240 ದಿನಗಳ ಕಾಲ 'ಮಾರ್ಟಿನ್' ಶೂಟಿಂಗ್; ಧ್ರುವ ಸರ್ಜಾ ಸಿನಿಮಾದ ಬಜೆಟ್ ಗಗನಕ್ಕೇರಿದ್ದೇಗೆ?

2024ರ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಮಾರ್ಟಿನ್'. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಎಪಿ ಅರ್ಜುನ್ ಕಾಂಬಿನೇಷನ್‌ನಲ್ಲಿ ಈ ಸಿನಿಮಾ 2021ರಲ್ಲಿ ಸೆಟ್ಟೇರಿತ್ತು. ಅಲ್ಲಿಂದ ನಿನ್ನೆವರೆಗೂ (ಮಾರ್ಚ್ 7) ಈ ಸಿನಿಮಾದ ಶೂಟಿಂಗ್ ನಡೆಯುತ್ತಲೇ ಇತ್ತು. ಕೊನೆಗೂ 'ಮಾರ್ಟಿನ್‌'ಗೆ ಕುಂಬಳಕಾಯಿ ಒಡೆದು ಶೂಟಿಂಗ್ ಮುಗಿಸಿದ್ದಾರೆ.

ಸಿನಿಮಾದ ಚಿತ್ರೀಕರಣದ ಜೊತೆ ಜೊತೆಗೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಬಹುತೇಕ ಮುಗಿಸಿದ್ದಾರೆ. ಕೆಲವೇ ಕೆಲವು ಕೆಲಸಗಳು ಮುಗಿದರೆ, 'ಮಾರ್ಟಿನ್' ಅದ್ಧೂರಿಯಾಗಿ ತೆರೆಮೇಲೆ ಬರುತ್ತೆ. ಆದರೆ, ಈ ಸಿನಿಮಾ ಶೂಟಿಂಗ್ ಮಾಡುವುದಕ್ಕೆ ಇಷ್ಟು ಯಾಕೆ ಹಿಡೀತು. ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರೂ, 240 ದಿನಗಳ ಕಾಲ ಶೂಟಿಂಗ್ ಮಾಡುವಂತಹದ್ದು ಏನಿತ್ತು? ಇಂತಹ ಪ್ರಶ್ನೆಗಳು ಚಿತ್ರರಂಗದಲ್ಲಿ ಎದ್ದಿತ್ತು.

AP Arjun Dhruva Sarja about Martin Budget

'ಮಾರ್ಟಿನ್' ಸಿನಿಮಾವನ್ನು ಎಪಿ ಅರ್ಜುನ್ ನಿರ್ದೇಶನ ಮಾಡಿದ್ದರೆ, ಉದಯ್ ಕೆ ಮೆಹ್ತಾ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕ ಯಾರೇ ಆಗಿರಲಿ, ಸಿನಿಮಾ ಬೇಗ ಮುಗಿಸೋಕೆ ನೋಡುತ್ತಾರೆ. ಅದರಲ್ಲೂ 240 ದಿನ ಅಂದರೆ ಒಪ್ಪಿಕೊಳ್ಳುವುದು ಕಷ್ಟ. ಹೀಗಿದ್ದೂ 240 ದಿನ ಸಿನಿಮಾ ಶೂಟಿಂಗ್ ಆಗಿದೆ. ಯಾಕಿಷ್ಟು ದಿನ ಬೇಕಾಯ್ತು? ಬಜೆಟ್ ಅಂದ್ಕೊಂಡಿದ್ದೆಷ್ಟು? ಹೋಗಿದ್ದೆಷ್ಟಕ್ಕೆ? ಇದೆಲ್ಲವನ್ನೂ ಎಪಿ ಅರ್ಜುನ್ ರಿವೀಲ್ ಮಾಡಿದ್ದಾರೆ.

ಎಪಿ ಅರ್ಜುನ್ ನಿಧಾನವಾಗಿ ಶೂಟಿಂಗ್ ಮಾಡುತ್ತಾರೆ ಅನ್ನೋ ಮಾತು ಇಂಡಸ್ಟ್ರಿಯಲ್ಲಿದೆ. ಆದರೆ, ಇವರ ಡೈರೆಕ್ಷನ್ ಪರ್ಫೆಕ್ಟ್ ಆಗಿರುತ್ತೆ ಅನ್ನುವವರೂ ಇದ್ದಾರೆ. 'ಮಾರ್ಟಿನ್' ಸಿನಿಮಾ ಚಿತ್ರೀಕರಣ ತಡವಾಗುತ್ತಿರುವುದನ್ನು ಗಮನಿಸಿದ್ದ ಚಿತ್ರರಂಗದ ಎಷ್ಟು ದಿನ ಶೂಟಿಂಗ್ ಮಾಡುತ್ತಿದ್ದೀರಿ? ಎಂದು ಎಪಿ ಅರ್ಜುನ್‌ರನ್ನು ಅಂತ ಪ್ರಶ್ನೆ ಮಾಡಿದ್ದೂ ಇದೆ. ಆದರೆ, ಈಗಾಗಲೇ ರಿಲೀಸ್ ಆಗಿರೋ ಫಸ್ಟ್ ಝಲಕ್ ಈ ಪ್ರಶ್ನೆಗಳಿಗೆ ಕಿಕ್ ಕೊಟ್ಟಿದ್ದರೂ, ಟೀಸರ್ ಹಾಗೂ ಟ್ರೈಲರ್ ಸರಿಯಾದ ಉತ್ತರ ಕೊಡುತ್ತೆ ಅಂತ ಎದುರು ನೋಡಲಾಗುತ್ತಿದೆ.

