'ಅಧ್ಯಕ್ಷ' ಸಿನಿಮಾದ ನಟಿ ಕನ್ನಡದಲ್ಯಾಕೆ ಸಿನಿಮಾ ಮಾಡುತ್ತಿಲ್ಲ? ಈಗ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ?
ಕನ್ನಡ ಚಿತ್ರರಂಗದ ಬೆಸ್ಟ್ ಕಾಮಿಡಿ ಸಿನಿಮಾಗಳ ಪಟ್ಟಿಯಲ್ಲಿ 'ಅಧ್ಯಕ್ಷ' ಸಿನಿಮಾ ಕೂಡ ಇದೆ. ಈ ಸಿನಿಮಾ ಮೂಲಕ ಶರಣ್ 'ಅಧ್ಯಕ್ಷ'ನಾಗಿ ತೆರೆಮೇಲೆ ಅಬ್ಬರಿಸಿದ್ದರು. ಶರಣ್ ಹಾಗೂ ಚಿಕ್ಕಣ್ಣ ಕಾಂಬಿನೇಷನ್ ಕಾಂಬಿನೇಷನ್‌ನಲ್ಲಿ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಇದೇ 'ಅಧ್ಯಕ್ಷ' ಸಿನಿಮಾ ಮೂಲಕ ಕನ್ನಡಕ್ಕೆ ಮತ್ತೊಬ್ಬ ನಟಿಯ ಪರಿಚಯನೂ ಆಗಿತ್ತು. ಆಕೆಯೇ ಹಬಾ ಪಟೇಲ್.
'ಅಧ್ಯಕ್ಷ' ಸಿನಿಮಾದಿಂದ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದ ನಟಿಯೇ ಹಬಾ ಪಟೇಲ್. ಕನ್ನಡ ಚಿತ್ರರಂಗದಿಂದಲೇ ವೃತ್ತಿ ಬದುಕನ್ನು ಆರಂಭಿಸಿದ್ದ ಈ ನಟಿಯೀಗ ಕನ್ನಡ ಸಿನಿಮಾಗಳಲ್ಲಿಯೇ ನಟಿಸುತ್ತಿಲ್ಲ. ಮೊದಲ ಪ್ರಯತ್ನದಲ್ಲಿಯೇ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದ ನಟಿ ಮತ್ತೆ ಕನ್ನಡದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲೇ ಇಲ್ಲ.

ಶರಣ್‌ಗೆ ಸೂಪರ್ ಸಕ್ಸಸ್ ಕೊಟ್ಟ ಸಿನಿಮಾ 'ಅಧ್ಯಕ್ಷ'. ಇದರಲ್ಲಿ ಶರಣ್ ಹಾಗೂ ಹೆಬ್ಬಾ ಪಟೇಲ್ ಕಾಂಬಿನೇಷನ್ ಸಿನಿಪ್ರಿಯರಿಗೆ ಇಷ್ಟ ಆಗಿತ್ತು. ಇನ್ನೂ ಹಲವು ಸಿನಿಮಾಗಳಲ್ಲಿ ಜೋಡಿ ನಟಿಸಬಹುದು ಎಂದು ನಿರೀಕ್ಷೆ ಇತ್ತು. ಆದರೆ, ಹೆಬ್ಬಾ ಪಟೇಲ್ ಮತ್ತೆ ಶರಣ್ ಜೊತೆ ನಟಿಸುವುದಿರಲಿ, ಮತ್ತೆ ಕನ್ನಡ ಸಿನಿಮಾದಲ್ಲಿಯೇ ಕಾಣಿಸಿಕೊಳ್ಳಲಿಲ್ಲ.
ಅಸಲಿಗೆ ಹೆಬ್ಬಾ ಪಟೇಲ್‌ಗೆ ಕರ್ನಾಟಕದ ಲಿಂಕ್ ಇದೆ. ಈ ನಟಿಯ ಮೂಲಕ ಕರ್ನಾಟಕ. ಆದರೆ, ಹುಟ್ಟಿದ್ದು, ಬೆಳೆದಿದ್ದೆಲ್ಲ ಮುಂಬೈನಲ್ಲಿ. ಹೆಸರು ಕೇಳಿದ ಕೂಡಲೇ ಈಕೆ ಗುಜರಾತ್ ಮೂಲದ ನಟಿ ಇರಬಹುದೇನೋ ಅಮತ ಅನಿಸಬಹುದು. ಆದರೆ ಕರ್ನಾಟಕದ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ನಟಿಯೀಗ. ಹೀಗಾಗಿ ಕನ್ನಡದಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸುಬಹುದು ಎಂಬ ನಿರೀಕ್ಷೆಯಿತ್ತು.
