ಪ್ರಶಾಂತ್ ನೀಲ್ ಇಷ್ಟ ಪಟ್ಟ ಕಥೆಗೆ ಚಿಕ್ಕಣ್ಣ ಹೀರೊ ಆಗ್ಲಿಲ್ಲ ಯಾಕೆ? ಎಲ್ಲಾ 'ಕೆಜಿಎಫ್' ಮಹಿಮೆ!

ಕನ್ನಡ ಚಿತ್ರರಂಗದ ಹಾಸ್ಯ ನಟರು ಹೀರೊ ಆಗುತ್ತಿರೋದು ಹೊಸ ವಿಚಾರವೇನೂ ಅಲ್ಲ. ಈಗಾಗಲೇ ಕನ್ನಡ ಚಿತ್ರರಂಗದ ಹಾಸ್ಯ ಲೋಕದ ದಿಗ್ಗಜರಾದ ಶರಣ್, ಕೋಮಲ್ ಇಬ್ಬರೂ ಹೀರೋ ಆಗಿ ಚಿತ್ರರಂಗದಲ್ಲಿ ನೆಲೆಯೂರಿದ್ದಾರೆ. ಈಗ ಚಿಕ್ಕಣ್ಣ 'ಉಪಾಧ್ಯಕ್ಷ' ಸಿನಿಮಾದ ಮೂಲಕ ಹೀರೊ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಈಗ ಎಲ್ಲರ ಕಣ್ಣು ಚಿಕ್ಕಣ್ಣನ ಸಿನಿಮಾ ಮೇಲಿದೆ.

ಕೋಮಲ್, ಶರಣ್, ಸಾಧು ಕೋಕಿಲಾ ಅವರಂತೆಯೇ ಚಿಕ್ಕಣ್ಣ ಹಾಸ್ಯ ಪಾತ್ರಗಳಲ್ಲಿ ಕನ್ನಡ ಸಿನಿಮಾ ಪ್ರೇಮಿಗಳನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿದ್ದಾರೆ. ಹೀಗಾಗಿ ಹಾಸ್ಯ ದಿಗ್ಗಜರಿಗೆ ಆಫರ್ ಬಂದಂತೆ, ಚಿಕ್ಕಣ್ಣನಿಗೂ ಈ ಹಿಂದೆಯೇ ಹೀರೋ ಆಗುವುದಕ್ಕೆ ಆಫರ್ ಬಂದಿತ್ತು. ಆದರೆ, ಭಯ ಬಿದ್ದಿದ್ದ ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ನಟಿಸುವುದಕ್ಕೆ ಒಪ್ಪಿರಲಿಲ್ಲ.

Why didnt Chikkanna become a hero? Prashanth Neel liked the script before Upadhyaksha

ಕೊನೆಗೂ 'ಉಪಾಧ್ಯಕ್ಷ' ಸಿನಿಮಾ ಮೂಲಕ ಹೀರೊ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಆದರೆ, ನಿಮಗೆ ಗೊತ್ತಾ ಈ ಸಿನಿಮಾಗೂ ಮುನ್ನವೇ ಚಿಕ್ಕಣ್ಣ ಹೀರೊ ಆಗಬೇಕಿತ್ತು. ಸ್ವತ/; ಚಿಕ್ಕಣ್ಣನೇ ಕಥೆಯನ್ನು ಬರೆದಿದ್ದರು. ಆ ಕಥೆಯನ್ನು 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಚರ್ಚೆ ಕೂಡ ಮಾಡಿದ್ದರು. ಆದರೂ, ಆ ಸಿನಿಮಾ ಟೇಕ್ ಆಫ್ ಆಗಲೇ ಇಲ್ಲ. ಈ ಬಗ್ಗೆ ಸ್ವತ: ಚಿಕ್ಕಣ್ಣ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

ಚಿಕ್ಕಣ್ಣನ ಮ್ಯಾನರಿಸಂಗೆ ಫಿದಾ ಆಗದವರೇ ಇಲ್ಲ. ಹೀಗಾಗಿ ಸಿನಿಮಾ ಮಂದಿ ಲೀಡ್ ರೋಲ್‌ನಲ್ಲಿ ನಟಿಸುವಂತೆ ಚಿಕ್ಕಣನ ಹಿಂದೆ ಬಿದ್ದಿದ್ದರು. ಆದರೆ, ಅದ್ಯಾರೇ ಪ್ರಯತ್ನ ಪಟ್ಟರೂ ಚಿಕ್ಕಣ್ಣ ಮಾತ್ರ ಒಪ್ಪಿರಲಿಲ್ಲ. ಈ ಬಗ್ಗೆ ಚಿಕ್ಕಣ್ಣ ಖಡಕ್ ಸಿನಿಮಾ ಯೂಟ್ಯೂಬ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

Why didnt Chikkanna become a hero? Prashanth Neel liked the script before Upadhyaksha

