"ದರ್ಶನ್ ಜೈಲ್‌ನಿಂದ ಹೊರ ಬರುವಾಗ ಸ್ಮಾರ್ಟ್ ಆಗಿ ಕಾಣಿಸ್ತಾರೆ ನೋಡ್ತೀರಿ"; ಜಿಮ್ ರವಿ ದರ್ಶನ್‌ ಬಗ್ಗೆ ಹೀಗಂದಿದ್ಯಾಕೆ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಯೂಟಕ್ಕಾಗಿ ಕೋರ್ಟ್ ಮೊರೆ ಹೋಗಿ ಅದೆಷ್ಟೇ ಜಗ್ಗಾಡಿದ್ರೂ ಕೊನೆಗೆ ಸಫಲರಾಗ್ಲೇ ಇಲ್ಲ. ಮನೆಯೂಟಕ್ಕೆ ನೋ ಎಂದಿರೋ ನ್ಯಾಯಾಲಯ ದರ್ಶನ್‌ಗೆ ಜೈಲೂಟವೇ ಸಾಕು ಎಂದು ಆದೇಶಿಸಿದೆ. ಹಾಗಾಗಿ ತನಗೆ ಅನಾರೋಗ್ಯ ಸಮಸ್ಯೆ ಕಾಡ್ತಿದೆ. ಹಾಗಾಗಿ ಮನೆಯೂಟ ಬೇಕು ಎನ್ನುವ ಬೇಡಿಕೆ ಇಟ್ಟಿದ್ದ ದಾಸನ ಡಿಮ್ಯಾಂಡ್‌ಗೆ ಪುಷ್ಟಿ ಸಿಕ್ಕಿಲ್ಲ. ಅಂದ್ಮೇಲೆ ಸದ್ಯಕ್ಕಂತೂ ದರ್ಶನ್‌ಗೆ ಜೈಲೂಟವೇ ಗತಿ ಅನ್ನೋದಂತೂ ಫಿಕ್ಸ್ ಆಗಿದೆ.

ಈ ಮಧ್ಯೆ ದರ್ಶನ್ ಅಭಿಮಾನಿಗಳಿಗೆ ಇರೋ ಆತಂಕವೆಂದರೆ ಅಷ್ಟು ಖಡಕ್‌ ಆಗಿ ಬಾಡಿ ಬಿಲ್ಡ್ ಮಾಡಿ ಮೇಂಟೈನ್ ಮಾಡಿರೋ ತಮ್ಮ ನೆಚ್ಚಿನ ನಟನಿಗೆ ಕನಿಷ್ಟ ಮನೆಯೂಟವೂ ಇಲ್ಲದಂತಾಯ್ತಲ್ಲ. ಹಾಗಿದ್ರೆ ಜೈಲಲ್ಲಿ ಅವರ ಆರೋಗ್ಯ ಮತ್ತು ಫಿಟ್ನೆಸ್ ಗತಿಯೇನು ಅನ್ನೋದು.

Why did Gym Ravi say that Darshan will look smart when he comes out of jail

ಈ ಬಗ್ಗೆ ದರ್ಶನ್‌ಗೆ ಫಿಟ್ನೆಸ್ ಟ್ರೈನರ್ ಆಗಿ ಕೆಲಸ ಮಾಡಿರೋ ಜಿಮ್ ರವಿ ಖಾಸಗಿ ವಾಹಿನಿಗಳೊಂದಿಗೆ ಒಂದಷ್ಟು ಇಂಟರೆಸ್ಟಿಂಗ್ ವಿಚಾರ ಹಂಚಿಕೊಂಡಿದ್ದಾರೆ. ಜಿಮ್ ರವಿ ಒಬ್ಬ ಪ್ರೈವೇಟ್ ಫಿಟ್ನೆಸ್ ಟ್ರೈನರ್ ಆಗಿದ್ದು, ಅನೇಕ ಸ್ಯಾಂಡಲ್‌ವುಡ್ ತಾರೆಯರ ಜೊತೆ ಕೆಲಸ ಮಾಡಿದ್ದಾರೆ. ಕೆಲವೊಂದಷ್ಟು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲೂ ನಟಿಸಿದ್ದಾರೆ. ಹೀರೊ ಆಗಿಯೂ ನಟಿಸಿದ್ದಾರೆ.

