ಕೆನಡಾದ ಈ ಥಿಯೇಟರ್‌ನಲ್ಲಿ ರಿಷಬ್ ಶೆಟ್ಟಿಯ 'ಕಾಂತಾರ ಚಾಪ್ಟರ್ 1' ಸ್ಥಗಿತಗೊಳಿಸಿದ್ದೇಕೆ?

ಭಾರತೀಯ ವಿಶ್ವದ ಹಲವೆಡೆ ನೆಲೆಸಿದ್ದಾರೆ. ಉದ್ಯೋಗ, ವ್ಯಾಪಾರ ಅಂತ ಕುಟುಂಬ ಸಮೇತ ಅಲ್ಲಿಯೇ ಸೆಟಲ್ ಆಗಿದ್ದಾರೆ. ಹೀಗೆ ಭಾರತೀಯರು ಅತೀ ಹೆಚ್ಚು ಸಂಖ್ಯೆಯಲ್ಲಿ ಸೆಟಲ್ ಆದ ದೇಶಗಳಲ್ಲಿ ಒಂದು ಕೆನಡಾ. ಇಲ್ಲಿ ಭಾರತದ ಪ್ರತಿಯೊಂದು ಭಾಷೆಯ ಜನರು ಕೂಡ ನೆಲೆಸಿದ್ದಾರೆ. ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಆದರೆ, ಇತ್ತೀಚೆಗೆ ಕೆನಡಾ ಹಾಗೂ ಭಾರತದ ಸಂಬಂಧ ಖಲಿಸ್ತಾನಿಗಳಿಂದ ಕೆಟ್ಟಿತ್ತು. ಇಲ್ಲಿಂದ ಒಂದಲ್ಲ ಒಂದು ಘಟನೆಗಳು ನಡೆಯುತ್ತಲೇ ಇವೆ.

ಭಾರತೀಯ ಸಿನಿಮಾಗಳಿಗೆ ಅಮೆರಿಕ ಚಿತ್ರಮಂದಿರಗಳಿಂದ ಹೇಗೆ ಹಣ ಹರಿದು ಬರುತ್ತೋ ಹಾಗೆ ಕೆನಡಾದ ಥಿಯೇಟರ್‌ಗಳಿಂದ ನಿರ್ಮಾಪಕರ ಜೇಬು ತುಂಬುತ್ತೆ. ಹೀಗಾಗಿ ಇಲ್ಲಿ ಭಾರತೀಯ ಸಿನಿಮಾಗಳು ಹೆಚ್ಚಾಗಿ ರಿಲೀಸ್ ಆಗುತ್ತವೆ. ಇತ್ತೀಚೆಗೆ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ 'ಕಾಂತಾರ ಚಾಪ್ಟರ್ 1' ಹಾಗೂ ಪವರ್‌ಸ್ಟಾರ್ ಪವನ್ ಕಲ್ಯಾಣ್ ನಟನೆಯ 'ಓಜಿ' ಸಿನಿಮಾಗಳು ಇಲ್ಲಿ ರಿಲೀಸ್ ಆಗಿದ್ದವು.

Why Canada theatre stopped Rishab Shetty s Movie Kantara Chapter 1 and other Indian films

ಈಗ ಕೆನಡಾದ ಒಂಟಾರಿಯೊದಲ್ಲಿರುವ Film.ca cinemas ಚಿತ್ರಮಂದಿರ ಈ ಎರಡು ಚಿತ್ರಗಳು ಸೇರಿದಂತೆ ಭಾರತೀಯ ಸಿನಿಮಾಗಳ ಪ್ರದರ್ಶನವನ್ನು ರದ್ದು ಮಾಡಿದೆ. ಒಂಟಾರಿಯೊದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಅಷ್ಟಕ್ಕೂ ಇಲ್ಲಿ ಅಂತಹ ಘಟನೆ ಏನು ನಡೀತು? ಭಾರತೀಯ ಸಿನಿಮಾವನ್ನು ಸ್ಥಗಿತಗೊಳಿಸಿದ್ದು ಯಾಕೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಒಂಟೊರಿಯೊದ Film.ca cinemas ಚಿತ್ರಮಂದಿರಕ್ಕೆ ಸೆಪ್ಟೆಂಬರ್ 25ರಂದು ಬೆಳ್ಳಂಬೆಳಗ್ಗೆ 5.20ಕ್ಕೆ ಬೆಂಕಿ ಹಚ್ಚಲಾಗಿತ್ತು. ಇಬ್ಬರು ವ್ಯಕ್ತಿಗಳು ಚಿತ್ರಮಂದಿರ ಮುಂಭಾಗ ರೆಡ್ ಗ್ಯಾಸ್ ಅನ್ನು ಎಸೆದು ಬೆಂಕಿ ಹಚ್ಚಿದ್ದರು. ಈ ಘಟನೆಯಿಂದ ಚಿತ್ರಮಂದಿರದ ಎಂಟ್ರೆನ್ಸ್ ಅಷ್ಟೇ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದರು. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಅಂದರೆ, ಅಕ್ಟೋಬರ್ 2ರಂದು ಮತ್ತೊಂದು ಘಟನೆ ನಡೆದಿದೆ. ಚಿತ್ರಮಂದಿರ ಗುಂಡಿನ ದಾಳಿಯನ್ನು ನಡೆಸಲಾಗಿದೆ. ಈ ಎರಡು ಘಟನೆಗಳ ಬಳಿಕ ಭಾರತೀಯ ಸಿನಿಮಾಗಳ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿದೆ.