ಈ ಮಧ್ಯೆ ಕೊನೆಯ ದಿನದ ಶೂಟಿಂಗ್ ಮುಗಿಸಿದ ಬಳಿಕ ನಿರ್ದೇಶಕ ಎಪಿ ಅರ್ಜುನ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಯಾಕಿಷ್ಟು ದಿನ ಶೂಟಿಂಗ್ ಆಯ್ತು? ಸಿನಿಮಾ ಬಜೆಟ್ ಎಷ್ಟು ಅನ್ನುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

AP Arjun Dhruva Sarja about Martin Budget

"ಇಲ್ಲಿವರೆಗೂ ಸುಮಾರು 240 ದಿನ ಶೂಟಿಂಗ್ ಮಾಡಿದ್ದೇವೆ. ಎಲ್ಲರೂ ಕೇಳುತ್ತಿದ್ದರು.. ಎಲ್ಲಿಗೆ ಹೋದರೂ ನನಗೆ ಮುಜುಗರ ಆಗೋದು. ಎಷ್ಟು ದಿನ ಶೂಟ್ ಮಾಡ್ತಿರಾ ರೀ.. ಅನ್ನೋರು. ಮಾರ್ಟಿನ್ ಸಿನಿಮಾವನ್ನು ಇಷ್ಟು ದಿನ ಶೂಟ್ ಮಾಡಬೇಕು ಅಂತ ನಾನು ಅಂದುಕೊಂಡಿರಲಿಲ್ಲ. ನಮ್ಮ ಪ್ರಡ್ಯೂಸರ್ ಕೂಡ ಅಂದುಕೊಂಡಿರಲಿಲ್ಲ. ನಮ್ಮ ಹೀರೊನೂ ಅಂದುಕೊಂಡಿರಲಿಲ್ಲ." ಎಂದು ನಿರ್ದೇಶಕ ಎಪಿ ಅರ್ಜುನ್ ಹೇಳಿದ್ದಾರೆ.

ಶೂಟಿಂಗ್ ಡೇಸ್ ಬಗ್ಗೆ ಮಾತಾಡುವಾಗಲೇ ಸಿನಿಮಾ ಬಜೆಟ್‌ ಬಗ್ಗೆನೂ ಮಾತಾಡಿದ್ದಾರೆ. ಮೊದಲು ಅಂದುಕೊಂಡ ಬಜೆಟ್ ಒಂದು. ಆದರೆ, ಆಗಿದ್ದೇ ಇನ್ನೊಂದು. ಅದ್ಯಾಕೆ ಬಜೆಟ್ ಗಗನಕ್ಕೇರಿತು ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ಮೊದಲು ನಾವು ಅಂದ್ಕೊಂಡಿದ್ದ ಬಜೆಟ್ ಒಂದು. ಮೊದಲು ನಾವು 35 ರಿಂದ 40 ಕೋಟಿ ರೂಪಾಯಿ ಬಜೆಟ್‌ನಲ್ಲಿ ಸಿನಿಮಾ ಮಾಡ್ಬೇಕು ಅಂತಾನೇ ಅಂದುಕೊಂಡಿದ್ದೆವು. ಆದರೆ, ಅದು 80 ರಿಂದ 90 ದಿನಕ್ಕೆ ಆ ಬಜೆಟ್ ರೀಚ್ ಆಗಿಬಿಡ್ತು. " ಎಂದು ಹೇಳಿದ್ದಾರೆ.

'ಮಾರ್ಟಿನ್' ಸಿನಿಮಾಗಾಗಿ ಸುಮಾರು 18 ರಿಂದ 20 ದುಬಾರಿ ಸೆಟ್ ಹಾಕಲಾಗಿದೆ. ಈ ವೇಳೆ ಏನಾದರೂ ಒಂದು ಅಡೆತಡೆ ಆಗುತ್ತಿತ್ತು ಎಂದು ನಿರ್ದೇಶಕರು ಹೇಳಿದ್ದಾರೆ. ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ 25 ದಿನ ಅಂದ್ಕೊಂಡಿದ್ದು, 48 ದಿನಕ್ಕೆ ಹೋಗಿತ್ತು. ಕಂಪ್ಲೀಟ್ ಆಗಿ ಮುಗಿಯುವ ಹೊತ್ತಿಗೆ 52 ದಿನ ಆಗಿತ್ತು. " ಇಷ್ಟು ದಿನ ಶೂಟ್ ಮಾಡಿದ್ದನ್ನು ನೋಡಿ, ಏನ್ರಿ ಒಂದು ಸಿನಿಮಾ ಮುಗಿಸಬಹುದಿತ್ತು. ನೀವು ಬರೀ ಕ್ಲೈಮ್ಯಾಕ್ಸ್ ಮಾಡಿದ್ದೀರಲ್ಲ?" ಅಂತಿದ್ದರು ಎಂದು ನಿರ್ದೇಶಕ ಎಪಿ ಅರ್ಜುನ್ ಹೇಳಿಕೊಂಡಿದ್ದಾರೆ.

More from Filmibeat

English summary
Why AP Arjun took 240 days of shooting for Dhruva Sarja's Martin
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X