಕ್ಕು ತಗೊಂಡು ಏನು ಮಾಡೋಣ? ನಾನು ಅಥವಾ ನಮ್ಮಂತಹವರು ನಿರ್ಲಿಪ್ತ, ನಿರ್ವಿಘ್ನ ನಾಗರೀಕರು.

Yogaraj Bhat prediction with wife and daughter

ಪತ್ನಿ: ಓ ಎಲ್ಲಾ ರೌಂಡ್ ರೌಂಡ್.. ಭೂಲೋಕ ಎಲ್ಲಾ ರೌಂಡ್.

ಯೋಗರಾಜ್‌ ಭಟ್: ಹೌದು.. 360 ಡಿಗ್ರಿ ಸಪೋರ್ಟ್.

ಪತ್ನಿ: ಸಿನಿಮಾದವರೆಲ್ಲ ಅಲ್ಲಿ ಇಲ್ಲಿ ಪ್ರಚಾರಕ್ಕೆ ಹೋಗುತ್ತಿದ್ರೆ, ತಾವು ಹೋಗಿಲ್ವೇನು?

ಯೋಗರಾಜ್‌ ಭಟ್: ಅದು ಅವರವರ ಆಸೆ, ಅವರವರ ಆಯ್ಕೆ. ತಪ್ಪು ಸರಿ ಚರ್ಚೆ ಮಾಡುವುದಕ್ಕೆ ಹೋಗಬಾರದು. ಕಾಸು ಖುಷಿ ಕೆಡಿಸಿತು. ಮಾತು ಮನೆ ಕೆಡಿಸಿತು. ತೂತು ಒಲೆ ಕೆಡಿಸಿತು ಅಂತ ಒಂದು ಗಾಧೆ ಇದೆ.

ಪತ್ನಿ: ಈಗ ಯಾವ ಪಾರ್ಟಿ ಬರಬಹುದು ರಾಜ್ಯದಲ್ಲಿ ತಮ್ಮ ಪ್ರಕಾರ

ಯೋಗರಾಜ್‌ ಭಟ್: ಜಮಾನ ತುಂಬಾ ಸ್ಪೀಡ್ ಆಗಿದೆ. ಮನುಷ್ಯ ಕಂಡು ಹಿಡಿದುಕೊಂಡಿದ್ದದನ್ನೆಲ್ಲಾ ಮನುಷ್ಯನೇ ಸ್ಪೀಡ್ ಮಾಡಿಕೊಂಡಿದ್ದಾನೆ. ಈ ಹಿಂದೆ 5 ದಿನ ಟೆಸ್ಟ್ ಕ್ರಿಕೆಟ್ ಅಂತ ನಡೆಯುತ್ತಿತ್ತು. ಅದೀಗ ಒಂದು ದಿವಸ ಆಡೋದೇ ದೊಡ್ಡದಾಯ್ತು. ಈಗ 20 ಓವರ್‌ಗೆ ಬಂದಾಗಿದೆ. ಇನ್ನೊಂದು ಸ್ವಲ್ಪ ದಿನ ಬರೀ ಹೈಲೈಟ್ಸ್ ಅಷ್ಟೇ. ಇನ್ನ ಮೂರುವರೆ ನಾಲ್ಕು ತಾಸು ಸಿನಿಮಾಗಳೆಲ್ಲವೂ ಇದ್ದವು. ಅವೆಲ್ಲ ಈಗ 20 ಸೆಕೆಂಡ್ ರೀಲ್ಸ್, ಶಾರ್ಟ್ ಆಗಿ ಮೊಬೈಲ್‌ನಲ್ಲಿ ಬಂದು ಬಿದ್ದು ಬಿಡುತ್ತವೆ. ಇನ್ನು ಐದು ವರ್ಷಕ್ಕೆ ಮತ್ತೊಂದು ಚುನಾವಣೆ ನಾಲ್ಕರಿಂದು ಐದು ಮಂದಿ ಕೂತು ಏಳುತ್ತಾರೆನೋ ಗೊತ್ತಿಲ್ಲ. ವರ್ಷಕ್ಕೆ ಇಬ್ಬರು ಅಂತ ಬಂದರೆ, ವರ್ಷಕ್ಕೊಂದು ಎಲೆಕ್ಷನ್ ಲೆಕ್ಕಾನೇ ಬರುತ್ತೆ.

ಪತ್ನಿ: ತಮ್ಮಂಗೆ ಬದುಕೋದು ಹೇಗೆ ಸ್ವಾಮಿ?

ಯೋಗರಾಜ್‌ ಭಟ್: ನನ್ನತರ ಯಾರೂ ಇರಬಾರದು. ನನ್ನತರ ನಾನೊಬ್ಬನೇ ಇರಬೇಕು.

ಪತ್ನಿ: ನಿಮ್ಮ ಪ್ರಕಾರ, ಮನುಷ್ಯರು ಏನು ಮಾಡಬೇಕು ಇವಾಗ?

ಯೋಗರಾಜ್‌ ಭಟ್: ಮನುಷ್ಯರು ಏನು ಮಾಡಬೇಕು ಅಂತ ಹೇಳುವುದಕ್ಕೆ ನಾವ್ಯಾರು? ನಾವೇನು ಮಾಡಬೇಕೋ ಅದನ್ನು ಮಾತ್ರ ಯೋಚನೆ ಮಾಡಬೇಕು.

ಪತ್ನಿ: ತಾವೇನಾಗ್ಬೇಕು ಅಂತ ಅದನ್ನಾದ್ರೂ ಹೇಳಿ ಸ್ವಲ್ಪ?

ಯೋಗರಾಜ್ ಭಟ್: ಆದಿ ಮಾನವ ಆಗಿಬಿಡೋಣ ಅಂತ. ಎಲ್ಲದರಿಂದ ಮುಕ್ತ ಅಂತ.

ಮಗಳು: ಈಗ ಹಂಗೇ ಇರೋದು.. ಇನ್ಯಾಕೆ ಆಗಬೇಕು ಆದಿ ಮಾನವನತರ.(ನಗು)

More from Filmibeat

English summary
Who Will win the election? Yogaraj Bhat prediction with wife and daughter, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X