ಕನ್ನಡದಲ್ಲಿ 'ಅಧ್ಯಕ್ಷ' ಸಿನಿಮಾ ಗೆದ್ದ ಬಳಿಕ ಹೆಬ್ಬಾ ಪಟೇಲ್ ತಮಿಳು ಚಿತ್ರರಂಗದ ಕಡೆಗೆ ಮುಖ ಮಾಡಿದ್ದರು. ಮೊದಲ ತಮಿಳು ಸಿನಿಮಾ 'ತಿರುಮನಂ ಎನುಂ ನಿಖಾ' ಕೂಡ ಸೂಪರ್ ಹಿಟ್ ಆಗಿತ್ತು. ಬಳಿಕ ತೆಲುಗಿನಲ್ಲಿ 'ಕುಮಾರಿ 21ಎಫ್' ಸಿನಿಮಾದಲ್ಲಿ ಹೆಬ್ಬಾ ಪಟೇಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಇಲ್ಲಿಂದ ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿಯೇ ಹೆಚ್ಚಾಗಿ ನಟಿಸಲು ಆರಂಭಿಸಿದ್ದರು. ಈ ಸಿನಿಮಾದ ಬಳಿಕ ಹೆಬ್ಬಾ ಪಟೇಲ್ ತೆಲುಗು ಮಂದಿಯ ಫೇವರಿಟ್ ನಟಿಯಾದರು.
ತೆಲುಗು ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಬಳಿಕ ಹೆಬ್ಬಾ ಪಟೇಲ್‌ಗೆ ವಿಶೇಷ ಮನ್ನಣೆ ಸಿಕ್ಕಿತ್ತು. ಸಾಲು ಸಾಲು ಸಿನಿಮಾಗಳು ಇವರನ್ನು ಹುಡುಕಿಕೊಂಡು ಬಂದಿತ್ತು. ಹೀಗಾಗಿ ಕನ್ನಡದ ಕಡೆಗೆ ಮುಖ ಮಾಡುವುದಕ್ಕೆ ಹೋಗಿಲ್ಲ. ತೆಲುಗಿನಲ್ಲಿ 'ಎಕ್ಕಡಿಕಿ ಪೋತಾವು ಚಿನ್ನವಾಡ', 'ನಾನ್ನ ನೇನು ನಾ ಬಾಯ್ ಫ್ರೆಂಡ್ಸ್', 'ಮಿಸ್ಟರ್', ' ಅವರು 'ಏಂಜೆಲ್', '24 ಕಿಸಸ್' ಮತ್ತು 'ಒರೇ ಬಜ್ಜಿಗ' ಅಂತಹ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, ಹೆಬ್ಬಾ ಪಟೇಲ್‌ಗೆ ಹೆಚ್ಚಿನ ಯಶಸ್ಸು ಸಿಗಲಿಲ್ಲ.
ಹೆಬ್ಬಾ ಪಟೇಲ್ 'ವ್ಯವಸ್ಥಾ' ಅನ್ನೋ ವೆಬ್ ಸೀರಿಸ್‌ನಲ್ಲಿ ನಟಿಸಿ ಜನಮನ್ನಣೆ ಗಳಿಸಿದ್ದರು. 'ಒಡೆಲಾ ರೈಲ್ವೇ ಸ್ಟೇಷನ್' ಜನಮನ್ನಣೆ ಸಿಕ್ಕಿತ್ತು. ಸದ್ಯಕ್ಕೀಗ 'ವಲ್ಲನ್', 'ಆದ್ಯ', 'ಒಡೆಲಾ 2' ಅಂತಹ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 35 ವರ್ಷದ ಈ ನಟಿ ತೆಲುಗು, ತಮಿಳು ಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಕನ್ನಡಕ್ಕೆ ಮತ್ತೆ ಮರಳಬಹುದಾ? ಅನ್ನೋ ಅನುಮಾನವಿದೆ.


Click it and Unblock the Notifications