ದರ್ಶನ್ ಫಿಟ್ನೆಸ್ ಬಗ್ಗೆ ಜಿಮ್ ರವಿ ಹೇಳಿರೋದಿಷ್ಟು-ದರ್ಶನ್‌ರದ್ದು ಜಿಮ್ ಬಾಡಿ. ಸತತವಾಗಿ 30 ವರ್ಷಗಳಿಂದ ವರ್ಕೌಟ್ ಮಾಡಿ ಅವ್ರು ತಮ್ಮ ದೇಹವನ್ನು ಕಟ್ಟುನಿಟ್ಟಾಗಿ ಫಿಟ್ ಆಗಿ ಮೇಂಟೇನ್ ಮಾಡಿಕೊಂಡಿದ್ದಾರೆ. ವರ್ಕೌಟ್ ವಿಚಾರದಲ್ಲಿ ದರ್ಶನ್ ಅಕ್ಷರಶಃ ಒಳ್ಳೆಯ ಸ್ಟೂಡೆಂಟ್. ಆಜಾನುಬಾಹು ದರ್ಶನ್ ಆರು ತಿಂಗಳು ವರ್ಕೌಟ್ ಮಾಡಿಲ್ಲ ಅಂದ್ರೂ ಏನೂ ಸಮಸ್ಯೆ ಇಲ್ಲ. ಯಾಕಂದ್ರೆ, ಅವರು ವರ್ಕೌಟ್‌ಗೆ ಅಡಿಕ್ಟ್ ಆಗಿದ್ದಾರೆ. ಇಷ್ಟು ವರ್ಷದ ಅವರ ಫಿಟ್ನೆಸ್ ಜರ್ನಿ ಅವರನ್ನು ಆಕ್ಟೀವ್ ಆಗಿ ಇರುವಂತೆ ಮಾಡುತ್ತೆ. ಈಗ ಜೈಲಿನಲ್ಲಿ ವರ್ಕೌಟ್ ಮಾಡ್ತಿಲ್ಲ. ಹಾಗಾಗಿ ಖಂಡಿತಾ ಸಣ್ಣ ಆಗ್ತಾರೆ. ಯಾಕಂದ್ರೆ ಮಸಲ್ ಮಾಸ್ ಕಡಿಮೆ ಆಗಿರುತ್ತೆ. ಆದರೆ, ಬಾಡಿ ಶೇಪ್ ಮೊದಲಿದ್ದ ಹಾಗೇ ಇರುತ್ತದೆ. ದರ್ಶನ್ ಜೈಲಿನಿಂದ ಹೊರಬಂದು ಬರೀ ಮೂರೇ ಮೂರು ತಿಂಗಳು ವರ್ಕೌಟ್ ಮಾಡಿಬಿಟ್ರೆ ಸಾಕು, ಮತ್ತೆ ಮೊದಲಿನಂತೆ ಆಗೇ ಆಗ್ತಾರೆ.

Why did Gym Ravi say that Darshan will look smart when he comes out of jail

ಸುಂಟರಗಾಳಿ ಸಿನಿಮಾ ಸಂದರ್ಭದಲ್ಲಿ ಜಿಮ್ ರವಿ ಮತ್ತು ದರ್ಶನ್ ಫಿಟ್ನೆಸ್‌ಗಾಗಿ ಒಟ್ಟಾಗಿ ಕೆಲಸ ಮಾಡಿದ್ದರು. ಸುಂಟರಗಾಳಿ ಸಿನಿಮಾದಲ್ಲಿ ಕಂಡ ದರ್ಶನ್‌ರ ಫಿಟ್ ಬಾಡಿಗಾಗಿ ಜಿಮ್ ರವಿ ಟ್ರೈನರ್ ಆಗಿ ಕೆಲಸ ಮಾಡಿದ್ದರು. ಆ ಸಂದರ್ಭದಲ್ಲಿ ಯಾವುದೇ ರೀತಿ ಸಪ್ಲಿಮೆಂಟ್ ಇಲ್ಲದೇ ನ್ಯಾಚುರಲ್ ಆಗಿ ಬಾಡಿ ಮೇಂಟೇನ್ ಮಾಡೋದು ಹೇಗೆ ಅನ್ನೋದನ್ನು ದರ್ಶನ್ ರವಿ ಬಳಿ ಕೇಳಿ ವಿವರವಾಗಿ ತಿಳಿದುಕೊಂಡಿದ್ದರಂತೆ. ಹಾಗಾಗಿ ಯಾವುದೇ ಗಿಮಿಕ್ ಇಲ್ಲದೇ ನ್ಯಾಚುರಲ್ ಆಗಿ ಬೆಳೆಸಿದ ಬಾಡಿ ಚಾಲೆಂಜಿಂಗ್ ಸ್ಟಾರ್‌ನದ್ದು. ಅಭಿಮಾನಿಗಳು ಈ ಬಗ್ಗೆ ಯಾವುದೇ ಆತಂಕ ಇಟ್ಟುಕೊಳ್ಳೋದು ಬೇಡ ಎಂದು ಜಿಮ್ ರವಿ ಹೇಳಿದ್ದಾರೆ.

ಅಷ್ಟೇ ಅಲ್ಲ, ಜೈಲಿನಿಂದ ಹೊರಬರುವಾಗ ದರ್ಶನ್ ಹಿಂದಿಗಿಂತಲೂ ಸ್ಮಾರ್ಟ್ ಆಗಿ ಬರ್ತಾರೆ. ಫಿಟ್ನೆಸ್ ಕಾಯ್ದುಕೊಳ್ಳೋಕೆ ಪ್ರೋಟಿನ್ ಹೆಚ್ಚಿರೋ ಆಹಾರ ಬೇಕು ನಿಜ. ಆದರೆ, ಚಿಕನ್, ಮಟನ್, ಮೊಟ್ಟೆ ಮುಂತಾದವೆಲ್ಲಾ ಜೈಲಿನಲ್ಲಿ ನೀಡೋದಿಲ್ಲ. ಆದರೆ, ಇವೆಲ್ಲಾ ಇಲ್ಲದೆಯೂ ಅದ್ಭುತವಾಗಿ ಫಿಟ್ನೆಸ್ ಮೇಂಟೇನ್ ಮಾಡೋದು ಸಾಧ್ಯವಿದೆ. ಜೈಲಿನ ಊಟದಲ್ಲೇ ದಾಸ ಸಖತ್ ಫಿಟ್ನೆಸ್ ರೂಟೀನ್ ಮೇಂಟೇನ್ ಮಾಡ್ತಾರೆ. ಖಂಡಿತಾ ತಮ್ಮ ಕಟ್ಟುಮಸ್ತಾದ ದೇಹದ ಆರೋಗ್ಯ ಕಾಪಾಡಿಕೊಳ್ಳೋಕೆ ಸಾಧ್ಯವಿದೆ ಎಂದು ಜಿಮ್ ರವಿ ಹೇಳಿದ್ದಾರೆ.

More from Filmibeat

English summary
Gym Ravi about Darshan having jail food:
Read more about: darshan sandalwood filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X