"ಉಪಾಧ್ಯಕ್ಷನಿಗೂ ಮುನ್ನ ಹೀರೊ ಆಗೋ ಅವಕಾಶ ಬಂತು. ಆದರೆ, ನನಗೇನೆ ನಂಬಿಕೆ ಇರಲಿಲ್ಲ. ಏನಾದರೂ ಒಂದು ಮಾಡಬೇಕಾದರೆ ನಮಗೆ ಕಾನ್ಫಿಡೆನ್ಸ್ ಇರಬೇಕಲ್ವಾ? ಒಂದಿಷ್ಟು ಕಥೆಗಳು ಬಂತು. ನಾನು ಸಿನಿಮಾ ಮಾಡಬೇಕೋ ಬೇಡವೋ ಅನ್ನೋ ಕನ್ಫ್ಯೂಷನ್‌ನಲ್ಲಿ ಇದ್ದೆ. ಆಮೇಲೆ ನನಗೆ ಜಡ್ಜ್‌ಮೆಂಟ್ ಇರಲಿಲ್ಲ. ಹಾಗೇ ಹಣ ಕೂಡ ಚೆನ್ನಾಗೇ ಬರುತ್ತಿತ್ತು. ಯಾಕೆ ಬೇಕು ಅಂತ ಸುಮ್ಮನಿದ್ದೆ" ಎಂದು ಚಿಕ್ಕಣ್ಣ ರಿವೀಲ್ ಮಾಡಿದ್ದಾರೆ.

'ಉಪಾಧ್ಯಕ್ಷ' ಸಿನಿಮಾ ಮಾಡುವುದಕ್ಕೂ ಮುನ್ನ ಸ್ವತ: ಚಿಕ್ಕಣ್ಣ ಕಥೆ ಬರೆದಿದ್ದರು. ಆ ಕಥೆಗೆ ಹೀರೊ ಆಗಬೇಕು ಅಂತ ಬಯಸಿದ್ದರು. ಈ ಕಥೆಯನ್ನು ಪ್ರಶಾಂತ್ ನೀಲ್ ಜೊತೆನೂ ಚರ್ಚೆ ಮಾಡಿದ್ದರು. ಆ ಸಂಗತಿಯನ್ನು ಸಂದರ್ಶನದ ವೇಳೆ ನೆನಪಿಸಿಕೊಂಡಿದ್ದಾರೆ.

"ಕೂತ್ಕೊಂಡು ಯಾವುದೋ ಒಂದು ಸಿನಿಮಾ ನೋಡಿದೆ. ಯಾವುದೋ ಇಂಗ್ಲಿಷ್ ಸಿನಿಮಾ. ಅದನ್ನೇ ಪ್ರೇರಣೆಯಾಗಿಟ್ಟುಕೊಂಡು ಒಂದು ಕಥೆಯನ್ನು ಮಾಡಿಟ್ಟುಕೊಂಡೆ. ಅತ್ತ ಪ್ರಶಾಂತ್ ನೀಲ್ ಅವರದ್ದೂ ಕೆಜಿಎಫ್ ಕಥೆ ನಡೆಯುತ್ತಿತ್ತು. ಆರ್‌ಪಿಸಿ ಲೇಔಟ್‌ನಲ್ಲಿ ಆಫೀಸ್ ಇತ್ತು. ಎಲ್ಲರೂ ಪ್ರತಿದಿನ ಸೇರುತ್ತಿದ್ದೆವು. ಹೀಗೆ ಮಾತಾಡುತ್ತಾ ಚಿಕ್ಕಣ್ಣ ನೀವ್ಯಾಕೆ ಹೀರೋ ಆಗಬಾರದು ಅಂತ ಕೇಳಿದ್ರು. ನಮಗೆ ಯಾಕ್ ಬೇಕು ಅಂದೆ, ಹಾಗ್ಯಾಕೆ ಅಂದ್ಕೊಳ್ತೀರಾ ಮಾಡಬಹುದು ಅಂದ್ರು. ಅವರ ಜೊತೆ ಕೂಡ ಈ ಕಥೆ ಬಗ್ಗೆ ಚರ್ಚೆ ಮಾಡಿದ್ದೆ. ಆಮೇಲೆ ಕೆಜಿಎಫ್ ಸಕ್ಸಸ್ ಆಯ್ತು. ಆಮೇಲೆ ನಾನು ಕೇಳುವುದಕ್ಕೆ ಹೋಗಿಲ್ಲ. ಎತ್ತಿ ಸೈಡಿಗೆ ಇಟ್ಬಿಟ್ಟೆ." ಎಂದು ಚಿಕ್ಕಣ್ಣ ರಿವೀಲ್ ಮಾಡಿದ್ದಾರೆ.

ಅಷ್ಟಕ್ಕೂ ಪ್ರಶಾಂತ್ ನೀಲ್ ಜೊತೆ ಚರ್ಚೆ ಮಾಡಿದ್ದ ಕಥೆ ಯಾಕೆ ಸೆಟ್ಟೇರಿಲ್ಲ ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ಆಮೇಲೆ ಮತ್ತೆ ಒಂದಿಷ್ಟು ದಿನ ಹುಡುಕಾಡಿದೆ ಕಥೆ ಇಟ್ಕೊಂಡು, ಹೀರೊ ಆಗೋಣ ಕಥೆ ಚೆನ್ನಾಗಿದೆಯಲ್ಲ ಅಂತ. ಆಮೇಲೆ ಒಬ್ಬರು ನಿರ್ಮಾಪಕರು ಇದರ ಕಥೆ ಗೊತ್ತಾ ಅಂತ ಹೇಳಿದ್ರು. ಏನಿಲ್ಲ ಅಂದ್ರೂ 15-20 ಕೋಟಿ ಬೇಕು ಅಂದರು" ಎಂದು ಚಿಕ್ಕಣ್ಣ ರಿವೀಲ್ ಮಾಡಿದ್ದಾರೆ.

More from Filmibeat

English summary
Prashanth Neel Liked Chikkanna story. Eventhrough he did'nt became hero because of this reason.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X