Why Canada theatre stopped Rishab Shetty s Movie Kantara Chapter 1 and other Indian films

Film.ca cinemas ಚಿತ್ರಮಂದಿರದ ಸಿಇಓ ಜೆಫ್ ನಾಲ್ ಭಾರತೀಯ ಸಿನಿಮಾಗಳನ್ನು ರದ್ದುಗೊಳಿಸಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಭಾರತೀಯ ಸಿನಿಮಾಗಳನ್ನು ಚಿತ್ರಮಂದಿರದಿಂದ ತೆಗೆದು ಹಾಕುವುದು ಕಷ್ಟದ ನಿರ್ಧಾರವಾಗಿತ್ತು. ಸಾಕಷ್ಟು ಮಂದಿ ಈ ಸಿನಿಮಾಗಳನ್ನು ನೋಡುವುದಕ್ಕೆ ಕಾತುರರಾಗಿದ್ದರು ಎಂಬುವುದು ಗೊತ್ತಿದೆ. ಈ ಅಡಚಣೆಗಾಗಿ ನಾವು ವಿಷಾಧಿಸುತ್ತೇವೆ" ಎಂದು ಹೇಳಿಕೆ ಕೊಟ್ಟಿದ್ದಾರೆ.

ಅಷ್ಟಕ್ಕೂ ಚಿತ್ರಮಂದಿರದ ಮೇಲೆ ದಾಳಿ ಮಾಡಿದವರು ಯಾರು ಎಂಬ ಬಗ್ಗೆ ಇನ್ನೂ ಖಚಿತ ಮಾಹಿತಿ ಸಿಕ್ಕಿಲ್ಲ. ಭಾರತೀಯ ಸಿನಿಮಾಗಳು ಪ್ರದರ್ಶನ ಆಗುತ್ತಿದ್ದ ಚಿತ್ರಮಂದಿರದ ಮೇಲೆ ದಾಳಿ ನಡೆದಿದ್ದರಿಂದ ಇದು ಖಲಿಸ್ತಾನಿಗಳ ಕೃತ್ಯವೇ ಇರಬಹುದೆಂದು ಊಹಿಸಲಾಗಿದೆ. ಕೆನಡಾದಲ್ಲಿ ಬೀಡು ಬಿಟ್ಟಿರುವ ಖಲಿಸ್ತಾನಿಗಳು ಭಾರತದ ವಿರುದ್ಧ ಒಂದಲ್ಲ ಒಂದು ದಾಳಿ ಮಾಡುತ್ತಿದ್ದಾರೆ. ಹೀಗಾಗಿ ಇದೂ ಕೂಡ ಅವರದ್ದೇ ಕೃತ್ಯ ಇರಬಹುದೆಂದು ನಂಬಲಾಗಿದೆ.

ಕೆನಡಾದ Film.ca cinemas ಚಿತ್ರಮಂದಿರದಲ್ಲಿ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ 'ಕಾಂತಾರ ಚಾಪ್ಟರ್ 1' ಹಾಗೂ ಪವನ್ ಕಲ್ಯಾಣ್ ಸಿನಿಮಾ 'ಓಜಿ' ಸಿನಿಮಾಗಳು ಪ್ರದರ್ಶನ ಆಗುತ್ತಿದ್ದವು. ಆದರೆ, ಈ ದಾಳಿಯಿಂದ ಭಾರತೀಯರು ತಮ್ಮ ಸಿನಿಮಾಗಳನ್ನು ನೋಡದೇ ಇರುವಂತಾಗಿದೆ. ಸದ್ಯ ಈ ದಾಳಿಯ ಬಗ್ಗೆ ಅಲ್ಲಿನ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದು, ನಿಖರವಾದ ಕಾರಣ ಹೊರಬೀಳಬೇಕಿದೆ.

More from Filmibeat

English summary
Why Canada theatre stopped Rishab Shetty's Movie Kantara Chapter 1 and other Indian films?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X